हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ನಿಮ್ಮ ರೂಪಾಂತರವು ಶತ್ರುವಿಗೆ ಭಯತರುತ್ತದೆ.
Daily Manna

ನಿಮ್ಮ ರೂಪಾಂತರವು ಶತ್ರುವಿಗೆ ಭಯತರುತ್ತದೆ.

Saturday, 1st of February 2025
2 0 199
Categories : ಎಸ್ತರ್ ರಹಸ್ಯಗಳು: ಸರಣಿ (Secrets of Esther: Series) ರೂಪಾಂತರ(transformation)
"ಅವರು ಧೈರ್ಯಗುಂದಿದವರಾಗಿ ತಮ್ಮ ತಮ್ಮ ಕೋಟೆಗಳಿಂದ ನಡುಗುತ್ತಾ ಬರುವರು.." (ಕೀರ್ತನೆ 18:45)

ಸರ್ವಾಧಿಕಾರಿಯಾಗಿದ್ದ ಹಿಟ್ಲರ್ ಮತ್ತು ನಾಜಿ ಕಾನ್ಸಂಟ್ರೇಶನ್ ಕ್ಯಾಂಪ್ ಕಮಾಂಡರ್‌ಗಳು ಸಹ ಎಸ್ತೆರಳ ಪುಸ್ತಕದಲ್ಲಿರುವ  ಬಲವನ್ನು ಕಂಡು ಹೆದರುತ್ತಿದ್ದರು ಎಂದು ನಾನು ಒಮ್ಮೆ ಓದಿದ್ದೇನೆ. ಇವರೆಲ್ಲರೂ  ಮನುಷ್ಯರ ಜೀವದ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದ ಜನರಾಗಿದ್ದರೂ, ಆದರೂ ತಮ್ಮ ಜನರಲ್ಲಿ  ದೇವರ ಮಧ್ಯಸ್ಥಿಕೆಯ ಬಲದ ಅಧಿಕಾರ ಉಂಟಾದರೆ ಎನ್ನುವ ಕುರಿತು ಹೆದರುವವರಾಗಿದ್ದರು . 

ವಾಸ್ತವವಾಗಿ, ಅವರು ಆ ಕುರಿತು ಅದೆಷ್ಟು ಭಯವುಳ್ಳವರಾಗಿದ್ದರೆಂದರೆ , ಆ ಪುಸ್ತಕವನ್ನು ತಮ್ಮ ಮರಣ ಶಿಬಿರಗಳಲ್ಲಿ ನಿಷೇಧಿಸಿ ಬಿಟ್ಟಿದ್ದರು. ಎಸ್ತೆರ್ ಪುಸ್ತಕದಲ್ಲಿ ಆದ ಅದೇ  ಘಟನೆಯು ಎಲ್ಲಿ  ಪುನರಾವರ್ತನೆ ಆಗಿಬಿಡುತ್ತದೋ ಎಂದು ಅವರು ಬಹಳವಾಗಿ ಹೆದರುತ್ತಿದ್ದರು, ಯಾಕೆಂದರೆ ಎಸ್ತೆರಳ ಸಮಯದಲ್ಲಿ  ದೇವರು ತನ್ನ  ಜನರನ್ನು ರಕ್ಷಿಸಿ  ಶತ್ರುಗಳ ಯೋಜನೆಯನ್ನು ಹಿಮ್ಮೆಟ್ಟಿದನು . ಇದು ಮನುಷ್ಯನಲ್ಲಿ ಅಡಗಿರುವ ದೈವತ್ವವನ್ನು ಪ್ರಕಟ ಪಡಿಸುವುದರಿಂದ ಇಂದಿಗೂ ಎಸ್ತರಳ  ಕಥೆಗೆ ಸೈತಾನನ ಸಂಘವು ಭಯಪಡುತ್ತದೆ ಎಂಬುದನ್ನು ಇದು ಸರಳವಾಗಿ ಹೇಳುತ್ತದೆ. 

2 ಕೊರಿಂಥ 4:7 ಹೇಳುವುದನ್ನು ನೋಡೋಣ, 
"ಬಲಾಧಿಕ್ಯವು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂದು ತೋರುವದಕ್ಕಾಗಿ ಈ ನಿಕ್ಷೇಪವು ಮಣ್ಣಿನ ಘಟಗಳಲ್ಲಿ ನಮಗುಂಟು.'' ನಿಜಕ್ಕೂ ಇದೊಂದು ಅದ್ಭುತ ವಾಕ್ಯ.

ಇಂದು ನಿಮಗಿರುವ  ದೌರ್ಬಲ್ಯವೇ  ಅಂತ್ಯವಲ್ಲ ಎನ್ನುವಂತದ್ದು  ಸೈತಾನನಿಗೆ ತಿಳಿದಿದೆ. ನಿಮ್ಮಲ್ಲಿರುವ ದೈತ್ಯನು ಉದಯಿಸಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಾನೆ ಎಂದೂ  ಸಹ ಅವನಿಗೆ ತಿಳಿದಿದೆ. ಕರ್ತನಾದ ಯೇಸು ನಿನಗಾಗಿ ಮತ್ತು ನನಗಾಗಿ ಶಿಲುಬೆಯ ಮೇಲೆ ಮಾಡಿದ ಕಾರ್ಯದ  ಕಾರಣ, ದೇವರು ನಮ್ಮನ್ನು ಕೃಪೆಯ ಮಸೂರದ ಮೂಲಕ ನೋಡುತ್ತಾನೆ. ಆದ್ದರಿಂದ, ನಮ್ಮ ಮಾನವ ದೌರ್ಬಲ್ಯಗಳನ್ನು ಮತ್ತು ವೈಫಲ್ಯಗಳನ್ನು ಜಯಿಸಲು ಕೃಪೆಯ ಮೇಲೆ ಕೃಪೆಯನ್ನು ಪೂರೈಸುತ್ತಾನೆ, ನಮ್ಮ ಸ್ಥಾನವನ್ನು ಆತನ ಸಿಂಹಾಸನದ ಸ್ಥಳಕ್ಕೆ ಸ್ಥಾನಪಲ್ಲಟ ಮಾಡಲು ಆತನು ಶಕ್ತನ್ನಾಗಿದ್ದಾನೆ .

ಶತ್ರುವು ಹೇಗೆ  ಭಯಪಡುತ್ತಿದ್ದಾನೆ ಎಂಬುದನ್ನು  ನಾವು ನೋಡಲಾಗವುದಿಲ್ಲ ಎಂಬುದೇ  ಹೆಚ್ಚಿನ ಬಾರಿ ನಮಗಿರುವ ಸವಾಲಾಗಿದೆ. ಅವನು ಗರ್ಜಿಸುವ ಸಿಂಹದಂತಿದ್ದು ಯಾರನ್ನು ನುಂಗಲಿ ಎಂದು  ಹುಡುಕುತ್ತಿದ್ದಾನೆಂದು ಸತ್ಯವೇದ ನಮಗೆ ಹೇಳುತ್ತದೆ. (1 ಪೇತ್ರ 5:8). 

ನಾವು ಊಹಿಸಿ ಓಡಿಹೋಗುವಂತೆ ಅವನು ಸಿಂಹವಲ್ಲ; ಅವನು ಸಿಂಹದ ಹಾಗೆ ನಟಿಸುತ್ತಿದ್ದಾನೆ ಅಷ್ಟೇ . ಮಕ್ಕಳ ಪಾರ್ಟಿಗಳಲ್ಲಿ ಜನರು ಮಿಕ್ಕಿ ಮೌಸ್‌ನ ವಿವಿಧ ವೇಷಭೂಷಣಗಳನ್ನು ಹೇಗೆ ಹಾಕುತ್ತಾರೆ ಎಂದು ನಿಮಗೆ ತಿಳಿದಿದೆಯೇ? ಹೌದು, ಹಾಗೆಯೇ ಸೈತಾನನು  ಅದನ್ನೇ ಮಾಡುತ್ತಾನೆ. ಅವನು ನಿನ್ನನ್ನು ಹೆದರಿಸಲು ವೇಷವನ್ನು  ಹಾಕುತ್ತಿದ್ದಾನೆ ಅಷ್ಟೇ. ಅವನೊಬ್ಬ  ಸೋತ ವೈರಿಯೇ ಹೊರತು ಬೇರೇನೂ ಅಲ್ಲ. 

ಅರಸನಾದ ದಾವೀದನು ಕೀರ್ತನೆ 18: 43-45 ರಲ್ಲಿ  “ ಜನರ ಕಲಹಗಳಿಗೆ ನನ್ನನ್ನು ತಪ್ಪಿಸಿ ಜನಾಂಗಗಳಿಗೆ ದೊರೆಯಾಗುವಂತೆ ಮಾಡಿದ್ದೀ; ನಾನರಿಯದ ಜನಾಂಗದವರು ಸಹ ನನಗೆ ಅಧೀನರಾಗುವರು.  ನನ್ನ ಸುದ್ದಿಯನ್ನು ಕೇಳಿದ ಮಾತ್ರಕ್ಕೆ ನನಗೆ ವಿಧೇಯರಾಗುವರು; ದೇಶಾಂತರದವರು ನನ್ನ ಮುಂದೆ ಮುದುರಿಕೊಳ್ಳುವರು. ಅವರು ಧೈರ್ಯಗುಂದಿದವರಾಗಿ ತಮ್ಮ ತಮ್ಮ ಕೋಟೆಗಳಿಂದ ನಡುಗುತ್ತಾ ಬರುವರು. " ಎಂದು ಬರೆಯುತ್ತಾನೆ.

ಎಸ್ತೇರಳು  ಒಂದು ಕಾಲದಲ್ಲಿ ದುರ್ಬಲವರ್ಗಕ್ಕೆ ಸೇರಿದ ಯಾರೂ ಕಂಡು - ಕೇಳರಿಯದ  ಚಿಕ್ಕ ಹುಡುಗಿಯಾಗಿದ್ದಳು. ಆದರೆ ಅವಳು ರಾಣಿಯಾದ ಕ್ಷಣದಲ್ಲಿ , ಸಕಲ ನರಕವೇ  ಅಲ್ಲಾಡಿತು. ಏಕೆ? ಅವಳು ಯಾರನ್ನೂ ಸಹ ಹೆದರಿಸಲೆಂದು ಏನನ್ನೂ ಮಾಡಿಲಿಲ್ಲ, ಆದರೂ ವಿವಾದಗಳು ಹೇಗೆ ಸೃಷ್ಟಿ ಯಾಯಿತು? ಹಾಮಾನನು  ಇದ್ದಕ್ಕಿದ್ದಂತೆ ಬೆದರಿಕೆಯನ್ನು ಅನುಭವಿಸಲು ಏಕೆ ಪ್ರಾರಂಭಿಸಿದನು?ಅವನಲ್ಲಿ ಅಭದ್ರತೆ ಕಾಡಲು ಕಾರಣವೇನು?  ಎಂದು ನಾನು ಆಶ್ಚರ್ಯಪಟ್ಟಿದ್ದೇನೆ. 
ಅವಳು ಒಬ್ಬ ರಾಣಿ, ಮತ್ತು ಅವನಾದರೋ ರಾಜನ ಮುಖ್ಯ ಸಲಹೆಗಾರ. "ಹಾಮಾನನಂತೂ  ರಾಣಿಯಾಗಲು ಸಾಧ್ಯವಿರಲಿಲ್ಲ, ಹಾಗಾದರೆ ಅಲ್ಲಿರುವ ಸಮಸ್ಯೆಯಾದರೂ ಏನು?"

ಬಹುಶಃ ನೀವೂ ಅದೇ ರೀತಿ ಯೋಚಿಸುತ್ತಿರಬಹುದು. ಈ ಎಲ್ಲಾ ಸವಾಲುಗಳು ನನಗೆ ಏಕೆ ಎದುರಾಗುತ್ತಿವೆ? ನಾನು ದುರದೃಷ್ಟವಂತ ಎಂದು ಏಕೆ ತೋರುತ್ತಿದೆ ಮತ್ತು ಏಕೆ ಯಾವುದೂ ಸಹ ನಾನು ಅಂದುಕೊಂಡಂತೆ  ಆಗುತ್ತಿಲ್ಲ ? ದೇವರು ನನ್ನ ಮೇಲೆ ಏಕೆ ಉಗ್ರನ್ನಾಗಿದ್ದಾನೆ ಅಥವಾ ಬೇರೆ ಯಾವ ಕಾರಣದಿಂದ ಈ ಸವಾಲುಗಳ ಮೂಲಕ ನಾನು ಹಾದು ಹೋಗಬೇಕೆಂದು ಆತನು ನನ್ನಲ್ಲಿ ನೋಡಲು ಬಯಸುತ್ತಿದ್ದಾನೆ?
ಎಂದೆಲ್ಲಾ ನೀನು ಭಾವಿಸುತ್ತಿರಬಹುದು.

ನನ್ನ ಪ್ರಿಯ ಸ್ನೇಹಿತನೇ, ಹಾಗಲ್ಲ; ಇದು ಶತ್ರು ನಿಮ್ಮನ್ನು ಬಂಡೆಯಿಂದ ತಳ್ಳಲು ಮಾಡುತ್ತಿರುವ ಪ್ರಯತ್ನ. ಏಕೆಂದರೆ ಅವನು ನಿಮ್ಮ ಭವಿಷ್ಯದಲ್ಲಿ ನೀವು ಹೊಂದಲಿರುವ ರೂಪಾಂತರಕ್ಕೆ ಹೆದರುತ್ತಿದ್ದಾನೆ. ರಾಜ ಹೆರೋದನು ಸಹ ಯೇಸುವಿನ ರೂಪಾಂತರದ ಬಗ್ಗೆ ಹೆದರುತ್ತಿದ್ದನು; ಯೇಸು ಇನ್ನೂ ಅಸಹಾಯಕ ಚಿಕ್ಕ ಮಗುವಾಗಿರುವಾಗಲೇ , ಅವನು  ಆ ವಯಸ್ಸಿನ ಎಲ್ಲಾ ಮಕ್ಕಳನ್ನು ಕೊಲ್ಲಲು ಆದೇಶಿಸಿದನು. 

ನೀವಿಗ  ಸರ್ವಧಿಕಾರದ ದರ್ಪ ತೋರಿಸುವ "ರಾಜ"ನ ಅಡಿಯಲ್ಲಿ ಸಿಕ್ಕಿಬಿದ್ದಿರುವ ಭಾವನೆಯಲ್ಲಿ ಇರಬಹುದು. ಪ್ರಾಯಶಃ ಅದೊಂದು ಶರೀರ ಭಾವದ ಸಮಸ್ಯೆಯೋ ಇತ್ಯಾದಿಯೋ ಆಗಿರಬಹುದು. ಆದರೆ ಈ ಪ್ರಕಟಣೆಯು ಒಂದು ಕಾರಣಕ್ಕಾಗಿಒಂದು  ಸಮಯಕ್ಕಾಗಿಯೇ ನಿಮಗೆ ಬರುತ್ತಿದೆ ಎಂದು ನಾನು ನಂಬುತ್ತೇನೆ. ಎಸ್ತರ್ ಪ್ರಕಟಣೆಯು ನಿಮ್ಮನ್ನು ಸಂರಕ್ಷಿಸುತ್ತದೆ, ಹೌದು, ಆದರೆ ಅದು ನಿಮ್ಮ ಈ  "ಪ್ರಸ್ತುತಕಾಲದಲ್ಲಿ ಆಗಬಹುದು " ಮತ್ತು ನಿಮ್ಮ ಭವಿಷ್ಯವನ್ನು ಬದಲಾಯಿಸಬಹುದು. 

ಎಸ್ತರ್ ಕಥೆಯು ಶತ್ರುಗಳ ಯೋಜನೆಗಳಿಗೆ ಭವಿಷ್ಯದಲ್ಲಿ  ಉಂಟಾಗುವ ವಿನಾಶದ ಭವಿಷ್ಯವಾಣಿಯಾಗಿದೆ. ಆದರೆ, ಇದು ನಿಮಗಾದರೋ ದೈವಿಕ ರೂಪಾಂತರ ಮತ್ತು ಉನ್ನತಿಯ ಭವಿಷ್ಯವಾಣಿಯಾಗಿದೆ. ನಿಮ್ಮ ಭವಿಷ್ಯವು ಸುರಕ್ಷಿತವಾಗಿದೆ, ಆದ್ದರಿಂದ ಈ ಪ್ರಕಟಣೆಯಲ್ಲಿ ಧೃಡವಾಗಿ ನಿಲ್ಲಿರಿ ಮತ್ತು ಯಾವುದೇ ಕಾರಣಕ್ಕೂ  ಸೈತಾನನ ಬೇಡಿಕೆಗಳಿಗೂ  ಮತ್ತು ಒತ್ತಡಕ್ಕೂ  ಮಣಿಯಬೇಡಿರಿ. 

Bible Reading: Exodus 39-40
Prayer
ತಂದೆಯೇ, ನಾನು ಜಯಶಾಲಿಯಾಗಿರುವುದರಿಂದ ನಾನು ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ.ನೀವು ನನಗಾಗಿ ಮಾಡಿದ ಎಲ್ಲಾ ಕಾರ್ಯಗಳಿಗಾಗಿ  ನಿಮಗೆ ಯೇಸುನಾಮದಲ್ಲಿ ಸ್ತೋತ್ರ ಸಲ್ಲಿಸುತ್ತೇನೆ. ನಿಮ್ಮ ಬಲದಲ್ಲಿಯೇ ನಾನು  ಆಧಾರಗೊಳ್ಳುವಂತೆ ಯೇಸುನಾಮದಲ್ಲಿ ನನಗೆ ಸಹಾಯ ಮಾಡಬೇಕೆಂದು ನಾನು ಪ್ರಾರ್ಥಿಸುತ್ತೇನೆ. ನನ್ನ ಜೀವನದಲ್ಲಿ  ಯಾವಾಗಲೂ ಎಲ್ಲಾ ಸಮಯದಲ್ಲೂ ನಾನು ಜಯಶಾಲಿಯಾಗಿರುತ್ತೇನೆ ಹೊರತು ಸೈತಾನನು ಎಂದಿಗೂ  ಮೇಲುಗೈ ಸಾಧಿಸುವುದೇ ಇಲ್ಲ ಎಂದು  ಯೇಸು ನಾಮದಲ್ಲಿ ಘೋಷಿಸುತ್ತೇನೆ . ಆಮೆನ್.

Join our WhatsApp Channel


Most Read
● ಸರ್ವಬೀಗದ ಕೈ
● ಒಂದು ಜನಾಂಗವನ್ನು ಉಳಿಸಿದ ಕಾಯುವಿಕೆ
● ನಾವು ಸಭೆಯಾಗಿ ನೇರವಾಗಿ ಕೂಡಿಕೊಳ್ಳದೆ ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ಸಭೆಯ ಆರಾಧನೆಯಲ್ಲಿ ಭಾಗವಹಿಸಬಹುದೇ?
● ವ್ಯಸನಗಳನ್ನು ನಿಲ್ಲಿಸುವುದು
● ಬದಲಾಗಲು ಇರುವ ತೊಡಕುಗಳು.
● ಇದು ನಿಜಕ್ಕೂ ಮುಖ್ಯವಾದ ಸಂಗತಿಯಾ?
● ನಿಮ್ಮ ಆಶೀರ್ವಾದಗಳನ್ನು ಹೆಚ್ಚಿಸಿಕೊಳ್ಳುವ ಖಚಿತವಾದ ಮಾರ್ಗ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login