हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಹೊಸ ಒಡಂಬಡಿಕೆಯ ನಡೆದಾಡುವ ದೇವಾಲಯ.
Daily Manna

ಹೊಸ ಒಡಂಬಡಿಕೆಯ ನಡೆದಾಡುವ ದೇವಾಲಯ.

Saturday, 26th of April 2025
2 1 116
Categories : ದೇವರೊಂದಿಗೆ ಆತ್ಮೀಯತೆ (Intimacy with God) ನಂಬಿಕೆ (Faith) ರೂಪಾಂತರ(transformation)
"ಆಮೇಲೆ ಯೇಸು ದೇವಾಲಯ ಬಿಟ್ಟು  ಹೊರಟು ಹೋಗುತ್ತಿರಲು ಆತನ ಶಿಷ್ಯರು ಆತನಿಗೆ ದೇವಾಲಯದ ಕಟ್ಟಣಗಳನ್ನು ತೋರಿಸುವದಕ್ಕೆ ಹತ್ತರಕ್ಕೆ ಬಂದರು. ಆಗ ಆತನು - ಇವುಗಳನ್ನೆಲ್ಲಾ ನೋಡುತ್ತೀರಲ್ಲವೇ. ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವದಿಲ್ಲ, ಎಲ್ಲಾ ಕೆಡವಲ್ಪಡುವದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು.(ಮತ್ತಾಯ 24:1-2) 

ಯೆರುಸಲೆಮ್‌ನಲ್ಲಿ ದೇವಾಲಯದ ನಾಶನದಕುರಿತು  ಕರ್ತನಾದ ಯೇಸುವಿನ ಭವಿಷ್ಯವಾಣಿಯು(ಮತ್ತಾಯ 24:1-2) ಕ್ರೈಸ್ತರು ದೇವರ ಸಾನಿಧ್ಯವನ್ನು ಹೇಗೆ ಅನುಭವಿಸುತ್ತಾರೆ ಎಂಬುದಕ್ಕೆ  ಪರಿವರ್ತನಾತ್ಮಕ ಬದಲಾವಣೆಯನ್ನು ಸೂಚಿಸಿತು. ಇನ್ನು ಮುಂದೆ ದೇವಾಲಯ ಎಂಬುದು ಭೌತಿಕ ಕಟ್ಟಡಕ್ಕೆ ಸೀಮಿತವಾಗಿರದೇ, ದೈವಿಕ ಸಾನಿಧ್ಯವು ಈಗ ನಮ್ಮಲ್ಲಿ ಪ್ರತಿಯೊಬ್ಬರೊಳಗೂ ವಾಸಿಸಿ , ಪ್ರತಿಯೊಬ್ಬ ಕ್ರೈಸ್ತನನ್ನು "ನಡೆದಾಡುವ ದೇವಾಲಯ"ವನ್ನಾಗಿ ಮಾಡುತ್ತದೆ. ನಡೆಯುವ ದೇವಾಲಯಗಳಾದ, ಕ್ರೈಸ್ತರು ಎಲ್ಲಿಗೆ ಹೋದರೂ ದೇವರ ಸಾನಿಧ್ಯವನ್ನು ತಮ್ಮೊಂದಿಗೆ ಕೊಂಡೊಯ್ಯುವವರಾಗಿ ಅವರ ಪ್ರತಿಯೊಂದು ಭೇಟಿಯು ಮತ್ತು  ಅನುಭವವು  ದೇವರ ಪ್ರೀತಿಯನ್ನು ಹಂಚಿಕೊಳ್ಳಲು ಮತ್ತು ಹರಡಲು ಅವಕಾಶವಾಗಿ ಪರಿವರ್ತಿಸುವವರಾಗುತ್ತಾರೆ.

ಯೆರುಸಲೆಮ್‌ನಲ್ಲಿರುವ ದೇವಾಲಯವು ಹೊರಗಿನ ಅಂಗಳ, ಪರಿಶುದ್ದ ಸ್ಥಳ  ಮತ್ತು ಅತೀ ಪರಿಶುದ್ಧ ಸ್ಥಳ ಎನ್ನುವ ಮೂರು ವಿಭಿನ್ನ ಭಾಗಗಳನ್ನು ಒಳಗೊಂಡಿದ್ದಂತೆಯೇ  ನಾವೂ ಸಹ  ದೇಹ, ಪ್ರಾಣ ಮತ್ತು ಆತ್ಮದಿಂದ ಕೂಡಿದ್ದೇವೆ ಎಂದು ಸತ್ಯವೇದ ಪ್ರಕಟಪಡಿಸುತ್ತದೆ (1 ಥೆಸಲೊನೀಕ 5:23). ಈ ರಚನೆಯು ಆಳವಾದ ಸಾಂಕೇತಿಕ ಮಹತ್ವವನ್ನು ಹೊಂದಿದ್ದು , ನಮ್ಮ ಅಸ್ತಿತ್ವದ ಪ್ರತಿಯೊಂದು ಅಂಶವು ದೇವಾಲಯದ ನಿರ್ದಿಷ್ಟ ಭಾಗಗಳನ್ನೇ  ಪ್ರತಿಬಿಂಬಿಸುವಂತದ್ದಾಗಿದೆ.

ದೇಹ - ಹೊರಗಿನ ಅಂಗಳ: 
ನಮ್ಮ ಭೌತಿಕ ದೇಹವು ದೇವಾಲಯದ ಹೊರಗಿನ ಅಂಗಳವನ್ನು ಹೋಲುತ್ತದೆ, ಅದು ಎಲ್ಲರಿಗೂ ಗೋಚರಿಸುವಂತದ್ದು. ನಮ್ಮ ದೇಹಗಳು ನಾವು ಹೊರಗಿನ  ಪ್ರಪಂಚದೊಂದಿಗೆ ಸಂವಹನ ನಡೆಸುವಂತ  ಮತ್ತು ನಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವಂತ  ಪಾತ್ರೆಗಳಾಗಿವೆ. 

ಪ್ರಾಣ  - ಪರಿಶುದ್ಧ ಸ್ಥಳ : 
ನಮ್ಮ ಆಲೋಚನೆಗಳು, ಭಾವನೆಗಳು ಮತ್ತು ತಾರ್ಕಿಕ ಸಾಮರ್ಥ್ಯಗಳನ್ನು ಒಳಗೊಳ್ಳುವ ನಮ್ಮ ಪ್ರಾಣವು(ಮನಸ್ಸು) ದೇವಾಲಯದ ಪರಶುದ್ಧ ಸ್ಥಳವನ್ನು  ಪ್ರತಿಬಿಂಬಿಸುತ್ತದೆ. ಏಳು ದೀಪಗಳ ದೀಪಸ್ತಂಭವು ಪರಿಶುದ್ಧ ಸ್ಥಳವನ್ನು  ಬೆಳಗಿಸಿದಂತೆ, ನಮ್ಮ ಪ್ರಾಣವು ನಮ್ಮ ಆಂತರ್ಯದ ಬೆಳಕಿನ ಸ್ಥಾನವಾಗಿದ್ದು  ನಮ್ಮ ಜೀವನಕ್ಕೆ ಬೇಕಾದ  ಮಾರ್ಗದರ್ಶನ ಮತ್ತು ನಿರ್ದೇಶನವನ್ನು ಒದಗಿಸುತ್ತದೆ. 

ಆತ್ಮ - ಅತೀ ಪರಿಶುದ್ಧ ಸ್ಥಳ : 
ಮನುಷ್ಯನ ಆತ್ಮವು ಅತೀ ಪರಿಶುದ್ಧ ಸ್ಥಳದ ಪ್ರತಿಬಿಂಬವಾಗಿದೆ, ಅಲ್ಲಿ ದೇವರ ಪ್ರಸನ್ನತೆಯು ಆ ದೇವಾಲಯದೊಳಗೆ ವಾಸಿಸುತ್ತಿತ್ತು. ನಡೆದಾಡುವ ದೇವಾಲಯಗಳಾಗಿ, ನಮ್ಮ ಆತ್ಮವು ನಾವು ದೈವಿಕ ಪ್ರಸನ್ನತೆಯನ್ನು ಅನುಭವಿಸುವ ಮತ್ತು ಆತ್ಮೀಕ ಆಶೀರ್ವಾದಗಳನ್ನು ಪಡೆಯುವ ಸ್ಥಳವು ಇದಾಗಿದೆ. 

ನಮ್ಮ ದೇಹ, ಪ್ರಾಣ ಮತ್ತು ಆತ್ಮದ ದೈವಿಕ ವಿನ್ಯಾಸವನ್ನು ಗುರುತಿಸಿ, ನಮ್ಮ ಆತ್ಮೀಕ ಬೆಳವಣಿಗೆಯನ್ನು ಪೋಷಿಸಲು ಮತ್ತು ದೇವರೊಂದಿಗೆ ನಮ್ಮ ಸಂಬಂಧವನ್ನು ಅನ್ಯೋನ್ಯ ಗೊಳಿಸಿಕೊಳ್ಳುವುದಕ್ಕೆ  ನಾವು ಆದ್ಯತೆ ನೀಡಬೇಕು. ಇದು ಶಿಸ್ತುಬದ್ಧ ಪ್ರಾರ್ಥನಾ ಜೀವನ ಮತ್ತು ದೇವರ ವಾಕ್ಯದ ದೈನಂದಿನ ಧ್ಯಾನವನ್ನು ಒಳಗೊಂಡಿದ್ದು, ಇದು ನಮ್ಮ ಆತ್ಮವನ್ನು ಬಲಪಡಿಸುತ್ತದೆ ಮತ್ತು ನಮ್ಮೊಳಗಿನ ಆತನ ದೈವಿಕ ಪ್ರಸನ್ನತೆಯನ್ನು ಹೆಚ್ಚು ಹೆಚ್ಚಾಗಿ  ಅನುಭವಿಸಲು ಸಹಾಯ ಮಾಡುತ್ತದೆ.

ಒಂದು ಕಡೆ ಒಂದು ಹಳೆಯ ದೀಪಸ್ತಂಭವಿತ್ತು, ಅದು ಅನೇಕ ವರ್ಷಗಳಿಂದ ಹಡಗುಗಳಿಗೆ ಅಪಾಯಕಾರಿ ನೀರಿನ ಸೆಳೆವಿನ ಕುರಿತು  ಮಾರ್ಗದರ್ಶನ ನೀಡುತ್ತಿತ್ತು. ಆದರೆ ಆ ದೀಪಸ್ತಂಭದ ಪಾಲಕನು ತುಂಬಾ ಒರಟು ವ್ಯಕ್ತಿಯಾಗಿದ್ದು, ತುಂಬಾ ಒರಟಾದ ಭಾಷೆ ಹೊಂದಿದ್ದನು, ಯಾವಾಗಲೂ ಮಾತಿನ ಚಕಮಕಿಗೆ ಸಿದ್ಧನಾಗಿರುತಿದ್ದನು.

ಒಂದು ದಿನ, ಒಂದು ಪ್ರಬಲವಾದ ಬಿರುಗಾಳಿಯು ದೀಪಸ್ತಂಭದ ಲ್ಯಾಂಟರ್ನ್ ಕೋಣೆಯನ್ನು ಹಾನಿಗೊಳಿಸಿತು, ಅದರ ಗಾಜನ್ನು ಒಡೆದು ಬೆಳಕನ್ನು ನಂದಿಸಿಬಿಟ್ಟಿತು. ಬೆಳಕು ಇಲ್ಲದಿದ್ದರೆ ಹಡಗುಗಳು ಗಂಭೀರ ಅಪಾಯಕ್ಕೆ ಸಿಲುಕಬಹುದು  ಎಂಬುದು ದೀಪಸ್ತಂಭದ ಪಾಲಕನಿಗೆ ತಿಳಿದಿತ್ತು. ಆದ ಹಾನಿಯನ್ನು ಸರಿಪಡಿಸಲು ಮತ್ತು ಬೆಳಕನ್ನು ಪುನಃಸ್ಥಾಪಿಸಲು ಅವನು ಹಗಲು ರಾತ್ರಿ ಅವಿಶ್ರಾಂತವಾಗಿ ಕೆಲಸ ಮಾಡಿದನು.

ಈ ರೀತಿ  ತೀವ್ರವಾಗಿ  ಶ್ರಮಿಸುವ  ಸಮಯದಲ್ಲಿ, ದೀಪಸ್ತಂಭದ ಪಾಲಕನು ದೀಪಸ್ತಂಭದ ಕೋಣೆಯ  ಒಂದು ಮೂಲೆಯಲ್ಲಿ ಹೂತುಹಾಕಲ್ಪಟ್ಟ ಹಳೆಯ, ಧೂಳಿಡಿದ ಬೈಬಲ್ ಅನ್ನು ಕಂಡನು. ತನ್ನ ವಿರಾಮದ ಸಮಯದಲ್ಲಿ ಸಮಯವನ್ನು ಕಳೆಯಲು, ಅವನು ಆ ಧರ್ಮಶಾಸ್ತ್ರವನ್ನು ಓದಲು ಪ್ರಾರಂಭಿಸಿದನು. ಅದರಲ್ಲಿನ  ವಾಕ್ಯಗಳು ಅವನ ಹೃದಯವನ್ನು ಮುಟ್ಟಿದವು ಮತ್ತು ಪುಟಗಳಲ್ಲಿ ವಿವರಿಸಲಾದ ದೈವಿಕ ಪ್ರಸನ್ನತೆಯೊಂದಿಗೆ ಅವನಲ್ಲಿ  ಆಳವಾದ ಅನ್ಯೋನ್ಯತೆ ಬೆಳೆಯಲು ಆರಂಭಿಸಿತು. 

ದಿನಗಳು ಕಳೆದಂತೆ, ದೀಪಸ್ತಂಭದ ಪಾಲಕನು ಬೈಬಲ್ ಓದುವುದನ್ನು ಮತ್ತು ಪ್ರಾರ್ಥಿಸುವುದನ್ನು ಮುಂದುವರೆಸಿದನು, ಅವನು ತನ್ನಲ್ಲಿನ ಆ ಹೊಸ ನಂಬಿಕೆಯನ್ನು ಪೋಷಿಸುತ್ತಿದ್ದನು. ಇದರಿಂದ  ತನ್ನೊಳಗೆ ಆಗುತ್ತಿರುವ ಆಳವಾದ ಬದಲಾವಣೆಯನ್ನು ಅವನು ಗಮನಿಸಿದನು; ಅವನ ಆತ್ಮವು ಒಮ್ಮೆ ದೀಪಸ್ತಂಭದ ಬೆಳಕು ಮಾಡಿದಂತೆ ಪ್ರಕಾಶಮಾನವಾಗಿ ಹೊಳೆಯುತ್ತಿರುವಂತೆ ತೋರುತ್ತಿತ್ತು. 

ದೀಪಸ್ತಂಭದ ಪಾಲಕನು ಕೊನೆಗೂ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿ ದೀಪಸ್ತಂಭದ ಬೆಳಕನ್ನು ಪುನರುಜ್ಜೀವನಗೊಳಿಸಿದಾಗ, ಅವನು ಅನುಭವಿಸಿದ ರೂಪಾಂತರವು ದೀಪಸ್ತಂಬವು ನೀರಿನ ಮೂಲಕ ಹಡಗುಗಳನ್ನು ಸುರಕ್ಷಿತವಾಗಿ ಮುನ್ನಡೆಸುವಂತೆ, ತನ್ನ ಸ್ವಂತ ಜೀವನವನ್ನು ಸಹ ಮಾರ್ಗದರ್ಶಿಸುತ್ತದೆ ಎಂಬುದು ಅವನಿಗೆ ತಿಳಿದುಬಂತು. ದೇವಾಲಯದೊಳಗಿನ ಅತೀ ಪರಿಶುದ್ಧ  ಸ್ಥಳದಂತೆ ಅವನ ಆತ್ಮವು ಈಗ ದೈವಿಕ ಪ್ರಸನ್ನತೆಗೆ ವಾಸಸ್ಥಾನವಾಯಿತು.

ನಾವು ನಮ್ಮ ಆತ್ಮೀಕ ಜೀವನವನ್ನು ಬೆಳೆಸಿಕೊಳ್ಳುತ್ತಾ ಹೋದಂತೆ, ನಮ್ಮ ಆತ್ಮೀಕ ಮನುಷ್ಯನಿಂದ ಹೊರಹೊಮ್ಮುವ ರೂಪಾಂತರವನ್ನು ಸಹ ನಾವು ಅನುಭವಿಸುವವರಾಗಿ, ಅದು ನಮ್ಮ ಆಲೋಚನೆಗಳು, ಭಾವನೆಗಳು ಮತ್ತು ಕ್ರಿಯೆಗಳ ಮೇಲೆ ಪ್ರಭಾವ ಬೀರುತ್ತದೆ. ಈ ಪ್ರಕ್ರಿಯೆಯುನಮ್ಮನ್ನು ಇನ್ನೂ ಹೆಚ್ಚು ಹೆಚ್ಚಾಗಿ  ಕ್ರಿಸ್ತನಂತೆ ಆಗಲು ಅನುವು ಮಾಡಿಕೊಟ್ಟು , ನಮ್ಮ ದೈನಂದಿನ ಜೀವನದಲ್ಲಿ ನಮ್ಮ ರಕ್ಷಕನ ಪ್ರೀತಿ, ಸಹಾನುಭೂತಿ ಮತ್ತು ಕೃಪೆಯನ್ನು ಇನ್ನೂ ಹೆಚ್ಚಾಗಿ ಸಾಕಾರಗೊಳಿಸುತ್ತದೆ. 

Bible Reading: 1 Kings 9-10
Prayer
ಪರಲೋಕದ ತಂದೆಯೇ, ನಮ್ಮೊಳಗೆ ವಾಸಿಸಲು ಮತ್ತು ನಮ್ಮನ್ನು ನಿಮ್ಮ ನಡೆದಾಡುವ ದೇವಾಲಯಗಳನ್ನಾಗಿ ಮಾಡಲು ಆಯ್ಕೆ ಮಾಡಿಕೊಂಡದ್ದಕ್ಕಾಗಿ ಸ್ತೋತ್ರ. ಈ ದೈವಿಕ ಸಂಪರ್ಕದ ಮಹತ್ವವನ್ನು ಗುರುತಿಸಲು ನಮಗೆ ಯೇಸುನಾಮದಲ್ಲಿ  ಸಹಾಯ  ಮಾಡಿ. ಆಮೆನ್!

Join our WhatsApp Channel


Most Read
● ಮೂರ್ಖತನದಿಂದ ನಂಬಿಕೆಯನ್ನು ಪ್ರತ್ಯೇಕಿಸುವುದು
● ದೈವೀಕ ಅನುಕ್ರಮ -2
● ದೇವರ ಪರಿಪೂರ್ಣ ಚಿತ್ತಕ್ಕಾಗಿ ಪ್ರಾರ್ಥಿಸಿರಿ
● ಕೃತಜ್ಞತೆಯ ಯಜ್ಞ
● ದೇವರು ಹೇಗೆ ಒದಗಿಸುತ್ತಾನೆ #4
●  ದಿನ 26:40ದಿನಗಳ ಉಪವಾಸ ಪ್ರಾರ್ಥನೆ
● ಸತ್ಯವೇದ ಆಧಾರಿತ ಸಮೃದ್ಧಿಯನ್ನು ಹೊಂದಲಿರುವ ರಹಸ್ಯ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login