हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಸಮರುವಿಕೆಯ ಕಾಲ - 2
Daily Manna

ಸಮರುವಿಕೆಯ ಕಾಲ - 2

Tuesday, 21st of January 2025
4 1 197
Categories : ಆತ್ಮನ ಫಲ (Fruit of the Spirit) ಸಮರುವಿಕೆ ( Pruning)
"ನನ್ನಲ್ಲಿದ್ದು ಫಲಕೊಡದಿರುವ ಪ್ರತಿಯೊಂದು ಕೊಂಬೆಯನ್ನು ಆತನು ತೆಗೆದುಹಾಕುತ್ತಿರುತ್ತಾನೆ; ಫಲಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚು ಫಲಕೊಡುವ ಹಾಗೆ ಅದನ್ನು ಶುದ್ಧಿಮಾಡುತ್ತಿರುತ್ತಾನೆ." (ಯೋಹಾನ  15:2 ಅಂಪ್ಲಿಫೈಡ್)

"ಆತನು  ಶುದ್ಧೀಕರಿಸುತ್ತಿರುತ್ತಾನೆ ಮತ್ತು ಪದೇ ಪದೇ ಶುದ್ದಿ ಮಾಡುತ್ತಿರುತ್ತಾನೆ" ಎಂಬ ಪದಗುಚ್ಛವನ್ನು ಗಮನಿಸಿ. ದೇವರ ಕಾರ್ಯಗಳು ಒಂದು ಬಾರಿ ಘಟಿಸುವ  ಘಟನೆಯಲ್ಲ ಆದರೆ ಅದೊಂದು ನಿರಂತರ ಪ್ರಕ್ರಿಯೆ. ನಮ್ಮ ಜೀವನದಲ್ಲಿ ಬೆಳೆಸುವ ಸಮಯವೂ  ಇರುತ್ತವೆ ಮತ್ತು ಸಮರುವಿಕೆಯ ಸಮಯವೂ ಇರುತ್ತವೆ ಎಂದು ಇದು ನಮಗೆ ಹೇಳುತ್ತದೆ. ಪರ್ವತದ ಉನ್ನತ ಅನುಭವಗಳ ಕಾಲವೂ ಇರುತ್ತವೆ, ಮತ್ತು ಕಣಿವೆಯ ಅನುಭವಗಳೂ ಸಹ ಇರುತ್ತವೆ.

ನನ್ನ ಸೋದರ ಅತ್ತೆ (ಅಪ್ಪನ ಸಹೋದರಿ) ಅವರ ಹಿತ್ತಲಿನಲ್ಲಿ ಸುಂದರವಾದ ಗುಲಾಬಿ ಗಿಡಗಳನ್ನು ಬೆಳೆಸಿದ್ದರು. ನನ್ನ ಸಹೋದರ ಮತ್ತು ನಾನು ನಮ್ಮ ಬೇಸಿಗೆ ರಜೆಯನ್ನು ಅವರ ಮನೆಯಲ್ಲಿ ಕಳೆಯುತ್ತಿದ್ದೆವು. ಅದೂ ತುಂಬಾ ಖುಷಿಯಾಗಿತ್ತು. ಒಂದು ಮಧ್ಯಾಹ್ನ, ಆಕೆ ಗುಲಾಬಿ ಗಿಡಗಳ ಕೆಲವು ಭಾಗಗಳನ್ನು ಕತ್ತರಿಸುವುದನ್ನು ನಾನು ನೋಡಿದೆ. ಇದು ಹತ್ಯಾಕಾಂಡ ಎಂದು ನಾನು ವೈಯಕ್ತಿಕವಾಗಿ ಭಾವಿಸಿದ್ದೆ. ನಾನು ಆಕೆಯನ್ನು,
 “ಆಕೆ  ತುಂಬಾ ಪ್ರೀತಿಸುತ್ತಿದ್ದ ಗುಲಾಬಿ ಗಿಡಗಳಿಗೆ ಯಾಕೆ ಹೀಗೆ ಮಾಡುತ್ತಾಳೆ." ಎಂದು ಮುಗ್ಧವಾಗಿ ಕೇಳಿದೆ. ಅದಕ್ಕೆ ಆಕೆ ನನಗೆ, ಗುಲಾಬಿ ಗಿಡವು ಇನ್ನೂ ಹೆಚ್ಚಿನ ಸಾಮರ್ಥ್ಯದಿಂದ ಹೂವುಗಳು ಅರಳುವಂತೆ ಮಾಡುತ್ತಿದ್ದೇನೆ ಎಂದು ಹೇಳಿದಳು.

ಸಹಜವಾಗಿ, ಆ ಕ್ಷಣದಲ್ಲಿ, ನಾನು ಅದನ್ನು ಗ್ರಹಿಸಲು ವಿಫಲನಾದೆ, ಆದರೆ ಕೆಲವು ವಾರಗಳ ನಂತರ, ಆಕೆ ಹೇಳಿದ ಸತ್ಯವನ್ನು ನಾನು ನೋಡಿದೆ. ಗುಲಾಬಿಗಳು ಎಂದಿಗಿಂತಲೂ ಹೆಚ್ಚು ಸುಂದರ ಮತ್ತು ರೋಮಾಂಚಕವಾಗಿ ಕಾಣಿಸಿಕೊಂಡವು.

ಸಮರುವಿಕೆಯು ಎಂದಿಗೂ  ಆಹ್ಲಾದಕರ ಅನುಭವವಾಗಿರಲಾರದು . ಅದು ಬಹು ನೋವಿನಿಂದ ಕೂಡಿರುತ್ತದೆ. ದೇವರು ನಮ್ಮ ಮೇಲೆ ಕೋಪಗೊಂಡು ಈ ಪ್ರಕ್ರಿಯೆ ಮಾಡುವುದಿಲ್ಲ ಬದಲಾಗಿ  ಆತನು ನಮ್ಮನ್ನು ಶುದ್ಧಿಕರಿಸಲು ಹಾಗೆ ಮಾಡುತ್ತಾನೆ ಎಂದು ನಾವು ತಿಳಿದಿರಬೇಕು. 

ಇದರಿಂದ ನಾವು ಹೆಚ್ಚು ಹೆಚ್ಚು ಫಲಭರಿತವಾಗಿ ಹೆಚ್ಚು ಹೆಚ್ಚು ಉತ್ಕೃಷ್ಠ ಫಲವನ್ನು ನೀಡುವವರಾಗುತ್ತೇವೆ. (ಯೋಹಾನ 15:2 ವರ್ಧಿತ). 
  • ಫಲ ನೀಡುವ ಹಂತಗಳನ್ನು ಗಮನಿಸಿ. 
  • ಫಲಭರಿತ  (ಪ್ರಮಾಣ) 
  • ಉತ್ಕೃಷ್ಟ ಮತ್ತು ಹೆಚ್ಚು ಉತ್ತಮವಾದ ಫಲ (ಪ್ರಮಾಣ ಮತ್ತು ಗುಣಮಟ್ಟ) 
ತೀರಾ ಇತ್ತೀಚೆಗೆ, ನಾನು ಉಪವಾಸ ಮತ್ತು ಪ್ರಾರ್ಥನೆಯಲ್ಲಿ ಸಮಯ ಕಳೆಯುತ್ತಿದ್ದೆ ಮತ್ತು ಈ ಸಮಯದಲ್ಲಿ ಸಭೆಯು ಸಮರುವಿಕೆಯ ಪ್ರಕ್ರಿಯೆ ಹಾದು ಹೋಗುತ್ತದೆ  ಎಂದು ಪವಿತ್ರಾತ್ಮನು ನನಗೆ ಪ್ರಕಟ ಪಡಿಸಿದನು. 

ಅನೇಕರು ಉಪವಾಸ ಮಾಡಿ ಪ್ರಾರ್ಥಿಸಿರಬಹುದು, ಆದರೆ ಕರ್ತನಿಂದ ಯಾವುದೇ ಉತ್ತರಹೊಂದದಿರದೆ ಇರಬಹುದು. ಇವರು ಕರ್ತನಿಂದ ಯಾವುದಾದರೂ  ದರ್ಶನ ಸಿಗಲಿ ಎಂದು ಕರ್ತನಲ್ಲಿ ನಿಜವಾಗಿ ನಿರೀಕ್ಷೆ ಇಟ್ಟವರಾಗಿದ್ದರೂ  ಪುನಃ ಬಲ ಹೊಂದುವ ಬದಲು, ಸ್ಪಷ್ಟವಾದ ಹಿನ್ನಡೆ ಮತ್ತು ನಷ್ಟಗಳನ್ನು ನೋಡುತ್ತಿದ್ದಾರೆ. ಪ್ರೀತಿಯ ದೇವರ ಮಗುವೇ , ದೇವರು ನಿಮ್ಮನ್ನು ಸಮರುವಿಕೆಯನ್ನು ಪ್ರಕ್ರಿಯೆಯ ಮೂಲಕ ಕರೆದೊಯ್ಯುತ್ತಿದ್ದಾನೆ, ಅದು ನಿಮಗೆ ಈಗ  ಸ್ವಾಭಾವಿಕವಾಗಿ, ಕತ್ತರಿಸುತ್ತಿರುವ ಹಾಗೆ ತೋರುತ್ತದೆ ಅಷ್ಟೇ. 

ನಿಮ್ಮ ಸುತ್ತಲಿರುವ ಜನರನ್ನು ನೀವು ನೋಡುತ್ತೀರಿ, ಅವರು ಎಂದಿಗೂ ಪ್ರಾರ್ಥಿಸುತ್ತಿರುವವರಾಗಿರುವುದಿಲ್ಲ, ಎಂದಿಗೂ ಉಪವಾಸ ಮಾಡುವುದಿಲ್ಲ, ಚರ್ಚ್‌ಗೆ ಹೋಗುವುದಿಲ್ಲ ಅಥವಾ ದೇವರ ಕಾರ್ಯಕ್ಕೆ  ಕೊಡುತ್ತಲೂ ಇರುವುದಿಲ್ಲ; ಆದರೆ ಅವರೆಲ್ಲರೂ ಅದ್ಭುತವಾದ  ಸಮಯವನ್ನು ಕಳೆಯುತ್ತಿದ್ದಾರೆ.ಜೊತೆಗೆ  ಅವರು ನಿಮ್ಮನ್ನೇ ಗೇಲಿ ಮಾಡುತ್ತಿರುತ್ತಾರೆ. ದೇವರು ಎಂದಿಗೂ ಸತ್ತ ಕೊಂಬೆಗಳೊಂದಿಗೆ ವ್ಯವಹರಿಸುವುದಿಲ್ಲ ಎಂಬುದನ್ನು ತಿಳಿಯಿರಿ. ಆತನು ಕೇವಲ ಉತ್ಪಾದಕ ಕೊಂಬೆಗಳೊಂದಿಗೆ ಮಾತ್ರ ವ್ಯವಹರಿಸುತ್ತಾನೆ. ದೇವರು ನಿಮ್ಮೊಂದಿಗೆ ವ್ಯವಹರಿಸುತ್ತಿದ್ದರೆ, ನಿಮ್ಮನ್ನು ಕತ್ತರಿಸುತ್ತಿದ್ದರೆ, ನಿಮ್ಮನ್ನು ರೂಪಿಸುತ್ತಿದ್ದರೆ, ನೀವು ಫಲಕೊಡುವ ಕೊಂಬೆಯಾಗಿದ್ದೀರಿ ಎಂದು ತಿಳಿದುಕೊಳ್ಳಿರಿ.

ಶೀಘ್ರದಲ್ಲೇ, ದೇವರು ತನ್ನ ಸಭೆಗಾಗಿ  ಹೊಸ ಋತುವನ್ನು ಆರಂಭಿಸಲಿದ್ದಾನೆ. ಮತ್ತು ಅದು ನಿಮ್ಮನ್ನು ಮತ್ತು ನನ್ನನ್ನು ಒಳಗೊಂಡಿರುತ್ತದೆ. ಅದನ್ನು ಯೇಸುವಿನ ಹೆಸರಿನಲ್ಲಿ ಸ್ವೀಕರಿಸಿ. ಇದು ಬೇಗನೆ ಸಂಭವಿಸಲಿದೆ ಎಂದು  ಪವಿತ್ರಾತ್ಮನು ಹೇಳುವುದನ್ನು ನಾನು ಕೇಳಿದ್ದೇನೆ. ದೇವರನ್ನುಧೃಡವಾಗಿ  ಹಿಡಿದುಕೊಳ್ಳಿ.ನಿಮ್ಮ ಧೈರ್ಯವನ್ನು ಬಿಟ್ಟು ಬಿಡಬೇಡಿ. ಏನು ನೀವು ಕೇಳಿಸಿಕೊಳ್ಳುತ್ತಿದ್ದೀರಾ?

Bible Reading: Exodus 9-11
Confession
ನನ್ನ ಹಾದಿಯಲ್ಲಿ ಜೀವವೂ, ಸಮೃದ್ಧ ಜೀವನವಿದೆ. ನಾನು ಅದರ ಕಾಲದಲ್ಲಿ ನನ್ನ ಫಲವನ್ನು ಕೊಡುತ್ತೇನೆ ಎಂದು ಯೇಸುನಾಮದಲ್ಲಿ ಅರಿಕೆ ಮಾಡುತ್ತೇನೆ. ವಿಳಂಬ, ಹಿನ್ನಡೆ ಮತ್ತು ನಿಶ್ಚಲತೆಯ ಪ್ರತಿಯೊಂದು ಮೂಲವನ್ನು ನಾನು ಯೇಸುನಾಮದಲ್ಲಿ  ಶಪಿಸುತ್ತೇನೆ. ನನ್ನ ಜೀವನವು ಪ್ರಗತಿಪರವಾಗಿದೆ, ಮತ್ತು ನಾನು ನಂಬಿಕೆಯಿಂದ ನಂಬಿಕೆಗೆ ಮತ್ತು ಮಹಿಮೆಯಿಂದ ಮಹಿಮೆಗೆ ಯೇಸುನಾಮದಲ್ಲಿ ಸಾಗುತ್ತಿದ್ದೇನೆ. ನನ್ನ ಪ್ರೀತಿಪಾತ್ರರು ಮತ್ತು ನಾನು ಹೊಸ ದಿಗಂತಗಳನ್ನು ಹತ್ತುತ್ತೇವೆ  ಮತ್ತು ದೇವರ ಮಹಿಮೆಗಾಗಿ ಹೊಸ ಪ್ರದೇಶಗಳನ್ನು ಯೇಸುನಾಮದಲ್ಲಿ ವಶಪಡಿಸಿಕೊಳ್ಳುತ್ತೇವೆ. ಆಮೆನ್.

Join our WhatsApp Channel


Most Read
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ದೇವರು ದರ್ಶನಕೊಡುವ ಸಮಯವನ್ನು ಗುರುತಿಸಿಕೊಳ್ಳುವುದು
● ಒಳಕೋಣೆ
● ಕಟ್ಟಬೇಕಾದ ಬೆಲೆ
● ಸರಿಯಾದ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಹೇಗೆ
● ಪರಿಸ್ಥಿತಿಯ ದಯೆಯಲ್ಲಿ ಇರಬೇಡಿರಿ
● ಸೆರೆಯಲ್ಲಿ ದೇವರ ಸ್ತೋತ್ರ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login