हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಸುಮ್ಮನೆ ಓಡಬೇಡಿ.
Daily Manna

ಸುಮ್ಮನೆ ಓಡಬೇಡಿ.

Wednesday, 7th of May 2025
1 0 89
Categories : ಆಧ್ಯಾತ್ಮಿಕ ನಡಿಗೆ (Spiritual Walk) ರೂಪಾಂತರ(transformation)
ಕೆಲವು ಸಭೆಗಳಲ್ಲಿ, ನಾನು 1000 ಕ್ಕೂ ಹೆಚ್ಚು ಜನರ ಮೇಲೆ ಕೈಯಿಟ್ಟು ಪ್ರಾರ್ಥಿಸುತ್ತೇನೆ. ಸೇವೆಯ ಸಮಯದಲೆಲ್ಲಾ , ನಾನು ಒಬ್ಬ ಸೂಪರ್ ಹೀರೋನಂತೆ ಶಕ್ತಿಶಾಲಿ ಮತ್ತು ಬಲಶಾಲಿ  ಎಂದು ಭಾವಿಸುತ್ತಿರುತ್ತೇನೆ. ಆದಾಗ್ಯೂ, ಸೇವೆ ಮುಗಿದ ತಕ್ಷಣ, ನಾನು ದಣಿದು ಸುಸ್ತಾಗಿ ಹೋಗಿ ನನ್ನ ಹಾಸಿಗೆಯ ಮೇಲೆ ಕುಸಿದು ಬೀಳುತ್ತೇನೆ. ಪವಿತ್ರಾತ್ಮನು  ನಮ್ಮೊಳಗೆ ಮತ್ತು ನಮ್ಮ ಮೇಲೆ ಇದ್ದು, ನಾವು ದೊಡ್ಡ ಕೆಲಸಗಳನ್ನು ಸಾಧಿಸಲು ಆತನಿಗೆ  ಅನುವು ಮಾಡಿಕೊಡುವಾಗ , ನಮ್ಮ ಭೌತಿಕ ದೇಹಗಳು ಇನ್ನೂ ಹೆಚ್ಚಾಗಿ  ಬಳಸಲ್ಪಟ್ಟು ಮಹಿಮೆ ಹೊಂದುತ್ತಾ ಹೋಗುತ್ತದೆ.

ಎಲೀಯನ ಅನುಭವವು ಇದಕ್ಕೆ ಒಂದು ಪ್ರಮುಖ ಉದಾಹರಣೆಯಾಗಿದೆ. ಬಾಳನ ಪ್ರವಾದಿಗಳು ಮತ್ತು ಎಲೀಯನ ನಡುವೆ  ಘರ್ಷಣೆ ನಡೆದ ಕರ್ಮೆಲ್ ಪರ್ವತವು ಇಜ್ರೀಲ್‌ನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿದೆ. ಸುಳ್ಳು ಪ್ರವಾದಿಗಳ ಮೇಲೆ ಮಹತ್ತರ ಆತ್ಮೀಕ ವಿಜಯ ಸಾಧಿಸಿದ  ನಂತರ, ಎಲೀಯನು ಅರಸನಾದ ಅಹಾಬನ ರಥದ ಮುಂದೆ ಓಡಿ ಇಜ್ರೀಲ್ ತಲುಪಲು ದೈಹಿಕವಾಗಿ ದಣಿದನು. 

ಮೂರು ವರ್ಷಗಳ ಬರಗಾಲದ ನಂತರ, ಪ್ರವಾದಿಯಾದ ಎಲೀಯನು ಬಾಳನ 450 ಪ್ರವಾದಿಗಳನ್ನು  ಕರೆದು ಸತ್ಯವಾದ ದೇವರು - ಯೆಹೋವನೋ  ಅಥವಾ ಬಾಳನೋ ಎಂದು ಸಾಬೀತುಪಡಿಸಲು ಕರ್ಮೆಲ್ ಪರ್ವತದ ಮೇಲೆ ಪರೀಕ್ಷಿಸುವ  ಸವಾಲು ಹಾಕುತ್ತಾನೆ. ಬಾಳನ ಸುಳ್ಳು ಪ್ರವಾದಿಗಳು ತಮ್ಮ ಯಜ್ಞದ ಮೇಲೆ ಆಕಾಶದಿಂದ ಬೆಂಕಿಯನ್ನು ತರಲು ವಿಫಲರಾದಾಗ, ಎಲೀಯನು ಯೆಹೋವನನ್ನು ಪ್ರಾರ್ಥಿಸಲು  ದೇವರು ಆ ಯಜ್ಞವನ್ನು ದಹಿಸಿಬಿಡಲು ಸ್ವರ್ಗದಿಂದ ಬೆಂಕಿಯನ್ನು ಕಳುಹಿಸುತ್ತಾನೆ. ಈ ಅದ್ಭುತ ಶಕ್ತಿಯ ಪ್ರದರ್ಶನದ ನಂತರ, ಇಸ್ರೇಲ್ ಜನರು ಯೆಹೋವನನ್ನು ಒಬ್ಬನೇ ನಿಜವಾದ ದೇವರೆಂದು ಒಪ್ಪಿಕೊಳ್ಳುತ್ತಾರೆ ಆಗ  ಎಲೀಯನು ಬಾಳನ ಪ್ರವಾದಿಗಳನ್ನು ಕೊಲ್ಲಬೇಕೆಂದು  ಆದೇಶಿಸುತ್ತಾನೆ.

ಈಗ ಮಳೆ ಆಯಿತು ಮತ್ತು ಎಲೀಯ  ನೀಡಿದ ಪ್ರವಾದಿಯ ಮಾತಿನ ಪ್ರಕಾರ ಮೂರು ವರ್ಷಗಳ ಕಾಲದ  ಬರಗಾಲ ಕೊನೆಗೊಂಡಿದೆ. “ಎಲೀಯನು ಎಲ್ಲಾ ಪ್ರವಾದಿಗಳನ್ನು ಕತ್ತಿಯಿಂದ ಸಂಹರಿಸಿದ್ದನ್ನೂ ಅವನು ಮಾಡಿದ ಬೇರೆ ಎಲ್ಲಾ ಕಾರ್ಯಗಳನ್ನೂ ಅಹಾಬನು ಈಜೆಬೆಲಳಿಗೆ ತಿಳಿಸಿದಾಗ  ಆಕೆಯು ಎಲೀಯನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ - ನೀನು ಪ್ರವಾದಿಗಳ ಪ್ರಾಣವನ್ನು ತೆಗೆದಂತೆ ನಾಳೆ ಇಷ್ಟು ಹೊತ್ತಿಗೆ ನಾನು ನಿನ್ನ ಪ್ರಾಣವನ್ನು ತೆಗೆಯದೆ ಹೋದರೆ ದೇವತೆಗಳು ನನಗೆ ಬೇಕಾದದ್ದನ್ನು ಮಾಡಲಿ ಎಂದು ಹೇಳಿಕಳುಹಿಸಿದಳು." (1 ಅರಸುಗಳು 19:1-2) 

ಬಾಳನ ಮೌನ ಮತ್ತು ಕರ್ಮೆಲ್ ಪರ್ವತದ ಮೇಲೆ ಯೆಹೋವನಿಂದ ಬಂದ ಬೆಂಕಿಯು ಈಜೆಬೆಲಳನ್ನು ಪಶ್ಚಾತ್ತಾಪ ಪಡುವಂತೆ ಮಾಡಲಿಲ್ಲ. ಬದಲಾಗಿ ತನ್ನ ಸುಳ್ಳು ಪ್ರವಾದಿಗಳ ವಧೆಯಿಂದ ಕೋಪಗೊಂಡ ಈಜೆಬೆಲಳು ಎಲೀಯನನ್ನು ಕೊಲ್ಲುವುದಾಗಿ ಪ್ರತಿಜ್ಞೆ ಮಾಡುತ್ತಾಳೆ, ಒಬ್ಬ ಸಂದೇಶವಾಹಕನ ಮೂಲಕ ಎಲೀಯನಿಗೆ ಭಯಾನಕ ಸಂದೇಶ ಒಂದನ್ನು ಕಳುಹಿಸುತ್ತಾಳೆ, ಅವನು ತನ್ನ ಪ್ರವಾದಿಗಳ ಪ್ರಾಣವನ್ನು ತೆಗೆದುಕೊಂಡಂತೆಯೇ 24 ಗಂಟೆಗಳಲ್ಲಿ ಅವನ ಪ್ರಾಣವನ್ನು ತೆಗೆದುಕೊಳ್ಳುವುದಾಗಿ ಘೋಷಿಸುತ್ತಾಳೆ. 

"ಎಲೀಯನು  ಇದನ್ನು ಕೇಳಿದೊಡನೆ ತನ್ನ ಪ್ರಾಣರಕ್ಷಣೆಗಾಗಿ ಅಲ್ಲಿಂದ ಹೊರಟು ಯೆಹೂದದ ಬೇರ್ಷೆಬಕ್ಕೆ ಬಂದು ಅಲ್ಲಿ ತನ್ನ ಸೇವಕನನ್ನು ಬಿಟ್ಟನು".  (1 ಅರಸುಗಳು 19:3) 

ನಂಬಿಕೆಯು ಕೇಳುವುದರ ಮೂಲಕ ಬರುತ್ತದೆ (ರೋಮ 10:17), ಮತ್ತು ಅದು ಸತ್ಯವಾದದ್ದೇ. ಆದರೆ ದುಃಖಕರವಾದ ವಿಪರ್ಯಾಸವೆಂದರೆ ಭಯವೂ  ಸಹ ದುಷ್ಟನ ಧ್ವನಿಯನ್ನು ಕೇಳುವುದರ ಮೂಲಕ ಬರುತ್ತದೆ. ಈಜೆಬೆಲಳಿಂದ ಬೆದರಿಕೆಯ ಸಂದೇಶವನ್ನು ಸ್ವೀಕರಿಸಿದ ನಂತರ, ಒಂದು ಕಾಲದಲ್ಲಿ ಧೈರ್ಯಶಾಲಿಯಾಗಿದ್ದ  ಪ್ರವಾದಿಯಾದ ಎಲೀಯ ಭಯದಲ್ಲಿ  ಮುಳುಗಿಹೋಗುತ್ತಾನೆ. ಕರ್ಮೆಲ್ ಪರ್ವತದ ಮೇಲೆ ದೇವರ ಅದ್ಭುತ ಶಕ್ತಿಯನ್ನು ನೋಡಿದ್ದರೂ, ಎಲೀಯನ ನಂಬಿಕೆಯು ಅಲುಗಾಡಿ  ಅವನು ದುಷ್ಟ ರಾಣಿಯ ಕೋಪದಿಂದ ಪಲಾಯನ ವಾಗುವ ಮಾರ್ಗವನ್ನು ಆರಿಸಿಕೊಳ್ಳುತ್ತಾನೆ. ಆದ್ದರಿಂದ, ನಾವು ಜೀವನದಲ್ಲಿ ಸಾಗುವಾಗ, ನಾವು ನಮಗೆ ಉಂಟಾಗುವ ಸಂದೇಶಗಳ ಕುರಿತು ಜಾಗರೂಕರಾಗಿರುವುದು ಬಹಳ ಮುಖ್ಯ, ಏಕೆಂದರೆ ಅವುಗಳೇ  ನಮ್ಮ ನಂಬಿಕೆ, ಭಾವನೆಗಳು ಮತ್ತು ಕ್ರಿಯೆಗಳ ಮೇಲೆ ಪ್ರಭಾವ ಬೀರುವಂತದ್ದು.

ಈಜೆಬೆಲಳಿಂದ ಬೆದರಿಕೆ ಸಂದೇಶ ಬಂದಾಗ ಎಲೀಯನು ಇಜ್ರೀಲಿನಲ್ಲಿದ್ದನು. ಇದಕ್ಕೂ ಮೊದಲು, ಎಲೀಯನು 50 ಕಿ.ಮೀ. ಓಡಿದನೆಂದು ನಾನು ನಿಮಗೆ ಹೇಳಿದ್ದೆ. ಆದರೆ ಈಗ  ಭಯದಿಂದ ಪ್ರೇರಿತನಾಗಿ, ಅವನು ಇಜ್ರೀಲಿನಿಂದ ಬೇರ್ಷೆಬಾಗೆ ದೀರ್ಘ ಮತ್ತು ಪ್ರಯಾಸಕರ ಪ್ರಯಾಣವನ್ನು ಪ್ರಾರಂಭಿಸುತ್ತಾನೆ, ಇದು ಸುಮಾರು 172 ಕಿಲೋಮೀಟರ್ ದೂರದಲ್ಲಿದೆ. 

ಪ್ರಾಚೀನ ಪ್ರಪಂಚದ ಸಂದರ್ಭದಲ್ಲಿ, ಅಷ್ಟು ದೊಡ್ಡ ದೂರವನ್ನು ಪ್ರಯಾಣಿಸುವುದು ಒಂದು ಕಷ್ಟಕರವಾದ ಕೆಲಸವಾಗಿತ್ತು, ಅದಕ್ಕೆ ಅಪಾರ ದೈಹಿಕ ಸಹಿಷ್ಣುತೆ ಮತ್ತು ದೃಢಸಂಕಲ್ಪದ ಅಗತ್ಯವಿತ್ತು. ಪ್ರಯಾಣವನ್ನು ಹೆಚ್ಚು ಸುಲಭವಾಗಿ  ನಿರ್ವಹಿಸುವಂತೆ ಮಾಡಲು ಕಾರುಗಳು ಅಥವಾ ರೈಲುಗಳಂತಹ ಯಾವುದೇ ಆಧುನಿಕ ಅನುಕೂಲತೆಗಳು ಆಗ  ಇರಲಿಲ್ಲ. ಪರಿಣಾಮವಾಗಿ, ಎಲೀಯನು ಕಠಿಣ ಭೂಪ್ರದೇಶದಲ್ಲಿ ಹಾದುಹೋಗುತ್ತಾ, ಸ್ವಾಭಾವಿಕವಾದ ಶಾರೀರಿಕ ಪ್ರಭಾವಕ್ಕೆ ಒಳಗಾಗಿ ತನ್ನ ಜೀವಕ್ಕಿದ್ದ ಅಪಾಯದ  ನಿರಂತರ ಭಯದಲ್ಲಿ ದಿನಗಳನ್ನು ಕಳೆಯುತ್ತಿದ್ದನು. ಇದೆಲ್ಲವೂ ಅಂತಿಮವಾಗಿ ಎಲೀಯನನ್ನು ಸುಸ್ತಾಗುವ ಸ್ಥಿತಿಗೆ ಕೊಂಡೊಯ್ಯುತ್ತದೆ. 

ಜೀವನವು ಯಾವಾಗಲೂ ನಿಮ್ಮನ್ನು ಕಾರ್ಯನಿರತವಾಗಿರಿಸುತ್ತದೆ. ಆದಾಗ್ಯೂ, ದೇವರು ನಮ್ಮನ್ನು ಏನು ಮಾಡಲು ಕರೆದಿದ್ದಾನೆ ಎಂಬುದನ್ನು ನಾವು ಗ್ರಹಿಸಬೇಕಾಗಿದೆ. ಇದು ನಮ್ಮನ್ನು  ದೈಹಿಕ ಆಯಾಸದಿಂದ  ತಪ್ಪಿಸಲು ಮತ್ತು ನಾವು ಫಲಪ್ರದವಾಗುವಂತೆ ಮಾಡಲು ಇರುವ  ಒಂದು ಕೀಲಿಯಾಗಿದೆ.

Bible Reading: 2 Kings 10-11
Prayer
ಪರಲೋಕದ  ತಂದೆಯೇ, ನನ್ನ ಕಿವಿಗಳನ್ನು ನಿನ್ನ  ಸ್ವರಕ್ಕೆ ಆಲಿಸಲು ಕೊಟ್ಟು ನೀ ನನಗಾಗಿ ಇಟ್ಟಿರುವ  ಕರೆಯನ್ನು ಪೂರೈಸಲು ನನಗೆ ಮಾರ್ಗದರ್ಶನ ನೀಡು. ನನ್ನ ಜೀವನದ ಪ್ರತಿಯೊಂದು ಅಂಶದಲ್ಲೂ ಫಲ ಕೊಡಲು  ನಿನ್ನ ಚಿತ್ತವನ್ನೇ  ನೆರವೇರಿಸಲು ನನಗೆ ಶಕ್ತಿ ನೀಡು, ಇದರಿಂದ ನಾನು ದಣಿದು ಹೋಗುವುದರಿಂದ ತಪ್ಪಿಸಿಕೊಳ್ಳಬಹುದು. ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ . ಆಮೆನ್.


Join our WhatsApp Channel


Most Read
● ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು - ಭಾಗ 1
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟ -3
● ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಹೇಗೆ
● ಒಳಕೋಣೆ
● ಧನ್ಯನಾದ ಮನುಷ್ಯ
● ಮತ್ತೊಬ್ಬರ ಪಾತ್ರೆಯನ್ನು ತುಂಬಿಸುವುದನ್ನು ಬಿಟ್ಟು ಬಿಡಬೇಡಿರಿ.
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login