Daily Manna
2
1
98
ಸೈತಾನನು ನಿಮ್ಮನ್ನು ಹೆಚ್ಚು ತಡೆಯುವ ಒಂದು ಕ್ಷೇತ್ರ.
Thursday, 4th of September 2025
Categories :
ಆರಾಧನೆ (Worship)
"ಆಗ ಫರೋಹನು ಮೋಶೆಯನ್ನು ಕರಸಿ - ನೀವು ಹೋಗಿ ಯೆಹೋವನಿಗೆ ಆರಾಧನೆ ಮಾಡಿ ಬರಬಹುದು; ನಿಮ್ಮ ಮನೆಗಳಿಗೆ ಸೇರಿದವರೂ ಹೋಗಬಹುದು; ನಿಮ್ಮ ಕುರಿದನಗಳನ್ನು ಮಾತ್ರ ಇಲ್ಲೇ ಬಿಟ್ಟುಹೋಗಬೇಕು ಅಂದನು".
(ವಿಮೋಚನಕಾಂಡ 10:24)
ಫರೋಹನು ಮೋಶೆಯನ್ನು ಕರೆದು, ಹೋಗಿ ಕರ್ತನ ಸೇವೆ ಮಾಡಲು ಹೋಗಬಹುದೆಂದು ಹೇಳಿದನು. ಮೇಲ್ನೋಟಕ್ಕೆ, ಫರೋಹನು ಅಂತಿಮವಾಗಿ ಬಿಟ್ಟುಕೊಟ್ಟು ಸೋಲನ್ನು ಒಪ್ಪಿಕೊಂಡಂತೆ ಇದು ತೋರುತ್ತದೆ. ಆದಾಗ್ಯೂ, ನೀವು ಸೂಕ್ಷ್ಮವಾಗಿ ನೋಡಿದರೆ, ಫರೋಹನು ಕುರಿದನಗಳ ಮತ್ತು ಪಶುಗಳ ಹಿಂಡುಗಳನ್ನು ಅವರಿಂದ ಹಿಂದೆಳೆಯುತ್ತಿದ್ದನು.
ಕಾರಣವೆಂದರೆ ಫರೋಹನು ಇಸ್ರೇಲ್‌ನ ಕರ್ತನನ್ನು ಆರಾಧಿಸುವ ಸಾಮರ್ಥ್ಯವನ್ನು ಮೊಟಕುಗೊಳಿಸಲು ಬಯಸಿದ್ದನು. ಆದ್ದರಿಂದ ಮೋಶೆ ಮತ್ತೆ ರಾಜಿ ಮಾಡಿಕೊಳ್ಳಲು ಆಗುವುದೇ ಇಲ್ಲಾ ಎಂದು ನಿರಾಕರಿಸಿದನು.
ನೀವು ಯೋಬ 1 ಅನ್ನು ಓದಿದರೆ, ಅಲ್ಲಿಯೂ, ಶತ್ರುಗಳು ಮೊದಲು ದಾಳಿ ಮಾಡಿದ ವಿಷಯವೆಂದರೆ ಕುರಿ ದನಗಳು. ಇದಕ್ಕೆ ಕಾರಣವೆಂದರೆ ಪ್ರತಿದಿನ ಬೆಳಿಗ್ಗೆ ಯೋಬನು ದೇವರಿಗೆ ದಹನಬಲಿಗಳನ್ನು ಅರ್ಪಿಸುತ್ತಿದ್ದನು, ಇದು ಆರಾಧನೆಯ ಸಂಕೇತವಾಗಿದೆ. ಯಾವುದೇ ಕುರಿ ದನಗಳು ಇಲ್ಲದಿದ್ದರೆ,ಆಗ ಯೋಬನು ದೇವರನ್ನು ಹೇಗೆ ತಾನೇ ಆರಾಧಿಸಬಹುದು?
ಇಂದು ನಮಗೆ ಕರ್ತನನ್ನು ಆರಾಧಿಸಲು ಹೋರಿಗಳು ಮತ್ತು ಮೇಕೆಗಳ ಅಗತ್ಯವಿಲ್ಲ ಎಂಬುದಕ್ಕಾಗಿ ನಾನು ದೇವರಿಗೆ ಸ್ತೋತ್ರ ಹೇಳುತ್ತೇನೆ. ಕರ್ತನಾದ ಯೇಸು ತನ್ನ ಏಕೈಕ ಪರಿಪೂರ್ಣ ಯಜ್ಞದ ಮೂಲಕ ನಮ್ಮ ಮಧ್ಯೆ ಇದ್ದ ಪರದೆಯನ್ನು ಹರಿದು ಹಾಕಿದ್ದಾನೆ, ಇದರಿಂದ ನಾವು ಈಗ ದೇವರ ಸನ್ನಿಧಿಯನ್ನು ಧೈರ್ಯವಾಗಿ ಪ್ರವೇಶಿಸಬಹುದು.
"ಏಕೆಂದರೆ ಕ್ರಿಸ್ತ ಯೇಸುವು ಒಂದೇ ಬಲಿ ಅರ್ಪಣೆಯಿಂದ ಪವಿತ್ರವಾಗುವವರನ್ನು ನಿರಂತರ ಪರಿಪೂರ್ಣರನ್ನಾಗಿ ಮಾಡಿದ್ದಾನೆ." (ಇಬ್ರಿಯ 10:14 NLT)
ದೇವರು ಹುಡುಕುತ್ತಿರುವ ಒಂದು ವಿಷಯವಿದ್ದರೆ ಅದು ನಿಜವಾದ ಆರಾಧನೆ. "ಆದರೆ ನಿಜವಾದ ಆರಾಧಕರು ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ. ಏಕೆಂದರೆ ತಂದೆಯು ನಿಜವಾಗಿಯೂ ಈ ರೀತಿ ಆರಾಧಿಸುವವರನ್ನೇ ಹುಡುಕುತ್ತಾನೆ".ಎಂದು ಯೋಹಾನ 4:23 ನಮಗೆ ಹೇಳುತ್ತದೆ.ದೇವರು ಬೇರೆ ಎಲ್ಲದಕ್ಕಿಂತ ಹೆಚ್ಚಾಗಿ ಬಯಸುವ ಒಂದು ವಿಷಯ ಎಂದರೆ; ನಾವು ಆತನ ಮುಖವನ್ನು ಹುಡುಕುವ ಸಮಯ .
ಮತ್ತು ಶತ್ರು (ಸೈತಾನ) ನಿಮ್ಮನ್ನು ಕರ್ತನನ್ನು ಆರಾಧಿಸದಂತೆ ತಡೆಯಲು ತನ್ನಿಂದ ಸಾಧ್ಯವಾದಷ್ಟು ಪ್ರಯತ್ನಿಸುತ್ತಿರುತ್ತಾನೆ.ಆದರಿಂದಲೇ ಶತ್ರುವಿನ ತಂತ್ರಗಳ ಕುರಿತು ನಾವು ತಿಳಿದಿರಬೇಕು ಎಂದು ಅಪೊಸ್ತಲ ಪೌಲನು ಎಚ್ಚರಿಸಿದನು (2 ಕೊರಿಂಥ 2:11 ನೋಡಿ).
ಹೆಮ್ಮೆ
ಸತ್ಯ ಆರಾಧನೆಗೆ ಹೆಮ್ಮೆಗಿಂತ ಹೆಚ್ಚು ಅಡ್ಡಿ ಮಾಡುವಂತದ್ದು ಬೇರೆ ಯಾವುದೂ ಇಲ್ಲ. ಒಬ್ಬನು ಜಾಗರೂಕನಾಗಿಲ್ಲದಿದ್ದರೆ, ಒಬ್ಬನು ತನ್ನ ದೀನತೆಯ ಕುರಿತೂ ಹೆಮ್ಮೆಪಡಬಹುದು. ಕೆಲವು ಕ್ರೈಸ್ತರು ದೇವರು ಅವರನ್ನು ಬಳಸುವ ವಿಧಾನದ ಕುರಿತು ಹೆಮ್ಮೆಪಡುತ್ತಾರೆ. ಯೇಸುವನ್ನು ತನ್ನ ಮೇಲೆ ಕೂರಿಸಿಕೊಂಡು ಯೆರೂಸಲೇಮಿಗೆ ಪ್ರವೇಶಿಸಿದ ಕತ್ತೆಯನ್ನು ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು.
ನಮ್ಮಲ್ಲಿರುವ ಸ್ವತ್ತುಗಳಿಂದ ದೇವರನ್ನು ಆರಾಧಿಸಲು ವಿಫಲರಾಗುವುದರ ಕುರಿತು ಜ್ಞಾನೋಕ್ತಿ 3:9-10 ರಲ್ಲಿ ಕಾಣುತ್ತೇವೆ
"ನಿನ್ನ ಆಸ್ತಿಯಿಂದಲೂ ನಿನ್ನ ಎಲ್ಲಾ ಬೆಳೆಯ ಪ್ರಥಮ ಫಲದಿಂದಲೂ ಯೆಹೋವ ದೇವರನ್ನು ಸನ್ಮಾನಿಸು.
ಆಗ ನಿನ್ನ ಕಣಜಗಳು ಸಮೃದ್ಧಿಯಿಂದ ತುಂಬುವವು; ಹೊಸ ದ್ರಾಕ್ಷಾರಸದಿಂದ ನಿನ್ನ ತೊಟ್ಟಿಗಳು ತುಂಬಿರುವುದು".
ಇಸ್ರಾಯೇಲ್ಯರು ತಮ್ಮ ಎಲ್ಲಾ ಆಸ್ತಿಗಳನ್ನು ಬಿಟ್ಟು ಐಗುಪ್ತದಿಂದ ತಮ್ಮ ದೇವರನ್ನು ಆರಾಧಿಸಲು ಬರಿಗೈಯಲ್ಲಿ ಹೋಗುವುದನ್ನು ಫರೋಹನು ವಿರೋಧಿಸುತ್ತಿರಲಿಲ್ಲ. ಹಳೆಯ ಒಡಂಬಡಿಕೆಯ ಅಡಿಯಲ್ಲಿ, ದೇವರನ್ನು ಆರಾಧಿಸಲು ಹೋಗುವವರು ತಮ್ಮ ಸ್ವಾಸ್ತ್ಯದಿಂದ ಯಾವುದೇ ಉಡುಗೊರೆ ಅಥವಾ ಕಾಣಿಕೆಯನ್ನು ಕೈಯಲ್ಲಿ ತೆಗೆದುಕೊಳ್ಳದೆ, ಬರಿಗೈಯಲ್ಲಿ ತನ್ನ ಮುಂದೆ ಬರುವುದನ್ನು ದೇವರು ವಾಸ್ತವವಾಗಿ ನಿಷೇಧಿಸಿದ್ದನು. "ಮತ್ತು ಯಾರೂ ನನ್ನ ಸನ್ನಿಧಿಯಲ್ಲಿ ಬರಿ ಗೈಯಲ್ಲಿ ಕಾಣಿಸಿಕೊಳ್ಳಬಾರದು." (ವಿಮೋಚನಕಾಂಡ 34:20).ಎಂದು ದೇವರು ಆಜ್ಞಾಪಿಸಿದ್ದನು.
ನಮ್ಮ ಅರ್ಪಣೆ ಗಳಿಂದ ದೇವರನ್ನು ಆರಾಧಿಸುವಂತದ್ದು, ದೇವರೇ ನಮ್ಮಲ್ಲಿರುವ ಎಲ್ಲದಕ್ಕೆ ಆಧಾರನು ಎಂಬುದಾಗಿ ಒಪ್ಪಿಕೊಂಡು ನಾವು ಆತನು ನಮಗೆ ಕೊಟ್ಟದ್ದರ ಮೇಲೆ ಮನೆವಾರ್ತೆಯವರು ಮಾತ್ರವೇ ಎಂಬುದನ್ನು ಒಪ್ಪಿಕೊಂಡಂತೆ. ಬಹುಪಾಲು ಕ್ರೈಸ್ತರು ಹೋರಾಡುವುದು ಇಲ್ಲಿಯೇ.
Bible Reading: Ezekiel 11-13
Prayer
ಜೀವಂತ ದೇವರನ್ನು ಆರಾಧಿಸುವುದನ್ನು ತಡೆಯಲು ಯತ್ನಿಸುವ ಪ್ರತಿಯೊಂದು ಶಕ್ತಿಯೂ ಯೇಸುನಾಮದಲ್ಲಿ ನಾಶವಾಗಲಿ. ಆಮೆನ್.
Join our WhatsApp Channel

Most Read
● ದಿನ 38:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ಕೊಟ್ಟನು
● ದಿನ 29:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಹಗರಣದ ಪಾಪಕ್ಕೆ ಅದ್ಭುತ ಕೃಪೆ ಬೇಕು
● ನೀವು ಯಾರೊಂದಿಗೆ ನಡೆಯುತ್ತಿದ್ದೀರಿ?
● ವಾಕ್ಯದಲ್ಲಿರುವ ಜ್ಞಾನ
● ನಡೆಯುವುದನ್ನು ಕಲಿಯುವುದು
Comments