हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಮನಃಪೂರ್ವಕ ಹುಡುಕಾಟ
Daily Manna

ಮನಃಪೂರ್ವಕ ಹುಡುಕಾಟ

Sunday, 19th of October 2025
1 0 100
Categories : ದೇವರೊಂದಿಗೆ ಆತ್ಮೀಯತೆ (Intimacy with God)
ಒಬ್ಬ ಸ್ತ್ರೀಯು ಹತ್ತು ಬೆಳ್ಳಿ ನಾಣ್ಯಗಳನ್ನು ಹೊಂದಿದ್ದು ಅದರಲ್ಲಿ ಒಂದನ್ನು ಕಳೆದುಕೊಂಡಳು. ಕಳೆದುಹೋದ ನಾಣ್ಯವು ಕತ್ತಲೆಯಾದ, ಕಾಣದ ಸ್ಥಳದಲ್ಲಿದ್ದರೂ ಸಹ, ಅದರ ಮೌಲ್ಯವನ್ನು ಕಳೆದುಕೊಂಡಿರಲಿಲ್ಲ. "ಅವಳು ಆ ನಾಣ್ಯದ ಬೆಲೆ ತಿಳಿದವಳಾಗಿದ್ದಳು ." ನಮ್ಮ ಜೀವನದಲ್ಲಿಯೂ, ನಾವು ಕಳೆದುಹೋದವರೂ, ಗೊತ್ತಿಗೆ ಬಾರದವರೂ ಮತ್ತು ಅನರ್ಹರೂ ಎಂದು ಭಾವಿಸಿಕೊಂಡಿರಬಹುದು, ಆದರೆ ದೇವರ ದೃಷ್ಟಿಯಲ್ಲಿ, ನಮ್ಮ ಮೌಲ್ಯವು ಅಳೆಯಲಾಗದಂತದ್ದು.  "ನಾವಾದರೋ ದೇವರ ಕಲಾಕೃತಿಯಾಗಿದ್ದೇವೆ, ದೇವರು ಜಗದುತ್ಪತ್ತಿಗೆ ಮೊದಲೇ ನಮಗಾಗಿ ಸಂಕಲ್ಪಿಸಿದ್ದ ಸತ್ಕಾರ್ಯಗಳನ್ನು ಮಾಡುವವರಾಗಿ ಬದುಕಬೇಕೆಂದು ಯೇಸು ಕ್ರಿಸ್ತನಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ".(ಎಫೆಸ 2:10).

ಕತ್ತಲೆಯಲ್ಲಿ ಬೆಳಗುವ ಬೆಳಕು:
ಕಳೆದುಹೋದ ನಾಣ್ಯವನ್ನು ಹುಡುಕಿಕೊಂಡು ಹೋಗುವಾಗ, "ಅವಳು ಆ ಅಂಧಕಾರದ ಕಾರಣದಿಂದಾಗಿ ದೀಪವನ್ನು ಹಚ್ಚಿದಳು - ಆ ಬೆಳಗಿದ ಬೆಳಕು ನಾಣ್ಯವನ್ನು ಹುಡುಕುವುದಕ್ಕೆ ಅವಳಿಗೆ ಸಹಾಯ ಮಾಡಿತು." ಈ ಬೆಳಕು ದೇವರ ವಾಕ್ಯವೇ. ನಮ್ಮ ಮಾರ್ಗಗಳನ್ನು ಬೆಳಗಿಸುವ, ಗುಪ್ತವಾದದ್ದನ್ನು ಪ್ರಕಟಪಡಿಸುವ ಮತ್ತು ನಮ್ಮ ಆತ್ಮೀಕ ಪ್ರಯಾಣಗಳಲ್ಲಿ ಮಾರ್ಗದರ್ಶನವನ್ನು ಒದಗಿಸುವ ದೇವರವಾಕ್ಯದ ಸಂಕೇತವಾಗಿದೆ. ಆದರಿಂದಲೇ ಕೀರ್ತನೆಗಾರನು " ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ, ನನ್ನ ದಾರಿಗೆ ಬೆಳಕೂ ಆಗಿದೆ (ಕೀರ್ತನೆ 119:105) ಎಂದು ಘೋಷಿಸುತ್ತಾನೆ. 

ಈ ದೈವಿಕ ಬೆಳಕನ್ನು ಹೊಂದಿರುವ ನಾವೇ, ಸಭೆ, ಅದನ್ನು ಪ್ರಪಂಚದ ಕತ್ತಲೆಯಾದ ಮೂಲೆಗಳಿಗೆ ಪ್ರಸಾರ ಮಾಡುವ, ಗುಪ್ತ ನಿಧಿಗಳನ್ನು - ರಕ್ಷಣೆಗಾಗಿ ಹಂಬಲಿಸುವ ಕಳೆದುಹೋದ ಆತ್ಮಗಳನ್ನು ಪ್ರಕಟ ಪಡಿಸುವ ಕಾರ್ಯವನ್ನು ಹೊಂದಿದ್ದೇವೆ.

ತೀವ್ರವಾದ ಹುಡುಕಾಟ: 
ಆ ಸ್ತ್ರೀಯ ಹುಡುಕಾಟವು ಬೇಕಾಬಿಟ್ಟಿಯಾಗಿರಲಿಲ್ಲ; ಅದು ಉದ್ದೇಶಪೂರ್ವಕವಾಗಿಯೂ ಮತ್ತು ತೀವ್ರವಾಗಿತ್ತು. ಪವಿತ್ರಾತ್ಮನ ನೇತೃತ್ವದಲ್ಲಿ ನಡೆಯುವ ಪ್ರತಿಯೊಂದು ಸಭೆಯೂ, ಕಳೆದುಹೋದವರನ್ನು ಹುಡುಕುವಲ್ಲಿ ಈ ತೀವ್ರತೆಯನ್ನು ಪ್ರತಿಬಿಂಬಿಸಬೇಕು, ದೇವರು ಪ್ರತಿಯೊಬ್ಬ ವ್ಯಕ್ತಿಗೂ ಆತನು ವಿಸ್ತರಿಸುವ ಆತನ ಆಳವಾದ, ಗಹನವಾದ ಪ್ರೀತಿಯನ್ನು ಒತ್ತಿಹೇಳಬೇಕು. "ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬರಲು ನೀವು ಶಕ್ತಿಯನ್ನು ಹೊಂದಿದವರಾಗಿ ಯೆರೂಸಲೇಮಿನಲ್ಲಿಯೂ, ಯೂದಾಯದ ಎಲ್ಲಾ ಸ್ಥಳದಲ್ಲಿಯು, ಸಮಾರ್ಯ ಸೀಮೆಗಳಲ್ಲಿಯೂ, ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರುವಿರಿ” ಅಂದನು. (ಅ. ಕೃ 1:8). 

ಅದಕ್ಕಾಗಿಯೇ ನಾವು ಕರುಣಾ ಸದನ ಮಿನಿಸ್ಟರಿಯಲ್ಲಿ ಮಧ್ಯಸ್ಥಿಕೆಪ್ರಾರ್ಥನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಮಧ್ಯಸ್ಥಿಕೆ ಪ್ರಾರ್ಥನೆಯು ಸುವಾರ್ತೆಯನ್ನು ಹಂಚಿಕೊಳ್ಳುವಲ್ಲಿ ನಾವು ಪಟ್ಟುಬಿಡದೆ ಮತ್ತು ಉದ್ದೇಶಪೂರ್ವಕವಾಗಿರಲು ಅಗತ್ಯವಿರುವ ಅನುಗ್ರಹ ಮತ್ತು ಶಕ್ತಿಯನ್ನು ಬಿಡುಗಡೆ ಮಾಡುತ್ತದೆ, ಪ್ರತಿಯೊಂದು ಆತ್ಮವು ಕರ್ತನಿಗೆ ನಿಧಿಯಂತೆ ಇದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತದೆ.

ಪುನಃಸ್ಥಾಪನೆಯಲ್ಲಿರುವ ಸಂತೋಷ: 
ಆ ಸ್ತ್ರೀಯು ನಾಣ್ಯವನ್ನು ಕಂಡುಕೊಂಡಾಗ, ಅವಳೂ ಸಂತೋಷಪಟ್ಟು ತನ್ನ ನೆರೆಹೊರೆಯವರನ್ನೂ ತನ್ನ ಸಂತೋಷದಲ್ಲಿ ಸೇರಬೇಕೆಂದು ಕರೆದಳು. ಪಶ್ಚಾತ್ತಾಪಪಡುವ ಒಬ್ಬ ಪಾಪಿಯಿಂದಾಗಿ ಪರಲೋಕದಲ್ಲಿ ಉಂಟಾಗುವ ಸಂತೋಷವನ್ನು ಈ ಉತ್ಸಾಹಭರಿತ ಸಂತೋಷವು ಪ್ರತಿನಿಧಿಸುತ್ತದೆ. " ಅದರಂತೆ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯದಲ್ಲಿ ದೇವದೂತರ ಮುಂದೆ ಸಂತೋಷವಾಗುವುದೆಂದು ನಿಮಗೆ ಹೇಳುತ್ತೇನೆ”  (ಲೂಕ 15:10). ಕರ್ತನು ಮತ್ತು ಕಳೆದುಹೋದವರ ನಡುವಿನ ಪುನಃಸ್ಥಾಪಿಸಲಾದ ಸಂಬಂಧವು ಈ ದೈವಿಕ ಸಂಭ್ರಮಾಚಾರಣೆಗೆ ಒಂದು ಕಾರಣವಾಗಿದೆ, ಇದು ರಕ್ಷಣೆಯ ಶಾಶ್ವತ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ. 

ಇಂದು, ದೇವರು ನಮ್ಮಲ್ಲಿ ಪ್ರತಿಯೊಬ್ಬರ ಮೇಲೂ ಹೊಂದಿರುವ ಅಪಾರ ಪ್ರೀತಿಯ ಕುರಿತು ಯೋಚಿಸಬೇಕೆಂದು ನಾನು ವಿನಮ್ರವಾಗಿ ನಿಮ್ಮನ್ನು ಒತ್ತಾಯಿಸುತ್ತೇನೆ. ಸಮಯ ಬಹಳ ಕಡಿಮೆಯಿದೆ. ನೀವು ಮತ್ತು ನಾನು ನಮ್ಮ ಸುತ್ತಲಿನ ಜನರನ್ನು ತಲುಪಬೇಕು.ಆದರಿಂದ ಭಯಪಡಬೇಡಿ; ಆತನು ನಮಗೆ ಆ ಅಧಿಕಾರ ನೀಡಿದ್ದಾನೆ. ಅದೇ ಸಮಯದಲ್ಲಿ, ಕ್ರಿಸ್ತನ ಪ್ರೀತಿಯನ್ನು ಹಂಚಿಕೊಳ್ಳಲು ಜಾಣತನವನ್ನು ಬಳಸಿ. ನೀವು ಇದನ್ನು ಮಾಡುವಾಗ, ಪರಲೋಕದಲ್ಲಿ ಸಂತೋಷವು ತೆರೆದುಕೊಳ್ಳುತ್ತದೆ. 

Bible Reading: Matthew 27-28
Prayer
ಪರಲೋಕದ ತಂದೆಯೇ, ನಮ್ಮ ಮಾರ್ಗಗಳನ್ನು ಬೆಳಗಿಸಲು, ನಮ್ಮ ಹೃದಯಗಳನ್ನು ಪರಿಷ್ಕರಿಸಲು ಮತ್ತು ಕಳೆದುಹೋದವರಿಗಾಗಿ ನಮ್ಮ ಅನ್ವೇಷಣೆಯನ್ನು ತೀವ್ರಗೊಳಿಸಲು ನಾವು ನಿಮ್ಮ ಕೃಪೆಯನ್ನು ಬೇಡುತ್ತೇವೆ. ನಾವು ನಿಮ್ಮ ಮಿತಿಯಿಲ್ಲದ ಪ್ರೀತಿಯನ್ನು ಪ್ರತಿಬಿಂಬಿಸಿ ನಿಮ್ಮ ಶಾಶ್ವತ ಮಹಿಮೆಗಾಗಿ ಮರಳಿ ಪಡೆದುಕೊಂಡು ತರುವ ಪ್ರತಿಯೊಂದು ಆತ್ಮಕ್ಕಾಗಿ ಸಂಭ್ರಮವನ್ನು ಯೇಸುನಾಮದಲ್ಲಿ ಆಚರಿಸುವಂತಾಗಲೀ.ಆಮೆನ್.

Join our WhatsApp Channel


Most Read
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 09 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 07:40 ದಿನಗಳು ಉಪವಾಸ ಹಾಗೂ ಪ್ರಾರ್ಥನೆ.
● ನಿಮ್ಮ ಬಿಡುಗಡೆಯನ್ನು ಇನ್ನು ಮುಂದೆ ತಡೆಯಲು ಸಾಧ್ಯವಿಲ್ಲ.
● ಸಮರುವಿಕೆಯ ಕಾಲ - 2
● ನೀವು ಎಷ್ಟು ವಿಶ್ವಾಸಾರ್ಹರು?
● ಮರೆತುಹೋದ ಆಜ್ಞೆ.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login