हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ನಿನ್ನೆಯದನ್ನು ಮರೆತು ಬಿಟ್ಟು ಮುಂದೆ ಸಾಗುವುದು
Daily Manna

ನಿನ್ನೆಯದನ್ನು ಮರೆತು ಬಿಟ್ಟು ಮುಂದೆ ಸಾಗುವುದು

Thursday, 20th of November 2025
2 1 114
Categories : ಭವಿಷ್ಯ (Future) ಹಿಂದಿನ (Past)
"ಹಿಂದಿನ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಬೇಡಿರಿ, ಪುರಾತನ ಕಾರ್ಯಗಳನ್ನು ಮರೆತುಬಿಡಿರಿ. ಇಗೋ, ಹೊಸ ಕಾರ್ಯವನ್ನು ಮಾಡುವೆನು, ಈಗ ತಲೆದೋರುತ್ತಲಿದೆ. ಇದು ನಿಮಗೆ ಕಾಣುವುದಿಲ್ಲವೋ? ನಾನು ಅರಣ್ಯದಲ್ಲಿ ಮಾರ್ಗವನ್ನು ಏರ್ಪಡಿಸಿ, ಅರಣ್ಯದಲ್ಲಿ ನದಿಗಳನ್ನು ಹರಿಸುವೆನು." (ಯೆಶಾಯ 43:18-19) 

ಜೀವನವು ಸಾಕಷ್ಟು ಪಾಲು ಏರಿಳಿತಗಳು, ಸೂರ್ಯಾಸ್ತ ಮತ್ತು ಸೂರ್ಯೋದಯಗಳನ್ನು ಹೊಂದಿದೆ. ನಿನ್ನೆಯ ತೊಂದರೆಗಳಲ್ಲಿ ಸಿಲುಕಿಕೊಂಡ ಮುಳ್ಳುಗಳಿಂದ ಹೊರಬಂದಾಗ  ಮಾತ್ರ ಅದು ಸುಂದರ ಪ್ರಯಾಣ. ನಮ್ಮಲ್ಲಿ ಅದೆಷ್ಟು ಮಂದಿಯ ನಿದ್ರೆ ಅಪಹರಿಸಲ್ಪಟ್ಟು ರಾತ್ರಿಯಲ್ಲಿ ಎಚ್ಚರವಾಗಿದ್ದು, ವಿಷಾದ, ವೈಫಲ್ಯ ಅಥವಾ ಪರಿಹರಿಸಲಾಗದ ಸಮಸ್ಯೆಗಳಿಂದ ಬಳಲುತ್ತಿರಬಹುದು? ನಮ್ಮಲ್ಲಿ ಎಷ್ಟು ಮಂದಿ ನಿನ್ನೆಯ ಶಾಯಿಯಿಂದಲೇ ಹೊಸ ಬೆಳಿಗ್ಗೆ ಕಲೆ ಹಾಕಲ್ಪಟ್ಟವರಂತೆ ಎಚ್ಚರಗೊಳ್ಳುತ್ತೇವೆ? 

ನೆನಪಿಡಿ, ಸೂರ್ಯಾಸ್ತವು ಅಂತ್ಯ ಮತ್ತು ಅದುವೇ ಆರಂಭವಾಗಿದೆ; ಇದು ಮುಕ್ತಾಯವನ್ನು ಸೂಚಿಸುತ್ತದೆ ಆದರೆ ಹೊಸ ಉದಯದ ಭರವಸೆಯನ್ನು ಸಹ ಹೊಂದಿದೆ. ಹಿಂದಿನ ಘಟನೆಗಳ ಮೇಲೆ ಯೋಚಿಸುವುದು ಒಂದು ಅಡಚಣೆಯಾಗಿ ಕಾರ್ಯನಿರ್ವಹಿಸುವಂತದ್ದಾಗಿದ್ದು, ಸಂತೋಷದಾಯಕ ಮತ್ತು ತೃಪ್ತಿಕರ ವರ್ತಮಾನದ ಹಾದಿಯನ್ನು ತಡೆಯುತ್ತದೆ. ನಾವು ನಮ್ಮ ಕಣ್ಣುಗಳನ್ನು ಹಿಂಬದಿಯ ಕನ್ನಡಿಗೆ ಅಂಟಿಸಿದಾಗ, ನಮ್ಮ ಮುಂದಿರುವ ಅದ್ಭುತ ನೋಟವನ್ನು ನಾವು ಕಳೆದುಕೊಳ್ಳುತ್ತೇವೆ.

ಬೈಬಲ್ ವಿಮೋಚನೆ ಮತ್ತು ಹೊಸ ಆರಂಭಗಳ ಕಥೆಗಳಿಂದ ತುಂಬಿದೆ. ಒಂದು ಕಾಲದಲ್ಲಿ ಕ್ರೈಸ್ತರ ಹಿಂಸಕನಾಗಿದ್ದ ಅಪೊಸ್ತಲ ಪೌಲನನ್ನು ಪರಿಗಣಿಸಿ. ಡಮಾಸ್ಕಸ್‌ಗೆ ಹೋಗುವ ದಾರಿಯಲ್ಲಿ ಕರ್ತನಾದ ಯೇಸುವಿನೊಂದಿಗೆ ಆದ ದೈವಿಕ ಭೇಟಿಯ ನಂತರ, ಪೌಲನ ಜೀವನವು ತೀವ್ರ ಬದಲಾವಣೆಗೆ ಒಳಗಾಯಿತು. ಅವನು ತನ್ನ ಹಳೆಯ ಗುರುತನ್ನು ತೊಡೆದುಹಾಕಲು ಸಾಧ್ಯವಾಗದಿದ್ದರೆ ಏನಾಗುತಿತ್ತು ಊಹಿಸಿ. ಪೌಲನು ತನ್ನ ಹಿಂದಿನ ಕ್ರಿಯೆಗಳ ಕುರಿತೇ ಯೋಚಿಸಸುತ್ತಿದ್ದ್ದರೆ, ಅವನು ಎಂದಿಗೂ ಹೊಸ ಒಡಂಬಡಿಕೆಯ ಮಹತ್ವದ ಭಾಗವನ್ನು ಬರೆಯುತ್ತಿರಲಿಲ್ಲ ಮತ್ತು ಕ್ರೈಸ್ತ ಧರ್ಮದ ಶ್ರೇಷ್ಠ ಅಪೊಸ್ತಲರಲ್ಲಿ ಒಬ್ಬನಾಗುತ್ತಿರಲಿಲ್ಲ.

 ಪವಿತ್ರಾತ್ಮನಿಂದ ಪ್ರೇರಿತನಾಗಿ ಅವನು ಬರೆದಿದ್ದೇನೆಂದರೆ, " ಆದ್ದರಿಂದ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾಗಿದ್ದಾನೆ. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು.(2 ಕೊರಿಂಥ 5:17 )

 ಇದು ಇಂದಿರುವ ಆಶೀರ್ವಾದಗಳನ್ನು ಕಳೆದುಕೊಳ್ಳುವುದರ ಕುರಿತು ಮಾತ್ರವಲ್ಲದೇ ಕೆಲವೊಮ್ಮೆ, ಹಿಂದಿನದನ್ನು ನೆನಪಿಸಿಕೊಳ್ಳುವುದು ಕಹಿ, ಆತಂಕ ಮತ್ತು ನಕಾರಾತ್ಮಕತೆಯ ಬೀಜಗಳು ಬೆಳೆಯಲು ಫಲವತ್ತಾದ ನೆಲವನ್ನು ಒದಗಿಸುತ್ತದೆ. ಯೋಬನ ಪುಸ್ತಕದಲ್ಲಿ, ಎಲ್ಲವನ್ನೂ ಕಳೆದುಕೊಂಡ ವ್ಯಕ್ತಿಯನ್ನು ನಾವು ನೋಡುತ್ತೇವೆ - ಅವನ ಆರೋಗ್ಯ, ಅವನ ಸಂಪತ್ತು ಮತ್ತು ಅವನ ಕುಟುಂಬ. ಅವನು ತನ್ನ ಸಂಕಷ್ಟವನ್ನು ಪ್ರಶ್ನಿಸುವಾಗ ಮತ್ತು ದುಃಖಿಸುವಾಗ, ಅವನು ಹತಾಶೆಯು ಅವನನ್ನು ಜಯಿಸಲು ಬಿಡಲಿಲ್ಲ. ಅಂತಿಮವಾಗಿ, ಅವನು ನಂಬಿಗಸ್ತನಾಗಿದ್ದರಿಂದ ಮಾತ್ರವಲ್ಲದೇ, ಅವನು ತನ್ನ ಹಿಂದಿನ ದುಃಖದಲ್ಲಿಯೇ ಸಿಲುಕಿಕೊಳ್ಳಲಿಲ್ಲ ಎಂಬ ಕಾರಣದಿಂದಾಗಿ.ಅವನ ಗತಿಯು ಎರಡರಷ್ಟು ಪುನಃಸ್ಥಾಪಿಸಲಾಯಿತು.

"ಇವರಿಗೆ ಒಳ್ಳೆಯದಾಗಲಿ, ನಿರೀಕ್ಷೆಯಿರಲಿ ಎಂದು ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆನು; ಅವು ಅಹಿತದ ಯೋಚನೆಗಳಲ್ಲ, ಹಿತದ ಯೋಚನೆಗಳೇ. (ಯೆರೆಮೀಯ 29:11) 

ದೇವರ ಪ್ರಿಯ ಮಗುವೇ, ಇದನ್ನು ಪರಿಗಣಿಸು: ಭೂತಕಾಲದ ಬಗ್ಗೆ ಯೋಚಿಸುವುದು ಸೈತಾನನೊಂದಿಗೆ ಒಪ್ಪಂದ ಮಾಡಿಕೊಂಡಂತೆ, ಅವನನ್ನು ಕದಿಯಲು, ಕೊಲ್ಲಲು ಮತ್ತು ನಾಶಮಾಡಲು ಬರುವ ಕಳ್ಳ ಎಂದು ವಿವರಿಸಲಾಗಿದೆ (ಯೋಹಾನ 10:10). 

ನಾವು ಯಾವುದನ್ನು ಕೇಂದ್ರೀಕರಿಸಬೇಕೋ ಅದರ ಮೇಲೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸುವಾಗ, ನಾವು ನಮ್ಮ ಸಮಯವನ್ನು - ನಮ್ಮ ಅತ್ಯಂತ ಅಮೂಲ್ಯವಾದ, ನವೀಕರಿಸಲಾಗದ ಸಂಪನ್ಮೂಲವನ್ನು - ನಿನ್ನೆಯ ಯಜ್ಞವೇದಿಯ ಮೇಲೆ ಬಲಿಯಾಗಿ ಅರ್ಪಿಸುತ್ತೇವೆ. ಆದರೆ ಕರ್ತನಾದ ಯೇಸು ಬಂದದರಿಂದ ನಾವು ಜೀವನವನ್ನು ಸಮೃದ್ಧಿಯಾದ ಜೀವನವನ್ನು ಹೊಂದಬಹುದು.ಎದ್ದೇಳು! ದೇವರು ನಿನ್ನ ಜೀವನದಲ್ಲಿ ಹೊಸದನ್ನು ಮಾಡುತ್ತಿದ್ದಾನೆ.

Bible Reading: Acts 10-11
Prayer
ಅಮೂಲ್ಯ ಪರಲೋಕದ ತಂದೆಯೇ, ಇಂದಿನ ಕೃಪಾವರಕ್ಕಾಗಿ ನಿನಗೆ ಧನ್ಯವಾದಗಳು, ಅದು ನಿನ್ನೆಯ ತಪ್ಪುಗಳಿಂದ ಇನ್ನೂ ಕಳಂಕವಿಲ್ಲದ ಕ್ಯಾನ್ವಾಸ್ ಆಗಿದೆ. ಆದರಿಂದ ಇಲ್ಲಿ ಮತ್ತು ಈಗ ಎನ್ನುವಕಡೆಗೆ ಗಮನಹರಿಸಲು ನನಗೆ ಸಹಾಯ ಮಾಡಿ, ಪ್ರತಿದಿನ ಬೆಳಿಗ್ಗೆ ನಿಮ್ಮ ನೂತನ ಕೃಪೆಯನ್ನು ಅಳವಡಿಸಿಕೊಂಡು ಹಿಂದಿನ ಬಲೆಗಳಿಂದ ತಪ್ಪಿಸಿಕೊಂಡು ನಾಳೆಯ ನಿಮ್ಮ ವಾಗ್ದಾನಗಳ ಕಡೆಗೆ ನಡೆಯುವಂತೆ ನನ್ನನ್ನು ಮಾರ್ಗದರ್ಶಿಸು. ಆಮೆನ್.

Join our WhatsApp Channel


Most Read
● ನೀವು ಆತ್ಮಿಕವಾಗಿ ಸದೃಢರಾಗಿದ್ದೀರಾ?
● ದೇವರ 7 ಆತ್ಮಗಳು: ತಿಳುವಳಿಕೆಯ ಆತ್ಮ
● ದೇವರ ಕೃಪೆಯನ್ನು ಸೇದುವುದು
● ನಮ್ಮ ಮಧ್ಯದಲ್ಲಿ ಬೀಡುಬಿಟ್ಟಿರುವ ದೇವದೂತರು
● ದ್ವಾರ ಪಾಲಕರು / ಕೋವರ ಕಾಯುವವರು
● ನೀವು ಅವರ ಮೇಲೆ ಪ್ರಭಾವ ಬೀರಬೇಕು
● ದಿನ 03:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login