हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಅತ್ಯುನ್ನತವಾದ ರಹಸ್ಯ
Daily Manna

ಅತ್ಯುನ್ನತವಾದ ರಹಸ್ಯ

Saturday, 23rd of March 2024
4 3 552
Categories : ತಯಾರಿ (Preparation)
"ಕಾಣಿಕೆಯು ಅನುಕೂಲತೆಗೂ, ಶ್ರೀಮಂತರ ಸಾನ್ನಿಧ್ಯ ಪ್ರವೇಶಕ್ಕೂ ಸಾಧನ."(‭‭ಜ್ಞಾನೋ‬ ‭18:16‬ ).

ಹುಟ್ಟಿನಂದಿನಿಂದಲೇ ಲೋಕ ಪ್ರಸಿದ್ಧವಾಗುವಂತಹ ಅಥ್ಲೆಟಿಕ್ ಅಥವಾ ಸಾಕರ್ ಆಟದ ಕೌಶಲ್ಯ ಹೊಂದಿರುವ ವ್ಯಕ್ತಿಯು ನಿಮ್ಮ ಆತ್ಮೀಯ ಸ್ನೇಹಿತನಾಗಿದ್ದಾನೆ ಎಂದು ಸ್ವಲ್ಪ ಕಲ್ಪಿಸಿಕೊಳ್ಳಿ. ಅವನೊಬ್ಬ ದೇವ ಮನುಷ್ಯರಿಂದ "ನೀನೊಬ್ಬ ಲೋಕ ಪ್ರಸಿದ್ಧ ಅಥ್ಲೆಟಿಕ್ ಅಥವಾ ಸಾಕರ್ ಆಟಗಾರನಾಗುವೆ" ಎಂಬುವ ಪ್ರವಾದನೆಯನ್ನು ಹೊಂದಿದ್ದಾನೆ ಎಂದು ನೆನೆಸಿಕೊಳ್ಳಿ.

ಈಗ ನೈಜ ಚಿತ್ರಣದಲ್ಲಿ ಅವನು ತನ್ನ ಹೈಸ್ಕೂಲ್ ಕಾಲೇಜ್ ದಿನಗಳಲ್ಲಿ ತನ ಬಹುತೇಕ ಸಮಯವನ್ನು ವಿಡಿಯೋ ಗೇಮ್ ಆಡುತ್ತಲೋ ಕ್ರಿಕೆಟ್ ಅನ್ನು ನೋಡುತ್ತಲೋ ಕಾಲ ಕಳೆಯುತ್ತಿರುತ್ತಾನೆ.

ಆದರೆ ಅವನಿಗೆ 30 ವರ್ಷಗಳಾಗುವಾಗ ಅದೊಂದು ನನಸಾಗದ ಬಯಕೆ  ಮತ್ತು ಅದು ಕೈಗೂಡಲಿಲ್ಲ ಎಂಬ ನಿಟ್ಟುಸಿರು ಬಿಟ್ಟು ಅವನಿಗೆ ಇನ್ನೇನೂ ಉಳಿದಿರುವುದಿಲ್ಲ. ಹೇಗೂ ಅವನ ಒಂದು ಕರೆಯು ಕಳೆದು ಹೋಯಿತು. ಕೇವಲ ವಿಷಾದ ಒಂದೇ ಉಳಿದು, ಇಲ್ಲ ನಾನೇನಾದರೂ ಕಳೆದುಕೊಂಡೆನಾ? ಇಲ್ಲ! ಎನ್ನುವ ಹೋರಾಟ ಒಂದೇ ಅವನ ಮೇಲೆ ಆಳ್ವಿಕೆ ಮಾಡುತ್ತಿರುತ್ತದೆ.

ಈ ಚಿತ್ರಣದಲ್ಲಿ ಅವನು ಕಳೆದುಕೊಂಡದ್ದು ಒಂದೇ ಒಂದು ಮೂಲಭೂತವಾದ ಅಂಶ.ಅದುವೇ -ಪೂರ್ವ ಸಿದ್ಧತೆ.

ಅನೇಕರು ಅಪೋಸ್ತಲನಾದ ಪೌಲನನ್ನು ಅತ್ಯಂತ ಮಹಾನ್ ಅಪೋಸ್ತಲನೆಂದು ಪರಿಗಣಿಸುತ್ತಾರೆ. ಅಂತಹ ಯಾವ ಅಂಶವು ಪೌಲನಲ್ಲಿನ ನಂಬಿಕೆಯನ್ನು ಉನ್ನತವೆಂದು ಪರಿಗಣಿಸುವಂತದ್ದು? ಅದರ ರಹಸ್ಯವೇನೆಂದರೆ  ಅವನು ಮಾನಸಂತರಗೊಂಡ ನಂತರ ತಕ್ಷಣ ಸೇವೆಗೆ ಹೊರಡುವ ಮುನ್ನ  ಮಾಡಿದಂತಹ  ಪೂರ್ವ ಸಿದ್ಧತೆ.

"ತನ್ನ ಮಗನನ್ನು ನಾನು ಅನ್ಯಜನರಲ್ಲಿ ಪ್ರಸಿದ್ಧಿಪಡಿಸುವವನಾಗಬೇಕೆಂದು ಆತನನ್ನು ನನ್ನೊಳಗೆ ಪ್ರಕಟಿಸುವದಕ್ಕೆ ಇಚ್ಫೈಸಿದಾಗಲೇ ನಾನು ಮನುಷ್ಯರ ಆಲೋಚನೆಯನ್ನು ವಿಚಾರಿಸದೆ [17] ಯೆರೂಸಲೇವಿುಗೆ ನನಗಿಂತ ಮುಂಚೆ ಅಪೊಸ್ತಲರಾಗಿದ್ದವರ ಬಳಿಗೂ ಹೋಗದೆ ಅರಬಸ್ಥಾನಕ್ಕೆ ಹೋಗಿ ತಿರಿಗಿ ದಮಸ್ಕಕ್ಕೆ ಬಂದೆನು."(ಗಲಾತ್ಯದವರಿಗೆ‬ ‭1:16‭-‬17‬).

ಈ ಮೇಲಿನ ದೇವರ ವಾಕ್ಯವು ನಮಗೆ ಸ್ಪಷ್ಟವಾಗಿ ಹೇಳುವುದೇನೆಂದರೆ, ಪೌಲನು ಮಾನಸಂತರಗೊಂಡ ತಕ್ಷಣವೇ ಅವನು ಅರಬ ಸ್ಥಾನಕ್ಕೆ ಪ್ರಯಾಣ ಬೆಳೆಸಿದನು. ಅನೇಕ ಸತ್ಯವೇದ ಪಂಡಿತರು ಹೇಳುವುದೇನೆಂದರೆ 3 ವರ್ಷಗಳ ಪರ್ಯಂತರ ಅವನು ದೇವರನ್ನು ಮನಪೂರ್ವಕವಾಗಿ ಹುಡುಕುವುದರಲ್ಲೂ  ಶಾಸ್ತ್ರಗಳನ್ನು ಅಧ್ಯಯನ ಮಾಡುವುದರಲ್ಲೂ ಕಳೆದನು ಎಂದು.

ಈ ಒಂದು ಸಮಯದಲ್ಲಿಯೇ ಕರ್ತನು ಆಳವಾದ ಆತ್ಮಿಕ ಸಂಗತಿಗಳನ್ನು ಪೌಲನಿಗೆ ಪ್ರಕಟಿಸಲು ಆರಂಭಿಸಿದನು. ಈ ಪ್ರಕಟಣೆಗಳು ಇಂದಿಗೂ ಸಹ ಪರಿಣಾಮ ಬೀರುವಂತಹವುಗಳಾಗಿವೆ. (ಈ ಕುರಿತು ಸ್ವಲ್ಪ ಆಲೋಚಿಸಿರಿ)
ಈ ರೀತಿಯಲ್ಲಿ ಕಳೆದ ವರ್ಷಗಳು ವ್ಯರ್ಥವಾದ ವರ್ಷಗಳಾಗದೆ ಸಿದ್ಧತೆಗಳಿಗಾಗಿ ವಿನಿಯೋಗಿಸಲ್ಪಟ್ಟ ವರ್ಷಗಳಾಗಿತ್ತು. ಇದರಿಂದಾಗಿಯೇ ಅವನಿಗೆ ಮಾತನಾಡುವ ಅವಕಾಶ ದೊರೆತಾಗಲೆಲ್ಲಾ ಅವನು ಮನುಷ್ಯ ಜ್ಞಾನದಿಂದ ಮಾತಾಡದೆ, ದೇವರಿಂದ ಹೊಂದಿದ ಪ್ರಕಟಣೆಯ ಜ್ಞಾನದಿಂದಲೇ ಮಾತಾಡುತ್ತಿದ್ದನು. ಅವನು ಅಕ್ಷರಶಃ  ಅವನ ಮಾತುಗಳಿಂದ ಜನಾಂಗಗಳನ್ನು ಕರ್ತನಿಗಾಗಿ ನಡುಗಿಸಿದನು.

ಭಾರತದ ಹಳ್ಳಿಗಾಡುಗಳಲ್ಲಿ ಜೀವನವು ಬಲು ಕಷ್ಟಕರವಾದುದು. ಆದಾಗಿಯೂ ಕೆಲವು ತಲಾಂತಗಳುಳ್ಳ ಪ್ರತಿಭೆವುಳ್ಳ ಜನರು ಕಡುಬಡತನದಿಂದ ಅವರಿದ್ದ  ಪರಿಸ್ಥಿತಿಗಳಲ್ಲಿ ಸಾಧಿಸಲು ಅಸಾಧ್ಯವೆನಿಸುವ ದೇವರ ಕರೆಯನ್ನು ಅವರ ಎಲ್ಲಾ ಬಡತನಗಳ ಜಂಜಾಟದ ನಡುವೆಯಲ್ಲೂ ಅವುಗಳನ್ನು ಮೀರಿ ಬೆಳೆದು ಬೆಳಗುತ್ತಾರೆ. ನೀವು ಅವರನ್ನು ಅದೃಷ್ಟವಂತರಷ್ಟೇ ಎನ್ನಬಹುದು.

ಅದೃಷ್ಟ ಎನ್ನುವಂತಹ ಯಾವುದೇ ಸಂಗತಿಗಳು ಇಲ್ಲಿ ಇಲ್ಲ. ಯಾವಾಗ ಸಿದ್ಧತೆಯು ದೇವರ ಕರೆಯೊಂದಿಗೆ ಬೆರೆಯುತ್ತದೆಯೋ ಅದು ದೇವರ ದಯೆಯನ್ನು ಉಂಟು ಮಾಡುತ್ತದೆ.

ನಿಜವಾದ ಸಾಧನೆ ಎಂಬುದು ಯಾವುದೋ ಒಂದು ಕಾರ್ಯ ಮಾಡಿಯೋ ಅಥವಾ ಎಂದೋ ಒಂದು ನಿರ್ದಿಷ್ಟ ದಿನದಲ್ಲಿ ಮಾಡಿದಂತಹ ಕಾರ್ಯವೋ ಅಲ್ಲ. ನಿಜವಾದ ಸಾಧನೆ ಎಂಬುದು ಹಿಡಿದ ಕಾರ್ಯವನ್ನು ಮುಗಿಸುವವರೆಗೂ ಮಾಡುವಂತಹ ನಿರಂತರ ಪರಿಶ್ರಮ ಮತ್ತು ಅದಕ್ಕೆ ಕುರಿತಾದ ಸಿದ್ಧತೆಯನ್ನು ಒಳಗೊಂಡಿರುತ್ತದೆ. ನೀವು ದೇವರ ದಯೆಯ ದಿನವನ್ನು ಎದುರು ನೋಡುತ್ತಿದ್ದೀರಾ?

ನಾವು ಪೌಲನ ಉದಾಹರಣೆಯನ್ನು ಅನುಸರಿಸುವುದನ್ನು ಕಲಿಯಬೇಕು.ನಾವು ಅವನಂತೆ ದೇವರೊಂದಿಗೆ ಮೌಲ್ಯವುಳ್ಳ ಆತ್ಮೀಯವಾದಂತ ಸಮಯವನ್ನು ಕಳೆಯಲು ಸಮಯವನ್ನು ಮೀಸಲಿಡಬೇಕು. ಇದು ನಮ್ಮನ್ನು ಆತ್ಮಿಕವಾಗಿಯೂ ಮಾನಸಿಕವಾಗಿಯೂ ದೇವರು ನಮಗೆ ಇಟ್ಟಿರುವ ಕರೆಗಾಗಿ ನಮ್ಮನ್ನು ಸಿದ್ಧಗೊಳಿಸುತ್ತದೆ.

ಪ್ರಾಯಶಹಃ  ದೇವರು ನಿಮಗಾಗಿ ದೊಡ್ಡ ಸೇವೆಯೊಂದನ್ನು ಇಟ್ಟಿರಬಹುದು. ಪ್ರಾಯಶಹಃ ದೊಡ್ಡ ವ್ಯವಹಾರವನ್ನು ನಿಮಗಾಗಿ ಇಟ್ಟಿರಬಹುದು. ಬಹುಶಹಃ  ನೀವು ದೊಡ್ಡ ಸಂಗೀತಗಾರರಾಗುವ, ದೊಡ್ಡ ಅಥ್ಲೆಟಿಕ್ ಆಟಗಾರರಾಗುವ ಇತರೆ ಯಾವುದೋ ಒಂದು ದೊಡ್ಡ ಕರೆಯನ್ನು ನಿಮಗಾಗಿ ದೇವರು ಇಟ್ಟಿರಬಹುದು.ಇದೆಲ್ಲವೂ ಪೂರ್ವ ಸಿದ್ಧತೆಯಿಂದಲೇ ಆರಂಭವಾಗುವಂತದ್ದು.ಈಗಲೇ ನಿಮ್ಮ ಸಿದ್ಧತೆಯ ಕಾರ್ಯಗಳನ್ನು ಆರಂಭಿಸಿರಿ.
Prayer
ಪ್ರೀತಿಯುಳ್ಳ ತಂದೆಯೇ ನಿನ್ನ ಕೃಪೆಯು ನನ್ನ ಮೇಲೆ ವರ್ಷಿಸುವಂತ ದಿನಕ್ಕಾಗಿ ನಾನು ಸಿದ್ಧವಾಗುವಂತೆ ನಿನ್ನ ಜ್ಞಾನ-ವಿವೇಕಗಳನ್ನು ದಯಪಾಲಿಸು. ಪ್ರತಿದಿನವೂ ನಿನ್ನ ಪ್ರಸನ್ನತೆಯು ನನ್ನನ್ನು ಯೇಸು ನಾಮದಲ್ಲಿ ಉತ್ತೇಜಿಸಿ ಬಲಪಡಿಸಲ್ಲಿ. ಆಮೆನ್.


Join our WhatsApp Channel


Most Read
● ಭವ್ಯಭವನದ ಹಿಂದಿರುವ ಮನುಷ್ಯ
● ನೀವು ಎಷ್ಟು ವಿಶ್ವಾಸಾರ್ಹರು?
● ಇದು ಅಧಿಕಾರ ವರ್ಗಾವಣೆಯ ಸಮಯ
● ಪುರುಷರು ಏಕೆ ಪತನಗೊಳ್ಳುವರು -1
● ಮೂರು ನಿರ್ಣಾಯಕ ಪರೀಕ್ಷೆಗಳು
● ನಂಬಿಕೆಯಲ್ಲಿ ದೃಢವಾಗಿ ನಿಲ್ಲುವುದು
● ಭಾನುವಾರದ ಬೆಳಗ್ಗೆ ನಿಗದಿತ ಸಮಯಕ್ಕೆ ಸಭೆಗೆ ಹೋಗುವುದು ಹೇಗೆ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login