हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3.  ಎಚ್ಚರಿಕೆಯನ್ನು ಗಮನಿಸಿ
Daily Manna

 ಎಚ್ಚರಿಕೆಯನ್ನು ಗಮನಿಸಿ

Thursday, 17th of April 2025
2 0 127
Categories : ಆಧ್ಯಾತ್ಮಿಕ ನಡಿಗೆ (Spiritual Walk) ಶಿಷ್ಯತ್ವ (Discipleship)
"ನಿಮ್ಮ ದೇವರಾದ ಯೆಹೋವ ದೇವರು ನೀವು ಸ್ವತಂತ್ರಿಸಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ನಿಮ್ಮನ್ನು ಬರಮಾಡಿದಾಗ, ಅವರು ನಿಮಗಿಂತ ದೊಡ್ಡವರೂ ಬಲಿಷ್ಠರೂ ಆದ ಏಳು ಜನಾಂಗಗಳನ್ನು ಎಂದರೆ, ಗಿರ್ಗಾಷಿಯರನ್ನೂ ಹಿತ್ತಿಯರನ್ನೂ ಅಮೋರಿಯರನ್ನೂ ಕಾನಾನ್ಯರನ್ನೂ ಪೆರಿಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ಈ ಪ್ರಕಾರ ಬಹಳ ಜನಾಂಗಗಳನ್ನು ನಿಮ್ಮ ಮುಂದೆಯೇ ಹೊರಡಿಸುವನು . ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ದಂಡಿಸಿ ಸಂಪೂರ್ಣವಾಗಿ ತೆಗೆದುಹಾಕಿಬಿಡುವನು . ಅವರ ಸಂಗಡ ನೀವು ಒಡಂಬಡಿಕೆ ಮಾಡಿಕೊಳ್ಳಬಾರದು. ಅವರಿಗೆ ದಯೆ ತೋರಿಸಬಾರದು". (ಧರ್ಮೋಪದೇಶಕಾಂಡ 7:1-2)

ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸುತ್ತಿದ್ದಂತೆ, ಆ ಪ್ರದೇಶವನ್ನು ವಶಪಡಿಸಿಕೊಳ್ಳುವಂತೆಯೂ ಮತ್ತು ಆ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿಕೊಳ್ಳುವಂತೆಯೂ ದೇವರು ಅವರಿಗೆ ಆಜ್ಞಾಪಿಸಿದನು. ಆದಾಗ್ಯೂ, ಇದು ಸುಲಭದ ಸಾಧನೆಯಾಗಿರಲಿಲ್ಲ ಏಕೆಂದರೆ ಆ ಭೂಮಿಯಲ್ಲಿ ಹಲವಾರು ಅನ್ಯಧರ್ಮೀಯ ಬುಡಕಟ್ಟು ಜನಾಂಗದವರು ಬಹು ಕಾಲದಿಂದ ವಾಸಿಸುತ್ತಿದ್ದರು, ಅವರಿಗೆ ತಮ್ಮ ಭೂಮಿಯನ್ನು ಬಿಟ್ಟುಕೊಡುವ ಯಾವುದೇ ಉದ್ದೇಶವಿರಲಿಲ್ಲ. 

ಇಸ್ರಾಯೇಲ್ಯರು ಸೋಲಿಸಲು ನಿಯೋಜಿಸಲಾದ ಏಳು ಬುಡಕಟ್ಟು ರಾಷ್ಟ್ರಗಳು: 
1. ಹಿತ್ತಿಯರು 
2. ಗಿರ್ಗಾಷಿಯರು
3. ಅಮೋರಿಯರು 
4. ಕಾನಾನ್ಯರು 
5. ಪೆರಿಜ್ಜಿಯರು 
6. ಹಿವ್ವಿಯರು 
7. ಯೆಬೂಸಿಯರು 

ಈ ಬುಡಕಟ್ಟು ಜನಾಂಗಗಳು ವಿಗ್ರಹಾರಾಧನೆ, ಅನೈತಿಕತೆ ಮತ್ತು ಮಾನವ ಬಲಿಯಂತಹ ಕ್ರೂರ ಆಚರಣೆಗಳಿಗೆ ಹೆಸರುವಾಸಿಯಾಗಿದ್ದವು. ಈ ವಿರೋಧಿ ರಾಷ್ಟ್ರಗಳವರನ್ನು ಆ ದೇಶದಿಂದ ತೆಗೆದುಹಾಕದೆ  ಹೋದರೆ  ಅವರು ತಮ್ಮ ಪದ್ಧತಿಗಳಿಂದ ಇಸ್ರಾಯೆಲ್ಯರನ್ನು  ಭ್ರಷ್ಟರನ್ನಾಗಿ ಮಾಡಿ  ಅಂತಿಮವಾಗಿ ಆ ದೇಶದಿಂದ  ಇಸ್ರಾಯೆಲ್ಯರನ್ನೇ  ಹೊರಗಟ್ಟುಬಿಡುತ್ತಾರೆ ಎಂದು ದೇವರು ಇಸ್ರಾಯೇಲ್ಯರಿಗೆ ಎಚ್ಚರಿಸಿದ್ದನು . (ಅರಣ್ಯಕಾಂಡ  33:55)

ಈ ಎಚ್ಚರಿಕೆಯು ಇಂದು ನಮಗೆ ಆತ್ಮೀಕವಾಗಿಯೂ ಮತ್ತು ಭೌತಿಕವಾಗಿಯೂ ಪ್ರಾಯೋಗಿಕವಾಗಿ  ಅನ್ವಯಿಸಿಕೊಳ್ಳಬೇಕಾದ ಸಂಗತಿಯಾಗಿದೆ. ಇದನ್ನು ಪ್ರಾಯೋಗಿಕವಾಗಿ ಅನ್ವಯಿಸಿಕೊಳ್ಳುವುದರಿಂದ ನಿಮ್ಮ ಆತ್ಮೀಕ ಕಣ್ಣುಗಳನ್ನು ಸತ್ಯ-ಅಸತ್ಯತೆ ಗಳ ನಡುವಿನ ವ್ಯತ್ಯಾಸವನ್ನು ವಿವೇಚಿಸಲು ಸಾಧ್ಯವಾಗುತ್ತದೆ .  ಯಾವುದೇ ಸುಳ್ಳು ಬೋಧನೆಗಳು ಮತ್ತು ತಪ್ಪಾದ  ನಂಬಿಕೆಗಳನ್ನು  ನಮ್ಮ ಜೀವನದಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಡುವಂತದ್ದು ನಮ್ಮ ಆತ್ಮೀಕ ಬೆಳವಣಿಗೆಗೆ ಅಡ್ಡಿಮಾಡುವಂತದ್ದಾಗಿದೆ. 

"ಆ ದಿನಗಳಲ್ಲಿ, ಇಸ್ರೇಲ್‌ನಲ್ಲಿ ರಾಜನಿರಲಿಲ್ಲ. ಪ್ರತಿಯೊಬ್ಬರೂ ತಮ್ಮ ಮನಸ್ಸಿಗೆ ಬಂದಂತೆ  ನಡೆದುಕೊಳ್ಳುತ್ತಿದ್ದರು"ಎಂದು ನ್ಯಾಯಸ್ಥಾಪಕರು ಪುಸ್ತಕದ ಕೊನೆಯ ವಚನ ಹೇಳುತ್ತದೆ. (ನ್ಯಾಯಾಸ್ಥಾಪಕರು  21:25) 

ಇದು ಇಸ್ರೇಲ್ ರಾಷ್ಟ್ರವನ್ನು ಸುತ್ತುವರೆದಿರುವ ಅನ್ಯ ಧರ್ಮೀಯರ ಜನರ ಬಗ್ಗೆ ಆಡಿದ  ಮಾತಲ್ಲ  - ಇದು ದೇವ ಜನರ ಬಗ್ಗೆ ಆಡಿದ ಮಾತಾಗಿತ್ತು. ಇಸ್ರಾಯೆಲ್ಯಾರೇನೋ ಪ್ರಾಮಾಣಿಕವಾಗಿ ಸರಿಯಾದದ್ದನ್ನು ಮಾಡಲೆಂದೇ  ಪ್ರಯತ್ನಿಸುತ್ತಿದ್ದರು, ಆದರೆ ಅವರು ಸಂಪೂರ್ಣವಾಗಿ ತಮ್ಮ ಗುರಿಯನ್ನು ತಪ್ಪಿಹೋಗಿದ್ದರು ಅಷ್ಟೇ ಅಲ್ಲದೇ  ತಾವು ಗುರಿ ತಪ್ಪಿಹೋಗಿದ್ದೇವೆ ಎಂಬುದು ಸಹ ಅರಿಯದವರಾಗಿದ್ದರು. ಅವರು ತಾವು ಮಾಡುತ್ತಿರುವುದೆಲ್ಲಾ  ಸರಿ ಎಂದೇ  ಭಾವಿಸಿದ್ದರು! 

"ಯೆಹೋವನ  ನಿಯಮಗಳು ನೀತಿಯುಳ್ಳವುಗಳಾಗಿವೆ;ಅವು  ಮನಸ್ಸನ್ನು ಹರ್ಷಪಡಿಸುತ್ತವೆ. ಯೆಹೋವನ ಆಜ್ಞೆ ಪವಿತ್ರವಾದದ್ದು;ಅವು ಕಣ್ಣುಗಳನ್ನು ಕಳೆಗೊಳಿಸುತ್ತದೆ." (ಕೀರ್ತನೆ 19:8) 

ನೀವು ನಿಮ್ಮ ಭೌತಿಕ ಕಣ್ಣುಗಳನ್ನು ಮಾತ್ರ ನಂಬಬೇಡಿ - ಅವು ನಿಮ್ಮನ್ನು ದಾರಿ ತಪ್ಪಿಸಬಹುದು. ದೇವರ ವಾಕ್ಯಕ್ಕೆ ವಿರುದ್ಧವಾದ ಯಾವುದನ್ನಾದರೂ ತೆಗೆದುಹಾಕುವಲ್ಲಿ ಮತ್ತು ಆತನ ಸತ್ಯದ ಮೇಲೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸುವಲ್ಲಿ ನಾವು ಜಾಗರೂಕರಾಗಿರಬೇಕು.

ನಾವು ಓಡಲು ಅಥವಾ ನಡೆಯಲು  ದೈಹಿಕವಾಗಿ ಪುಷ್ಠ  ಅಥವಾ ಸೊಂಟದ ಭಾಗವು ನಮಗೆ ನಿರ್ಣಾಯಕವಾಗಿ ಅಗತ್ಯವಾದವು.  ಮತ್ತು ಈ ಭಾಗದಲ್ಲಿ  ಯಾವುದೇ ಗಾಯ ಅಥವಾ ದೌರ್ಬಲ್ಯ ಉಂಟಾದರೆ ನಮ್ಮ ಚಟುವಟಿಕೆಗಳಲ್ಲಿ  ಗಮನಾರ್ಹ ಅಡೆತಡೆಗಳು ಉಂಟಗಬಹುದು. ಅದೇ ರೀತಿ, ನಮ್ಮ ಜೀವನದಲ್ಲಿ, ನಮ್ಮ ಪ್ರಗತಿಗೆ ಅಡ್ಡಿಮಾಡಬಹುದಾದ ಯಾವುದೇ ದೌರ್ಬಲ್ಯ ಅಥವಾ ಬಳಹೀನತೆಯ ಕ್ಷೇತ್ರಗಲಿದ್ದರೆ  ಅವುಗಳನ್ನು ನಾವು ಗುರುತಿಸಿ  ಪರಿಹರಿಸಬೇಕು. ಅದು ಕೆಟ್ಟ ಅಭ್ಯಾಸವಾಗಿರಬಹುದು , ವಿಷಕಾರಿ ಸಂಬಂಧವಾಗಿರಬಹುದು  ಅಥವಾ ನಮ್ಮ ದೈನಂದಿನ ದಿನಚರಿಯಲ್ಲಿಯಿರುವ  ಶಿಸ್ತಿನ ಕೊರತೆಯಾಗಿರಬಹುದು , ಈ ಅಡೆತಡೆಗಳನ್ನು ತೆಗೆದುಹಾಕಿ  ನಮ್ಮ ಗುರಿಗಳ ಮೇಲೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸುವಂತ ಕ್ರಮಕೈಕೊಳ್ಳಬೇಕು.

Bible Reading: 2 Samuel 14-15
Prayer
ಪರಲೋಕದ  ಅತಿಶ್ರೇಷ್ಠ ತಂದೆಯೇ, ಇಂದು ನಾನು ಆತ್ಮೀಕ ವಿವೇಚನೆಯ ವರವನ್ನು ಬೇಡುತ್ತಾ ನಿಮ್ಮ ಮುಂದೆ ಬರುತ್ತೇನೆ. ಶತ್ರುವಿನ ಯೋಜನೆಗಳಿಂದ ನಾನು ಮೋಸಹೋಗದಂತೆಯೂ  ಸುಳ್ಳಿನಿಂದ ಸತ್ಯವನ್ನು ಬೇರ್ಪಡಿಸಿ ಅದನ್ನು  ಅರ್ಥಮಾಡಿಕೊಳ್ಳುವಂತೆಯೂ ನನ್ನ ಕಣ್ಣುಗಳನ್ನು ತೆರೆಯಿರಿ. ನನ್ನ ಪ್ರಗತಿಗೆ ಅಡ್ಡಿಯಾಗಬಹುದಾದ ಯಾವುದೇ  ದೌರ್ಬಲ್ಯ ಅಥವಾ ಬಲಹೀನತೆಯ ಕ್ಷೇತ್ರಗಳಿದ್ದರೆ ಅವುಗಳನ್ನು  ಗುರುತಿಸಲು ಯೇಸುನಾಮದಲ್ಲಿ  ನನಗೆ ಸಹಾಯ ಮಾಡಿ. ಆಮೆನ್!


Join our WhatsApp Channel


Most Read
● ನಿರುತ್ಸಾಹದ ಬಾಣಗಳನ್ನು ಗೆಲ್ಲುವುದು -II
● ದೇವರ ಕೃಪೆಯನ್ನು ಸೇದುವುದು
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಸ್ತ್ರೀ ಪುರುಷರು ಏಕೆ ಪತನಗೊಳ್ಳುವರು- 5
● ಅಂತಿಮ ಸುತ್ತನ್ನೂ ಗೆಲ್ಲುವುದು
● ಭವ್ಯಭವನದ ಹಿಂದಿರುವ ಮನುಷ್ಯ
● ದೇವರ ವಾಕ್ಯವನ್ನು ಹೊಂದಿಕೊಳ್ಳಿರಿ.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login