हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಸಫಲತೆ ಎಂದರೇನು?
Daily Manna

ಸಫಲತೆ ಎಂದರೇನು?

Thursday, 14th of November 2024
2 1 287
Categories : ಗುಣ(character) ಯಶಸ್ಸು (Success)
"ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿ ಬರೆದಿರುವುದನ್ನೆಲ್ಲಾ ಕೈಕೊಂಡು ನಡೆ. ಆಗ ನಿನ್ನ ಕಾರ್ಯವೆಲ್ಲವೂ, ನೀನು ಹೋಗುವ ಮಾರ್ಗಗಳು ಸಫಲವಾಗುವುದು. ನೀನು ಚುರುಕು ಬುದ್ಧಿಯ ವ್ಯಕ್ತಿಯಾಗಿ ರೂಪಾಂತರ ಹೊಂದುವಿ."(ಯೆಹೋಶುವ  1:8 )

ದೇವರು ಯೆಹೋಶುವನಿಗೆ "........ ಆಗ ನಿನ್ನ ಕಾರ್ಯವೆಲ್ಲವು ಸಫಲವಾಗುವವು " ಎಂದನು.

ಸಫಲತೆ  ಎಂದರೇನು? ಸಫಲತೆ ಎನ್ನುವಂತದ್ದು  ನಿರಂತರ ಯಶಸ್ಸನ್ನು ಕುರಿತು ಹೇಳುವಂತಾದ್ದಾಗಿದೆ. ನೀವು ರಂಗಸ್ಥಳದಲ್ಲಿ ಮಿನುಗುವ ತಾರೆಯಲ್ಲ ಅಲ್ಲ. ಅಥವಾ  ನೀವು ಒಂದು ದಿನ ಹೊಳೆದು ಮಾಯವಾಗುವ ಉಲ್ಕೆಯು  ಅಲ್ಲ. ಉಲ್ಕೆಯು ಒಂದು ರಾತ್ರಿ ಮಾತ್ರ ಹೊಳೆಯುತ್ತದೆ. ಲೌಕಿಕ ಜಗತ್ತಿನಲ್ಲಿ ಮತ್ತು ದೇವರ ರಾಜ್ಯದಲ್ಲಿಯೂ ಜನರು ಏಳಿಗೆಯಾಗುವುದನ್ನು ನಾನು ನೋಡಿದ್ದೇನೆ. ಅವರು ಸ್ವಲ್ಪ ಮಟ್ಟಿಗೆ ಯಶಸ್ಸನ್ನು ಸಾಧಿಸಿದ್ದರೂ , ಆದರೆ ಅವರು ಬಹು  ಕಾಲ ಉಳಿಯಲಿಲ್ಲ ಏಕೆಂದರೆ ಅವರು ಗುಣದಲ್ಲಿ ಕೊರತೆಯುಳ್ಳವರಾಗಿದ್ದರು . ಯಾರೋ ಒಬ್ಬರು ಸರಿಯಾಗಿಯೇ  ಹೇಳಿದ್ದಾರೆ , "ನಿಮ್ಮಲಿರುವ  ವರಗಳು ನಿಮ್ಮನ್ನು ಎತ್ತರಕ್ಕೆ ಕರೆದೊಯ್ಯಬಹುದು, ಆದರೆ ನಿಮ್ಮ ಚಾರಿತ್ರ್ಯವೇ ಅಲ್ಲಿಯೇ ನೀವು  ಉಳಿದುಕೊಳ್ಳುವಂತೆ ಮಾಡುವಂತಾದ್ದಾಗಿದೆ ." ಯಾಕೋಬನು ತನ್ನ ಮರಣಶಯ್ಯೆಯಲ್ಲಿದ್ದಾಗ, ಅವನು ತನ್ನ ಎಲ್ಲಾ ಮಕ್ಕಳನ್ನು ಕರೆದು ದೇವರ ಆತ್ಮದ ಮೂಲಕ ಅವರಿಗೆಲ್ಲ ಈ ಕೆಳಗಿನ ರೀತಿಯಲ್ಲಿ ಪ್ರವಾದಿಸಿದನು: 

"ಯಾಕೋಬನು ತನ್ನ ಮಕ್ಕಳನ್ನು ಕರೆಯಿಸಿ ಅವರಿಗೆ, ನೀವೆಲ್ಲರೂ ಕೂಡಿ ಬನ್ನಿರಿ. ಮುಂದಿನ ದಿನಗಳಲ್ಲಿ ನಿಮಗೆ ಸಂಭವಿಸುವುದನ್ನು ನಿಮಗೆ ತಿಳಿಸುತ್ತೇನೆ. ಯಾಕೋಬನ ಮಕ್ಕಳೇ, ನೀವೆಲ್ಲರೂ ಕೂಡಿ ಬಂದು ಕೇಳಿರಿ. ನಿಮ್ಮ ತಂದೆಯಾದ ಇಸ್ರಾಯೇಲನ ಮಾತನ್ನು ಲಾಲಿಸಿರಿ.  ರೂಬೇನನೇ, ನೀನು ನನ್ನ ಚೊಚ್ಚಲಮಗನೂ, ನನ್ನ ಚೈತನ್ಯಸ್ವರೂಪನೂ, ನನ್ನ ಪ್ರಥಮಫಲವೂ, ಗೌರವದಲ್ಲಿಯೂ, ಅಧಿಕಾರದಲ್ಲಿಯೂ ಪ್ರಮುಖನೂ ಆಗಿದ್ದೀ. ಆದರೆ ದಡಮೀರಿದ ಪ್ರವಾಹದಂತಿರುವ ನೀನು ಇನ್ನು ಶ್ರೇಷ್ಠನಾಗುವುದಿಲ್ಲ. ಏಕೆಂದರೆ ನೀನು ನಿನ್ನ ತಂದೆಯ ಹಾಸಿಗೆಯನ್ನು ಹತ್ತಿ, ಅದನ್ನು ಹೊಲೆ ಮಾಡಿದಿಯಲ್ಲಾ. ಇವನು ನನ್ನ ಮಂಚವನ್ನು ಹತ್ತಿದನು!"(ಆದಿಕಾಂಡ 49:1-4) 

ರೂಬೆನನು  ಹಿರಿಯ ಮಗನಾಗಿ ಚೊಚ್ಚಲ ಹಕ್ಕೆಲ್ಲವನ್ನೂ ಹೊಂದಿದ್ದನು. ಚೊಚ್ಚಲ ಮಗನಾಗಿ, ಅವನು ಪಿತ್ರಾರ್ಜಿತ ವಾಗಿ ಎರಡು ಪಾಲು ಸ್ವತ್ತನ್ನು ಪಡೆಯಲರ್ಹನಾಗಿದ್ದನು. ಆದರೆ ದುಃಖಕರವಿಷಯವೆಂದರೆ ಇದು ಸಂಭವಿಸಲಿಲ್ಲ. ಏಕೆಂದರೆ ರೂಬೆನನು  ತನ್ನ ತಂದೆಯಾದ ಯಾಕೋಬನ ಹೆಂಡತಿಯರಲ್ಲಿ ಒಬ್ಬಳೊಂದಿಗೆ ತನ್ನ ಚಿಕ್ಕಮ್ಮನೊಡನೆ ವ್ಯಭಿಚಾರ ಮಾಡಿದನು. ಅವನಿಗೆ ತನ್ನ ಭಾವನೆಗಳ ಮೇಲೆ ನಿಯಂತ್ರಣವಿರಲಿಲ್ಲ. ಅವನು ತಲಾಂತುಗಳನ್ನು , ಸಾಮರ್ಥ್ಯಗಳನ್ನು ಹೊಂದಿದ್ದರೂ  ಆ ಸ್ಥಾನಕ್ಕೆ ಸರಿಹೊಂದುವ ಚಾರಿತ್ರ್ಯ ಅವನಲ್ಲಿ ಇರಲಿಲ್ಲ ಎಂಬುದೇ ವಿಷಾಧದ ಸಂಗತಿ.

 ದೇವರು ತನ್ನ ಜನರನ್ನು ಮುನ್ನಡೆಸುವವರಲ್ಲಿ  ಸ್ಥಿರವಾದ ಚಾರಿತ್ರ್ಯವನ್ನು ಎದುರು ನೋಡುವವನಾಗಿದ್ದಾನೆ.  ನೀವು ಬಹುಕಾಲದವರೆಗೂ ಶಾಶ್ವತವಾದ ಪ್ರಭಾವವನ್ನು ಬೀರುವಂತ ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಲು ಬಯಸಿದರೆ, ಆಗ ನೀವು ನಿಮ್ಮ ಚಾರಿತ್ರ್ಯ ಕುರಿತು ಗಮನವಹಿಸಬೇಕಾಗುತ್ತದೆ. ಅಥವಾ ನೀವು ಕೇವಲ ಆ ಕ್ಷಣಕ್ಕೆ ಮಿಂಚಿ ಮರೆಯಾಗುವ ತಾರೆಯಾಗಲು ಬಯಸುವವರಾದರೆ ಅದೂ ಸಹ ನಿಮ್ಮಿಷ್ಟ. ಆದರೆ, ನಿಮ್ಮ ವರಗಳು ನಿಮ್ಮನ್ನು ಆ ಕ್ಷಣಕ್ಕೆ ಮಿಂಚುವಂತೆ ಮಾಡಿ ನಂತರ ನೀವು - ಯಾರ ನೆನಪಿನಲ್ಲೂ ಉಳಿಯದಂತೆ ಶಾಶ್ವತವಾಗಿ ಮರೆತುಬಿಡುವಂತೆ ಅದು ಮಾಡುತ್ತದೆ.

 ರೂಬೇನನ  ವಂಶಾವಳಿಯು  ಎಂದಿಗೂ ಉತ್ಕೃಷ್ಟತೆಯ ಮಟ್ಟವನ್ನು ಮುಟ್ಟಲೇ ಇಲ್ಲ  ಎಂಬುದು  ನಿಮಗೆ ತಿಳಿದಿದೆಯೇ? ರೂಬೇನ್ ಕುಲದಿಂದ ಯಾವುದೇ ಪ್ರವಾದಿಯಾಗಲೀ, ನ್ಯಾಯಾಧಿಪತಿಯಾಗಲೀ ಅಥವಾ ಅರಸರಾಗಲೀ ಹೊರಟು ಬರಲಿಲ್ಲ . ಮೊದಲನೆಯವನು  ಹೇಗೆ ಕಡೆಯವನಾಗಬಹುದು ಎಂಬುದಕ್ಕೆ ರೂಬೆನನೇ  ಒಂದು ಪರಿಪೂರ್ಣ ಉದಾಹರಣೆ. (ಮತ್ತಾಯ  19:30).
Confession
ಒಬ್ಬ ಮನುಷ್ಯನು ತನ್ನ ಹೃದಯದಲ್ಲಿ ಯೋಚಿಸುವಂತೆಯೇ ಅವನಿರುತ್ತಾನೆ; ಆದ್ದರಿಂದ, ನನ್ನ ಎಲ್ಲಾ ಆಲೋಚನೆಗಳು ಸಕಾರಾತ್ಮಕವಾಗಿರಬೇಕೆಂದು ನಿನ್ನಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ. ನಾನು ನಕಾರಾತ್ಮಕ ವಿಷಯಗಳನ್ನು ಧ್ಯಾನಿಸುವುದಿಲ್ಲ ಮತ್ತು ನಕಾರಾತ್ಮಕ ವಿಷಯಗಳನ್ನು ಮಾತನಾಡುವುದೂ ಇಲ್ಲ. ಕರ್ತನಾದ ಯೇಸು ಕ್ರಿಸ್ತನ ಮೂಲಕ, ನಾನು ಪಾಪ ಪಾಲಿಗೆ ಸತ್ತು ನೀತಿಗೆ ಜೀವಿಸುತ್ತೇನೆ. (ಆಧಾರ: ಜ್ಞಾನೋಕ್ತಿ 23:7, ಎಫೆಸ 4;29 ರೋಮ 6:11)


Join our WhatsApp Channel


Most Read
● ನಮ್ಮ ಆಯ್ಕೆಯ ಪರಿಣಾಮಗಳು
● ಕ್ರಿಸ್ತನ ರಾಯಭಾರಿಗಳು
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು -4
● ಆರಾಧನೆ : ಸಮಾಧಾನಕ್ಕಿರುವ ಕೀಲಿ ಕೈ
● ದೈನಂದಿನ ಮನ್ನಾ
● ಸೆರೆಯಲ್ಲಿ ದೇವರ ಸ್ತೋತ್ರ
● ಆಲಸ್ಯದ ದೈತ್ಯನನ್ನು ಕೊಲ್ಲುವುದು
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login