हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಯೇಸುವನ್ನೇ ದೃಷ್ಟಿಸುವುದು.
Daily Manna

ಯೇಸುವನ್ನೇ ದೃಷ್ಟಿಸುವುದು.

Tuesday, 10th of June 2025
2 0 133
Categories : ಆಧ್ಯಾತ್ಮಿಕ ಓಟ (Spiritual Race) ಗಮನ (Focus)
ನಮ್ಮಲ್ಲಿ  ನಂಬಿಕೆಯನ್ನು  ಹುಟ್ಟಿಸುವವನೂ ಮತ್ತು ಪೂರೈಸುವವನೂ ಆಗಿರುವ ಯೇಸುವನ್ನೇ ದೃಷ್ಟಿಸೋಣ  (ಇಬ್ರಿಯ 12:2)

1960 ರಲ್ಲಿ ಕೆನಡಾದಲ್ಲಿ ಇಬ್ಬರು ಶ್ರೇಷ್ಠ ಓಟಗಾರರಾದ  - ಜಾನ್ ಲ್ಯಾಂಡಿ ಮತ್ತು ರೋಜರ್ ಬ್ಯಾನಿಸ್ಟರ್ ನಡುವೆ ಒಂದು ಪ್ರಸಿದ್ಧ ಓಟ ಏರ್ಪಾಟಾಗಿತ್ತು. ಆಗ ಜಾನ್ ಲ್ಯಾಂಡಿ ಓಟದ ಬಹುಪಾಲು ಸಮಯದವರೆಗೂ  ಮುಂಚೂಣಿಯಲ್ಲಿದ್ದರು ಮತ್ತು ಮುಕ್ತಾಯಕ್ಕೆ ಇನ್ನೇನು ಇನ್ನೂರು ಮೀಟರ್ ದೂರವಿತ್ತು. ಆಗ ಜಾನ್ ಲ್ಯಾಂಡಿ ತನ್ನ ಎದುರಾಳಿ ಎಲ್ಲಿ ಇದ್ದಾನೆ  ಎಂದು ನೋಡಲು ಹಿಂದೆ ನೋಡಿದಾಗ ಒಂದು ಘಟನೆ ಸಂಭವಿಸಿತು. ಆ ಕ್ಷಣದಲ್ಲಿಯೇ  ರೋಜರ್ ಬ್ಯಾನಿಸ್ಟರ್  ಜಾನ್ ರವರನ್ನು ದಾಟಿ ಮುನ್ನುಗ್ಗಿ ಜಯಸಾಧಿಸಿ ಬಿಟ್ಟರು.  ಜಾನ್ ರವರು ಆ ಓಟವನ್ನು ಸೋತುಬಿಟ್ಟರು.  ಬಹುಶಃ ಹಿಂತಿರುಗಿ ನೋಡಿ ಸೋತ ಓಟಗಾರನೆಂದು ಹೆಸರುಗೊಂಡು  ಇತಿಹಾಸದ ಪುಟದಲ್ಲಿ ದಾಖಲಾದರು. 

ಅವರು ತಮ್ಮದೇ ಆದ ಓಟವನ್ನು ಓಡುವ ಕುರಿತು ಮಾತ್ರ ಕಾಳಜಿ ವಹಿಸಬೇಕಾಗಿತ್ತು. ಆದರೆ ಅವರು ಅಂತಿಮ ಗೆರೆಯಿಂದ ತಮ್ಮ ಕಣ್ಣುಗಳನ್ನು ತೆಗೆದು ತಮ್ಮ ಎದುರಾಳಿಯನ್ನು ನೋಡಿದ್ದು  ಅವರ ಓಟದ  ವಿಜಯವನ್ನೇ ಕಳೆದುಕೊಳ್ಳುವಂತೆ  ಮಾಡಿಬಿಟ್ಟಿತು. ಆದುದರಿಂದ  ಈ ಇತಿಹಾಸವು ನಿಮ್ಮ ಜೀವಿತದಲ್ಲಿ  ಪುನರಾವರ್ತನೆಯಾಗದಂತೆ ಎಲ್ಲಾ ಪ್ರಯತ್ನಗಳನ್ನು ಮಾಡಿ.

ನೀವು ಒಂದೇ ಸಮಯದಲ್ಲಿ ಎರಡು ವಿಷಯಗಳ ಮೇಲೆ ನಿಜವಾಗಿಯೂ ನಿಮ್ಮ ದೃಷ್ಟಿಯನ್ನು ಕೇಂದ್ರೀಕರಿಸಲು ಸಾಧ್ಯವಿಲ್ಲ ಎಂಬುದು ನಿಮಗೆ ತಿಳಿದಿದೆಯೇ?

ಅಂಪ್ಲಿಫೈಡ್ ಬೈಬಲ್  ಇದನ್ನು ಚೆನ್ನಾಗಿ ಹೇಳುತ್ತದೆ. “[ವಿಚಲಿತರಾಗುವ ಎಲ್ಲದರಿಂದ ನಮ್ಮ ದೃಷ್ಟಿ ತೆಗೆದು] ನಮ್ಮನ್ನು  ನಂಬಿಕೆಯಲ್ಲಿ  ನಡೆಸುವಾತಾನು ಮತ್ತು ನಮ್ಮ ನಂಬಿಕೆಗೆ  ಮೂಲನೂ ಆಗಿರುವ ಯೇಸುವನ್ನೇ ದೃಷ್ಟಿಸುವವರಾಗಿ   ... (ಇಬ್ರಿಯ 12:2) 

ಇಂದೆಲ್ಲಾ ನಾಯಕರುಗಳು , ಪಾಸ್ಟರ್ ಗಳು, ಪ್ರವಾದಿಗಳು, ಅಪೊಸ್ತಲರುಗಳು ಇವರುಗಳ ಜೀವಿತ ನೋಡುತ್ತಾ ತಮ್ಮ ಓಟವನ್ನೇ ತ್ಯಜಿಸಿದ ಜನರಿದ್ದಾರೆ. ಅವರು ದೃಷ್ಟಿಸುತ್ತಿದ್ದ ನಾಯಕರು ಎಲ್ಲೋ, ಕೆಲವೊಮ್ಮೆ ವಿಫಲರಾದರು ಅದನ್ನು ಕಂಡ  ಈ ಜನರು ಸಂಪೂರ್ಣವಾಗಿ ಹೃದಯದಲ್ಲಿ ಮುರಿದು ಹೋಗಿದ್ದಾರೆ. ಅವರು ತಮ್ಮ ನಂಬಿಕೆಯಿಂದ ಹಿಂದೆ ಸರಿದಿದ್ದಾರೆ. 

ನೀವು ಖಂಡಿತವಾಗಿಯೂ ಒಬ್ಬ ನಾಯಕ, ಪಾಸ್ಟರ್  ಇವರುಗಳಿಂದ ಕಲಿಯಬಹುದಾದರೂ, ಅವನು ಅಥವಾ ಅವಳು ಎಷ್ಟೇ ಒಳ್ಳೆಯವರಾಗಿದ್ದರೂ, ಅವರುಗಳು ನಮ್ಮ ಪರಿಪೂರ್ಣ ಮಾದರಿಯಲ್ಲ. ನೀವು ಅವರನ್ನು ನೋಡಿ ನಿಮ್ಮ ಓಟವನ್ನು ಆರಂಭಿಸಿಲ್ಲ. ನೀವು ಯೇಸುವನ್ನೇ ದೃಷ್ಟಿಸಬೇಕು. ಆತನು ಮಾತ್ರವೇ ನಮ್ಮ ಪರಿಪೂರ್ಣ ಮಾದರಿ. ಆತನು ನಮ್ಮಲ್ಲಿ  ನಂಬಿಕೆಯನ್ನು ಹುಟ್ಟಿಸುವಾತಾನು ಮತ್ತು ಪೂರೈಸುವಾತಾನು.

ನಾವು ಯಾರನ್ನು ದೃಷ್ಟಿಸುತ್ತೇವೋ ಅವರಂತೆ ಆಗುತ್ತೇವೆ. ನಾವು ಓಡಲು ಯೇಸುವಿನ ಮೇಲೆ ನಮ್ಮ ದೃಷ್ಟಿಯನ್ನಿಡುವಾಗ, ದೇವರು ನಮ್ಮಲ್ಲಿ   ಕಾರ್ಯ ಮಾಡುತ್ತಾ , ನಮ್ಮನ್ನು ಇನ್ನೂ ಹೆಚ್ಚು ಹೆಚ್ಚಾಗಿ ತನ್ನ ಮಗನ ಸಾರೂಪ್ಯಕ್ಕೆ ತರುತ್ತಾ ಅಂತಿಮವಾಗಿ, ಆತನು ನಮ್ಮನ್ನು ನಮ್ಮ ಬಹುನಿರೀಕ್ಷಿತ ಪ್ರತಿಫಲಕ್ಕೆ ಕೊಂಡೋಯ್ಯುತ್ತಾನೆ. 

Bible Reading: Nehemiah 7-9
Prayer
ತಂದೆಯೇ, ನೀನು ನನಗೆ ಅನುಗ್ರಹಿಸಿದ  ಓಟವನ್ನು ಓಡಿ ಮುಗಿಸಲು ಯೇಸುನಾಮದಲ್ಲಿ ನನಗೆ ಸಹಾಯ ಮಾಡು. ನನ್ನ ಜೀವನವನ್ನು ನಿನ್ನ ಕೃಪೆಗೆ ಸಾಕ್ಷಿಯನ್ನಾಗಿ ಮಾಡು.


Join our WhatsApp Channel


Most Read
● ದಿನ 32:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಪ್ರೀತಿಯ ಹುಡುಕಾಟ
● ಸಫಲತೆ ಎಂದರೇನು?
● ಅತ್ಯುತ್ತಮ ದೇವರು ನೀಡಿದ ಸಂಪನ್ಮೂಲ
● ಪುರಾತನ ಮಾರ್ಗಗಳನ್ನು ವಿಚಾರಿಸಿ
● ನಿಮ್ಮ ರೂಪಾಂತರವು ಶತ್ರುವಿಗೆ ಭಯತರುತ್ತದೆ.
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login