हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು : ಭಾಗ 2
Daily Manna

ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು : ಭಾಗ 2

Tuesday, 3rd of September 2024
1 0 519
Categories : ಕರೆಯುತ್ತಿದೆ ( Calling) ಗುಣ(character) ಬದ್ಧತೆ (commitment) ಸ್ವಯಂ ಪರಿಶೀಲನೆ (Self Examination)
ನೆಪಗಳು ಸಮಸ್ಯೆಗಳನ್ನು ಬದಿಗೊತ್ತಲು ಇರುವ ಮಾರ್ಗದ ಬದಲಿ ಹಾದಿಯಾಗಿದೆ. ಅವು ನಮ್ಮ ಆದ್ಯತೆಗಳನ್ನು ಮತ್ತು ನಾವು ಆಧಾರ ಗೊಂಡಿರುವ ವರ್ತನೆಗಳನ್ನು ಬಹಿರಂಗಪಡಿಸುತ್ತವೆ. ಭಾಗ ಒಂದರಲ್ಲಿ ಸಮಸ್ಯೆಯಿಂದ ನುಣುಚಿಕೊಳ್ಳುವ ಹಾಗೂ ತಮ್ಮ ವೈಯಕ್ತಿಕ ನ್ಯೂನತೆಯನ್ನು ಮರೆಮಾಚುವುದಕ್ಕಾಗಿ ಹೇಗೆ ನೆಪಗಳನ್ನು ಜನರು ಹೇಳುತ್ತಾರೆ ಎಂಬುದನ್ನು ನೋಡಿದ್ದೇವೆ. ಈ ಮುಂದುವರೆದ ಭಾಗದಲ್ಲಿ ನೆಪ ಹೇಳಲು ಇರುವ ಮತ್ತೂ ಎರಡು ಕಾರಣಗಳನ್ನು ನೋಡೋಣ..

1) ಜವಾಬ್ದಾರಿಗಳಿಂದ ನೋಡಿಸಿಕೊಳ್ಳಲು ಮತ್ತು 
2) ನಮಗಿಷ್ಟವಿಲ್ಲದ ಕೆಲಸಗಳನ್ನು ಮಾಡದಂತೆ ತಡೆಯಲು

 ಈ ಪ್ರವೃತ್ತಿಯು ಮಾನವನ ಸ್ವಭಾವದಲ್ಲಿಯೇ ಆಳವಾಗಿ ಬೇರೊರಿಬಿಟ್ಟಿದೆ. ಆದರೆ ಸತ್ಯವೇದವು ಅವುಗಳನ್ನು ಜಯಿಸಲಿರುವ ಶಕ್ತಿ ಶಾಲಿ ಪಾಠಗಳನ್ನು ನಮಗೆ ಬೋಧಿಸುತ್ತದೆ.

C). ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದು.(ತಪ್ಪಿಸಲು)

 ಜನರು ನೆಪಗಳನ್ನು ಹೇಳಲು ಒಂದು ಸಾಮಾನ್ಯವಾದ  ಕಾರಣವೆಂದರೆ ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದಾಗಿದೆ. ಜವಾಬ್ದಾರಿಯು ನಮ್ಮನ್ನು ಹೆದರಿಸುವಂಥದ್ದು ಮತ್ತು ವಿಫಲತೆ ಅಥವಾ ಅಸಮರ್ಪಕತೆಯ ಭಯ- ಎಂಬೆಲ್ಲ ಭಾವನೆಗಳನ್ನು ಒಳಗೊಂಡಿದೆ ಎಂಬುದು ನಮಗೆ ತಿಳಿದೇ ಇದೆ. ಇದು ಆ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವಂತೆ ನಮ್ಮನ್ನು ಪ್ರೇರೇಪಿಸುತ್ತದೆ. ಮೋಶೆಯ ಜೀವನವು ಈ ರೀತಿಯ ತಪ್ಪಿಸಿಕೊಳ್ಳುವಂತಹ ಸ್ವಭಾವಕ್ಕೆ ಒಂದು ಬಲವಾದ ಉದಾಹರಣೆಯನ್ನು ಒದಗಿಸುತ್ತದೆ.

ಮೋಶೆ : ಒಬ್ಬ ಒಲ್ಲದ ನಾಯಕ.

ಮೋಶೆಯು ಗಮನಾರ್ಹವಾದ ಪಾಲನೆ ಪೋಷಣೆಯಲ್ಲಿ ಬೆಳೆದವನಾಗಿದ್ದನು. ಅವನು ಮಗುವಾಗಿದ್ದಾಗಲೇ ಮರಣದಿಂದ ಪಾರಾಗಿ ಫರೋಹನ ಅರಮನೆಯಲ್ಲಿ ಬೆಳೆದು ಐಗುಪ್ತದ ಅತ್ಯುತ್ತಮ ಶಿಕ್ಷಣ ಮತ್ತು ಸಂಪನ್ಮೂಲಗಳಿಂದ ಆಶೀರ್ವದಿಸಲ್ಪಟ್ಟವನಾಗಿದ್ದನು. ಆದರೂ ಇಸ್ರಾಯೆಲ್ಯರನ್ನು  ಐಗುಪ್ತದಿಂದ ಹೊರ ತರಬೇಕೆಂದು ದೇವರು ಮೋಷೆಯನ್ನು ಕರೆದಾಗ ಅವನು ತಕ್ಷಣವೇ  ನೆಪಗಳನ್ನು ಹೇಳಲು ಆರಂಭಿಸಿದನು.

ವಿಮೋಚನ ಕಾಂಡ 3:10ರಲ್ಲಿ ಕರ್ತನು ಮೋಶೆಯನ್ನು ಕರೆದು "ಆದದರಿಂದ ನನ್ನ ಜನರಾಗಿರುವ ಇಸ್ರಾಯೇಲ್ಯರನ್ನು ಐಗುಪ್ತದೇಶದಿಂದ ಹೊರಗೆ ಬರ ಮಾಡುವದಕ್ಕೆ ನಿನ್ನನ್ನು ಫರೋಹನ ಬಳಿಗೆ ಕಳುಹಿಸುತ್ತೇನೆ ಬಾ ಅಂದನು." ಅದೊಂದು ಮೋಶೆಯ ಜೀವಿತದಲ್ಲಿ ದೇವರ ಉದ್ದೇಶ ನೆರವೇರಬೇಕಾದಂತಹ ಕ್ಷಣವಾಗಿತ್ತು. ಆದರೆ ಅದರಲ್ಲಿ ಹೆಜ್ಜೆ ಇಡುವ ಬದಲು ಮೋಶೆಯು ನೆಪಗಳ ಸರಣಿಯನ್ನೇ ಹೀಗೆ ಹೇಳುತ್ತಾ ಆ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಾನೆ.

1). "ನಾನು ಅಸಮರ್ಥನು ನನಗೆ ಅಂತ ಕೌಶಲ್ಯವಿಲ್ಲ "

"ಮೋಶೆ ದೇವರಿಗೆ - ಫರೋಹನ ಸನ್ನಿಧಾನಕ್ಕೆ ಹೋಗುವದಕ್ಕೂ ಇಸ್ರಾಯೇಲ್ಯರನ್ನು ಐಗುಪ್ತದೇಶದಿಂದ ಕರೆದುಕೊಂಡುಬರುವದಕ್ಕೂ ನಾನು ಎಷ್ಟರವನು ಎಂದು ಹೇಳಿದನು. "(ವಿಮೋಚನಕಾಂಡ 3:11)

2). "ಅವರು ನನ್ನನ್ನು ನಂಬುವುದಿಲ್ಲ "

"ಅದಕ್ಕೆ ಮೋಶೆ - ಚಿತ್ತೈಸು; ಅವರು ನನ್ನನ್ನು ನಂಬದೆ ನನ್ನ ಮಾತಿಗೆ ಕಿವಿಗೊಡದೆ ಹೋದಾರು; ಯೆಹೋವನು ನಿನಗೆ ಕಾಣಿಸಿಕೊಂಡೇ ಇಲ್ಲವೆಂದು ಹೇಳಾರು.."(ವಿಮೋಚನಕಾಂಡ 4:1)

3). "ಮಾತಿನಲ್ಲಿ ನಾನು ಚತುರನಲ್ಲ"

" ಆದರೆ ಮೋಶೆ ಯೆಹೋವನಿಗೆ - ಸ್ವಾಮೀ, ನಾನು ಮೊದಲಿನಿಂದಲೂ ನೀನು ದಾಸನ ಸಂಗಡ ಮಾತಾಡಿದ ಮೇಲೆಯೂ ವಾಕ್ಚಾತುರ್ಯವಿಲ್ಲದವನು; ನನ್ನ ಮಾತೂ ನಾಲಿಗೆಯೂ ಮಂದವಾಗಿವೆ ಎಂದು ಹೇಳಲು.."(ವಿಮೋಚನಕಾಂಡ 4:10)

4). "ಬೇರೆ ಯಾರಾದರೂ ಇದನ್ನು ಮಾಡಿ ಯಾರು"
"ಅದಕ್ಕೆ ಮೋಶೆ - ಸ್ವಾಮೀ, ಈ ಕಾರ್ಯಕ್ಕೆ ಬೇರೊಬ್ಬನನ್ನು ನೇವಿುಸಬೇಕು ಎನ್ನಲು"
(ವಿಮೋಚನಕಾಂಡ 4:13)

ಮೋಶೆಯು ತಾನು ಎದುರಿಸಬೇಕಾದ ಕಾರ್ಯದ ಅಗಾಧತೆಯ ಯೋಚನೆಯಲ್ಲಿ ಮುಳುಗಿ ಹೋದನು. ಅವನ ನೆಪಗಳೆಲ್ಲಾ
ತನ್ನ ಸಾಮರ್ಥ್ಯದ ಮೇಲಿನ ಸಂದೇಹ ಹಾಗೂ ವೈಫಲ್ಯತೆ ಕುರಿತ ಭಯದ ಮೇಲೆ ಆಧಾರಗೊಂಡಿತ್ತು. ಅದಾಗಿಯೂ ಈ ನೆಪಗಳೆಲ್ಲವೂ ದೇವರ ಮುಂದೆ ನಡೆಯಲಿಲ್ಲ. ವಿಮೋಚನಕಾಂಡ 4:14 ರಲ್ಲಿ ನಾವು ಓದುವಂತೆ" ಯಹೋವನ ಕೋಪವ ಅವನ ಮೇಲೆ ಉರಿಗೊಂಡಿತು.. "
ದೇವರು  ಐಗುಪ್ತದಿಂದ ಇಸ್ರಾಯೇಲ್ಯರನ್ನು ಹೊರ ತರುವುದಕ್ಕಾಗಿ ಮೋಷೆಯನ್ನು ಮುನ್ನಡಿಸಲು ಮೋಶೆಗೆ ಅಗತ್ಯವಿದ್ದ ಎಲ್ಲವುಗಳಿಂದ ಮೋಶೆಯನ್ನು ಸಜ್ಜುಗೊಳಿಸಿದನು. ಆದರೂ ಜವಾಬ್ದಾರಿಯನ್ನು ಒಪ್ಪಿಕೊಳ್ಳಲು ಮೋಶೆಯು ತೋರಿದ ಹಿಂಜರಿಕೆಯು ದೇವರಿಗೆ ಕೋಪ ತರಿಸಿತು.

D). ನಮಗೆ ಮಾಡಲು ಇಷ್ಟವಿಲ್ಲದ ಕೆಲಸವನ್ನು ಮಾಡದೆ ಇರುವುದಕ್ಕಾಗಿ.

ಜನರು ನೆಪಗಳನ್ನು ಹೇಳಲು ಇರುವ ಮತ್ತೊಂದು ಕಾರಣವೆಂದರೆ ಅವರಿಗೆ ಮಾಡಲು ಇಷ್ಟವಿಲ್ಲದ ಕೆಲಸಗಳನ್ನು ಹೇಳುವಾಗ ಅವರು ನೆಪಗಳನ್ನು ಹೇಳುತ್ತಾರೆ. ಈ ಒಂದು ತಪ್ಪಿಸಿಕೊಳ್ಳುವಿಕೆಯು ಸಾಮಾನ್ಯವಾಗಿ ತಪ್ಪಾದ ಆದ್ಯತೆಗಳು ಅಥವಾ ಬದ್ಧತೆಯ ಕೊರತೆಯನ್ನು ಸಾಂಕೇತಿಸುತ್ತದೆ.ಕರ್ತನಾದ ಯೇಸು ನೆಪ ಹೇಳುವ ಈ ಸಮಸ್ಯೆಯ ಕುರಿತು ತನ್ನ ದೊಡ್ಡ ಔತಣದ ಸಾಮ್ಯದಲ್ಲಿ ಬಹಳ ವಿವರವಾಗಿ ತಿಳಿಸಿದ್ದಾನೆ.

ಒಬ್ಬ ದೊಡ್ಡ ಮನುಷ್ಯನು  ಒಂದು ದೊಡ್ಡ ಔತಣವನ್ನು ಮಾಡಿಸಿ ಅನೇಕ ಅತಿಥಿಗಳನ್ನು ಆಹ್ವಾನಿಸಿದ ಕಥೆಯನ್ನು ಯೇಸು ಹೇಳುತ್ತಾನೆ. ಆದಾಗಿಯೂ ಔತಣ ಆರಂಭವಾದಾಗ ಆಹ್ವಾನಿತ ಅತಿಥಿಗಳು ನೆಪಗಳನ್ನು ಹೇಳಲು ಪ್ರಾರಂಭಿಸುತ್ತಾರೆ:

1). "ನಾನು ಹೊಲವನ್ನು ಕೊಂಡುಕೊಂಡಿದ್ದೇನೆ ಅದನ್ನು ನೋಡಲು ಹೋಗುತ್ತಿದ್ದೇನೆ"

"ಆದರೆ ಅವರೆಲ್ಲರೂ ಕ್ಷವಿುಸಬೇಕೆಂದು ಒಂದೇ ಮನಸ್ಸಿನಿಂದ ಹೇಳುವದಕ್ಕೆ ತೊಡಗಿದರು. ಮೊದಲನೆಯವನು ಆ ಆಳನ್ನು ನೋಡಿ - ಹೊಲವನ್ನು ಕ್ರಯಕ್ಕೆ ತಕ್ಕೊಂಡಿದ್ದೇನೆ, ಅದನ್ನು ಹೋಗಿ ನೋಡುವದಕ್ಕೆ ನನಗೆ ಅಗತ್ಯವಿದೆ, ನನ್ನನ್ನು ಕ್ಷವಿುಸಬೇಕೆಂದು ಕೇಳಿಕೊಂಡೆನೆಂಬದಾಗಿ ಹೇಳು ಅಂದನು."(ಲೂಕ 14:18)

2). "ನಾನು ಐದು ಉಳುವ ಎತ್ತನ್ನು ಕೊಂಡುಕೊಂಡಿದ್ದೇನೆ ಅದನ್ನು ಪರೀಕ್ಷಿಸಲು ಹೋಗುತ್ತಿದ್ದೇನೆ".

" ಮತ್ತೊಬ್ಬನು - ನಾನು ಐದು ಜೋಡಿ ಎತ್ತುಗಳನ್ನು ತಕ್ಕೊಂಡಿದ್ದೇನೆ, ಅವುಗಳನ್ನು ಪರೀಕ್ಷಿಸುವದಕ್ಕೆ ಹೋಗುತ್ತೇನೆ, ನನ್ನನ್ನು ಕ್ಷವಿುಸಬೇಕೆಂದು ಕೇಳಿಕೊಂಡೆನೆಂಬದಾಗಿ ಹೇಳು ಅಂದನು."(ಲೂಕ 14:19)

3)." ನಾನು ಹೊಸದಾಗಿ ಮದುವೆಯಾಗಿದ್ದೇನೆ ಆದ್ದರಿಂದ ಬರಲು ಆಗುವುದಿಲ್ಲ"

"ಇನ್ನೊಬ್ಬನು - ನಾನು ಮದುವೆಮಾಡಿಕೊಂಡಿದ್ದೇನೆ, ಆದ್ದರಿಂದ ನಾನು ಬರುವದಕ್ಕಾಗುವದಿಲ್ಲ ಅಂದನು."(ಲೂಕ 14:20)

ಈ ಎಲ್ಲಾ ವ್ಯಕ್ತಿಗಳು ವೈಯಕ್ತಿಕವಾಗಿ ಆ ದೊಡ್ಡ ಔತಣಕ್ಕೆ ಆಹ್ವಾನಿಸಲ್ಪಟ್ಟವರು. ಆದರೂ ಅವರೆಲ್ಲರಿಗೂ ತಮ್ಮ ವೈಯಕ್ತಿಕ ಕಾಳಜಿಯ ವಿಚಾರಗಳೇ, ಆ ಔತಣಕ್ಕಿಂತ ಆದ್ಯವಾಯಿತು. ಅವರು ಹೇಳಿದ ನೆಪಗಳು ಆಳವಾಗಿ ನೋಡಿದರೆ ಅವರಿಗೆ ಬರುವುದಕ್ಕೆ ಮನಸ್ಸಿಲ್ಲದೇರುವುದೇ ಕಾರಣವೆಂಬುದು ಸ್ಪಷ್ಟವಾಗಿ ಪ್ರಕಟವಾಗುತ್ತದೆ. ಭೂಮಿ, ಎತ್ತು ಅಲ್ಲದೇ ಹೊಸದಾಗಿ ಆದ ಮದುವೆ ಸಹ ಅವರಿಗೆ ಅನುಕೂಲಕರವಾದ ಕಾರಣಗಳಾಗಿದ್ದು ಆ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕಾಗಿ ಹೇಳುವಂಥವುಗಳಾಗಿವೆ.

ಈ ಸಾಮ್ಯವು  ಒಂದು ಬಲವಾದ ಸತ್ಯವನ್ನು ವಿವರಿಸುತ್ತದೆ. ಅದೇನೆಂದರೆ ನಾವು ಏನನ್ನಾದರೂ ಮಾಡಲು ತಪ್ಪಿಸಿಕೊಳ್ಳಲು ಹೇಳುವ ಕಾರಣವು ದೇವರ ಚಿತ್ತವನ್ನು ನಿರಾಕರಿಸುವ ನಮ್ಮ  ಆಳವಾದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಆಹ್ವಾನಿಸಲ್ಪಟ್ಟ ಪ್ರತಿಯೊಬ್ಬ ಅತಿಥಿಗೂ ಆ ಔತಣದಲ್ಲಿ ಭಾಗವಹಿಸುವ ಅವಕಾಶವಿತ್ತು. ಆದರೂ ಅವರು ಬೇಡವೆಂದು ತಮ್ಮ ಬಯಕೆಯ ಮತ್ತು ತಮ್ಮ ಬದ್ಧತೆಯ ಕೊರತೆಯನ್ನು ಬಹಿರಂಗಪಡಿಸಿದ್ದರು.

ಹಾಗಾಗಿ ಇದಕ್ಕೆ ಪರಿಹಾರವೇನು? ಅದು ಆತ್ಮಾವಲೋಕನದೊಂದಿಗೆ ಆರಂಭವಾಗುತ್ತದೆ. ಜವಾಬ್ದಾರಿಯಿಂದ ನುಣುಚಿಕೊಳ್ಳಲು ಅಥವಾ ನಮಗೆ ಯಾವುದಾದರೂ ಕೆಲಸವನ್ನು ಮಾಡಲು ಇಷ್ಟವಿಲ್ಲದಿದ್ದರೆ ಅದಕ್ಕಾಗಿ ನೆಪ ಹೇಳುತ್ತಿದ್ದೇವೆಯೇ? ಹಾಗಿದ್ದಲ್ಲಿ ನಾವು ಈ ಕಾರ್ಯಗಳನ್ನು ನಿಲ್ಲಿಸಲು ಇದುವೇ ಮರುಪರಿಶೀಲಿಸುವಂತಹ ಸಮಯವಾಗಿದೆ. ನಾವು ನೆಪಗಳನ್ನು ಹೇಳುವ ಬದಲು ನಮ್ಮ ನಮ್ಮ ಜವಾಬ್ದಾರಿಗಳನ್ನು ಸ್ವೀಕರಿಸಬೇಕು ಮತ್ತು ದೇವರ ಚಿತ್ತದೊಂದಿಗೆ ನಮ್ಮ ಬಯಕೆಗಳನ್ನು ಒಡಂಬಡಿಸಬೇಕು.
Prayer
ಪರಲೋಕದ ತಂದೆಯೇ, ನೆಪಗಳನ್ನು ಬದಿಗಿಟ್ಟು ನೀವು ನಮಗೆ ವಹಿಸಿದ ಜವಾಬ್ದಾರಿಗಳನ್ನು ಸ್ವೀಕರಿಸಿಕೊಳ್ಳಲು ನನಗೆ ಸಹಾಯ ಮಾಡಿ. ನಮ್ಮ ಹೃದಯಗಳನ್ನು ನಿಮ್ಮ ಚಿತ್ತಕ್ಕನಸಾರ ಇರುವಂತೆ ಮಾಡಿರಿ. ನೀನು ನಡೆಸಿದ ಕಡೆಗೆ ನಡೆಯುವಂತಹ ನಿನ್ನ ಬಲದ ಮೇಲೆಯೇ ಆಧಾರಗೊಳ್ಳುವಂತ ಧೈರ್ಯವನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸಿ. ಆಮೇನ್.


Join our WhatsApp Channel


Most Read
● ಪುರುಷರು ಏಕೆ ಪತನಗೊಳ್ಳುವರು -4
● ನಂಬತಕ್ಕ ಸಾಕ್ಷಿ
● ನಂಬಿಕೆಯ ಶಾಲೆ
● ಆತನ ಬಲದ ಉದ್ದೇಶ.
● ಆರಾಧನೆಗೆ ಬೇಕಾದ ಇಂಧನ
● ಕೆಟ್ಟ ನಡವಳಿಕೆಗಳಿಂದ ಬಿಡುಗಡೆ
● ವಾಕ್ಯದಿಂದ ಬೆಳಕು ಬರುತ್ತದೆ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login