ವಂಚನೆಯ ಅತ್ಯಂತ ಅಪಾಯಕಾರಿ ರೂಪವೆಂದರೆ ಆತ್ಮವಂಚನೆ. ನಮ್ಮನ್ನು ನಾವೇ ಮೋಸಗೊಳಿಸಿಕೊಳ್ಳುವುದರ ಕುರಿತು ದೇವರವಾಕ್ಯವು ನಮ್ಮನ್ನು ಎಚ್ಚರಿಸುತ್ತಿರುತ್ತದೆ. "ಯಾವನೂ ತನ್ನನ್ನು ತಾನೇ ಮೋಸಗೊಳಿಸದಿರಲಿ. ತಾನು ನಿಮ್ಮಲ್ಲಿ ಲೋಕ ಸಂಬಂಧವಾಗಿ ಜ್ಞಾನಿಯಾಗಿದ್ದೇನೆಂದು ಭಾವಿಸಿಕೊಳ್ಳುವವನು ಜ್ಞಾನಿಯಾಗುವಂತೆ ಹುಚ್ಚನಾಗಲಿ. "(1 ಕೊರಿಂಥ 3:18)
ಆತ್ಮವಂಚನೆ ಎಂದರೆ:
ಎ. ನಾವು ಏನಲ್ಲವೋ ಅದು ನಾವಾಗಿದ್ದೇವೆ ಎಂದು ನಂಬುವುದು:
ಗಲಾತ್ಯ 6:3 ಇದರ ಕುರಿತು ನಮಗೆ ಮತ್ತಷ್ಟು ಎಚ್ಚರಿಕೆ ನೀಡುತ್ತಾ, "ಯಾವನಾದರೂ ಅಲ್ಪನಾಗಿದ್ದು ತಾನು ದೊಡ್ಡವನೆಂದು ಭಾವಿಸಿಕೊಂಡರೆ ತನ್ನನ್ನು ತಾನೇ ಮೋಸಗೊಳಿಸಿದವನಾಗಿದ್ದಾನೆ." ಎಂದು ಹೇಳುತ್ತದೆ.
ಈ ರೀತಿಯ ಆತ್ಮವಂಚನೆಯು ಒಬ್ಬ ವ್ಯಕ್ತಿಯು ಸಾಮಾನ್ಯವಾಗಿ ತನ್ನನ್ನು ಕುರಿತು ಜನರು ಉತ್ತಮವಾಗಿ ಭಾವಿಸಬೇಕೆಂದೋ ಅಥವಾ ತಮ್ಮ ಕಷ್ಟಾನುಭವಗಳನ್ನು ಜನರ ಮುಂದೆ ಮರೆಮಾಚುವ ಸಲುವಾಗಿಯೋ ಸುಳ್ಳಾದ ಪ್ರತಿಬಿಂಬವನ್ನು ಸ್ವಯಂ - ಘೋಷಿಸಿಕೊಳ್ಳುವಂತಹ ಚಿತ್ರಣವನ್ನು ನಿರ್ಮಿಸಿಕೊಳ್ಳುವುದನ್ನು ಒಳಗೊಂಡಿರುತ್ತದೆ, ಇಂತವರು ತಮ್ಮ ಸಾಮರ್ಥ್ಯಗಳನ್ನು ಅತಿಯಾಗಿ ಅಂದಾಜು ಮಾಡಿ ಕೊಂಡಿರಬಹುದು ಅಥವಾ ವಾಸ್ತವಕ್ಕೆ ಹೊಂದಿಕೆಯಾಗದ ಚಾರಿತ್ರ್ಯವನ್ನು ತೋರಿಸಿಕೊಳ್ಳುತ್ತಿರಬಹುದು. ಇದನ್ನು ಯೇಸು ಕಲಿಸಿದ ಫರಿಸಾಯ ಮತ್ತು ತೆರಿಗೆ ವಸೂಲಿಗಾರನ ದೃಷ್ಟಾಂತದಲ್ಲಿ ನಾವು ಕಾಣಬಹುದು.
"ಇದಲ್ಲದೆ ತಾವೇ ನೀತಿವಂತರೆಂದು ತಮ್ಮಲ್ಲಿ ಭರವಸವಿಟ್ಟುಕೊಂಡು ಉಳಿದವರನ್ನು ಉದಾಸೀನಮಾಡುವಂಥ ಕೆಲವರಿಗೆ ಒಂದು ಸಾಮ್ಯವನ್ನು ಹೇಳಿದನು. ಅದೇನಂದರೆ - ಪ್ರಾರ್ಥನೆಮಾಡಬೇಕೆಂದು ಇಬ್ಬರು ಮನುಷ್ಯರು ದೇವಾಲಯಕ್ಕೆ ಹೋದರು; ಒಬ್ಬನು ಫರಿಸಾಯನು, ಒಬ್ಬನು ಸುಂಕದವನು. ಫರಿಸಾಯನು ನಿಂತುಕೊಂಡು ಪ್ರಾರ್ಥಿಸುವಾಗ ತನ್ನೊಳಗೆ - ದೇವರೇ, ಸುಲುಕೊಳ್ಳುವವರೂ ಅನ್ಯಾಯಗಾರರೂ ಹಾದರಮಾಡುವವರೂ ಆಗಿರುವ ಉಳಿದ ಜನರಂತೆ ನಾನಲ್ಲ, ಈ ಸುಂಕದವನಂತೆಯೂ ಅಲ್ಲ; ಆದದರಿಂದ ನಿನಗೆ ಸ್ತೋತ್ರಮಾಡುತ್ತೇನೆ. ವಾರಕ್ಕೆ ಎರಡಾವರ್ತಿ ಉಪವಾಸ ಮಾಡುತ್ತೇನೆ; ನಾನು ಸಂಪಾದಿಸುವ ಎಲ್ಲಾದರಲ್ಲಿಯೂ ಹತ್ತರಲ್ಲೊಂದು ಪಾಲು ಕೊಡುತ್ತೇನೆ ಅಂದುಕೊಂಡನು. ಆದರೆ ಆ ಸುಂಕದವನು ದೂರದಲ್ಲಿ ನಿಂತು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವದಕ್ಕೂ ಮನಸ್ಸಿಲ್ಲದೆ ಎದೆಯನ್ನು ಬಡುಕೊಳ್ಳುತ್ತಾ - ದೇವರೇ, ಪಾಪಿಯಾದ ನನ್ನನ್ನು ಕರುಣಿಸು ಅಂದನು. ಇವನು ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ತನ್ನ ಮನೆಗೆ ಹೋದನು, ಆ ಫರಿಸಾಯನು ಅಂಥವನಾಗಿ ಹೋಗಲಿಲ್ಲ ಎಂದು ನಿಮಗೆ ಹೇಳುತ್ತೇನೆ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು. " (ಲೂಕ 18:9-14).
ಫರಿಸಾಯನು ತನ್ನನ್ನು ತಾನು ನೀತಿವಂತನೆಂದು ನಂಬಿಕೊಂಡಿದ್ದನು, ಆದರೆ ಅವನ ಹೆಮ್ಮೆ ಮತ್ತು ಸ್ವ-ನೀತಿವಂತಿಕೆಯು ಅವನ ನಿಜವಾದ ಆತ್ಮೀಕ ಸ್ಥಿತಿಯನ್ನು ಕಾಣಲಾರದಂತೆ ಅವನನ್ನು ಕುರುಡನನ್ನಾಗಿ ಮಾಡಿತ್ತು. ಇಂದಿನ ಸನ್ನಿವೇಶದಲ್ಲಿ, ಒಬ್ಬ ವ್ಯಕ್ತಿಯು ವಿವಿಧ ಕಾರಣಗಳಿಂದಾಗಿ ತಾವೇ ನೀತಿವಂತರೆಂದು ನಂಬಬಹುದು; ಆದಾಗ್ಯೂ, ಈ ನೀತಿಕಥೆಯಲ್ಲಿರುವ ಫರಿಸಾಯನಂತೆಯೇ, ಈ ವ್ಯಕ್ತಿಯು ಹೆಮ್ಮೆ ಮತ್ತು ಸ್ವ-ನೀತಿವಂತಿಕೆಯಿಂದ ಕುರುಡನಾಗಿದ್ದು , ಅದು ಅವರ ನಿಜವಾದ ಆತ್ಮೀಕ ಸ್ಥಿತಿಯನ್ನು ಗುರುತಿಸದಂತೆ ಅವರನ್ನು ತಡೆಯುತ್ತಿರಬಹುದು.
ಸ್ವಯಂ ವಂಚನೆಎಂಬ ನಾಶಾನದ ಗುಂಡಿಯಿಂದ ತಪ್ಪಿಸಿಕೊಳ್ಳುವಲ್ಲಿ ನಾವು ಬಹಳ ಜಾಗರೂಕರಾಗಿರಬೇಕು. "ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುತ್ತೇವೆ, ಮತ್ತು ಸತ್ಯವೆಂಬದು ನಮ್ಮಲ್ಲಿಲ್ಲ." ಎಂದು 1 ಯೋಹಾನ 1:8 ನಮಗೆ ಎಚ್ಚರಿಕೆ ನೀಡುತ್ತದೆ. ಹೀಗೆ ಹೇಳಿಕೊಳ್ಳುವಂತದ್ದು ಕಡೆಗೇ , ನೀವು ಪಾಪ ಮಾಡುವಾಗಲೂ ನೀವು ನಿಜವಾಗಿಯೂ ಸರಿಯಾದ ಕೆಲಸವನ್ನೇ ಮಾಡುತ್ತಿದ್ದೀರಿ ಎಂಬುದಾಗಿ ಅದನ್ನು ನೀವು ನಂಬಲಾರಾಂಭಿಸುತ್ತೀರಿ. ಏಕೆಂದರೆ ನೀವು ಅದನ್ನು ಹಲವು ಬಾರಿ ಮಾಡಿರುವುದರಿಂದ ಅದು ಸರಿಯಾದ ವಿಷಯವೇ ಎಂದು ನಿಮಗೆ ನೀವೇ ಸಮರ್ಥನೆ ಮಾಡಿಕೊಡುವವರಾಗುತ್ತೀರಿ.
ಜರ್ಮನಿಯ ನಾಜಿಗಳ ಆಡಳಿತದ ಕರಾಳ ಮತ್ತು ವಿನಾಶಕಾರಿ ವರ್ಷಗಳಲ್ಲಿ, ನಾಜಿಗಳು ಹೇಳಲಾಗದಂತ ದೌರ್ಜನ್ಯಗಳಿಗೆ ಕಾರಣವಾದ ಅಪಾಯಕಾರಿ ರೀತಿಯ ಸ್ವಯಂ-ವಂಚನೆಯಿಂದ ನುಂಗಲ್ಪಟ್ಟರು. ಅವರು ತಮ್ಮದೇ ಆದ ಜನಾಂಗೀಯ ಶ್ರೇಷ್ಠತೆಯನ್ನು ತೀವ್ರವಾಗಿ ನಂಬಿ ಯಹೂದಿಗಳೇ ತಮ್ಮ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಎಂದು ತಮಗೆ ತಾವೇ ಸಮರ್ಥಿಸಿಕೊಂಡರು. ದ್ವೇಷ ಮತ್ತು ಭಯದಿಂದ ಉತ್ತೇಜಿಸಲ್ಪಟ್ಟ ಈ ತಿರುಚಿದ ವಿಶ್ವ ದೃಷ್ಟಿಕೋನವು ರಾಜಕೀಯ ಭಾಷಣಗಳಿಂದ ಹಿಡಿದು ಶಾಲಾ ಪಠ್ಯಕ್ರಮದವರೆಗೂ ಅಂದು ಸಮಾಜದ ಪ್ರತಿಯೊಂದು ಅಂಶದ ಮೂಲಕ ಹರಡಲ್ಪಟ್ಟಿತ್ತು.
ನಂತರ ನಾಜಿಗಳು "ಅಂತಿಮ ಪರಿಹಾರ" ಎಂದು ಕರೆಯಲ್ಪಟ್ಟ ಒಂದು ಯೋಜನೆಯನ್ನು ರೂಪಿಸಿದರು, ಇದು ಯಹೂದಿ ಜನಸಂಖ್ಯೆಯನ್ನು ನಿರ್ಮೂಲನೆ ಮಾಡುವ ಒಂದು ವ್ಯವಸ್ಥಿತ ಯೋಜನೆಯಾಗಿತ್ತು. ಅವರು ಈ ಭಯಾನಕ ತಂತ್ರವನ್ನು ಎಷ್ಟು ಆಳವಾಗಿ ನಂಬಿದ್ದರು ಎಂದರೆ ಅವರು ಯಹೂದಿಗಳ ಸಾಮೂಹಿಕ ಹತ್ಯಾಕಾಂಡವನ್ನು ಅತ್ಯಂತ ದಕ್ಷತೆಯಿಂದ ನಡೆಸಿ ಈ ಪ್ರಕ್ರಿಯೆಯಲ್ಲಿ ಲಕ್ಷಾಂತರ ಯಹೂದಿ ಜನರನ್ನು ಕೊಂದರು.
ಜರ್ಮನ್ನರು ಬಳಸಿದ ವಿಧಾನಗಳು ಆಘಾತಕಾರಿಯಾಗಿಯೂ ಕ್ರೂರವಾಗಿಯೂ ಇದ್ದದ್ದು ಅವರ ಆತ್ಮವಂಚನೆಯ ಪರಾಕಾಷ್ಠೆಯನ್ನು ಪ್ರತಿಬಿಂಬಿಸುತ್ತವೆ. ಒಂದು ಸಂದರ್ಭದಲ್ಲಿ , ಯಹೂದಿಗಳು ತಮ್ಮದೇ ಆದ ಸಮಾಧಿಗಳಿಗಾಗಿ ಕಂದಕಗಳನ್ನು ಅಗೆಯಲು ಸಾಮೂಹಿಕವಾಗಿ ಒತ್ತಾಯಿಸಲ್ಪಟ್ಟು ನಂತರ ಅವರನ್ನು ಈ ಹೊಂಡಗಳಲ್ಲಿ ಸಾಲಾಗಿ ನಿಲ್ಲಿಸಿ ಗುಂಡು ಹಾರಿಸಿ ಕೊಲ್ಲಲಾಯಿತು.
ಸಾಮಾನ್ಯ ಜನರು ನಡೆಸುವ ಈ ಕೃತ್ಯಗಳ ನಿರ್ದಯತೆಯು, ಸ್ವಯಂವಂಚನೆ ಎಂಬುದು ಎಷ್ಟು ಪ್ರಬಲವಾದದ್ದು ಮತ್ತು ಅಪಾಯಕಾರಿಯಾದದ್ದು ಎಂಬುದನ್ನು ಪ್ರದರ್ಶಿಸಿ,
ಈ ಹತ್ಯಾಕಾಂಡದ ದುರಂತವು ಅನಿಯಂತ್ರಿತವಾದ ಸ್ವಯಂವಂಚನೆಯ ಪರಿಣಾಮಗಳ ಸ್ಪಷ್ಟ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ವ್ಯಕ್ತಿಗಳು ಮತ್ತು ಸಮಾಜಗಳು ಸುಳ್ಳಾದ ಸುದ್ದಿಗಳನ್ನು ಮತ್ತು ವಿರೂಪಗೊಳಿಸಿದ ಸತ್ಯವನ್ನು ನಂಬಲು ತಮ್ಮನ್ನು ತಾವು ಒಪ್ಪಿಸಿಕೊಡುವಾಗ , ಅವರು ಮಾನವ ಸಭ್ಯತೆಯನ್ನೇ ಧಿಕ್ಕರಿಸಿ ಘೋರ ಕೃತ್ಯಗಳನ್ನು ಮಾಡಲೂ ಕೂಡ ಕೈಜೋಡಿಸಬಹುದು.
Bible Reading: 2 Kings 15-16
Prayer
ತಂದೆಯೇ, ಯೇಸುವಿನ ಹೆಸರಿನಲ್ಲಿ ಸ್ವಯಂ -ವಂಚನೆಯನ್ನು ಗುರುತಿಸಲು ನನ್ನ ಆತ್ಮೀಕ ಕಣ್ಣುಗಳನ್ನು ಮತ್ತು ಇಂಥ ಸಮಯದಲ್ಲಿ ನಿನ್ನ ಸ್ವರ ಕೇಳಲು ಆತ್ಮೀಕ ಕಿವಿಗಳನ್ನು ಯೇಸುನಾಮದಲ್ಲಿ ಅನುಗ್ರಹಿಸು.
Join our WhatsApp Channel

Most Read
● ನಮ್ಮನ್ನಲ್ಲ.● ನೀವು ಯುದ್ಧರಂಗದಲ್ಲಿರುವಾಗ: ಒಳನೋಟ
● ನೀವು ಸುಲಭವಾಗಿ ಬೇಸರಗೊಳ್ಳುವಿರಾ?
● ಅಧರ್ಮದ ಆಳ್ವಿಕೆಯ ಬಲವನ್ನು ಮುರಿಯುವುದು-II
● ಅಗ್ನಿಯು ಸುರಿಯಲ್ಪಡಬೇಕು
● ಸಮಯದ ಸೂಚನೆಗಳ ವಿವೇಚನೆ.
● ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು - ಭಾಗ 1
Comments