हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಉದ್ಯೋಗದ ಸ್ಥಳದಲ್ಲಿ ಮಿಂಚುವ ತಾರೆಯಾಗುವುದು-ll
Daily Manna

ಉದ್ಯೋಗದ ಸ್ಥಳದಲ್ಲಿ ಮಿಂಚುವ ತಾರೆಯಾಗುವುದು-ll

Thursday, 18th of April 2024
2 1 457
Categories : ಉದ್ಯೋಗ ಸ್ಥಳ(Workplace)
ಒಬ್ಬ ದೊಡ್ಡ ದೇವಸೇವಕರು ಒಮ್ಮೆ ಹೀಗೆ ಹೇಳಿದ್ದಾರೆ "ನೀವು ಯಾವುದನ್ನು ಗೌರವಿಸುತ್ತಿರೋ ಅದು ನಿಮ್ಮ ಬಳಿಗೆ ಬರುತ್ತದೆ.ನೀವು ಯಾವುದನ್ನು ಅಗೌರವಿಸುತ್ತೀರೋ ಅದು ನಿಮ್ಮ ಬಳಿಯಿಂದ ದೂರಾಗುತ್ತದೆ" ಎಂದು

"ದಾಸರಾಗಿ ಮತ್ತೊಬ್ಬರ ಅಧೀನದಲ್ಲಿರುವವರು ತಮ್ಮ ಯಜಮಾನರನ್ನು ಎಲ್ಲಾ ಮಾನಕ್ಕೂ ಯೋಗ್ಯರೆಂದೆಣಿಸಲಿ; ಇಲ್ಲದಿದ್ದರೆ ದೇವರ ನಾಮಕ್ಕೂ ನಾವು ಹೊಂದಿರುವ ಉಪದೇಶಕ್ಕೂ ನಿಂದೆ ಉಂಟಾದೀತು.2ಯಾರಿಗಾದರೂ ಕ್ರಿಸ್ತನನ್ನು ನಂಬುವವರಾದ ಯಜಮಾನರಿದ್ದರೆ ಅವರು ಆ ಯಜಮಾನರನ್ನು ಸಹೋದರರೆಂದು ಉದಾಸೀನಮಾಡದೆ ತಮ್ಮ ಸೇವೆಯ ಫಲವನ್ನು ಹೊಂದುವವರು ನಂಬುವವರೂ ಪ್ರಿಯರೂ ಆಗಿದ್ದಾರೆಂದು ತಿಳಿದು ಅವರಿಗೆ ಹೆಚ್ಚಾದ ಸಂತೋಷದಿಂದಲೇ ಸೇವೆಮಾಡಬೇಕು. ಈ ಉಪದೇಶವನ್ನು ಮಾಡಿ ಅವರನ್ನು ಎಚ್ಚರಿಸು." ಎಂದು ‭‭1 ತಿಮೊಥೆಯನಿಗೆ‬ ‭6:1‭-‬2‬ ರಲ್ಲಿ ಸತ್ಯವೇದವು ನಮ್ಮನ್ನು ಎಚ್ಚರಿಸುತ್ತದೆ.

ಈಗ ಇದರರ್ಥ ನೀವು ಎಲ್ಲರಿಗೂ ಕಾಲಕಸ ವಾಗಿರಬೇಕೆಂದಲ್ಲ ಆದರೂ ನಮ್ಮಲ್ಲಿ ಬಹುತೇಕರು (ಕ್ರೈಸ್ತರು) (ಹೃದಯಾಳದಿಂದ) ತಮ್ಮ ಮೇಲಿನವರಿಗೆ ಮರ್ಯಾದೆಯನ್ನು ಕೊಡುವುದಿಲ್ಲ ಎಂಬುದು ಬಿಚ್ಚಿಟ್ಟ ರಹಸ್ಯವಾಗಿದೆ.

ಒಂದು ಸರಳವಾದ ನಗೆಯಿಂದಲೂ ಅಥವಾ ಶುಭ ಮುಂಜಾನೆ ಎಂದು ಹೇಳುವ ಮೂಲಕ ಅಭಿನಂದಿಸುವುದು ಇಷ್ಟಾದರೂ ಸಾಕು. ಆದರೂ ನಾವು ಕಹಿತನದಿಂದಲೂ ನೋವುಂಡವರಂತೆಯೂ ನಡೆಯುತ್ತೇವೆ. ಇದು ನಮ್ಮ ಉದ್ಯೋಗ ಸ್ಥಳದಲ್ಲಿ ದೇವರು ನಮಗಾಗಿ ಇಟ್ಟಿರುವ ಯೋಜನೆಯನ್ನು ಸಂಪೂರ್ಣವಾಗಿ ಹದಗೆಡಿಸುತ್ತದೆ. (ಯೆರೆಮಿಯಾ 29:11). ನಿಮ್ಮ ಯಜಮಾನರು ಯಾರೇ ಆಗಿರಲಿ, ಅವರ ಸ್ವಭಾವ ಎಂತೆದ್ದೇ ಆಗಿರಲಿ,ಅವರ ಗುಣ ಎಂತದ್ದೇ ಆಗಿರಲಿ ನೀವು ಕೊಡುವಂತಹ ಯಥಾರ್ತವಾದ ಗೌರವವು ನಿಮ್ಮ ಹಾಗೂ ನಿಮ್ಮ ಯಜಮಾನರ ನಡುವೆ ಒಂದು ವಿಶ್ವಾಸದ ಪರಿಸರವನ್ನು ಸೃಷ್ಟಿಸುತ್ತದೆ.

ಎಷ್ಟೋ ಪ್ರಕರಣಗಳಲ್ಲಿ ನೀವು ಗೌರವ ತೋರಿಸದೊಡನೆಯೇ ಅದೇ ಗೌರವವನ್ನು ಅವರು ಸಹ ಆಗಲೇ  ನಿಮಗೆ ಕೊಟ್ಟುಬಿಡುವುದಿಲ್ಲ ಎಂಬುದನ್ನು ನೀವೀಗ ಅರ್ಥ ಮಾಡಿಕೊಳ್ಳಿ. ಇದಕ್ಕೆ ಕೆಲ ಸಮಯ ಹಿಡಿಯುತ್ತದೆ. ಆದ್ದರಿಂದ ದೇವರ ವಾಕ್ಯದ ಮೇಲೆ ಆಧಾರಗೊಳ್ಳಿ ಕರ್ತನು ನಿಮ್ಮನ್ನು ಸನ್ಮಾನಿಸುವವನು. ನೆನಪಿಡಿ. "ದೇವರು ದೀನರಿಗೆ ಕೃಪೆಯನ್ನು ತೋರಿಸುವವನಾಗಿದ್ದಾನೆ" (ಯಾಕೋಬ 4:6)
Confession
ನನ್ನ ಉದ್ಧಾರವು ಪೂರ್ವದಿಂದಲೂ ಪಶ್ಚಿಮದಿಂದಲೂ ಅಥವಾ ದಕ್ಷಿಣದಿಂದಲೂ ಬರುವುದಿಲ್ಲ ಆದರೆ ಯೇಸು ನಾಮದಲ್ಲಿ ಕರ್ತನಾದ ನಿನ್ನಿಂದಲೇ ಬರುತ್ತದೆ. ಅದಕ್ಕಾಗಿ ನಿನಗೆ ಸ್ತೋತ್ರ ಸಲ್ಲಿಸುತ್ತೇನೆ ಕರ್ತನೇ, ಆಮೇನ್.


Join our WhatsApp Channel


Most Read
● ಆತ್ಮನಿಂದ ನಡೆಸಲ್ಪಡುವುದು ಎಂಬುದರ ಅರ್ಥವೇನು?
● ಎದುರಾಗುವ ವಿರೋಧಗಳನ್ನು ನಂಬಿಕೆಯಿಂದ ಎದುರಿಸುವುದು.
● ಪರಲೋಕದ ವಾಗ್ದಾನ
● ಸರಿಯಾದ ಜನರೊಂದಿಗೆ ಸಹವಾಸ
● ಇತರರಿಗಾಗಿ ಪ್ರಾರ್ಥಿಸುವುದು
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-1
● ದೂರದಿಂದ ಹಿಂಬಾಲಿಸುವುದು
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login