हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ದಿನ 35:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Daily Manna

ದಿನ 35:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.

Thursday, 26th of December 2024
3 1 154
Categories : ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಶರೀರ ಭಾವವನ್ನು ಶಿಲುಬೆಗೇರಿಸುವುದು.
‭
"ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ - ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ."(ಮತ್ತಾಯ‬ ‭16:24‬).

 ನಾವು ಪ್ರಾರ್ಥನೆ ಮತ್ತು ಉಪವಾಸದಲ್ಲಿ ನಿರತರಾಗಿ ಇರಲು ನಮ್ಮ ದೇಹದ ಇಚ್ಛೆಗಳನ್ನು ನಿಗ್ರಹಿಸುವುದು ಅನಿವಾರ್ಯವಾಗಿರುತ್ತದೆ. ದೇಹದ ಇಚ್ಚೆಗಳು ಯಾವಾಗಲೂ ಸ್ವಾರ್ಥತೆಯಿಂದ ಕೂಡಿದ್ದು ಅದು ದೇವರಿಗೆ ಮಹಿಮೆಯನ್ನು ತರುವಂತದ್ದಲ್ಲ.

 ಆದ್ದರಿಂದ ನಾವು ಈ ಶರೀರ ಭಾವವನ್ನು ಶಿಲುಬೆಗೆ ಹಾಕಲೇಬೇಕು.ಶರೀರ ಭಾವವು ಯಾವಾಗಲೂ ತನ್ನದೇ ಸುಖವನ್ನು ನೋಡಿಕೊಳ್ಳುತ್ತದೆ ಮತ್ತು ಶಾರೀರಿಕ ಬಲದಿಂದ ಮಾಡಿದ್ದೆಲ್ಲವೂ ಸ್ವಾರ್ಥಕ್ಕಾಗಿಯೇ ಇರುತ್ತದೆ. ವಿಶ್ವಾಸಿ ಗಳಾಗಿ ನಾವು ಆತ್ಮದಲ್ಲಿ ಜೀವಿಸುವವರಾಗಿದ್ದೇವೆ ಮತ್ತು ನಾವು ಇಂದ್ರಿಯ ಜ್ಞಾನದ ಮೇಲೆ ಆಧಾರಗೊಳ್ಳದೆ ಆತ್ಮನ ಮೇಲೆ ಆಧಾರಗೊಂಡು ನಡೆಯಬೇಕೆಂದು ದೇವರು ನಮ್ಮಿಂದ ಬಯಸುತ್ತಾನೆ. ಅವಿಶ್ವಾಸಿಗಳಾದ ಜನರು ತಮ್ಮೆಲ್ಲಾ ಕಾರ್ಯಗಳನ್ನು ಇಂದ್ರೀಯ ಜ್ಞಾನಕ್ಕೆ ಅನುಸಾರವಾಗಿಯೂ ತಮ್ಮ ಭಾವನೆಗಳಿಗೆ ಅನುಸಾರವಾಗಿಯೂ ನಡೆಸುತ್ತಾರೆ ಆದರೆ ನಾವು ವಿಶ್ವಾಸಿಗಳಾಗಿರುವುದರಿಂದ, ನಮಗೆ ಬೇಕಾದ ಮಾರ್ಗದರ್ಶನವು ದೇವರ ಆತ್ಮನಿಂದಲೇ ಬರುತ್ತದೆ "ಯಾರಾರು ದೇವರ ಆತ್ಮನಿಂದ ನಡೆಸಲ್ಪಡುತ್ತಾರೋ ಅವರು ದೇವರ ಮಕ್ಕಳಾಗಿದ್ದಾರೆ" ಎಂಬ ದೇವರವಾಕ್ಯದಲ್ಲಿ ವರ್ಣಿಸಿರುವಂತದ್ದು ಇದನ್ನೇ. ನೀವು ದೇವರ ಆತ್ಮನಿಂದ ನಡೆಸಲ್ಪಡುವುದೇ ನೀವು ದೇವರ ಮಕ್ಕಳು ಎಂಬುದಕ್ಕೆ ಸಾಕ್ಷಿಯಾಗಿದೆ.

 ಶರೀರ ಭಾವವು ಯಾವಾಗಲೂ ದೇವರ ಸಂಗತಿಗಳನ್ನು ವಿರೋಧಿಸುತ್ತದೆ ಹಾಗೆಯೇ ದೇವರ ಸಂಗತಿಗಳು ಸಹ ಶರೀರ ಭಾವಕ್ಕೆ ತದ್ವಿರುದ್ಧವಾಗಿರುತ್ತದೆ. (ಗಲಾತ್ಯ5 :17)
 "ನಾನು ದಿನಾಲು ಸಾಯುತ್ತಿದ್ದೇನೆ "(1 ಕೊರಿಯಂತ 15:31) ಎಂದು ಪೌಲನು ಒತ್ತುಕೊಟ್ಟು ಗಲಾತ್ಯದವರಿಗೆ ಹೇಳುವ ಹಾಗೆ ನಾವು ಕ್ರಿಸ್ತನಿಗೆ ನಂಬಿಗಸ್ತರಾದ ಸೇವಕರಾಗಿರಲು ಮತ್ತು ದೇವರ ಉದ್ದೇಶಗಳನ್ನು ನೆರವೇರಿಸುವುದಕ್ಕಾಗಿ ನಾವು ನಮ್ಮ ಶರೀರ ಭಾವವನ್ನು ಶಿಲುಬೆಗೆ ಹಾಕುವುದನ್ನು ಅಭ್ಯಾಸಿಸಬೇಕು.

 ಕ್ರಿಸ್ತೀಯ ಜೀವಿತವು ಅನುದಿನವು ಕಟ್ಟಳೆಯಿಂದ ಕೂಡಿದೆ. ಒಬ್ಬನು ಕ್ರಿಸ್ತನನ್ನು ಯಾವಾಗ ಸ್ವೀಕರಿಸುತ್ತಾನೋ ಆಗಿನಿಂದ ಬೇರೆ ಯಾವುದನ್ನು ಲೆಕ್ಕಿಸದೆ ದೇವರೊಂದಿಗೆ ನಿರಂತರವಾಗಿ ನಡೆಯುವ ಅಭ್ಯಾಸ ಮಾಡಿಕೊಳ್ಳುವ ಅಗತ್ಯವಿದೆ.

 'ನಾನು ಅನೇಕ ವರ್ಷಗಳ ಹಿಂದೆಯೇ ನನ್ನ ಜೀವಿತವನ್ನು ಕ್ರಿಸ್ತನಿಗೆ ಒಪ್ಪಿಸಿಕೊಟ್ಟಿಬಿಟ್ಟಿದ್ದೇನೆ' ಎಂದು ಹೇಳುವಂಥದ್ದು ನಿಮ್ಮ ದೈನಂದಿನ ಜವಾಬ್ದಾರಿಗಳಿಂದ ನುಣುಚಿಕೊಳ್ಳಲು ಅದು ನಿಮಗೆ ವಿನಾಯಿತಿ ಕೊಡುವುದಿಲ್ಲ. ಪ್ರತಿದಿನವೂ ಕ್ರೈಸ್ತರಾಗಿ ನಡೆಯುವ ಹೊಸ ಅವಕಾಶಗಳು ನಿಮಗೆ ಸಿಗಲಿದ್ದು ನೀವು ನಿಮ್ಮ ಶರೀರ ಭಾವವನ್ನು ಶಿಲುಬೆಗೆ ಹಾಕಿ ದೇವರೊಂದಿಗೆ ಅನುದಿನ ನಡೆಯಬೇಕಾದ ಅವಶ್ಯಕತೆ ಇದೆ. ಶರೀರ ಭಾವವು ಮಾಡುವ ಕಾರ್ಯವೇನೆಂದರೆ ದೇವರನ್ನು ಮಹಿಮೆಯನ್ನು ಗೊಳಿಸಿದಂತಹ ಹೊಟ್ಟೆಕಿಚ್ಚು, ಸಿಟ್ಟು,ಚಾಡಿ ಮಾತು ಮತ್ತು ಲೌಕಿಕ ವೈಭವ ದಾಶೆಗಳನ್ನು ಒಳಗೊಂಡ ಲಾಲಸೆಗಳನ್ನು ಪ್ರತಿದಿನ ನಿಮ್ಮ ಮುಂದೆ ಪ್ರದರ್ಶಿಸುತ್ತಲೇ ಇರುತ್ತದೆ.

ರೋಮ 6:6 ಹೇಳುತ್ತದೆ
"ಪಾಪಾಧೀನಸ್ವಭಾವವು ನಾಶವಾಗಿ ನಾವು ಇನ್ನೂ ಪಾಪದ ವಶದಲ್ಲಿರದಂತೆ ನಮ್ಮ ಪೂರ್ವಸ್ವಭಾವವು ಕ್ರಿಸ್ತನ ಕೂಡ ಶಿಲುಬೆಗೆ ಹಾಕಲ್ಪಟ್ಟಿತೆಂದು ತಿಳಿದಿದ್ದೇವೆ." ಎಂದು.

 ನಮ್ಮ ಪಾಪಗಳಿಗಾಗಿ ನಾವು ಪ್ರತಿದಿನವೂ ಸಾಯಲೇಬೇಕು. ನಮ್ಮ ಹಳೆಯ ಪ್ರಾಕೃತ ಮನುಷ್ಯನು ಈಗಾಗಲೇ ಕ್ರಿಸ್ತನೊಂದಿಗೆ ಸತ್ತಿದ್ದಾನೆ ಆದರೆ ನಾವಾದರೂ ಕ್ರಿಸ್ತನ ವಿಜಯವು ನಮ್ಮ ಮೇಲೆ ಪ್ರಭಾವ ಬೀರುವಂತೆ ಜೀವಿಸಬೇಕು.

 ರೋಮ 6:6 ಪಾಪಕ್ಕೆ ದಾಸರಾಗದಂತೆ ದಿನಾಲು ಪಾಪವನ್ನು ಶಿಲುಬೆಗೆ ಹಾಕುವಂಥದ್ದು ಬಹು ಮುಖ್ಯವಾದದ್ದೆಂದು ಸೂಚಿಸುತ್ತದೆ. ದೇವರು ಸಹ ವಿಶ್ವಾಸಿಗಳನ್ನು ಪಾಪದಿಂದ ಬಿಡಿಸಿ ಶರೀರ ಭಾವದಿಂದ ವಿಮೋಚಿಸಿದ್ದಾನೆ. ಹಾಗಾಗಿ ಶರೀರದ ದುರಿಚ್ಚೆಗಳನ್ನು ಶಿಲುಬೆಗೇರಿಸದೆ ಹೋದರೆ ಅದು ಮತ್ತೆ ನಮ್ಮನ್ನು ಇಹಲೋಕದ ಭಾವನೆಗಳಿಗೂ ಬಯಕೆಗಳಿಗೂ ದುರಾಚಾರಗಳಿಗೂ ಗುಲಾಮರನ್ನಾಗಿ ಮಾಡುತ್ತದೆ. ಆದುದರಿಂದ ಶರೀರದಿಚ್ಛೆಗಳನ್ನು ಶಿಲುಬೆಗೇರಿಸುವಂತೆ ಎಡೆಬಿಡದೆ ಪ್ರಾರ್ಥಿಸುವಂತದು ಬಹು ಮುಖ್ಯವಾದ ಸಂಗತಿಯಾಗಿದೆ.

ಶರೀರದ ದುರಿಚ್ಚೆಗಳನ್ನುಶಿಲುಬೆಗೆ ಹಾಕುವ ಕಾರ್ಯಗಳನ್ನು ಈ ಮಾಧ್ಯಮಗಳ ಮೂಲಕ ಮಾಡಬಹುದು.

   1. ಬಾಯ ಅರಿಕೆಗಳಿಂದ:ಜೀವನ್ಮರಣಗಳು ನಾಲಿಗೆಯ ವಶದಲ್ಲಿವೆ ಎಂದು ಜ್ಞಾನೋಕ್ತಿ 18:21 ಹೇಳುತ್ತದೆ. ನಾನು ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟವನಾಗಿದ್ದೇನೆ ಎಂದು ಹೇಳುವ ಈ ರೀತಿಯ ಪ್ರತಿನಿತ್ಯದ ಅರಿಕೆಗಳು ಪಾಪಮಯ ಬಯಕೆಗಳನ್ನು ಗೆಲ್ಲಲು ಬೇಕಾಗಿರುವ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ.

    2.ನೀವು ಶಾರೀರಿಕಇಚ್ಛೆಗಳನ್ನು ಶಿಲುಬೆಗೆ ಹಾಕಲು ನೀವು ಹೇಳುವ ಮಾತುಗಳಲ್ಲಿರುವ ಶಕ್ತಿಯನ್ನು ನೀವು ಮೊದಲು ಗುರುತಿಸಿಕೊಳ್ಳಬೇಕು.

ದೇವರ ವಾಕ್ಯದಲ್ಲಿ ಐಕ್ಯವಾಗಿರುವಂಥದ್ದು ಪ್ರಾರ್ಥನೆ ಉಪವಾಸ ವಾಕ್ಯ ಧ್ಯಾನ ಮುಂತಾದ ಆತ್ಮಿಕ ಚಟುವಟಿಕೆಗಳಲ್ಲಿ ನಿರತರಾಗಿರುವಂಥದ್ದು ಶರೀರದ ಇಚ್ಛೆಗಳನ್ನು ಶಿಲುಬೆಗೆ ಹಾಕಲು ಸಹಾಯ ಮಾಡುತ್ತದೆ. ಈ ರೀತಿಯ ಆತ್ಮಿಕ ಅಭ್ಯಾಸಗಳು ಆತ್ಮನಲ್ಲಿ ನಡೆಯುವುದಕ್ಕೂ ಆತ್ಮಿಕ ಸಂಗತಿಗಳ ಮೇಲೆ ಲಕ್ಷ್ಯವಿಡಲು ನಿಮಗೆ ಸಹಾಯ ಮಾಡುತ್ತದೆ.

 ನಿಮ್ಮ ಪ್ರಾರ್ಥನಾ ಜೀವಿತದಲ್ಲಿ ಇರುವ ಬಲಹೀನತೆಯೇ ಶರೀರ ದಿಚ್ಚೆಗಳು ಅವುಗಳ ಲಾಭವನ್ನು ಪಡೆದು ನಿಮ್ಮನ್ನು ಆಳ್ವಿಕೆ ಮಾಡುತ್ತಿದೆ ಎಂಬುದನ್ನು ಸೂಚಿಸುತ್ತದೆ.

 ಇಂದು ನೀವು ದೇವರು ಆತ್ಮನಲ್ಲಿ ನಡೆಯುವಂತೆಯೂ ನೀವು ಆತ್ಮಿಕ ಫಲಗಳನ್ನು ಫಲಿಸುವಂತೆಯೂ ದೇವರು ನಿಮಗೆ ಕೃಪೆಯನ್ನು ಅನುಗ್ರಹಿಸಲಿ ಎಂದು ಯೇಸು ನಾಮದಲ್ಲಿ ನಾನು ನಿಮಗಾಗಿ ಪ್ರಾರ್ಥಿಸುತ್ತೇನೆ

Bible Reading Plan: Hebrew 10 - James 5


Prayer
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಿ.

1.ನನ್ನ ಆತ್ಮಿಕ ಬೆಳವಣಿಗೆಯನ್ನು ತಡೆಯುವ ಎಲ್ಲ ಶಾರೀರಿಕ ಇಚ್ಛೆಗಳನ್ನು ಯೇಸು ನಾಮದಲ್ಲಿ ಮರಣಕ್ಕೆ ಒಪ್ಪಿಸುತ್ತಿದ್ದೇನೆ (ರೋಮ 8:13)

2. ಯೇಸು ನಾಮದಲ್ಲಿ ಎಲ್ಲಾ ಕುಯುಕ್ತಿಗಳನ್ನು ನನ್ನ ಕನಸಿನ ಮೇಲೆ ಆಗುವ ಎಲ್ಲಾ ದಾಳಿಗಳನ್ನು ಇಂದೇ ಯೇಸುನಾಮದಲ್ಲಿ ಕೊನೆಗೂಳಿಸುತ್ತೇನೆ. (2 ಕೊರಿಯಂತೆ 10:4-5)

3.ಯೇಸು ನಾಮದಲ್ಲಿ ನನ್ನೆಲ್ಲಾ ಕೋಪವನ್ನು ಕಾಮದ ದುರಿಚ್ಚೆಗಳನ್ನು ಡಂಬದಾಸೆಗಳನ್ನು, ದೈವಿಕ ಸಂಗತಿಗಳಲ್ಲದವುಗಳ ಮೇಲಿನ ಬಯಕೆಗಳನ್ನು ಯೇಸು ನಾಮದಲ್ಲಿ ಶಿಲುಬೆಗೇರಿಸುತ್ತಿದ್ದೇನೆ. (ಗಲಾತ್ಯ5:24)

4.ದೇವರ ಬಲವು ಯೇಸು ನಾಮದಲ್ಲಿ ನನ್ನ ಶರೀರದಲ್ಲಿ ಹರಿದು ಬರಲಿ. ದೇವರ ಬಲವು ನನ್ನ ಆತ್ಮದಲ್ಲೆಲ್ಲ ಯೇಸುನಾಮದಲ್ಲಿ ಹರಿದು ಬರಲಿ, ದೇವರ ಬಲವು ಯೇಸು ನಾಮದಲ್ಲಿ ನನ್ನ ಪ್ರಾಣದಲ್ಲೆಲ್ಲಾ ಹರಿದು ಬರಲಿ (ಎಫೆಸ್ಸೆ 3:16)

5.ನನ್ನ ಜೀವಿತದಲ್ಲಿರುವ ಎಲ್ಲಾ ಪಾಪಮಯ ಚಟುವಟಿಕೆಗಳನ್ನು ಯೇಸು ನಾಮದಲ್ಲಿ ಶಿಲುಬೆಗೇರಿಸುತ್ತೇನೆ. (ರೋಮ 6:6).

6.ನನ್ನ ಜೀವಿತದ ಮೇಲೆ ಪಾಪವು ಆಳ್ವಿಕೆ ಮಾಡಲಾರದು ಎಂದು ಯೇಸುನಾಮದಲ್ಲಿ ನಾನು ಘೋಷಿಸುತ್ತೇನೆ.(ರೋಮ 6:14)

7.ನನ್ನ ಜೀವಿತದಲ್ಲಿರುವ ಎಲ್ಲಾ ದುರಭ್ಯಾಸಗಳ ಬಲಗಳು ಯೇಸು ನಾಮದಲ್ಲಿ ಮುರಿಯಲ್ಪಡಲಿ ನನ್ನ ಜೀವಿತದಲ್ಲಿರುವ ಎಲ್ಲಾ ದುಷ್ಟಚಟಗಳು ಯೇಸು ನಾಮದಲ್ಲಿ ನಿರ್ಮೂಲಗೊಂಡು ನಾಶವಾಗಿ ಹೋಗಲಿ (ಯೋಹಾನ 8: 36)

 8.ನನ್ನ ಜೀವಿತದಲ್ಲಿರುವ ಎಲ್ಲಾ ಉಗುರು ಬೆಚ್ಚಗಿರುವ ಸ್ಥಿತಿಯನ್ನು ಪ್ರಾರ್ಥನಾ ರಹಿತ ಜೀವಿತವನ್ನು ಯೇಸು ನಾಮದಲ್ಲಿ ಜಯಿಸುತ್ತೇನೆ (ಪ್ರಕಟಣೆ 3:16)

9.ನನ್ನ ಆತ್ಮೀಕ ಬೆಳವಣಿಗೆಯನ್ನು ಕುಂಠಿತಗೊಳಿಸುವ ಎಲ್ಲಾ ದುರಿಚ್ಚೆಗಳನ್ನು ಎಲ್ಲಾ ಭ್ರಷ್ಟತೆಗಳನ್ನು ಎಲ್ಲಾ ಬಲಹೀನತೆಗಳನ್ನು ಯೇಸು ನಾಮದಲ್ಲಿ ಶಿಲುಬೆಯಲ್ಲಿ ಕೊಂದುಹಾಕುತ್ತೇನೆ. (ಕೊಲಸೆ 3:5)

10.ಓ ಕರ್ತನೆ ನನ್ನ ಮಾತುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಂತೆ ನನ್ನ ಭಾವನೆಗಳನ್ನು ನಿಯಂತ್ರಿಸಿ ಕೊಳ್ಳುವಂತೆ ಯೇಸು ನಾಮದಲ್ಲಿ ನಿನ್ನ ಬಲವನ್ನು ಅನುಗ್ರಹಿಸು (ಯಾಕೋಬ 1:26)

Join our WhatsApp Channel


Most Read
● ಆತ್ಮೀಕ ನಿಯಮ : ಸಹವಾಸ ನಿಯಮ
● ಇನ್ನು ಸಾವಕಾಶವಿಲ್ಲ.
● ಅಸಾಮಾನ್ಯ ಆತ್ಮಗಳು
● ನಿಮ್ಮ ರೂಪಾಂತರವನ್ನು ತಡೆಯುತ್ತಿರುವುದೇನು ಎಂಬುದನ್ನು ತಿಳಿದುಕೊಳ್ಳಿರಿ.
● ದಿನ 06:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನೀವು ದೇವರಿಂದ ನೇಮಿಸಲ್ಪಡುವ ಮುಂದಿನ ಬಿಡುಗಡೆ ನಾಯಕರು ನೀವಾಗಬಹುದು
● ಒಂದು ಹೊಸ ಪ್ರಭೇದ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login