हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಜೀವಿಸುವವರಿಗಾಗಿ ಸತ್ತವನ ಪ್ರಾರ್ಥನೆ
Daily Manna

ಜೀವಿಸುವವರಿಗಾಗಿ ಸತ್ತವನ ಪ್ರಾರ್ಥನೆ

Friday, 11th of October 2024
4 2 292
Categories : ನರಕ (Hell)
"ಐಶ್ವರ್ಯವಂತನಾದ ಒಬ್ಬ ಮನುಷ್ಯನಿದ್ದನು. ಅವನು ಸಕಲಾತಿ ನಯವಾದ ನಾರುಮಡಿ ಮುಂತಾದ ವಸ್ತ್ರಗಳನ್ನು ಧರಿಸಿಕೊಂಡು ಪ್ರತಿದಿನವೂ ವೈಭವದೊಡನೆ ಸುಖಸಂತೋಷಪಡುತ್ತಿದ್ದನು."(ಲೂಕ 16:19)

 "ಆಗ ಅವನು - ಅಪ್ಪಾ, ಲಾಜರನನ್ನು ನನ್ನ ತಂದೆಯ ಮನೆಗೆ ಕಳುಹಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ."(ಲೂಕ 16:27)

"ಅವನ ಮನೇ ಬಾಗಿಲಲ್ಲಿ ಲಾಜರನೆಂಬ ಒಬ್ಬ ಭಿಕ್ಷಗಾರನು ಬಿದ್ದುಕೊಂಡಿದ್ದನು. ಇವನು ಮೈತುಂಬಾ ಹುಣ್ಣೆದ್ದವನು; ಐಶ್ವರ್ಯವಂತನ ಮೇಜಿನಿಂದ ಬಿದ್ದ ಎಂಜಲನ್ನು ತಿಂದು ಹಸಿವು ತೀರಿಸಿಕೊಳ್ಳಬೇಕೆಂದಿದ್ದನು; ಇಷ್ಟು ಮಾತ್ರವಲ್ಲದೆ ನಾಯಿಗಳು ಸಹ ಬಂದು ಅವನ ಹುಣ್ಣುಗಳನ್ನು ನೆಕ್ಕುವವು."(ಲೂಕ 16:20-21)

" ಅವನು ಪಾತಾಳದೊಳಗೆ ಯಾತನೆಪಡುತ್ತಾ ಇರುವಲ್ಲಿ ಕಣ್ಣೆತ್ತಿ ದೂರದಿಂದ ಅಬ್ರಹಾಮನನ್ನೂ ಇವನ ಎದೆಗೆ ಒರಗಿಕೊಂಡಿದ್ದ ಲಾಜರನನ್ನೂ ನೋಡಿ - ತಂದೆಯೇ, ಅಬ್ರಹಾಮನೇ, ನನ್ನ ಮೇಲೆ ದಯವಿಟ್ಟು ಲಾಜರನನ್ನು ಕಳುಹಿಸು; ಅವನು ತನ್ನ ತುದಿಬೆರಳನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡಲಿ; ಈ ಉರಿಯಲ್ಲಿ ಸಂಕಟಪಡುತ್ತೇನೆ ಎಂದು ಕೂಗಿ ಹೇಳಿದನು. (ಲೂಕ 16:23-24)

" ಆಗ ಅವನು - ಅಪ್ಪಾ, ಹಾಗಾದರೆ ಲಾಜರನನ್ನು ನನ್ನ ತಂದೆಯ ಮನೆಗೆ ಕಳುಹಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ನನಗೆ ಐದು ಮಂದಿ ಅಣ್ಣತಮ್ಮಂದಿರಿದ್ದಾರೆ; ಅವರು ಸಹ ಈ ಯಾತನೆಯ ಸ್ಥಳಕ್ಕೆ ಬಂದಾರು; ಬಾರದಂತೆ ಅವನು ತಾನು ಕಂಡದ್ದನ್ನು ಅವರಿಗೆ ಚೆನ್ನಾಗಿ ಹೇಳಲಿ ಅಂದನು."(ಲೂಕ 16:24, 27-28)

ತಾನು ಇನ್ನೂ ಜೀವಂತವಾಗಿ ಇರುವಾಗ ಈ ಐಶ್ವರ್ಯವಂತನಿಗೆ ದೇವರಿಗಾಗಿ ತನ್ನಬಳಿ ಸಮಯವಿರಲಿಲ್ಲ ಅಥವಾ ಬಡವರ ಕುರಿತು ಯಾವುದೇ ಕರುಣೆಯೂ ಇರಲಿಲ್ಲ. ಆದರೆ ಅಗಲಿದ ಆತ್ಮಗಳ ಈ ಲೋಕದಲ್ಲಿ ಅವನ ಪ್ರಾರ್ಥಿಸಲಾರಂಭಿಸುತ್ತಾನೆ. ಕುತೂಹಲಕಾರಿ ವಿಚಾರವೆಂದರೆ ಈ ಒಂದು ಬೆಂಕಿಯ ಉರಿಯ ಪಾತಾಳ ಲೋಕದಿಂದ ಹೊರಬರಲು ಸಾಧ್ಯವೇ? ಎಂದು ಅವನು ಎಂದಿಗೂ ಕೇಳಲಿಲ್ಲ. ಈ ಸ್ಥಳದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಅಂಶವು ಬಹುಶಃ ಅವನಿಗೆ ತಿಳಿದಿತ್ತು ಎಂದು ಕಾಣುತ್ತದೆ.

ಅವನ ಜೀವಿತಾವಧಿಯಲ್ಲಿ ಅವನು ತನಗಾಗಿ ಮತ್ತು ತನ್ನ ಕುಟುಂಬದ ಸದಸ್ಯರಿಗಾಗಿ ಮಾತ್ರ ಪ್ರಾರ್ಥಿಸುವ ಕಾರ್ಯದಲ್ಲಿ ಮಗ್ನನಾಗಿದ್ದನೆಂದು ಕಾಣುತ್ತದೆ. ಆದರೆ ಈಗ ಅದು ಬಹಳ ತಡವಾಗಿ ಹೋಗಿದೆ. ಇಂದಿಗೂ ಈ ಲೋಕದಲ್ಲಿ ಅಂತವರಿದ್ದಾರೆ ನೀವು ದಯವಿಟ್ಟು ಅವರಂತೆ ಆಗಬೇಡಿರಿ.

 ಮತ್ತೊಂದು ಆಸಕ್ತಿಕರ ಸಂಗತಿ ಎಂದರೆ ಆಶ್ವರ್ಯವಂತನ ದೇಹವನ್ನು ಸಮಾಧಿ ಮಾಡಲಾಗಿದ್ದರೂ ಅವನ ಆತ್ಮ ಮತ್ತು ಆತ್ಮದ ಎಲ್ಲಾ ಪಂಚೇಂದ್ರಿಯಗಳು ಕಾರ್ಯ ನಿರ್ವಹಿಸುತ್ತಲೇ ಇದೆ. ಅವನು ಈ ಕೆಳಗಿನ ಎಲ್ಲಾ ಅನುಭವಗಳನ್ನು ಅನುಭವಿಸಿದನು :

1. ಸಂಪೂರ್ಣವಾದ ಅಂಧಕಾರ (ಕಪ್ಪು)
2. ಉರಿಯುವ ಬೆಂಕಿ (ಯಾತನೆಯ ನೋವು)
3. ಅಳುವುದು (ವಿಷಾದ)
4. ಹಲ್ಲು ಕಡಿಯುವುದು (ಕೋಪ)
5. ಹೊಗೆ (ಅತಿಯಾದ ಬಾಯಾರಿಕೆ)
6. ಉರಿಯುವ ಕುಲುಮೆ (ಹಿಂಸಿಸುವ ಶಾಖ)
7. ಕಿರುಚಾಟ (ಸಂಕಟದ ನಿರಂತರ ಶಬ್ದ)
8. ಸೇತುವೆ ಕಟ್ಟಲಾಗದಂತ ಅಂತರ (ಶಾಶ್ವತ ಪ್ರತ್ಯೇಕತೆ)
9. ಮಾನವ ಸಂಪರ್ಕದ ನಷ್ಟ (ಕುಟುಂಬ- ಸ್ನೇಹಿತರು  ಇಲ್ಲದೆ ತೀವ್ರವಾಗಿ ಬಂದಿಸಲ್ಪಟ್ಟ ಸ್ಥಿತಿ)
10. ಮಾನಸಿಕ ಯಾತನೆ (ಸ್ನೇಹಿತರು/ ಕುಟುಂಬ ಮತ್ತು ಪರಿಚಯಸ್ಥರಿಂದ ಸುವಾರ್ತೆಯನ್ನು ಕೇಳಿಯೂ ಅದನ್ನು ತಿರಸ್ಕರಿಸಿದ ನೆನಪು)

ಈ ಕಥೆಯು ಹೆಚ್ಚಿನ ತೂಕವನ್ನು ಹೊಂದಿದೆ. ಏಕೆಂದರೆ ಇದು ಇತರ ಸುವಾರ್ತೆಗಳಲ್ಲಿ ಕಂಡು ಬರುವುದಿಲ್ಲ. ಇದು ಲೂಕನ ಸುವಾರ್ತೆಯಲ್ಲಿ ಮಾತ್ರ ದಾಖಲಾಗಿದೆ. ಇದಲ್ಲದೆ ಇದರ ಸಾಮ್ಯಗಳಲ್ಲಿ ಯೇಸು ಎಂದಿಗೂ ನಿರ್ದಿಷ್ಟ ಹೆಸರುಗಳನ್ನು ತೆಗೆದುಕೊಂದಿಲ್ಲ.ಆದರೆ ಈ ನಿರ್ದಿಷ್ಟ ಸಾಮ್ಯದಲ್ಲಿ ಮಾತ್ರ ಆತನು ಲಾಜರಸ್, ಅಬ್ರಹಾಮ ಮತ್ತು ಮೋಶೆಯ ಹೆಸರುಗಳನ್ನು ತೆಗೆದುಕೊಳ್ಳುತ್ತಾನೆ.

"ಒಂದೇ ಸಾರಿ ಸಾಯುವದೂ ಆಮೇಲೆ ನ್ಯಾಯತೀರ್ಪೂ ಮನುಷ್ಯರಿಗೆ ಹೇಗೆ ನೇಮಕವಾಗಿದೆಯೋ ...."ಎಂದು ದೇವರವಾಕ್ಯ ಒತ್ತು ಕೊಟ್ಟು ನಮಗೆ ಹೇಳುತ್ತದೆ (ಇಬ್ರಿಯರಿಗೆ 9:27)

 ಪ್ರಸ್ತುತ ಜೀವಿಸುತ್ತಿರುವ ನಾವು ಒಂದಲ್ಲ ಒಂದು ದಿನ ಈ ಜೀವಿತವನ್ನು ಮುಗಿಸುತ್ತೇವೆ. ನಾವು ಈ ಮಣ್ಣಿನಘಟದಿಂದ ನಿರ್ಗಮಿಸಿದ ಮೇಲೆ ಪುನರುತ್ಥಾನ ಮತ್ತು ನ್ಯಾಯ ತೀರ್ಪಿನ ದಿನದವರೆಗೂ ನಮ್ಮ ಆತ್ಮವು ಶಾಶ್ವತವಾಗಿ ಸೇರಲಿರುವಂತಹ ಎರಡು ಸ್ಥಳಗಳಿವೆ.

ಅದರಲ್ಲಿ ಒಂದು ಸತ್ತವರು ನೀವು ಈ ಜಾಗಕ್ಕೆ ಎಂದಿಗೂ ಬರಬಾರದೆಂದು (ಐಶ್ವರ್ಯವಂತನಂತೆ) ಪ್ರಾರ್ಥಿಸುತ್ತಿರುವಂತಹ ಸ್ಥಳವಾಗಿದೆ.

ಮತ್ತೊಂದು ಸ್ಥಳದಲ್ಲಿ ದೇವರ ಸಿಂಹಾಸನದ ಮುಂದೆ ನಮಗಾಗಿ ನಿರಂತರವಾಗಿ ಮದ್ಯಸ್ಥಿಕೆ ಪ್ರಾರ್ಥನೆ ಮಾಡುತ್ತಿರುವ ಮಹಾಯಾಜಕನು ಇದ್ದಾನೆ.

 ಸ್ವರ್ಗ/ಪರಲೋಕದ ಅಸ್ತಿತ್ವವು ಎಷ್ಟು ಸತ್ಯವೋ, ನರಕದ ಅಸ್ತಿತ್ವ ಕೂಡ ಅಷ್ಟೇ ಸತ್ಯವಾಗಿದೆ. ದಯಮಾಡಿ ನಿಮಗೆ ಬೇಕಾದ ಸ್ಥಳವನ್ನು ಆರಿಸಿಕೊಳ್ಳಿ. ಯೇಸುಕ್ರಿಸ್ತನಲ್ಲಿ ಜೀವಿಸುವುದೇ ನಿತ್ಯ ಜೀವ( ಯೋಹಾನ 3:16-17)ಹಾಗಾಗಿ ನಿಮ್ಮ ಕುಟುಂಬದ ಸದಸ್ಯರ ನಿತ್ಯಜೀವಕ್ಕಾಗಿ ಶ್ರದ್ಧೆಯಿಂದ ಪ್ರಾರ್ಥಿಸಿರಿ.
Prayer
ಪ್ರೀತಿಯ ಕರ್ತನಾದ ಯೇಸು ನೀನು ದೇವಕುಮಾರನೆಂದು ನಾನು ನಂಬುತ್ತೇನೆ. ನೀವು 2000 ವರ್ಷದ ಹಿಂದೆಯೇ ಭೂಮಿಯಲ್ಲಿ ನರಾವತಾರ ಎತ್ತಿದ್ದೀರಿ ಎಂದು ನಾನು ನಂಬುತ್ತೇನೆ. ನೀವು ನನಗಾಗಿ ಶಿಲುಬೆಯ ಮೇಲೆ ಮರಣ ಹೊಂದಿ ನನಗೇ ನಿತ್ಯ ಜೀವ ಅನುಗ್ರಹಿಸಲು ನಿಮ್ಮ ರಕ್ತವನ್ನು ಸುರಿಸಿದ್ದೀರಿ ಎಂದು ನಾನು ನಂಬುತ್ತೇನೆ. ನೀವು ಸತ್ತವರೊಳಗಿಂದ ಜೀವಂತವಾಗಿ ಎತ್ತು ಬಂದು ಪರಲೋಕಕ್ಕೆ ಎತ್ತಲ್ಪಟ್ಟಿದ್ದೀರಿ ಎಂದು ನಾನು ನಂಬತ್ತೇನೆ. ನೀವು ಮತ್ತೆ ಭೂಮಿಗೆ ಹಿಂದಿರುಗಿ ಬರುವವರಾಗಿದ್ದೀರಿ ಎಂಬುದನ್ನೂ ನಾನು ನಂಬುತ್ತೇನೆ. ನನ್ನ ಪಾಪವನ್ನು ಕ್ಷಮಿಸಿ. ಈಗಲೇ ನಿಮ್ಮ ಅತ್ಯಮೂಲ್ಯವಾದ ರಕ್ತದಿಂದ ನನ್ನನ್ನು ಶುದ್ಧೀಕರಿಸಿ. ಈಗಲೇ ನನ್ನ ಹೃದಯದೊಳಗೆ ಬನ್ನಿ. ನನ್ನ ಆತ್ಮವನ್ನು ಕಾಪಾಡಿ ನನ್ನ ಆತ್ಮವನ್ನು ನಿಮಗೇ ಸಮರ್ಪಿಸುತ್ತೇನೆ. ನಾನು ನಿಮ್ಮನ್ನು ನನ್ನ ರಕ್ಷಕನಾಗಿ ನನ್ನ ಒಡೆಯನಾಗಿ ಮತ್ತು ನನ್ನ ದೇವರಾಗಿ ಸ್ವೀಕರಿಸುತ್ತೇನೆ. ಆಮೆನ್ 


Join our WhatsApp Channel


Most Read
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಪ್ರವಾದನಾ ಪೂರಕ ಮಧ್ಯಸ್ಥಿಕೆ ಪ್ರಾರ್ಥನೆ ಎಂದರೇನು?
● ಕುಟುಂಬಕ್ಕಾಗಿ ಇರುವ ಗುಣಮಟ್ಟದ ಸಮಯ
● ಜೀವನದ ಬಿರುಗಾಳಿಗಳ ಮಧ್ಯದಲ್ಲಿಯೂ ನಂಬಿಕೆಯನ್ನು ಕಂಡು ಕೊಳ್ಳುವುದು.
● ಪುರುಷರು ಯಾಕೆ ಪತನಗೊಳ್ಳುವರು -2
● ನಮ್ಮ ಆಯ್ಕೆಯ ಪರಿಣಾಮಗಳು
● ಮತ್ತೊಬ್ಬರ ಪಾತ್ರೆಯನ್ನು ತುಂಬಿಸುವುದನ್ನು ಬಿಟ್ಟು ಬಿಡಬೇಡಿರಿ.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login