हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಸರಿಪಡಿಸಿಕೊಳ್ಳಿರಿ
Daily Manna

ಸರಿಪಡಿಸಿಕೊಳ್ಳಿರಿ

Wednesday, 24th of April 2024
3 2 541
Categories : ನಂಬಿಕೆ (Faith)
"ಒಂದು ದಿವಸ ಪ್ರವಾದಿಮಂಡಲಿಯವರಲ್ಲೊಬ್ಬನ ಹೆಂಡತಿಯು ಎಲೀಷನ ಹತ್ತಿರ ಬಂದು ಅವನಿಗೆ - ನಿನ್ನ ಸೇವಕನಾದ ನನ್ನ ಗಂಡನು ಮರಣಹೊಂದಿದನು; ಅವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿದ್ದನೆಂಬದು ನಿನಗೆ ಗೊತ್ತುಂಟಲ್ಲಾ; ಸಾಲಕೊಟ್ಟವನು ನನ್ನ ಇಬ್ಬರು ಮಕ್ಕಳನ್ನು ದಾಸರನ್ನಾಗಿ ತೆಗೆದುಕೊಂಡು ಹೋಗುವದಕ್ಕೆ ಬಂದಿದ್ದಾನೆ ಎಂದು ಮೊರೆಯಿಟ್ಟಳು. 

2ಎಲೀಷನು ಆಕೆಗೆ - ನಾನು ನಿನಗೇನು ಮಾಡಬೇಕನ್ನುತ್ತೀ? ನಿನ್ನ ಮನೆಯಲ್ಲಿ ಏನಿರುತ್ತದೆ, ಹೇಳು ಅಂದನು. ಅದಕ್ಕೆ ಆಕೆಯು - ನಿನ್ನ ದಾಸಿಯ ಮನೆಯಲ್ಲಿ ಒಂದು ಮೊಗೆ ಎಣ್ಣೆ ಹೊರತಾಗಿ ಏನೂ ಇಲ್ಲ ಎಂದು ಉತ್ತರಕೊಟ್ಟಳು.3ಆಗ ಎಲೀಷನು ಆಕೆಗೆ - ಹೋಗಿ ನಿನ್ನ ನೆರೆಯವರಿಂದ ಸಿಕ್ಕುವಷ್ಟು ಬರೀ ಪಾತ್ರೆಗಳನ್ನು ಕೇಳಿಕೊಂಡು ಬಾ. 4ಅನಂತರ ನಿನ್ನ ಮಕ್ಕಳನ್ನು ಒಳಗೆ ಕರಕೊಂಡು ಬಾಗಲನ್ನು ಮುಚ್ಚಿ ಎಣ್ಣೆಯನ್ನು ಪಾತ್ರೆಗಳಲ್ಲಿ ಹೊಯ್ದು ತುಂಬಿದವುಗಳನ್ನೆಲ್ಲಾ ಒತ್ತಟ್ಟಿಗಿಡು ಎಂದು ಹೇಳಿದನು.5ಆಕೆಯು ಹೋಗಿ ಮಕ್ಕಳನ್ನು ಒಳಗೆ ಕರಕೊಂಡು ಬಾಗಲನ್ನು ಮುಚ್ಚಿ ಅವರು ಮುಂದಿಟ್ಟ ಪಾತ್ರೆಗಳಲ್ಲೆಲ್ಲಾ ಎಣ್ಣೆ ಹೊಯ್ದಳು.6ಪಾತ್ರೆಗಳು ತುಂಬಿದಾಗ ಆಕೆಯು ಮಗನಿಗೆ - ಇನ್ನೊಂದು ಪಾತ್ರೆಯನ್ನು ತಂದಿಡು ಅನ್ನಲು ಅವನು - ಪಾತ್ರೆಗಳು ತೀರಿದವೆಂದು ಉತ್ತರಕೊಟ್ಟನು. 7ಕೂಡಲೆ ಎಣ್ಣೆಯುಕ್ಕುವದು ನಿಂತು ಹೋಯಿತು. ತರುವಾಯ ಆಕೆಯು ದೇವರ ಮನುಷ್ಯನ ಹತ್ತಿರ ಬಂದು ನಡೆದದ್ದನ್ನೆಲ್ಲಾ ತಿಳಿಸಿದಳು. ಅವನು ಆಕೆಗೆ - ಹೋಗಿ ಎಣ್ಣೆಯನ್ನು ಮಾರಿ ಸಾಲತೀರಿಸು; ಉಳಿದ ಹಣದಿಂದ ನೀನೂ ನಿನ್ನ ಮಕ್ಕಳೂ ಜೀವನ ಮಾಡಿರಿ ಅಂದನು."(‭‭2 ಅರಸುಗಳು‬ ‭4:1‭-‬7‬)

ದೇವರು ಸಾಮಾನ್ಯವಾಗಿ ನಂಬಿಕೆಯನ್ನು ಕಣ್ಣಿಗೆ ಕಾಣುವ ಸಂಗತಿಗಳೊಂದಿಗೆ ಬೆರೆಸಿರುತ್ತಾನೆ. ಇಲ್ಲಿ ಆ ಸ್ತ್ರೀಯ ಗಂಡನು ಸತ್ತಿರುವುದರಿಂದ ಆಕೆಗೆ ಸಾಲವನ್ನು ತೀರಿಸಲು ಯಾವುದೇ ಮಾರ್ಗವೂ ಕಾಣಿಸುತ್ತಿಲ್ಲ. ಆಕೆಗೆ ಸಾಲ ಕೊಟ್ಟವರು ಬಾಕಿ ಇರುವ ಸಾಲ ತೀರಿಸಲು ಅವಳ ಎರಡು ಗಂಡು ಮಕ್ಕಳನ್ನು ದಾಸತ್ವಕ್ಕಾಗಿ ತೆಗೆದುಕೊಂಡು ಹೋಗಲು ಬಂದಿದ್ದಾರೆ. ಈಗ ಆಕೆ ತನಗೆ ತಿಳಿದ ಏಕೈಕ ದೇವ ಮನುಷ್ಯನ ಬಳಿ ಸಹಾಯಕ್ಕಾಗಿ ಯಾಚಿಸಲು ಬಂದಿದ್ದಾಳೆ.
ಈ ವಿಧವೆಯಾದ ಸ್ತ್ರೀಯು ತನ್ನ ಕೊರತೆಗಳನ್ನು ನೀಗಿಸಲು ತನ್ನ ಬಳಿ ಯಾವುದೇ ಸಂಪನ್ಮೂಲಗಳಿಲ್ಲ ಎಂದೇ ನಂಬಿದ್ದಳು.

ಆದರೆ ಆಕೆಯ ಕೊರತೆಯನ್ನು ನೀಗಿಸುವುದಕ್ಕೆ ಸಾಕಾಗುವಷ್ಟು ಸಂಪನ್ಮೂಲಗಳನ್ನು ಆಕೆಯು ಹೊಂದಿದ್ದಾಳೆ ಎಂದು ದೇವರು ಹೇಳಿದನು.ಆಕೆಯ ಬಳಿಯಲ್ಲಿದ್ದ ಒಂದು ಮೊಗೆಯ ಎಣ್ಣೆಯೂ ಅವಳ ಎಲ್ಲಾ ಸಾಲಗಳನ್ನು ತೀರಿಸುವ ಸಂಪನ್ಮೂಲವಾಗಿದೆ ಎಂದು ಆಕೆ ಗ್ರಹಿಸಿಕೊಂಡಿರಲಿಲ್ಲ. ಆ ಮೊಗೆ ಎಣ್ಣೆಯು  ನಂಬಿಕೆಯೊಂದಿಗೆ ಬೆರೆಯುವವರೆಗೂ ಅದು ಸಂಪನ್ಮೂಲದಂತೆ ಕೂಡ ಆಗಿರಲಿಲ್ಲ.

"ಅವರಿಗೆ ಶುಭವರ್ತಮಾನವು ಸಾರೋಣವಾದಂತೆಯೇ ನಮಗೂ ಸಾರೋಣವಾಯಿತು; ಆದರೆ ಆ ಕಾಲದಲ್ಲಿ ಕೇಳಿದವರು ನಂಬದೆಹೋದ ಕಾರಣ ಆ ವಾಕ್ಯದಿಂದ ಅವರಿಗೆ ಪ್ರಯೋಜನವಾಗಲಿಲ್ಲ."(ಇಬ್ರಿಯರಿಗೆ‬ ‭4:2‬)

ಆಕೆಗೆ ಅಗತ್ಯವಾಗಿದ ಆದಾಯವನ್ನು ಪಡೆಯುವುದಕ್ಕಾಗಿ ಆಕೆಯು ತನ್ನಲ್ಲಿರುವ ಎಣ್ಣೆಯನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಹೋಗುವಂತ ಒಂದು ಪ್ರಾಯೋಗಿಕ ಹೆಜ್ಜೆಯನ್ನು ನಂಬಿಕೆಯೊಡನೆ ಇಡುವಾಗ ಆಕೆಯ ಅಗತ್ಯಗಳು ಪೂರೈಸಲ್ಪಟ್ಟವು.

ವಾಸ್ತವವಾಗಿ, ಆ ಎಣ್ಣೆಯ ಮಾರಾಟದಿಂದ ಬಂದಂತಹ ಆದಾಯದ ಹಣವು, ಆಕೆಯ ಸಾಲಗಳನ್ನು ತೀರಿಸಲು ಮತ್ತು ಆಕೆಗೆ ತನ್ನ ಮಕ್ಕಳೊಂದಿಗೆ ತನ್ನ ಉಳಿದ ಬದುಕನ್ನು ಜೀವಿಸಲು ಸಾಕಾಗುವಷ್ಟಾಯಿತು.ನಮ್ಮ ಅಗತ್ಯಗಳನ್ನು ಪೂರೈಸಲು ದೇವರು ನಮಗೆ ಅನುಗ್ರಹಿಸಿದ ಉದ್ಯೋಗಗಳ ಅಥವಾ ಜೀವನೋಪಾಯದ ಕೆಲಸಗಳ ಮೂಲಕವೇ ದೇವರು ತನ್ನ ಅದ್ಭುತವನ್ನು ಮಾಡುತ್ತಾನೆ ಎಂಬುದನ್ನು ನಾವು ಆಗಾಗ್ಗೆ  ಮರೆತುಬಿಡುತ್ತೇವೆ. ಆದರೆ ದೇವರ ಮೇಲೆ ನಮ್ಮ ನಂಬಿಕೆ ಇಡದೇ ಕೇವಲ ನಮ್ಮ ಕೆಲಸಗಳಿಂದಲೇ ನಮಗೆ ಆದಾಯ ವಾಗುವಂತದ್ದು ಎಂದು ನಂಬಿಕೆ ಇಡುವಂತದ್ದು ತಪ್ಪಾದಂತ ಕಾರ್ಯವಾಗಿದೆ.

 ನಮ ತಾರ್ಕಿಕವಾದ ಮನಸ್ಸಿಗೆ ಹಾಸ್ಯಾಸ್ಪದ ಎಂದು ತೋರುವಂಥ ಸರಳವಾದ ವಿಧೇಯತೆಯನ್ನೇ ದೇವರು ಅದ್ಭುತ ಮಾಡಲು ತೆಗೆದುಕೊಳ್ಳುತ್ತಾನೆ.
ಪ್ರಾಯೋಗಿಕ ಹೆಜ್ಜೆಯೊಡನೆ ಬೆರೆತ ನಂಬಿಕೆಯ ಹೂರಣವನ್ನೇ ದೇವರು ಗೌರವಿಸುವಂತದ್ದು. ಇಂದು ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತಿರುವ ಸಮಸ್ಯೆಗಳಾವುವು? ನಿಮ್ಮ ಕೊರತೆಗಳನ್ನು ಪೂರೈಸುವ ಯಾವುದೇ ಮಾರ್ಗವು ನಿಮಗೆ ಕಾಣಿಸುತ್ತಿಲ್ಲವೇ? ಆದರೆ ನಿಮ್ಮ ಕೊರತೆಗಳನ್ನು ಪೂರೈಸಲು ದೇವರು ಈಗಾಗಲೇ ನಿಮಗೆ ಕೌಶಲ್ಯತೆಗಳನ್ನು ಪ್ರತಿಭೆಯನ್ನು ನೀಡಿರಬಹುದು.

ಆದರೂ ನೀವು ಅವುಗಳ ಜೊತೆಗೆ ನಿಮ್ಮ ನಂಬಿಕೆಯನ್ನು ಬೆರೆಸಲಿ ಎಂದು ದೇವರು ನಿಮಗಾಗಿ ಅದ್ಭುತ ಮಾಡಲು ಕಾಯುತ್ತಿರಬಹುದು. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅಗತ್ಯವಾಗಿರುವ ಹಂತಗಳನ್ನು ಪ್ರಕಟಿಸಪಡಿಸಿಬೇಕೆಂದು ದೇವರನ್ನು ಬೇಡಿಕೊಳ್ಳಿರಿ. ಬಹುಶಃ ಕೆಲವು ನೇಮಕಾತಿ ಏಜೆನ್ಸಿಗಳಿಗೆ ನೀವು ಅರ್ಜಿ  ಸಲ್ಲಿಸಬೇಕಾಗಬಹುದು ಅಥವಾ ನಿಮ್ಮ ಸಿವಿ ಇತ್ಯಾದಿಗಳನ್ನು ಇ-ಮೇಲ್ ಮೂಲಕ ಕಳುಹಿಸಬೇಕಾಗಿರ ಬಹುದು ಏನೇ ಆಗಿರಲಿ ಮುಂದಿನ ಹಂತಕ್ಕೆ ಹೆಜ್ಜೆ ಇಡಲು ಸಿದ್ದರಾಗಿರಿ-ಅದುವೇ ನಿಮಗೆ ಅದ್ಭುತವನ್ನು ತರುವ ನಂಬಿಕೆಯ ಹೆಜ್ಜೆಯಾಗಿದೆ.
Prayer
ತಂದೆಯೇ ಭರವಸದಿಂದಲೂ ನಂಬಿಕೆಯಿಂದಲೂ ತುಂಬಿರುವಂತಹ ಯಥಾರ್ತವಾದ ಹೃದಯದಿಂದ ನಾನು ನಿಮ್ಮ ಪಾದ ಸನ್ನಿಧಿಗೆ ಬರುತ್ತೇನೆ. ಈ ನಿರ್ದಿಷ್ಟವಾದ ನನ್ನ ಸಮಸ್ಯೆಯಿಂದ (ನಿಮ್ಮ ಸಮಸ್ಯೆಗಳು ಏನೆಂದು ಹೇಳಿಕೊಳ್ಳಿರಿ) ಹೊರಗೆ ಬರಲು ನಿಮ್ಮ ಜ್ಞಾನ -ವಿವೇಕಗಳನ್ನು ನನಗೆ ಅನುಗ್ರಹಿಸಿ..ಈ ಸಂಗತಿಗಳೆಲ್ಲವೂ ನನ್ನ ಒಳಿತಿಗಾಗಿಯೂ ಮತ್ತು ನಿನ್ನ ನಾಮದ ಮಹಿಮೆಗಾಗಿಯೇ ಕಾರ್ಯ ಮಾಡುತ್ತವೆ ಎಂದು ನಾನು ಅರಿತುಕೊಂಡಿದ್ದೇನೆ. ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ ಆಮೆನ್.


Join our WhatsApp Channel


Most Read
● ಪರಿಪೂರ್ಣ ಬ್ರ್ಯಾಂಡ್ ನಿರ್ವಾಹಕ.
● ಕೊಡುವ ಕೃಪೆ -3
● ಕರ್ತನಾದ ಯೇಸುವಿನ ಮುಖಾಂತರ ಕೃಪೆ
● ಎರಡು ಸಾರಿ ಸಾಯಬೇಡಿರಿ
● ಅದು ನಿಮಗೆ ಮುಖ್ಯವಾದ್ದದಾದರೆ, ಅದು ದೇವರಿಗೂ ಮುಖ್ಯವೇ.
● ದ್ವಾರ ಪಾಲಕರು / ಕೋವರ ಕಾಯುವವರು
● ನಾವು ದೇವದೂತರಿಗೆ ಪ್ರಾರ್ಥನೆ ಮಾಡಬಹುದೇ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login