हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಇಸ್ಕಾರಿಯೋತ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು -2
Daily Manna

ಇಸ್ಕಾರಿಯೋತ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು -2

Thursday, 24th of October 2024
2 1 441
Categories : ಪಾಪ (sin)
ನಾವು ಇಸ್ಕಾರಿಯೋತ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು ಎಂಬ ಸರಣಿಯನ್ನು ಇಲ್ಲಿ  ಮುಂದುವರಿಸುತ್ತಿದ್ದೇವೆ 

ಧರ್ಮಶಾಸ್ತ್ರವು  ಯಾವುದನ್ನೂ ಮರೆಮಾಡುವುದಿಲ್ಲ ಎಂಬುದನ್ನು  ಸತ್ಯವೇದವು ಸ್ಪಷ್ಟಪಡಿಸುತ್ತದೆ. "ಈ ಮೊದಲು ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವುದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ, ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಶಾಸ್ತ್ರಗಳು ಬರೆಯಲ್ಪಟ್ಟವು." (ರೋಮನ್ನರು 15:4)

ಯೂದನ ಜೀವನದಿಂದ ಕಲಿಯಲು ಬಹಳಷ್ಟು ವಿಚಾರಗಳಿವೆ - ಕರ್ತನಾದ ಯೇಸುವಿನ ಅತ್ಯಂತ ಹತ್ತಿರದ ಅಪೊಸ್ತಲರಲ್ಲಿ ಒಬ್ಬನಾದ ಯೂದನು ಕಡೆಯಲ್ಲಿ  ಕರ್ತನಿಗೇ  ದ್ರೋಹ ಬಗೆದನು.

ಯೂದನ  ಪತನಕ್ಕೆ ಇನ್ನೊಂದು ಕಾರಣ:

2. ಒಪ್ಪಿಕೊಂಡು ಬಿಟ್ಟುಬಿಡದ  ಪಾಪ.

ತಪ್ಪೊಪ್ಪಿಕೊಳ್ಳದ ಪಾಪವು ಯಾವಾಗಲೂ ನಮ್ಮ ಆತ್ಮಗಳ ಶತ್ರುವಾದ -ಸೈತಾನನಿಗೆ ಬಾಗಿಲು ತೆರೆಯುತ್ತದೆ. 

ಒಬ್ಬ ಸ್ತ್ರೀಯು ಅಚ್ಚ ಜಟಮಾಂಸಿ ತೈಲದ ಭರಣಿಯನ್ನು ಒಡೆದು ಯೇಸುವಿನ ತಲೆಯ ಮೇಲೆ ಎಣ್ಣೆಯನ್ನು ಸುರಿದಾಗ, ಯೂದನು ಬೇಸರಗೊಂಡು  ಅಂತಹ ಬೆಲೆಬಾಳುವ ತೈಲವನ್ನು ಏಕೆ ವ್ಯರ್ಥಮಾಡಿದೆ ಅದನ್ನು ಮಾರಿ ಆ ಹಣವನ್ನು ಬಡವರಿಗೆ ನೀಡಬಹುದಾಗಿತ್ತು ಎಂದು ಹೇಳಿದನು .

"ಅವನು (ಯೂದನು) ಬಡವರ ಮೇಲಿನ ಕನಿಕರದಿಂದ ಹೀಗೆ ಹೇಳಲಿಲ್ಲ. ಆದರೆ ಅವನು ಕಳ್ಳನಾಗಿದ್ದು ಹಣದ ಚೀಲವನ್ನು ತನ್ನ ಬಳಿಯಲ್ಲಿ ಇಟ್ಟುಕೊಂಡಿರಲಾಗಿ ಅದರಲ್ಲಿ ಹಾಕಿದ್ದನ್ನು ತನ್ನ ಸ್ವಂತ ಉಪಯೋಗಕ್ಕಾಗಿ ತೆಗೆದುಕೊಳ್ಳುತ್ತಿದ್ದನು, ಆದುದರಿಂದಲೇ ಹೀಗೆ ಹೇಳಿದನು."(ಯೋಹಾ 12:6)

ನಾನು ಮೊದಲೇ ಹೇಳಿದಂತೆ, ಧರ್ಮಶಾಸ್ತ್ರವು  ಎಂದಿಗೂ ಮನುಷ್ಯನ ದೌರ್ಬಲ್ಯಗಳನ್ನು ಮರೆಮಾಡುವುದಿಲ್ಲ. ಅದು  ಅವುಗಳನ್ನು ಬಹಿರಂಗಪಡಿಸುತ್ತದೆ. ಇದರಿಂದ ಮನುಷ್ಯನು ಪಶ್ಚಾತ್ತಾಪಪಟ್ಟು ಅವನ ಮಾರ್ಗಗಳಿಂದ ದೇವರಕಡೆಗೆ  ತಿರುಗಬಹುದು. ಸ್ಪಷ್ಟವಾಗಿ, ಯೂದನಿಗೆ  'ಹಣದ ವ್ಯಾಮೋಹದ' ಸಮಸ್ಯೆ ಇತ್ತು. (1 ತಿಮೋತಿ 6:10), ಅದನ್ನು ಉಪಯೋಗಿಸಿಕೊಂಡು  ಸೈತಾನನು ಯೂದನ ಮೇಲೆ ಆಳ್ವಿಕೆ ನಡೆಸುವವನಾದನು.

ವ್ಯಭಿಚಾರದಲ್ಲಿ ಜೀವಿಸುತ್ತಿದ್ದ ಸಮಾರ್ಯದ ಸ್ತ್ರೀಯೊಡನೆ  ಯೇಸು ಮಾತನಾಡುವುದನ್ನು ಯೂದನು ನೋಡಿದ್ದನು ಮತ್ತು ನಂತರ  ಆಕೆಯ ಜೀವನವು ಬದಲಾಗಿರುವುದನ್ನು ನೋಡಿದ್ದನು. ಯೇಸು ಯಾವಾಗಲೂ ಪಾಪಿಗಳೊಂದಿಗೆ ಎಷ್ಟು ಸಹಾನುಭೂತಿಯಿಂದ ವ್ಯವಹರಿಸುತ್ತಾನೆ ಎಂಬುದನ್ನೂ  ಅವನು ನೋಡಿದ್ದನು. ಅವನು ತನ್ನ ದೌರ್ಬಲ್ಯದ ಕುರಿತು  ಯೇಸುವಿನೊಂದಿಗೆ  ಸುಲಭವಾಗಿ ಮಾತನಾಡಬಹುದಿತ್ತು ಖಂಡಿತವಾಗಿ  ಅದನ್ನು ಜಯಿಸಲು ಕರ್ತನು ಅವನಿಗೆ ಸಹಾಯ ಮಾಡುತ್ತಿದ್ದನು. ಆದರೆ ಯೂದನು ಯಾವಾಗಲೂ ಈ ವಿಷಯವನ್ನು ಮರೆಮಾಚುತ್ತಿದ್ದನು ಮತ್ತು ಯಾವಾಗಲೂ ತಾನು ಆ ರೀತಿಯವನಲ್ಲದವನಂತೆ ನಟಿಸುತ್ತಿದ್ದನು.

" ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು, ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವುದು." ಎಂದು ಸತ್ಯವೇದ ಸ್ಪಷ್ಟವಾಗಿ ಹೇಳುತ್ತದೆ (ಜ್ಞಾನೋ 28:13)

ಯೂದನ  ತಪ್ಪೊಪ್ಪಿಕೊಳ್ಳದ ಪಾಪವು ಸೈತಾನನಿಗೆ ಬಾಗಿಲು ತೆರೆಯಿತು.
"ನಂತರ ಸೈತಾನನು ಇಸ್ಕಾರಿಯೋತಾ ಯೂದನೊಳಗೆ ಹೊಕ್ಕನು."(ಲೂಕ 22:3-4)

" ಸೈತಾನನು ಸೀಮೋನನ ಮಗನಾದ ಇಸ್ಕರಿಯೋತ ಯೂದನ ಹೃದಯದಲ್ಲಿ ಯೇಸುವನ್ನು ಹಿಡಿದುಕೊಡಬೇಕೆಂಬ ಆಲೋಚನೆಯನ್ನು ಹುಟ್ಟಿಸಿದನು."(ಯೋಹಾ 13:2)
ಯೂದನು  ಸೈತಾನನಿಗೆ ಬಾಗಿಲು ತೆರೆದುಕೊಟ್ಟನು  ಮತ್ತು  ತನ್ನ ಕರ್ತನಿಗೇ ದ್ರೋಹ ಬಗೆದನು.


1 ಯೋಹಾನ 1:9 ಹೇಳುತ್ತದೆ, “ನಾವು ನಮ್ಮ ಪಾಪವನ್ನು ಒಪ್ಪಿಕೊಂಡರೆ, ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಪಾಪವನ್ನು ಕ್ಷಮಿಸುತ್ತಾನೆ ಮತ್ತು ಎಲ್ಲಾ ಅನ್ಯಾಯದಿಂದ ನಮ್ಮನ್ನು ಶುದ್ಧೀಕರಿಸುತ್ತಾನೆ.” ಎಂದು ಇಂದು, ನಿಮ್ಮ ದೌರ್ಬಲ್ಯಗಳನ್ನು ಯೇಸುವಿಗೆ ಏಕೆ ನೀವು  ಹೇಳಬಾರದು? ನೀವು ಅವುಗಳನ್ನು ಜಯಿಸಲು ಆತನು ಖಂಡಿತವಾಗಿಯೂ ತನ್ನ ಕೃಪೆಯನ್ನು ಒದಗಿಸುವನು.
Prayer
1. ತಂದೆಯೇ, ನನ್ನ ದೌರ್ಬಲ್ಯವನ್ನು ನಾನು ನಿಮ್ಮ ಮುಂದೆ ಒಪ್ಪಿಕೊಳ್ಳುತ್ತೇನೆ. (ಇದನ್ನು ಮಾಡಲು ಸ್ವಲ್ಪ ಗುಣಮಟ್ಟದ ಸಮಯವನ್ನು ಕರ್ತನ ಸಾನಿಧ್ಯದಲ್ಲಿ ಕಳೆಯಿರಿ)

2. ತಂದೆಯೇ, ನಾಳೆ ಬರಲಿರುವ ಸಮಸ್ಯೆಗಳಿಗೆ ಇಂದೇ ತಯಾರಾಗಲು ನಿಮ್ಮ ಜ್ಞಾನವನ್ನು ಮತ್ತು ಕೃಪೆಯನ್ನೂ ಯೇಸುನಾಮದಲ್ಲಿ ನನಗೆ ಅನುಗ್ರಹಿಸಿ. ನೀವು ಕ್ಷಾಮದ ಸಮಯದಲ್ಲಿಯೂ ಕರ ಸಂಗ್ರಹಿಸಲು ಯೋಸೆಫನಿಗೆ ದೂರದೃಷ್ಟಿ ಕೊಟ್ಟು ಸಹಾಯ ಮಾಡಿದ ಹಾಗೆಯೇ; ಇರುವೆ ಚಳಿಗಾಲಕ್ಕಾಗಿ ತನ್ನ ಆಹಾರವನ್ನು ಸಿದ್ಧಪಡಿಸಿ ಸಂಗ್ರಹಿಸಿಟ್ಟುಕೊಳ್ಳುವಂತೆ, ನನಗೆ ಭವಿಷ್ಯಕ್ಕಾಗಿ ಇರುವ ಹೂಡಿಕೆಗಳನ್ನು ಕೂಡಿಸಿಟ್ಟುಕೊಳ್ಳುವಂತೆಯೂ ಆ ಗಂಟನ್ನು ಇಂದಿನ ಮೋಜಿಗಾಗಿ ಬಳಸಿಕೊಳ್ಳದಂತೆಯೂ ಆಲೋಚಿಸುವಂತ ದೂರದೃಷ್ಟಿಯನ್ನು ಯೇಸು ನಾಮದಲ್ಲಿ ಅನುಗ್ರಹಿಸಿ. ಆಮೆನ್.


Join our WhatsApp Channel


Most Read
● ಅನ್ಯಭಾಷೆಯನ್ನಾಡುವುದು ಪ್ರಗತಿಯನ್ನು ತರುತ್ತದೆ.
● ಆತ್ಮವಂಚನೆ ಎಂದರೇನು? -I
● ಪವಿತ್ರಾತ್ಮನಿಗಿರುವ ಹೆಸರುಗಳು ಮತ್ತು ಬಿರುದುಗಳು
● ದೇವರಿಗಾಗಿ ದಾಹದಿಂದಿರುವುದು
● ಇದರ ವ್ಯತ್ಯಾಸವು ಸ್ಪಷ್ಟವಾಗಿದೆ
● ಬೆಟ್ಟಗಳ ಮತ್ತು ತಗ್ಗಿನ ದೇವರು.
● ಆತ್ಮೀಕ ಚಾರಣ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login