हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಆತನ ಬೆಳಕಿನಲ್ಲಿ ಸಂಬಂಧಗಳ ಪೋಷಣೆ
Daily Manna

ಆತನ ಬೆಳಕಿನಲ್ಲಿ ಸಂಬಂಧಗಳ ಪೋಷಣೆ

Tuesday, 4th of March 2025
1 0 134
Categories : ಕ್ಷಮೆ (Forgiveness) ದೇವರ ಪ್ರೀತಿ (Love of God) ನಮ್ರತೆ (Humility) ನಿಷ್ಠೆ (Loyality) ಸಂಬಂಧಗಳು (Relationships)
ಸಂಬಂಧಗಳು: ಮನುಷ್ಯ ಮನುಷ್ಯರ ನಡುವೆ ಬೆಸೆಯುವ ಕೊಂಡಿಯ ತಿರುಳಾಗಿದೆ.ಇದು ಆಗಾಗ ಪರೀಕ್ಷೆಗೆ ಒಳಪಡಿಸಬೇಕಾದದ್ದು ಆಗಿದೆ.ಹೇಗೆ ತೋಟದಲ್ಲಿರುವ ಸೂಕ್ಷ್ಮವಾದ ಹೂವುಗಳಿಗೆ ಆಗಾಗ ಜಾಗ್ರತೆ ವಹಿಸಿ ಪೋಷಣೆ ನೀಡಬೇಕೋ ಹಾಗೆಯೇ ಸಂಬಂಧಗಳಿಗೂ ಸಹ ಜಾಗ್ರತೆ ಪೋಷಣೆ ಅಗತ್ಯ . ಒಬ್ಬ ಮಹಾನ್ ವ್ಯಕ್ತಿ ಒಮ್ಮೆ ಹೀಗೆ ಹೇಳಿದ್ದಾರೆ "ಯಾವ ಸಂಬಂದಗಳಿಗೂ ಸ್ವಾಭಾವಿಕ ಸಾವು ಎಂಬುದಿಲ್ಲ. ಬದಲಾಗಿ ಅವು ಅಹಂಕಾರ, ಅಗೌರವ, ಸ್ವಾರ್ಥತೆ ಮತ್ತು ಅಪ್ರಾಮಾಣಿಕತೆ ಯಿಂದ ಕೊಲೆಗೀಡಾಗುತ್ತದೆ" ಎಂದು ಈ ಒಂದು ನೋವಿನ ಸಂಗತಿಯು ಇಡೀ ಚರಿತ್ರೆಯ ಪುಟಗಳದ್ದಕ್ಕೂ ಪ್ರತಿಧ್ವನಿಸುತ್ತಲೇ ಇದೆ ಮತ್ತು ಸತ್ಯವೇದವು ಈ ಒಂದು ಮನುಷ್ಯರ ನಡುವಿನ ಸಂಬಂಧದ ಸ್ವಭಾವದಲ್ಲಿನ ದೌರ್ಬಲ್ಯತೆ ಕುರಿತು ನಮಗೆ ನೆನಪಿಸುತ್ತಲೇ ಇರುತ್ತದೆ.

ಸತ್ಯವೇದವು ಸಂಬಂಧಗಳನ್ನು ಹೇಗೆ ನಿರ್ವಹಿಸಬೇಕು ಮತ್ತು ಹೇಗೆ ಅದನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂಬುದರ ಕುರಿತು ಸಾಕಷ್ಟು ಹೇಳುತ್ತದೆ. ಎಫಸೆ 4:2-3,ರಲ್ಲಿ ಅಪೋಸ್ತಲನಾದ ಪೌಲನು"‭‭
2ನೀವು ಪೂರ್ಣ ವಿನಯ ಸಾತ್ವಿಕತ್ವಗಳಿಂದಲೂ ದೀರ್ಘಶಾಂತಿಯಿಂದಲೂ ಕೂಡಿದವರಾಗಿ 3 ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವದಕ್ಕೆ ಆಸಕ್ತರಾಗಿರಿ." ಎಂದು ಸಲಹೆ ನೀಡುತ್ತಾನೆ. ಈ ದೇವರ ವಾಕ್ಯವು ಸಂಬಂಧಗಳನ್ನು ತಿಂದು ಹಾಕುವ ಅಂಹಕಾರ -ಅಗೌರವ ಎಂಬುವುಗಳನ್ನು ಪ್ರತಿರೋಧಿಸಲು ದೀನತ್ವ, ತಾಳ್ಮೆ ಮತ್ತು ಪ್ರೀತಿಗಳೆಂಬ - ಸದ್ಗುಣಗಳು ಎಷ್ಟು ಮುಖ್ಯ ಎಂಬುದನ್ನು ಒತ್ತಿ ಹೇಳುತ್ತದೆ.

ಸ್ವಾರ್ಥತೆ, ಎಂಬುದು ಸಂಬಂಧಗಳ ಕೊಲೆ ಪಾತಕ. ಇದನ್ನು ಉದ್ದೇಶಿಸಿ ಫಿಲಿಪ್ಪಿ 2:3-4 ರಲ್ಲಿ ಹೀಗೆ ಹೇಳಲಾಗಿದೆ,
"3 ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ. 4 ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ." ಈ ಒಂದು ದೇವರವಾಕ್ಯವು ನಿಸ್ವಾರ್ಥ ಪ್ರೀತಿಯಂದರೇನು ಎಂಬುದನ್ನು ವಿವರಿಸುತ್ತದೆ ಮತ್ತೊಬ್ಬರ ಒಳಿತನ್ನು ಎದುರುನೋಡುವ ತನ್ನ ಇಡೀ ಭೂಲೋಕದ ಯಾತ್ರೆಯಲ್ಲಿಯೂ ತನ್ನಸೇವೆಯಲ್ಲಿಯೂ ನಿಸ್ವಾರ್ಥ ಪ್ರೀತಿಯನ್ನು ಪ್ರದರ್ಶಿಸಿದ ಯೇಸುಕ್ರಿಸ್ತನ ಬೋಧನೆಯನ್ನು ಪ್ರತಿಧ್ವನಿಸುತ್ತದೆ.

ಸತ್ಯವೇದದಲ್ಲಿ ನಾವು ಕಾಣುವ ದಾವೀದ ಮತ್ತು ಯೋನಾಥನ ನಡುವೆ ಇದ್ದ ಸ್ನೇಹ ಸಂಬಂಧವು ಇದ್ದಕ್ಕೆ ದ್ಯೋತಕ ಉದಾಹರಣೆಯಾಗಿದೆ. ಇವರ ಕುಟುಂಬದವರ ನಡುವೆ ಏನೇ ವೈಮನಸ್ಯ ಇದ್ದರೂ ಮತ್ತು ಕಠಿಣವಾದ ರಾಜಕೀಯ ಜಂಜಾಟಗಳೂ ಇದ್ದರೂ ಇದರ ನಡುವೆಯೂ ಅವರ ಸ್ನೇಹಪ್ರೇಮವು ಅವರಿಬ್ಬರ ನಡುವೆ ಶಾಶ್ವತವಾಗಿ ನೆಲೆಗೊಂಡಿತ್ತು. ಇದು ಅವರಿಬ್ಬರ ನಡುವೆ ಪರಸ್ಪರ ಇದ್ದ ಪ್ರಾಮಾಣಿಕತೆ ಮತ್ತು ಗೌರವಕ್ಕೆ ಸಾಕ್ಷಿಯಾಗಿದೆ. 1ಸಮುವೇಲ 18:1-3ರಲ್ಲಿ ಅವರಿಬ್ಬರ ನಡುವೆ ಇದ್ದ ವೈಯಕ್ತಿಕ ಲಾಭವನ್ನು ಮೀರಿದ ಸಂಬಂಧಗಳನ್ನು ನೋಡುತ್ತೇವೆ."‭‭
".... ಯೋನಾತಾನನ ಪ್ರಾಣವು ದಾವೀದನ ಪ್ರಾಣದೊಡನೆ ಒಂದಾಯಿತು. ಅವನು ಇವನನ್ನು ತನ್ನ ಪ್ರಾಣದಂತೆಯೇ ಪ್ರೀತಿಸತೊಡಗಿದನು.... ಯೋನಾತಾನನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸಿದ್ದರಿಂದ ಅವನೊಡನೆ ಒಡಂಬಡಿಕೆಮಾಡಿಕೊಂಡನು."ಈ ಒಂದು ಸಂಧರ್ಭವು ಸಂಬಂಧಗಳ ನಡುವೆ ಇರಬೇಕಾದ ಪ್ರಾಮಾಣಿಕತೆಯ ಮೌಲ್ಯವನ್ನು ಒತ್ತಿ ಹೇಳುತ್ತದೆ.

ಅಪ್ರಾಮಾಣಿಕತೆಯು, ಅನೇಕ ಸಂಬಂಧಗಳಿಗೆ ಬೀಳುವ ಹೊಡೆತವಾಗಿದೆ.ಇದನ್ನು 30 ಬೆಳ್ಳಿ ನಾಣ್ಯಕ್ಕಾಗಿ ಯೇಸುವನ್ನೇ ಹಿಡುಕೊಟ್ಟ ಇಸ್ಕರಿಯೋತ ಯೂದನ ಚರಿತ್ರೆಯಲ್ಲಿ ಕಟುವಾಗಿ ಚಿತ್ರಸಲಾಗಿದೆ.(ಮತ್ತಾಯ 26:14-16)
 ದುರಾಸೆ ಮತ್ತು ಅಪ್ರಾಮಾಣಿಕತೆಯಿಂದ ಉಂಟಾದ ನಂಬಿಕೆದ್ರೋಹ ಎಂಬ ಈ ಒಂದು ನಡವಳಿಕೆಯು ಕ್ರೈಸ್ತ ಚರಿತ್ರೆಯಲ್ಲಿಯೇ ಅತ್ಯಂತ ಪ್ರಮುಖವಾದ ಘಟನೆಗೆ ಕಾರಣವಾಯಿತು.ಅದೇ -ಕ್ರಿಸ್ತನ ಶಿಲುಬೆಯ ಮರಣ.
ಈ ಘಟನೆಯ ಪರಿಣಾಮವಾಗಿ ಅಪ್ರಾಮಾಣಿಕತೆಯು ಸಂಬಂಧಗಳನ್ನು ನಾಶ ಪಡಿಸುವ ಒಂದು ಶಕ್ತಿ ಎಂದು ನಂಬಿಕೆ ದ್ರೋಹದ ಬಗ್ಗೆ ಗಂಭೀರವಾದ ಎಚ್ಚರಿಕೆಯನ್ನು ನಮಗೆ ಕೊಡುವ ಕಾರ್ಯ ಮಾಡುತ್ತದೆ.

ಈ ಒಂದು ನಕಾರಾತ್ಮಕ ಶಕ್ತಿಗೆ ಪ್ರತಿರೋಧಕವಾದ ಕಾರ್ಯವೇನೆಂದರೆ ಕ್ಷಮಿಸುವುದು ಮತ್ತು ಸಂಬಂಧಗಳನ್ನು ಸರಿಪಡಿಸಿಕೊಳ್ಳುವುದು ಎಂದು ಹೇಳಿ ಸಂಬಂಧ ಸರಿಪಡಿಸಿ ಕೊಳ್ಳುವುದಕ್ಕೆ ಸತ್ಯವೇದ ಪ್ರೋತ್ಸಾಹ ನೀಡುತ್ತದೆ . ಕೊಲಸ್ಸೆ 3:13 "‭‭ ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷವಿುಸಿರಿ. ಕರ್ತನು ನಿಮ್ಮನ್ನು ಕ್ಷವಿುಸಿದಂತೆಯೇ ನೀವೂ ಕ್ಷವಿುಸಿರಿ." ಎಂದು ನಮಗೆ ಬೋದಿಸುತ್ತದೆ.
ಈ ಒಂದು ದೇವರ ವಾಕ್ಯವು ಕ್ಷಮೆಯಲ್ಲಿರುವ ಸ್ವಸ್ಥತಾ ಬಲವನ್ನು ಪ್ರಕಟಿಸುತ್ತದೆ ಮತ್ತು ಒತ್ತಾಯ ಪೂರ್ವಕವಾಗಿ ಸಾಗಿಸಿಕೊಂಡು ಹೋಗುತ್ತಿರುವ ಸಂಬಂಧಗಳನ್ನು ಸರಿಪಡಿಸಿಕೊಳ್ಳುವುದರ ಮಹತ್ವದ ಮೇಲೆ ಬೆಳಕು ಚೆಲ್ಲುತ್ತದೆ.

ಒಬ್ಬ ಮಹಾನ್ ವ್ಯಕ್ತಿಯು ವಿವೇಕದಿಂದ ಹೀಗೆ ಹೇಳಿದ್ದಾರೆ "ದುರ್ಬಲವಾದ ಮನುಷ್ಯನು ಎಂದಿಗೂ ಕ್ಷಮಿಸಲಾರನು. ಏಕೆಂದರೆ ಕ್ಷಮಾಗುಣ ಎಂಬುದು ಬಲಶಾಲಿಯ ಗುಣಲಕ್ಷಣ".
ನಿಮಗೆ ನಿಮ್ಮ ಸಂಬಂಧಗಳು ಸರಿಹೋಗಬೇಕೆಂಬ ನಿಜವಾದ ಬಯಕೆ ಇದೆಯಾ? ಹಾಗಿದ್ದರೆ ದೀನತ್ವವನ್ನು, ನಿಸ್ವಾರ್ತೆಯನ್ನು, ಪ್ರಾಮಾಣಿಕತೆಯನ್ನು ಮತ್ತು ಕ್ಷಮಾಗುಣವನ್ನು ಅಭ್ಯಾಸ ಮಾಡಿಕೊಳ್ಳಿರಿ ಇದು ನಿಮ್ಮ ಸಂಬಂಧಗಳನ್ನು ಗಟ್ಟಿಗೊಳಿಸಿ ನೀವು ಒಬ್ಬರನೊಬ್ಬರು ಆಳವಾಗಿ ಅರಿತುಕೊಳ್ಳುವಂತೆ ಮಾಡುತ್ತದೆ.
Prayer
 ಪರಲೋಕದ ತಂದೆಯೇ, ನಮ್ಮ ಸಂಬಂಧಗಳನ್ನು ದೀನತ್ವದಿಂದಲೂ ನಿಸ್ವಾರ್ಥತೆಯಿಂದಲೂ ಪ್ರಾಮಾಣಿಕತೆಯಿಂದಲೂ ಪೋಷಿಸುವಂತೆ ನಮ್ಮನ್ನು ಬಲಗೊಳಿಸಿ. ನೀವು ನಮ್ಮನ್ನು ಕ್ಷಮಿಸಿದಂತೆಯೇ ನಾವೂ ಸಹ ಮತ್ತೊಬ್ಬರನ್ನು ಕ್ಷಮಿಸುವಂತೆ ಸಹಾಯ ಮಾಡಿ ಮತ್ತು ಯೇಸುನಾಮದಲ್ಲಿ ನಮ್ಮ ಸಂಬಂಧಗಳನ್ನು ಪ್ರೀತಿ - ಅನ್ಯೋನ್ಯತೆಯಲ್ಲಿ ಕಟ್ಟುವಂತೆ ನಿಮ್ಮ ಮಾರ್ಗದರ್ಶನವು ನಮಗೆ ದಾರಿದೀಪವಾಗಲಿ. ಆಮೆನ್.

Join our WhatsApp Channel


Most Read
● ಕರ್ತನ ಸೇವೆ ಮಾಡುವುದು ಎಂದರೇನು-I
● ದೇವರು ಹೇಗೆ ಒದಗಿಸುತ್ತಾನೆ #3
● ದಿನ 01 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ 
● ಎತ್ತಲ್ಪಡುವಿಕೆ ಮತ್ತು ರೋಶ್ ಹಸನ್ನ
● ಅತ್ಯುತ್ತಮ ದೇವರು ನೀಡಿದ ಸಂಪನ್ಮೂಲ
● ನಿಮ್ಮ ದಿನವೇ ನಿಮ್ಮನ್ನು ವ್ಯಾಖ್ಯಾನಿಸುತ್ತದೆ
● ಯೇಸುವಿನ ಕರ್ತತ್ವವನ್ನು ಅರಿಕೆ ಮಾಡುವುದು
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login