Daily Manna
2
1
165
ದೇವರ 7 ಆತ್ಮಗಳು: ಜ್ಞಾನದ ಆತ್ಮ
Tuesday, 19th of August 2025
Categories :
ದೇವರ ಆತ್ಮ ( Spirit of God)
ಜ್ಞಾನದ ಆತ್ಮನು ನಿಮಗೆ ದೇವರ ಜ್ಞಾನವನ್ನು ತಂದು ಕೊಡುವವನಾಗಿದ್ದಾನೆ.
"ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ಪ್ರಭಾವಸ್ವರೂಪನಾದ ತಂದೆಯೂ ಆಗಿರುವಾತನು ತನ್ನ ವಿಷಯವಾಗಿ ತಿಳುವಳಿಕೆಯನ್ನು ಕೊಟ್ಟು ಇದುವರೆಗೆ ಗುಪ್ತವಾಗಿದ್ದ ಸತ್ಯಾರ್ಥಗಳನ್ನು ತಿಳುಕೊಳ್ಳುವ ಜ್ಞಾನವುಳ್ಳ ಆತ್ಮವನ್ನು ನಿಮಗೆ ದಯಪಾಲಿಸಬೇಕೆಂದು ಪ್ರಾರ್ಥಿಸುತ್ತೇನೆ." (ಎಫೆಸ 1:17) ಎಂದು ಅಪೊಸ್ತಲನಾದ ಪೌಲನು ಎಫೆಸದ ಕ್ರೈಸ್ತರಿಗಾಗಿ ಪ್ರಾರ್ಥಿಸಿದನು.
ಅವನು ಈ ರೀತಿ ಪ್ರಾರ್ಥಿಸಲು ಒಂದು ಕಾರಣವೆಂದರೆ ಎಫೆಸದ ಕ್ರೈಸ್ತರು ಪವಿತ್ರಾತ್ಮನ ವರಗಳನ್ನು ಪ್ರದರ್ಶಿಸುತ್ತಿದ್ದರೂ, ಅವರಿಗೆ ಜ್ಞಾನ ಮತ್ತು ಪ್ರಕಟಣೆಯ ಆತ್ಮದ ಮೂಲಕ ಬರುವ ಪ್ರಬುದ್ಧತೆಯ ಕೊರತೆಯಿತ್ತು. ಇಂದು ಸಹ ಅನೇಕ ಕ್ರೈಸ್ತರ ವಿಷಯದಲ್ಲೂ ಇದೇ ರೀತಿ ಆಗಿದೆ. ಅವರು ಆತ್ಮನ ವರಗಳಲ್ಲಿ ಶಕ್ತಿಯುತವಾಗಿ ಕಾರ್ಯನಿರ್ವಹಿಸುತ್ತಾರೆ ಆದರೆ ದೇವರ ವಿಷಯಗಳ ಜ್ಞಾನ ಮತ್ತು ತಿಳುವಳಿಕೆಯಲ್ಲಿ ನಡೆಯುವಾಗ ತೀವ್ರವಾಗಿ ಪ್ರಬುದ್ಧತೆಯ ಕೊರತೆ ಕಾಣುತ್ತದೆ. ಅಂತಹ ಜನರು ದೇವರು ತನ್ನ ಜ್ಞಾನದಲ್ಲಿ ತಿಳುವಳಿಕೆಯನ್ನು ಪ್ರಕಟ ಪಡಿಸುವಿಕೆಯ ಆತ್ಮವನ್ನು ಅವರಿಗೆ ನೀಡಲಿ ಎಂದು ಪ್ರಾರ್ಥಿಸಬೇಕಾಗಿದೆ. ಆಗ ಬಹಳ ಅಗತ್ಯವಿರುವ ಸಮತೋಲನ ಅವರಲ್ಲಿ ಕಂಡು ಬರುತ್ತದೆ.
ಜ್ಞಾನದ ಕೊರತೆಯಿರುವಾಗ, ಜನರು ಹೆಚ್ಚಾಗಿ ತಪ್ಪು ಆಯ್ಕೆಗಳನ್ನು ಮಾಡುತ್ತಾರೆ. ಇಂದು ಒಬ್ಬರು ಕೊಯ್ಯುತ್ತಿರುವ ಕೆಟ್ಟ ಸುಗ್ಗಿಯ ಹಿಂದೆ ಬಹುಪಾಲು ಅವರು ಮಾಡಿದ ಅನೇಕ ತಪ್ಪು ಆಯ್ಕೆಗಲಾಗಿರುತ್ತವೆ . ಆದಾಗ್ಯೂ, ಜ್ಞಾನದ ಆತ್ಮವು ನಿಮ್ಮಲ್ಲಿ ಕಾರ್ಯನಿರ್ವಹಿಸುತ್ತಿರುವಾಗ, ಜೀವನವು ಎಂದಿಗೂ ಬೇಸರ ತರುವುದಿಲ್ಲ. ಅದು ಅತ್ಯಂತ ಫಲಪ್ರದವಾಗುತ್ತದೆ ಮತ್ತು ಕರ್ತನಿಗೆ ಮಹಿಮೆ ತರುತ್ತದೆ.
ಕೌಶಲ್ಯಪೂರ್ಣ ಮತ್ತು ದೈವಿಕ ಜ್ಞಾನವನ್ನು ಕಂಡುಕೊಳ್ಳುವ ಮತ್ತು ತಿಳುವಳಿಕೆಯನ್ನು ಪಡೆಯುವ [ದೇವರ ವಾಕ್ಯ ಮತ್ತು ಜೀವನದ ಅನುಭವಗಳಿಂದ ಅದನ್ನು ಹೊರತೆಗೆಯುವ) ಮನುಷ್ಯನು ಧನ್ಯನು (ಧನ್ಯನು, ಅದೃಷ್ಟವಂತನು,ಸಂತುಷ್ಟನು ಅಸೂಯೆಗೊಳಗಾಗುವವನು), ಏಕೆಂದರೆ ಅದನ್ನು ಗಳಿಸುವುದು ಬೆಳ್ಳಿಯನ್ನು ಗಳಿಸುವುದಕ್ಕಿಂತ ಉತ್ತಮವಾಗಿದೆ ಮತ್ತು ಅದರ ಲಾಭವು ಅಪರಂಜಿ ಚಿನ್ನಕ್ಕಿಂತ ಉತ್ತಮವಾಗಿದೆ. ಕೌಶಲ್ಯಪೂರ್ಣ ಮತ್ತು ದೈವಿಕ ಜ್ಞಾನವು ಮಾಣಿಕ್ಯಗಳಿಗಿಂತ ಹೆಚ್ಚು ಅಮೂಲ್ಯವಾಗಿದೆ ಮತ್ತು ನೀವು ಬಯಸುವ ಯಾವುದನ್ನೂ ಸಹ ಅದಕ್ಕೆ ಹೋಲಿಸಲಾಗುವುದಿಲ್ಲ. (ಜ್ಞಾನೋಕ್ತಿ 3:13-15 ವರ್ಧಿಸಲಾಗಿದೆ)
ಹೊಸ ಒಡಂಬಡಿಕೆಯಲ್ಲಿ, ಸೊಲೊಮೋನನ ಎಲ್ಲಾ ಜ್ಞಾನಕ್ಕಿಂತ ಉತ್ತಮವಾದದ್ದು ನಮ್ಮಲ್ಲಿದೆ - ಅದು ಯಾವುದೆಂದರೆ ಕ್ರಿಸ್ತನು. ಆತನೇ ನಮ್ಮ ಜ್ಞಾನ. ಯೇಸು ತನ್ನನ್ನು ತಾನೇ ಉಲ್ಲೇಖಿಸುತ್ತಾ, "ಸೊಲೊಮೋನನಿಗಿಂತ ದೊಡ್ಡವನು ಇಲ್ಲಿದ್ದಾನೆ" (ಮತ್ತಾಯ 12:42) ಎಂದು ಹೇಳುತ್ತಾನೆ.
ಆದರೆ ನೀವು ಆತನ ಮೂಲಕ ಕ್ರಿಸ್ತ ಯೇಸುವಿನಲ್ಲಿ ಇದ್ದೀರಿ, ಆತನು ನಮಗೆ ದೇವರಿಂದ ಬಂದ ಜ್ಞಾನವೂ - ನೀತಿಯೂ ಪವಿತ್ರೀಕರಣವೂ ವಿಮೋಚನೆಯೂ ಆದನು (1 ಕೊರಿಂಥ 1:30)
ಜ್ಞಾನ ಮತ್ತು ವಿವೇಕದ ಸಕಲ ನಿಧಿಗಳು ಆತನಲ್ಲಿ ಅಡಗಿವೆ. (ಕೊಲೊಸ್ಸೆ 2:3) ಬೇರೆ ರೀತಿಯಲ್ಲಿ ಹೇಳುವುದಾದರೆ, ಪರಲೋಕದ ಸಕಲ ಜ್ಞಾನ ಮತ್ತು ಪ್ರಕಟಣೆಯ ಜ್ಞಾನದ ಅಂತ್ಯವಿಲ್ಲದ ಸಂಪತ್ತು ಆತನಲ್ಲಿ ಸಾಕಾರಗೊಂಡಿದೆ. ಈಗ ಯೇಸುವನ್ನು ನಿಮ್ಮ ರಕ್ಷಕನನ್ನಾಗಿ ಹೊಂದಿರುವುದು ಒಂದು ವಿಷಯ ಮತ್ತು ಆತನನ್ನು ನಿಮ್ಮ ಒಡೆಯನನ್ನಾಗಿ ಹೊಂದಿರುವುದು ಸಂಪೂರ್ಣವಾಗಿ ಇನ್ನೊಂದು ವಿಷಯ.
ಯೇಸು ನಿಮ್ಮ ಜೀವನದ ಒಡೆಯನಾದಾಗ ಆತನು ನಿಮ್ಮ ಆಲೋಚನೆಗಳು, ನಿಮ್ಮ ಭಾವನೆಗಳು ಇತ್ಯಾದಿಗಳನ್ನು ನಿರ್ದೇಶಿಸಲು ಪ್ರಾರಂಭಿಸುತ್ತಾನೆ. ಆಗ ದೈವಿಕ ಜ್ಞಾನವು ನಿಮ್ಮಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ.
Bible Reading: Jeremiah 25-27
Confession
ತಂದೆಯೇ, ಕ್ರಿಸ್ತನೇ ನನ್ನ ಜ್ಞಾನವಾಗಿರುವುದಕ್ಕಾಗಿ ನಾನು ನಿನಗೇ ಸ್ತೋತ್ರ ಸಲ್ಲಿಸುತ್ತೇನೆ. ದೈವಿಕ ಜ್ಞಾನವಿಲ್ಲದ ನನ್ನ ಜೀವನದ ಪ್ರತಿಯೊಂದು ಕ್ಷೇತ್ರವೂ ನಿನ್ನ ದೈವಿಕ ಜ್ಞಾನದಿಂದ ತುಂಬಿರಲಿ. ತಂದೆಯೇ, ನನ್ನ ಸಮಕಾಲೀನರನ್ನು ಮೀರಿ ಕೆಲಸ ಮಾಡುವ ಮತ್ತು ಶ್ರೇಷ್ಠನಾಗುವ ಸಾಮರ್ಥ್ಯವನ್ನು ನನಗೆ ಯೇಸುನಾಮದಲ್ಲಿ ಅನುಗ್ರಹಿಸು. ಅಸಾಮಾನ್ಯ ಜ್ಞಾನ ಮತ್ತು ವಿವೇಕವು ನನ್ನ ಪಾಲು ಎಂದು ನಾನು ಯೇಸುನಾಮದಲ್ಲಿ ಘೋಷಿಸುತ್ತೇನೆ. ಆಮೆನ್.
Join our WhatsApp Channel

Most Read
● ದೈವೀಕ ಶಿಸ್ತಿನ ಸ್ವರೂಪ: 2● ದಿನ 33:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೇವರ ಸಮೀಪಕ್ಕೆ ಬನ್ನಿರಿ
● ಆ ಸುಳ್ಳುಗಳನ್ನು ಬಯಲಿಗೆಳೆಯಿರಿ.
● ನಿರುತ್ಸಾಹದ ಬಾಣಗಳನ್ನು ಗೆಲ್ಲುವುದು -II
● ದಿನ 03:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೇವರ ಆಲಯದಲ್ಲಿರುವ ಸ್ತಂಭಗಳು
Comments