हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಬೀಜದಲ್ಲಿರುವ ಶಕ್ತಿ -2
Daily Manna

ಬೀಜದಲ್ಲಿರುವ ಶಕ್ತಿ -2

Friday, 17th of May 2024
3 0 405
Categories : ಬೀಜದಲ್ಲಿರುವ ಶಕ್ತಿ ( power of the Seed)
ನಾವೀಗ "ಬೀಜದಲ್ಲಿರುವ ಶಕ್ತಿ" ಎಂಬ ಸರಣಿಯ ಅಧ್ಯಯನವನ್ನು ಮುಂದುವರಿಸುತ್ತಾ ಇಂದು ನಾವು ವಿವಿಧ ರೀತಿಯ ಬೀಜಗಳನ್ನು ನೋಡೋಣ.

3.ತಲಾಂತುಗಳು ಮತ್ತು ಸಾಮರ್ಥ್ಯಗಳು.
ಪ್ರತಿಯೊಬ್ಬ  ಸ್ತ್ರೀ -ಪುರುಷರಲ್ಲಿ ದೇವರು ತಲಾಂತುಗಳನ್ನು ಮತ್ತು ವಿಶೇಷ ಸಾಮರ್ಥ್ಯಗಳನ್ನು ಹುದುಗಿಸಿಟ್ಟಿದ್ದಾನೆ. ಅವುಗಳನ್ನು ಸಹ "ಬೀಜ" ಎನ್ನಬಹುದು. ನಿಮ್ಮಲ್ಲಿ ಕೆಲವರು ವಾಕ್ಚತುರ್ಯ ಉಳ್ಳವರಾಗಿರಬಹುದು, ಕೆಲವರು ಉತ್ತಮ ಬರವಣಿಗೆಗಾರಾಗಿರಬಹುದು ಮತ್ತು ಇತ್ಯಾದಿ.

ದೇವರು ಪ್ರತಿಯೊಬ್ಬರಲ್ಲೂ  ಲೋಕದ ಒಳಿತುಗಾಗಿ ಒಂದಲ್ಲ ಒಂದು ತಲಾಂತುಗಳನ್ನು ಇಟ್ಟಿರುತ್ತಾನೆ. ದೇವರು ನಿಮ್ಮೊಳಗೆ ಹುದುಗಿಸಿ ಇಟ್ಟಿರುವ ದಾಸ್ತಾನುಗಳನ್ನು ಪರಿಶೋಧಿಸುವ ಸಮಯ ಇದಾಗಿದೆ. "ನಾವೇನೂ ಅಲ್ಲದವರು, ನಮ್ಮ ಬಳಿ ಏನೂ ಇಲ್ಲ" ಎಂದು ಎಂದಿಗೂ ಹೇಳಬೇಡಿರಿ. ಇದು ಕೇಳಲೇನೋ  ಹಿತಕರವಾದದ್ದು ದೀನತೆಯಿಂದ ಕೂಡಿದ್ದು ಎಂದು  ಎನಿಸಬಹುದು. ಆದರೆ ಸತ್ಯವೇನೆಂದರೆ ದೇವರು ನಿಮ್ಮೊಳಗೆ ಯಾವುದಾದರೂ ತಲಾಂತ್ತುಗಳನ್ನು ಸಾಮರ್ಥ್ಯಗಳನ್ನು ಇಟ್ಟೆ ಇಟ್ಟಿರುತ್ತಾನೆ. ನೀವು ಮತ್ತು ನಾನು ಪ್ರತಿದಿನ "ಕರ್ತನೇ  ನನ್ನೊಳಗಿಟ್ಟಿರುವ ಬೀಜವನ್ನು (ವರಗಳನ್ನು -ಸಾಮರ್ಥ್ಯಗಳನ್ನು) ಕಂಡುಕೊಳ್ಳುವಂತೆ ಅರಿತುಕೊಳ್ಳುವಂತೆ ಯೇಸು ನಾಮದಲ್ಲಿ ನನ್ನ ಕಣ್ಣುಗಳನ್ನು ತೆರೆಮಾಡು" ಎಂದು ಪ್ರಾರ್ಥಿಸಬೇಕು.

ಒಂದು ದೊಡ್ಡ ಸಮಸ್ಯೆ ಏನೆಂದರೆ ನಾವುಗಳು ಯಾವಾಗಲೂ ಇನ್ನೊಬ್ಬರ ಬಳಿಯಲ್ಲಿರುವ ಬೀಜವನ್ನು ನೋಡುತ್ತಿರುತ್ತೇವೆ ಮತ್ತು ಅವುಗಳು ನಮ್ಮದಾಗ ಬಾರದೇ ಎಂದು ನಿರೀಕ್ಷಿಸುತ್ತಿರುತ್ತೇವೆ. ಯಾರಿಗೆ ಏನನ್ನು ಕೊಡಬೇಕೆಂದು ದೇವರಿಗೆ ಗೊತ್ತು. ನಾವು ಹೊಟ್ಟೆಕಿಚ್ಚು ಪಡುವಾಗ ಅಥವಾ ಬೇರೆಯವರಿಗೆ ದೇವರು ಕೊಟ್ಟ ಬೀಜವನ್ನು ನೋಡಿ ಅಭದ್ರತೆಯನ್ನು  ಅನುಭವಿಸುವಾಗ ನಮ್ಮೊಳಗಿರುವ ಬೀಜವು ಉಪಯೋಗಿಸಲ್ಪಡದೇ ಸಮರ್ಪಕವಾಗಿ ಬಳಕೆಯಾಗದೇ ನಮ್ಮೊಳಗೆ ಉಳಿದುಬಿಡುತ್ತದೆ.

ಬಹಶಃ  ಒಂದೇ ಒಂದು ತಲಾಂತು ಸಿಕ್ಕ ಮನುಷ್ಯನು ಬೇರೆಯವರಿಗೆ ಕೊಟ್ಟ ತಲಾಂತಗಳನ್ನು ಕುರಿತು ಕರಬುತ್ತಾ ಅಭದ್ರತೆಯನ್ನು ಅನುಭವಿಸುತ್ತಾ ಇದ್ದನೇನೋ?. ಆದರೆ ಸತ್ಯವೇನೆಂದರೆ ಅವನು ಅವನಿಗಾಗಿ ಕೊಟ್ಟ ಒಂದು ತಲಾಂತನ್ನು ಸಮರ್ಪಕವಾಗಿ ಬಳಕೆ ಮಾಡಿದ್ದರೆ ಅದು ವೃದ್ಧಿಯಾಗುತ್ತಿತ್ತು ಮತ್ತು ಅವನು ದೇವರಿಂದ "ಭಲಾ, ನೀನು ನಂಬಿಗಸ್ತನಾದ ಆಳು" ಎಂದು ಹೇಳಿಸಿಕೊಳ್ಳುತ್ತಿದ್ದ. (ಮತ್ತಾಯ 25:14-30)

ಈಗ  ನೀವೊಂದು ಹಳ್ಳಿಯಲ್ಲಿರಬಹುದು ಇಲ್ಲ ಗಣನೆಗೆ ಬಾರದ ಸ್ಥಳದಲ್ಲಿರಬಹುದು ದೇವರು ನಿಮ್ಮೊಳಗೆ ಹುದುಗಿಸಿಟ್ಟಿರುವ ಬೀಜದ ಕಾರಣದಿಂದಾಗಿ ನೀವು ಗಣ್ಯ ವ್ಯಕ್ತಿಗಳ ಮುಂದೆ ನಿಲ್ಲುವವರು ಆಗುತ್ತೀರಿ ಎಂದು ಯೇಸು ನಾಮದಲ್ಲಿ  ಪ್ರವಾದನೆ ನುಡಿಯುತ್ತೇನೆ.

ಜನರು ಯೇಸುವನ್ನು ನೋಡುವಾಗ ಮತ್ತು ಆತನ ಹಿನ್ನೆಲೆಯನ್ನು ನೋಡುವಾಗ ಆತನು ಬಂದದ್ದು ನಜರೇತಿನಿಂದ (ಒಂದು ಅಸ್ಪಷ್ಟವಾದ ಸ್ಥಳದಿಂದ) ಎಂಬ ಸತ್ಯವನ್ನು ತಿಳಿದಾಗ "ನಜರೇತಿನಿಂದ ಒಳ್ಳೆಯದೇನಾದರೂ ಬಂದೀತೆ?"ಎಂದು ಹೇಳಿದರು. (ಯೋಹಾನ 1:46). ಅವರೆಂಥ ತಪ್ಪಾದ ಗ್ರಹಿಕೆಯಲ್ಲಿದ್ದರಲ್ಲವೇ!

"ಮನುಷ್ಯರಲ್ಲಿನ (ವರಗಳು) ಕಾಣಿಕೆಯು ಅನುಕೂಲತೆಗೂ, ಶ್ರೀಮಂತರ ಸಾನಿಧ್ಯ ಪ್ರವೇಶಕ್ಕೂ ಸಾಧನ"(ಜ್ಞಾನೋಕ್ತಿ 18:16)

ನಿಮ್ಮ ಸ್ಥಳ ನಿಮ್ಮ ಅಂತಸ್ತು ಇಂದು ಎಲೆಮರೆಯ ಕಾಯಿಯಂತೆ ಮರೆಯಾಗಿರಬಹುದು. ಆದರೆ ನಿಮ್ಮ ಸಾಮರ್ಥ್ಯದ ಕಾರಣದಿಂದಾಗಿ ದೇವರು ನಿಮ್ಮಲ್ಲಿ ಇಟ್ಟಿರುವ ತಲಾಂತುಗಳ ಕಾರಣದಿಂದಾಗಿ ಅವು ನಿಮಗೆ ಅನುಕೂಲತೆಯನ್ನು ಮಾಡಿಕೊಡುತ್ತದೆ. ಜನರು ನಿಮಗೆ ಅನುಕೂಲತೆಯನ್ನು ಮಾಡಿಕೊಡುವುದಿಲ್ಲ ಆದರೆ ನಿಮ್ಮೊಳಗಿರುವ ತಲಾಂತುಗಳೇ ನಿಮಗೆ ಅನುಕೂಲತೆ ಮಾಡಿಕೊಡುತ್ತವೆ.

ಪ್ರಸ್ತುತ ಇಂದು ಭೂಮಿಯ ಮೇಲೆ 750 ಕೋಟಿ ಜನರಿದ್ದಾರೆ ಆದರೆ ಪ್ರತಿಯೊಬ್ಬರೂ ವಿಶೇಷವಾದವರೂ, ವಿಶಿಷ್ಟವಾದವರೂ, ಅಸಲಿಯಾದವರೂ ಆಗಿದ್ದಾರೆ.

ದೇವರು ಭೂಮಿಯ ಮೇಲೆ ನಮಗಿರುವ ವಿಶೇಷ ಕರೆಯನ್ನು ನೆರವೇರಿಸಲು ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ತಲಾಂತುಗಳನ್ನು ಮತ್ತು ಸಾಮರ್ಥ್ಯಗಳನ್ನು ಠೇವಣಿಯಾಗಿ ಇಟ್ಟಿದ್ದಾನೆ. 

ನಿಮ್ಮ ಸ್ವಂತ ಕನಸುಗಳು ನೀವು ಇತರರ ಹೃದಯಗಳಲ್ಲಿ ಬಿತ್ತಲಿರುವ ವಿಶೇಷ ಬೀಜಗಳಾಗಿವೆ ಎಂಬುದನ್ನು ಯಾವಾಗಲೂ ನೆನಪಿಡಿರಿ. ನಿಮ್ಮ ಕನಸುಗಳನ್ನು ನೀವು ಇತರರೊಂದಿಗೆ ಹಂಚಿಕೊಳ್ಳುವಾಗ ಅವರೂ ಸಹ ಅದರ ಕುರಿತು ಉತ್ಸುಕರಾಗುವ ಮತ್ತು ರೋಮಾಂಚನಗೊಳ್ಳುವ ವ್ಯಕ್ತಿಗಳಾಗಿದ್ದರೆ ನಿಮ್ಮ ದರ್ಶನಗಳನ್ನು ಬೆಂಬಲಿಸಲು ದೇವರು ಕಳುಹಿಸಿದ ಜನರು ಅವರಾಗಿರುತ್ತಾರೆ ಎಂಬುದನ್ನು ತಿಳಿದುಕೊಳ್ಳಿರಿ. ಕೆಲವರಿಗೆ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿರಲಿ ಕಿವಿಗೊಡಲೂ ಸಹ ಸಿದ್ದರಿರುವುದಿಲ್ಲ. ಸಾಮಾನ್ಯವಾಗಿ ಇಂಥವರು ನಿಮ್ಮ ಅತ್ಯಂತ ಸಮೀಪದಲ್ಲಿರುವ ವ್ಯಕ್ತಿಗಳೇ ಆಗಿರುತ್ತಾರೆ.

ನೀವಿಂತಹ ತಿರಸ್ಕಾರವನ್ನು ಅನುಭವಿಸುತ್ತಿದ್ದರೆ, ನೀವು ಧೃತಿಗೆಡಬೇಡಿರಿ, ನಿಮ್ಮ ಕನಸುಗಳನ್ನು ಸಮಾಧಿ ಮಾಡಬೇಡಿರಿ. ಒಬ್ಬ ಬುದ್ಧಿವಂತನಾದ ರೈತನು ತನ್ನ ಹೊಲದಲ್ಲಿ ಬೀಜ ಬಿತ್ತುವ ಮುನ್ನ ಸಾಕಷ್ಟು ಸಿದ್ಧತೆಯನ್ನು ಮಾಡಬೇಕೆಂದು ತಿಳಿದಿರುತ್ತಾನೆ. ಅದರಂತೆಯೇ ನಿಮ್ಮ ಸುತ್ತಲಿರುವವರ ಹೃದಯ ಮತ್ತು ಮನಸ್ಸಿಗೂ ಕೂಡ ಸಿದ್ಧತೆಯ ಅವಶ್ಯಕತೆ ಇರಬಹುದು. ಅದಕ್ಕಾಗಿ ತಾಳ್ಮೆಯಿಂದ ಕಾಯಿರಿ.

ಯೋಸೇಫನು ತನ್ನ ಕನಸುಗಳನ್ನು ತನ್ನ ಸಹೋದರರೊಡನೆ ಹಂಚಿಕೊಂಡಾಗ ಅವರು ಅದಕ್ಕಾಗಿ ಅವನನ್ನು ದ್ವೇಷಿಸಲಾರಂಭಿಸಿದರು.(ಆದಿಕಾಂಡ 37:8). ಕೆಲವರಿಗೆ ನೀವು ಅವರಿಗಿಂತಲೂ ಜೀವನದಲ್ಲಿ ಮುನ್ನಡೆ ಸಾಧಿಸುವಿರಿ ಎಂದು ಹೇಳಿದಾಗ ಅವರು ಸಹಿಸಲಾರರು ಮತ್ತು ನೀವು ಯಾವುದನ್ನು ಉತ್ಸುಕತೆಯಿಂದ ಹೇಳುತ್ತಿದ್ದೀರೋ ಅದನ್ನು ಕೇಳಲು ಅವರಿಗೆ ಇಷ್ಟವಾಗುವುದಿಲ್ಲ. ನೀವು ನಿಜವಾಗಿಯೂ ಯಾರನ್ನಾದರೂ ಸಂಪೂರ್ಣವಾಗಿ ನಂಬುವಂತ ವ್ಯಕ್ತಿಗಳಿಗೆ ಬೇಕಿದ್ದರೆ ನಿಮ್ಮ ಕನಸುಗಳ ಕುರಿತು ಹೇಳಿರಿ. ಆದರೆ ಸಿಕ್ಕಸಿಕ್ಕವರಿಗೆಲ್ಲ ನಿಮ್ಮ ಕನಸುಗಳನ್ನು ಹಂಚಿಕೊಳ್ಳುತ್ತಾ ಹೋಗಬೇಡಿರಿ.

4. ಹಣಕಾಸಿನ ಮತ್ತು ಭೌತಿಕ ವಸ್ತುಗಳ ಬೀಜಗಳು.
ನಮ್ಮ ಹಣಕಾಸು ಹಾಗೂ ಭೌತಿಕ ವಸ್ತುಗಳು ಸಹ ದೇವರು ನಮ್ಮ ಮೇಲೆ ಭರವಸೆ ಇಟ್ಟು ನಮಗೆ ಅನುಗ್ರಹಿಸಿರುವ ಬೀಜವಾಗಿದೆ.ನಾವು ವಿಧೇಯತೆಯ ಮೂಲಕ ತ್ಯಾಗದ ಮೂಲಕ ಸಮೃದ್ಧಿಯನ್ನು ಅದರಲ್ಲಿ ತರಬಹುದು.
ದೇವರ ಕಾರ್ಯಗಳಿಗೆ ಯೋಚಿಸದೆ ಎಷ್ಟು ಕೊಡುತ್ತೇವೆಯೋ, ಅದು 10ರೂ ಆಗಿರಲಿ 10,000 ಆಗಿರಲಿ ಲೂಕ21:1-4ರಲ್ಲಿ ಕರ್ತನಾದ ಯೇಸು, ಕಾಣಿಕೆ ಪೆಟ್ಟಿಯಲ್ಲಿ  ತನಗಿದ್ದದನ್ನೆಲ್ಲಾ  ತ್ಯಾಗಪೂರ್ವಕವಾಗಿ ಕಾಣಿಕೆಯಾಗಿ ಒಬ್ಬ ವಿಧವೆಯು  ಅರ್ಪಿಸಿದ ಎರಡು ಕಾಸುಗಳ ವಿಚಾರದಲ್ಲಿ ಅದನ್ನು ಸ್ಪಷ್ಟವಾಗಿ ಹೇಳಿದ್ದಾನೆ.

ಬೀಜಗಳೆಂದರೆ ಕೇವಲ ಹಣ್ಣುಗಳಿಗೆ ಮತ್ತು ಮರಗಳಿಗೆ ಮಾತ್ರ ಸೀಮಿತವಾದುದಲ್ಲ. ಆದರೆ ಹಣ್ಣುಗಳು ಮತ್ತು ಮರಗಳು ಸಹ ಬೀಜಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಕುರಿತು ಉತ್ತಮ ತಿಳುವಳಿಕೆಯನ್ನು ನಮಗೆ ನೀಡುತ್ತದೆ.

ನಮಗೆ ಸಮೃದ್ಧಿ ತರುವ ಬೀಜವಾಗಿ ಹಣವನ್ನು ನಾವು ನೋಡುವವರೆಗೂ ಅಲೌಕಿಕ ಪೂರೈಕೆಯು ಒಂದು ರಹಸ್ಯವಾಗಿಯೇ ಉಳಿಯುತ್ತದೆ. ಕೆನ್ನೆತ್ -ಇ -ಹ್ಯಾಗಿನ್ ಎಂಬ  ಒಬ್ಬ ದೇವ ಮನುಷ್ಯರು "ಹಣಕಾಸಿನ ವಿಷಯದಲ್ಲಿ ದೇವರನ್ನು ನಂಬುವುದಕ್ಕಿಂತ ಹೆಚ್ಚು ಕಷ್ಟಕರವಾದ ನಂಬಿಕೆಯ ಕ್ಷೇತ್ರ ಇನ್ನೊಂದಿಲ್ಲ. ಒಬ್ಬ ಕ್ರೈಸ್ತನು ಹಣಕಾಸಿನ ವಿಚಾರದಲ್ಲಿ ದೇವರನ್ನು ನಂಬುವಂತದ್ದು ಅವನಿಗೆ ಬಹಳ ಕಷ್ಟಕರವಾದ ಸಂಗತಿ ಆಗಿದೆ. ಒಬ್ಬ ಕ್ರೈಸ್ತನು ದೇವರ ರಾಜ್ಯಕ್ಕೆ ಅಗತ್ಯವಿರುವ ಬೀಜಗಳನ್ನು ಬಿತ್ತಲು ಇಲ್ಲವೇ ಅಗತ್ಯವಿರುವ ವ್ಯಕ್ತಿಗೆ ಸಹಾಯ ಮಾಡುವುದನ್ನು ಕಲಿತಾಗ ಹಣಕಾಸಿನ ಸಮೃದ್ಧಿಗಾಗಿ ದೇವರ ಮೇಲೆ ಭರವಸೆ ಇಡುವಂತದ್ದು ಇದ್ದಕ್ಕಿದ್ದಂತೆ ಹೆಚ್ಚು ಸುಲಭವಾಗುತ್ತದೆ ಎಂದು ಹೇಳಿದ್ದಾರೆ.

ಆ ವಿಧವೆಯು ತನ್ನ ಹಣಕಾಸಿನ ಬೀಜವನ್ನು ಬಿತ್ತುವಾಗ ಕರ್ತನ (ಭೂಮಿ ಆಕಾಶಗಳಲ್ಲಿರುವ ಎಲ್ಲವನ್ನು ಉಂಟು ಮಾಡಿದವನ... ಕೊಲಸ್ಸೆ 1:16) ಕಣ್ಣುಗಳು ಆಕೆಯನ್ನು ದೃಷ್ಟಿಸಿತು ಎಂದು ದೇವರ ವಾಕ್ಯ ಹೇಳುತ್ತದೆ.

ಭೂಮ್ಯಾಕಾಶಗಳ ಸೃಷ್ಟಿ ಕರ್ತನ ಗಮನವನ್ನು ಆಕೆಯು ಬಿತ್ತಿದ ಒಂದು ಬೀಜ ಸೆಳೆಯಿತು. ಅದುವೇ ಬೀಜದಲ್ಲಿರುವ ಶಕ್ತಿಯಾಗಿದೆ.
Confession
ತಂದೆಯೇ, ನೀನು ನನ್ನೊಳಗೆ ಹುದುಗಿಸಿಟ್ಟಿರುವ ತಲಾಂತು ಗಳಿಗಾಗಿ ಸಾಮರ್ಥ್ಯಗಳಿಗಾಗಿ ನಿನಗೆ ಸ್ತೋತ್ರ. ನನ್ನಲ್ಲಿರುವ ಹಣವು ಬೀಜವಾಗಿದೆ. ನಾನದನ್ನು ಬಿತ್ತುವಾಗ ಮಹತ್ತರವಾದ ಹಣಕಾಸಿನ ಬಿಡುಗಡೆಯನ್ನು ನಾನು ನೋಡುವೆನು ಎಂದು ಯೇಸು ನಾಮದಲ್ಲಿ ನಂಬುತ್ತೇನೆ ಆಮೇನ್.


Join our WhatsApp Channel


Most Read
● ಕಾವಲುಗಾರನು
● ನಿಮ್ಮ ಮಾರ್ಗದರ್ಶಕರು ಯಾರು - |
● ಕನಸು ಕಾಣುವ ಧೈರ್ಯ
● ಭೂರಾಜರುಗಳ ಒಡೆಯನು
● ಭಾವನಾತ್ಮಕ ರೋಲರ್ ಕೋಸ್ಟರ್ ಗೆ ಬಲಿಪಶು.
● ನೀವು ದೇವರ ಉದ್ದೇಶಕ್ಕಾಗಿ ನಿಯೋಜಿಸಲ್ಪಟ್ಟಿದ್ದೀರಿ
● ಪಾಪದ ಕುಷ್ಠರೋಗದೊಂದಿಗೆ ವ್ಯವಹರಿಸುವುದು.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login