हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವುದು -5
Daily Manna

ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವುದು -5

Thursday, 27th of March 2025
2 1 116
Categories : ಬಿಡುಗಡೆ (Deliverance) ವಾತಾವರಣ (Atmosphere)
"ಶ್ವಾಸವುಳ್ಳದ್ದೆಲ್ಲಾ ಯೆಹೋವ ದೇವರನ್ನು ಸ್ತುತಿಸಲಿ. ಯೆಹೋವ ದೇವರಿಗೆ ಸ್ತೋತ್ರ!" (ಕೀರ್ತನೆ 150:6) 

"ಇಸ್ರಾಯೇಲ್ಯರ ಸ್ತೋತ್ರಸಿಂಹಾಸನದಲ್ಲಿರುವಾತನೇ, ನೀನು ಪವಿತ್ರಸ್ವರೂಪನು." ಎಂದು  ಕೀರ್ತನೆಗಳು 22:3 ಹೇಳುತ್ತದೆ,
ನಾವು ಆತನನ್ನು ಆರಾಧಿಸುವಾಗ, ಆತನು ನಮ್ಮ ನಿವಾಸಗಳಲ್ಲಿ  ನಿವಾಸಿಸುವವನಾಗಿದ್ದಾನೆ ಎಂದು ದೇವರ ವಾಕ್ಯ ಹೇಳುತ್ತದೆ. ನಾವು ಆರಾಧಿಸುವಾಗ ದೇವರು ನಮ್ಮ ಪರಿಸ್ಥಿತಿಗೆ ಧಾವಿಸುತ್ತಾನೆ . ಇದು ನಾವು ದೇವರಿಗೆ ನೇರ ಆಹ್ವಾನವಿಟ್ಟಂತೆ. ನಾವು ದೇವರಿಗೆ ಪ್ರಾರ್ಥಿಸುವಾಗ, ನಮ್ಮ ವಿನಂತಿಗಳನ್ನು ತಲುಪಿಸಲು ಆತನು ತನ್ನ ದೇವದೂತರನ್ನು ಕಳುಹಿಸುತ್ತಾನೆ ಎಂದು ಹೆಚ್ಚು ಜನರು ಹೇಳುತ್ತಾರೆ . ಆದರೆ ನಾವು ಆರಾಧಿಸುವಾಗ, ಆತನು ವೈಯಕ್ತಿಕವಾಗಿ ತಾನೇ ಧಾವಿಸುವವನಾಗಿದ್ದಾನೆ  ದೇವರು ನಿಮ್ಮ ಕುಟುಂಬದಲ್ಲಿ ವಾಸಿಸಬೇಕೆಂದು ನೀವು ಬಯಸುತ್ತೀರಾ? ಹಾಗಾದರೆ ಆರಾಧನೆಯ ವಾತಾವರಣವನ್ನು ನಿರ್ಮಿಸಿ. 

ದೇವರ ಸ್ತುತಿ ಯಾವಾಗಲೂ ನಿಮ್ಮ ಬಾಯಲ್ಲಿರಲಿ. ಪೌಲ ಮತ್ತು ಸೀಲರನ್ನು ಜೈಲಿಗೆ ಹಾಕಿದ ಪರಿಸ್ಥಿತಿಯನ್ನು ಆಲೋಚಿಸಿ.
"ಮಧ್ಯರಾತ್ರಿಯಲ್ಲಿ ಪೌಲನೂ ಸೀಲನೂ ಪ್ರಾರ್ಥನೆ ಮಾಡುವವರಾಗಿ ದೇವರಿಗೆ ಸ್ತುತಿಪದಗಳನ್ನು ಹಾಡುತ್ತಿದ್ದರು; ಸೆರೆಯಲ್ಲಿದ್ದವರು ಲಕ್ಷ್ಯವಿಟ್ಟು ಕೇಳುತ್ತಿದ್ದರು.  ಅಕಸ್ಮಾತ್ತಾಗಿ ಮಹಾಭೂಕಂಪವುಂಟಾಯಿತು; ಸೆರೆಮನೆಯ ಅಸ್ತಿವಾರಗಳು ಕದಲಿದವು. ಅದೇ ಕ್ಷಣದಲ್ಲಿ ಕದಗಳೆಲ್ಲಾ ತೆರೆದವು, ಎಲ್ಲರ ಬೇಡಿಗಳು ಕಳಚಿಬಿದ್ದವು."ಎಂದು  ಅಪೊಸ್ತಲರ ಕೃತ್ಯಗಳು 16:25-26 ರಲ್ಲಿ ಸತ್ಯವೇದ ಹೇಳುತ್ತದೆ. ಅವರು ತಮ್ಮ ಪರಿಸ್ಥಿತಿಗಳ ಹೊರತಾಗಿಯೂ ದೇವರಿಗೆ ಪ್ರಾರ್ಥಿಸಿದರು ಮತ್ತು ದೇವರನ್ನು ಸ್ತುತಿಸಿದರು . ಆಗ ಇದ್ದಕ್ಕಿದ್ದಂತೆ, ಭೂಕಂಪ ಸಂಭವಿಸಿತು ಮತ್ತು ಜೈಲಿನ ಎಲ್ಲಾ ಬಾಗಿಲುಗಳು ತೆರೆದವು! ಎಲ್ಲಾ ಕೈದಿಗಳನ್ನು ಬಿಡುಗಡೆ ಮಾಡಲಾಯಿತು! ಇದು ನಿಜಕ್ಕೂ  ಅದ್ಭುತವಾದದ್ದು . ಈ ವ್ಯಕ್ತಿಗಳನ್ನು ಬಂಧಿಸಲಾಗಿತ್ತು ಅವರು ಯಾವುದೋ ತಪ್ಪು ಮಾಡಿದ್ದಾರೆಂದು ಅಲ್ಲ ಬದಲಾಗಿ ಅವರು ಸುವಾರ್ತೆಯನ್ನು ಸಾರಿದರು ಎಂದು ಅವರನ್ನು ಬಂಧಿಸಲಾಗಿತ್ತು. ಅವರು ದೇಶದ ಯಾವುದೇ ಕಾನೂನನ್ನು ಉಲ್ಲಂಘಿಸಿರಲಿಲ್ಲ. ಆದರೂ ಅವರನ್ನು ಶುಭ ಸುದ್ದಿಯನ್ನು ಹರಡಿದ್ದಕ್ಕಾಗಿ ಜೈಲಿಗೆ ಹಾಕಲಾಯಿತು. ಸತ್ಯಕ್ಕಾಗಿ ನಿಂತಿದ್ದಕ್ಕಾಗಿ ಅವರನ್ನು ದೂಷಿಸಲಾಗುವುದನ್ನು ಸ್ವಲ್ಪ ಕಲ್ಪಿಸಿಕೊಳ್ಳಿ.

ನೀವು ಈಗ ದೇವರನ್ನು ಸ್ತುತಿಸುತ್ತಿದ್ದೀರಾ  ಅಥವಾ ನೀವು ಈ ಸಮಸ್ಯೆಯನ್ನು ಎದುರಿಸುತ್ತಿರುವುದನ್ನು ಆತ ನೋಡಿಯೂ ಏಕೆ ಸುಮ್ಮನಿದ್ದಾನೆ ಎಂದು ಆಶ್ಚರ್ಯಪಡುತ್ತಾ ದೂರುತ್ತಿದ್ದೀರಾ? ದೇವರನ್ನು ಸ್ತುತಿಸುವುದು ಆತನನ್ನು ತಮ್ಮ ಪರಿಸ್ಥಿತಿಗೆ ಆಹ್ವಾನಿಸಬಲ್ಲದು  ಎಂದು ಈ ಮನುಷ್ಯರಿಗೆ ಚೆನ್ನಾಗಿ ತಿಳಿದಿತ್ತು. ಆದ್ದರಿಂದಲೇ  ಅವರು ಆರಾಧನೆಯ  ಕೀಲಿಕೈ ಯನ್ನು ಬಳಸಿ ಅವರು ಜೈಲಿನ ವಾತಾವರಣವನ್ನೇ  ಬದಲಾಯಿಸಿದರು ಹಾಗಾಗಿ ಅಲ್ಲೊಂದು ಅದ್ಭುತ ಸಂಭವಿಸಿತು.

ದೇವರ ಸಾನಿಧ್ಯವನ್ನು ಸ್ವಾಗತಿಸಲು- ಆತನ ಶಾಂತಿ, ಸಂತೋಷ ಮತ್ತು ಆತನು ಯಾರೆಂಬುದರ ಎಲ್ಲವನ್ನೂ ಅರಿಯಲು - ನಿಮ್ಮ ಮನೆಯಲ್ಲಿ  ಸ್ತುತಿ ಮತ್ತು ಆರಾಧನಾ ಸಂಗೀತವನ್ನು ಹಾಕುವಂತದ್ದು  ಹಾಡುವಂತದ್ದು ಸರಳ ಆದರೆ ಶಕ್ತಿಯುತವಾದ ಒಂದು  ಮಾರ್ಗವಾಗಿದೆ. ಇದನ್ನು ಪ್ರತಿದಿನ ಮಾಡುವುದರಿಂದ ನಿಮ್ಮ ಮನೆಯಲ್ಲಿ ಗಮನಾರ್ಹ ಬದಲಾವಣೆಗಳು ಉಂಟಾಗುತ್ತವೆ. ದೇವರ ಬಲವು ಒಳಗೆ ಪ್ರವೇಶಿಸಿ ನಮ್ಮನ್ನು ಮುಕ್ತಗೊಳಿಸುತ್ತದೆ. 

ನೀವು ಯಾವುದಾದರೂ  ರೀತಿಯಲ್ಲಿ ಬಂಧಿತರಾಗಿದ್ದೀರಾ? ದೇವರನ್ನು ಸ್ತುತಿಸಿ ಆಗ ಆತನು ನಿಮ್ಮ ಪರವಾಗಿ ಹೆಜ್ಜೆ ಹಾಕುವುದನ್ನು ನೋಡುವಿರಿ. ಇದು ಅನೇಕರಿಗೆ ಅರ್ಥವಾಗದ ಒಂದು ಗುಪ್ತ ರಹಸ್ಯವಾಗಿದೆ. ನಾವು ದೂರಲು  ಮತ್ತು ಗೊಣಗಲು ಇಷ್ಟಪಡುವ ಜಗತ್ತಿನಲ್ಲಿ ವಾಸಿಸುತ್ತೇವೆ. ಗೊಣಗುವುದು ದೇವರನ್ನು ನಿಮ್ಮ ಪರಿಸ್ಥಿತಿಯಿಂದ ದೂರವಿಡುತ್ತದೆ ಎಂದು ಅರ್ಥಮಾಡಿಕೊಳ್ಳಿ. ದೇವರು ಪಕ್ಕಕ್ಕೆ ಸರಿದು ಆ ಸಮಸ್ಯೆಗಳಿಗಾಗಿ ನೀವೇ ಹೋರಾಡಿಕೊಳ್ಳಲಿ ಎಂದು  ಬಿಟ್ಟುಬಿಡುತ್ತಾನೆ . ನನ್ನನ್ನು ನಂಬಿರಿ; ದೇವರು ನಿಮ್ಮ ಮನೆಯಿಂದ ಹೊರಬಂದರೆ ಸೈತಾನನು ನಿಮಗೆ ಏನೆಲ್ಲಾ  ಮಾಡಬಲ್ಲನು ಎಂದು ನೀವು ಊಹಿಸಲು ಕೂಡ ಸಾಧ್ಯವಿಲ್ಲ. 

ಆದ್ದರಿಂದ ಜೀವನಶೈಲಿಯಾಗಿ ಆರಾಧನೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ದೇವರ ಸಾನಿಧ್ಯವನ್ನು ನಿಮ್ಮ ಪರಿಸರದಲ್ಲಿ ಶಾಶ್ವತವಾಗಿ ಇರಿಸಿ. ಹೌದು, ಈಗ ವಿಷಯಗಳು ನೀವು ಬಯಸಿದಂತೆ ಆಗದೇ ಇರಬಹುದು, ಆದರೆ ನೀವು ದೇವರಲ್ಲಿ  ಲೀನರಾದಾಗ ನಿರೀಕ್ಷೆ ಹುಟ್ಟುತ್ತದೆ ಎಂದು ಸತ್ಯವೇದ ಹೇಳುತ್ತದೆ. ಹಾಗಾಗಿ ಆತನೊಂದಿಗೆ ಲೀನವಾಗಿರಲು ಒಂದು ಮಾರ್ಗವೆಂದರೆ ಯಾವಾಗಲೂ ಆತನನ್ನು ಸ್ತುತಿಸುವುದಾಗಿದೆ.

ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣವೇ ಆತನಿಗೆ ಸ್ತುತಿಗೀತೆಗಳನ್ನು ಹಾಡಿ. ಕೀರ್ತನೆ 119:164 ರಲ್ಲಿ ರಾಜ ದಾವೀದನು, " ನಿನ್ನ ನೀತಿವಿಧಿಗಳಿಗೋಸ್ಕರ ನಿನ್ನನ್ನು ದಿನಕ್ಕೆ ಏಳು ಸಾರಿ ಕೊಂಡಾಡುತ್ತೇನೆ." ಎಂದು ಹೇಳುತ್ತಾನೆ. ದಿನಕ್ಕೆ ಏಳು ಬಾರಿ ದೇವರನ್ನು ಸ್ತುತಿಸುವುದನ್ನು ನೀವು ಊಹಿಸಬಲ್ಲಿರಾ? ಅಂದರೆ, ದೇವರನ್ನು ಸ್ತುತಿಸಲು ದಾವೀದನಿಗೆ ಒಂದು ವೇಳಾಪಟ್ಟಿ ಇತ್ತು.  ತನ್ನ ಜೀವನದಲ್ಲಿ ದೇವರು ಶೀಘ್ರವಾಗಿ  ತೋರಿಸಿದ ಒಳ್ಳೆಯತನಕ್ಕೆ ಅದೂ ಸಹ  ಸಾಕಾಗುವುದಿಲ್ಲ ಎಂದು ಅವನು ಅರಿತುಕೊಂಡನು. ಏಳು ಬಾರಿ ತುಂಬಾ ಕಡಿಮೆಯಾಯಿತು, ಆದ್ದರಿಂದ ಅವನು ಎಲ್ಲಾ ಸಮಯದಲ್ಲೂ ಕರ್ತನನ್ನು ಸ್ತುತಿಸಬೇಕೆಂಬುದನ್ನು  ಆರಿಸಿಕೊಂಡನು. ಆದ್ದರಿಂದ ಅವನು ಕೀರ್ತನೆ 34:1-2 ರಲ್ಲಿ, " ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು; ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವದು. ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವದು; ಇದನ್ನು ದೀನರು ಕೇಳಿ ಸಂತೋಷಿಸುವರು.". ಎಂದು ಬರೆದನು. ಎಷ್ಟು  ಅದ್ಭುತವಲ್ಲವೇ!

ನೀವು ಸಹ ದಾವೀದನಂತೆ ಇರಲು ಬಯಸುತ್ತೀರಾ? 
ಆದ್ದರಿಂದಲೇ ಅವನು ತನ್ನ ಜೀವನದುದ್ದಕ್ಕೂ ಯಾವುದೇ ಯುದ್ಧದಲ್ಲಿ ಸೋಲಲಿಲ್ಲ ಎಂಬುದರಲ್ಲಿ  ಆಶ್ಚರ್ಯವೇನೂ ಇಲ್ಲಾ. ದೇವರ ಸಾನಿಧ್ಯವನ್ನು ಭದ್ರಪಡಿಸಿಕೊಳ್ಳುವ ರಹಸ್ಯ ಅವನಿಗೆ ತಿಳಿದಿತ್ತು, ಮತ್ತು ದೇವರು ನಿಮ್ಮೊಂದಿಗಿರುವಾಗ  ಯಾವುದೂ ಸಹ  ಮತ್ತು  ಯಾರೂ ಸಹ ಮತ್ತು ಅಕ್ಷರಶಃ ಏನೊಂದೂ  ಸಹ  ನಿಮ್ಮ ವಿರುದ್ಧ ಯಶಸ್ವಿಯಾಗಿರಲು ಸಾಧ್ಯವಿಲ್ಲ ಎಂಬುದನ್ನು ಅವನು ತಿಳಿದಿದ್ದನು. ಆದ್ದರಿಂದ, ನೀವು ಕೆಲಸಕ್ಕೆ ಹೋಗುವಾಗಲೋ , ಅಥವಾ ಮನೆಯಲ್ಲಿ, ಅಥವಾ ಜಿಮ್‌ನಲ್ಲಿ ಇರುವಾಗಲೋ, ಕೀರ್ತನೆಗಳನ್ನು ಹಾಕಿರಿ . ದೇವರ ಸ್ತುತಿ ಯಾವಾಗಲೂ ನಿಮ್ಮ ಬಾಯಲ್ಲಿ ಇರಲಿ ಏಕೆಂದರೆ ಆತನು  ಒಳ್ಳೆಯವನು ಮತ್ತು ನಿಮ್ಮ ಜೀವನದ ಮೇಲೆ ಆತನ ಕರುಣೆ ಶಾಶ್ವತವಾಗಿರುತ್ತದೆ.

Bible Reading: Judges 13-15
Prayer
ತಂದೆಯೇ, ನೀವು ನನಗಾಗಿ ಮಾಡಿದ ಎಲ್ಲದಕ್ಕೂ ನಾನು ಯೇಸುನಾಮದಲ್ಲಿ ಸ್ತೋತ್ರ ಸಲ್ಲಿಸುತ್ತೇನೆ . ನಿಮ್ಮ ಒಳ್ಳೆಯತನ ಮತ್ತು ಕರುಣೆಗಾಗಿ ನಿನಗೆ ಸ್ತೋತ್ರ. ನೀವು ನನ್ನನ್ನು ಪ್ರೀತಿಸುತ್ತೀರಿ ಮತ್ತು ನನ್ನ ಕುಟುಂಬವನ್ನು ನೋಡಿಕೊಳ್ಳುವವರಾಗಿದ್ದೀರಿ  ಎಂದು ನಾನು ನಿನ್ನನ್ನು ಸ್ತುತಿಸುತ್ತೇನೆ. ಯಾವಾಗಲೂ ನಿನ್ನನ್ನು ಸ್ತುತಿಸಲು ನೀನು ನನಗೆ ಸಹಾಯ ಮಾಡಬೇಕೆಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಜೀವನದಲ್ಲಿ ನಾನು ಯಾವಾಗಲೂ ನಿಮ್ಮ ಕೈಗಳನ್ನೇ ಎದುರು  ನೋಡುತ್ತೇನೆ ಹೊರತು ದೂರುವುದಿಲ್ಲ  ಎಂದು ಯೇಸುನಾಮದಲ್ಲಿ ನನ್ನ ಜೀವಿತ ಕುರಿತು ಆದೇಶಿಸುತ್ತೇನೆ. ಆಮೆನ್.


Join our WhatsApp Channel


Most Read
● ಏಳು ಪಟ್ಟು ಆಶೀರ್ವಾದ
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ಇತರರಿಗೆ ಸೇವೆ ಸಲ್ಲಿಸುವ ಮೂಲಕ ನಾವು ಅನುಭವಿಸುವ ಆಶೀರ್ವಾದಗಳು 
● ನೀವು ದೇವರಿಂದ ನೇಮಿಸಲ್ಪಡುವ ಮುಂದಿನ ಬಿಡುಗಡೆ ನಾಯಕರು ನೀವಾಗಬಹುದು
● ಹಣಕಾಸಿನ ಅವ್ಯವಸ್ಥೆಯಿಂದ ಪಾರಾಗುವುದು ಹೇಗೆ?
● ನೀವು ಪ್ರಾರ್ಥಿಸುವಿರಿ ಆತನು ನಿಮಗೆ ಕಿವಿಗೊಡುವನು
●  ದಿನ 26:40ದಿನಗಳ ಉಪವಾಸ ಪ್ರಾರ್ಥನೆ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login