हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ನಾವು ಸೇತುವೆಗಳನ್ನು ನಿರ್ಮಿಸಬೇಕೇ ವಿನಃ, ತಡೆಗೋಡೆಯನ್ನಲ್ಲ
Daily Manna

ನಾವು ಸೇತುವೆಗಳನ್ನು ನಿರ್ಮಿಸಬೇಕೇ ವಿನಃ, ತಡೆಗೋಡೆಯನ್ನಲ್ಲ

Monday, 13th of October 2025
1 1 189
"ನಾವು ಉಪಯೋಗಿಸುವ ಆಯುಧಗಳು ಲೋಕಸಂಬಂಧವಾದ ಆಯುಧಗಳಲ್ಲ; ಅವು ದೇವರ ಎಣಿಕೆಯಲ್ಲಿ ಬಲವಾಗಿದ್ದು ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ. ನಾವು ವಿತರ್ಕಗಳನ್ನೂ ದೇವಜ್ಞಾನವನ್ನು ವಿರೋಧಿಸುವದಕ್ಕೆ ಏರಿಸಲ್ಪಟ್ಟಿರುವ ಉನ್ನತವಾದ ಎಲ್ಲಾ ಕೊತ್ತಲಗಳನ್ನೂ ಕೆಡವಿಹಾಕಿ ಎಲ್ಲಾ ಯೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಸೆರೆಹಿಡಿದು.." (2 ಕೊರಿಂಥ 10:4-5) 

ವಿಭಜನೆಯ ಮೇಲೆ ಅಭಿವೃದ್ಧಿ ಹೊಂದುತ್ತಿರುವ ಈ ಜಗತ್ತಿನಲ್ಲಿ, ಸಭೆಯು ಐಕ್ಯತೆ ಮತ್ತು ಪ್ರೀತಿಯನ್ನು ತೋರುವ ಸ್ವರ್ಗವಾಗಿರಬೇಕು. ಹೀಗಿದ್ದರೂ, ನಾವು ಎಷ್ಟೋ ಬಾರಿ ನಮ್ಮ ಸಹ ವಿಶ್ವಾಸಿಗಳೊಂದಿಗೆ ಸಣ್ಣಪುಟ್ಟ ವಾದಗಳಲ್ಲಿ ಸಿಲುಕಿ, ಅವರ ಆರಾಧನಾ ಶೈಲಿಯನ್ನು ಅಥವಾ ಅವರ ಜೀವನಶೈಲಿಯ ಆಯ್ಕೆಗಳನ್ನು ಟೀಕಿಸುತ್ತೇವೆ ಅಲ್ಲವೇ? ಅಪೊಸ್ತಲನಾದ ಪೌಲನು 2 ಕೊರಿಂಥ 10:4-5 ರಲ್ಲಿ ನಮ್ಮ ನಿಜವಾದ ಯುದ್ಧವು ರಕ್ತಮಾಂಸಧಾರಿಗಳ ವಿರುದ್ಧವಲ್ಲ ಆದರೆ ಆತ್ಮೀಕ ಕೋಟೆ ಕೊತ್ತಲುಗಳ ವಿರುದ್ಧ ಎಂದು ನಮಗೆ ನೆನಪಿಸುತ್ತಾನೆ. 

ಮನಸ್ಸಿನ ಯುದ್ಧಭೂಮಿ: 
ಅಪೊಸ್ತಲ ಪೌಲನ ಪ್ರಕಾರ ನಿಜವಾದ ಯುದ್ಧವು ಮನಸ್ಸಿನಲ್ಲಿ ಪ್ರಾರಂಭವಾಗುತ್ತದೆ. ಅವನು ಉಲ್ಲೇಖಿಸುವ "ಕೋಟೆ ಕೊತ್ತಲುಗಳು" ಎನ್ನುವಂತದ್ದು ದೇವರ ಜ್ಞಾನವನ್ನು ವಿರೋಧಿಸುವ ಆಳವಾಗಿ ಬೇರೂರಿರುವ ನಂಬಿಕೆಗಳು, ವರ್ತನೆಗಳು ಮತ್ತು ಆಲೋಚನೆಗಳಾಗಿರುತ್ತವೆ. ಈ ಕೋಟೆಗಳಲ್ಲಿ ಕೆಲವು ನಮ್ಮ ಸುತ್ತಲಿನ ಪ್ರಪಂಚದಿಂದ ನಿರ್ಮಿಸಲ್ಪಟ್ಟಿರಬಹುದು; ಇನ್ನು ಕೆಲವು ಸ್ವಯಂ ನಮ್ಮಿಂದಲೇ ನಿರ್ಮಿತವಾಗಿರಬಹುದು. ಆದರೆ ಒಂದು ವಿಷಯವಂತೂ ಖಚಿತ: ನಮ್ಮ ಜೀವನದಲ್ಲಿ ಮತ್ತು ನಮ್ಮ ಸುತ್ತಮುತ್ತಲಿನವರ ಜೀವನದಲ್ಲಿ ದೇವರ ರಾಜ್ಯವನ್ನು ಸ್ಥಾಪಿಸಲು ಅವು ಕೆಳಗುರುಳಬೇಕಾಗಿದೆ.


ಸರಿಯಾದ ಆಯುಧಗಳು: 
ಟೀಕೆ, ತೀರ್ಪು ಅಥವಾ ವಿಭಜನೆಯಂತಹ ಲೌಕಿಕ ಆಯುಧಗಳನ್ನು ಬಳಸುವಂತದ್ದು ವಿನಾಶದ ಚಕ್ರವನ್ನು ಮಾತ್ರ ಶಾಶ್ವತಗೊಳಿಸುತ್ತದೆ. ಎಫೆಸ 6:14-18 ದೇವರ ಆಯುಧವು ಸತ್ಯ, ನೀತಿ, ಸುವಾರ್ತೆ, ನಂಬಿಕೆ, ರಕ್ಷಣೆ, ದೇವರ ವಾಕ್ಯ ಮತ್ತು ಪ್ರಾರ್ಥನೆಯನ್ನು ಒಳಗೊಂಡಿರುತ್ತದೆ ಎಂದು ನಮಗೆ ಹೇಳುತ್ತದೆ. ಇವು ನಾವು ಕೋಟೆಗಳನ್ನು ಕೆಡವಲು ಬಳಸಬೇಕಾದ ಆತ್ಮೀಕ"ಆಯುಧಗಳಾಗಿವೆ". 

ವಿಚಲಿತಗೊಳ್ಳುವ ಗಮನ: 
ನಾವು ನಮ್ಮ 'ಆಯುಧಗಳನ್ನು' ಪರಸ್ಪರ ಗುರಿಯಾಗಿಸಿಕೊಂಡಾಗ, ನಾವು ಶತ್ರು ಬಯಸಿದ್ದನ್ನು ಮಾತ್ರ ಮಾಡುತ್ತಾ - ನಿಜವಾದ ಯುದ್ಧದಿಂದ ನಮ್ಮ ಗಮನವನ್ನು ಬೇರೆಡೆಗೆ ತಿರುಗಿಸುವವರಾಗಿರು ತ್ತೇವೆ. ಸತ್ಯವೇದದಲ್ಲಿ "ಆದದರಿಂದ ನಾವು ಸಮಾಧಾನಕ್ಕೂ ಪರಸ್ಪರ ಭಕ್ತಿವೃದ್ಧಿಗೂ ಅನುಕೂಲವಾಗಿರುವವುಗಳನ್ನು ಸಾಧಿಸಿಕೊಳ್ಳೋಣ." ಎಂದು ಹೇಳುತ್ತದೆ. 

ನಾವು ಆಂತರಿಕ ವಿವಾದಗಳಲ್ಲಿ ವ್ಯಯಿಸುವ ಎಲ್ಲಾ ಶಕ್ತಿಯನ್ನು ತೆಗೆದುಕೊಂಡು ಶತ್ರು ನಮ್ಮ ಜೀವನ ಮತ್ತು ಸಮುದಾಯಗಳಲ್ಲಿ ಸ್ಥಾಪಿಸಿರುವ ಭದ್ರಕೋಟೆಗಳನ್ನು ಎದುರಿಸುವತ್ತ ಗಮನಹರಿಸಿದರೆ ಬಿಡುಗಡೆ ಮಾಡಬಹುದಾದ ಶಕ್ತಿಯನ್ನು ಎಷ್ಟೆಂದು ಊಹಿಸಿನೋಡಿ. 

ನಿಜವಾದ ಶತ್ರುವಿನ ಮೇಲೆ ನಮ್ಮ ಗಮನ ಕೇಂದ್ರೀಕರಿಸುವುದು: 
"ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವದಕ್ಕೆ ಆಸಕ್ತರಾಗಿರಿ." ಎಂದು ಎಫೆಸ 4:3 ನಮ್ಮನ್ನು ಪ್ರೋತ್ಸಾಹಿಸುತ್ತದೆ. ಐಕ್ಯತೆ ಎಂದರೆ ಏಕರೂಪತೆ ಎಂದಲ್ಲ; ದೇವರ ರಾಜ್ಯವನ್ನು ವಿಸ್ತರಿಸುವ ದೊಡ್ಡ ಗುರಿಗಾಗಿ ನಮ್ಮ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಸಹಕರಿಸುವುದು ಎಂದರ್ಥ. ಮಾರ್ಕ 3:25 ರಲ್ಲಿ ಯೇಸು "ತನ್ನಲ್ಲಿಯೇ ವಿಭಾಗಿಸಲ್ಪಟ್ಟ ಮನೆ ಎಂದಿಗೂ ನಿಲ್ಲಲು ಸಾಧ್ಯವಿಲ್ಲ" ಎಂದು ಹೇಳಿರುವುದ್ದರಿಂದ ಐಕ್ಯತೆಯು ಅತ್ಯಗತ್ಯ.


"ಹಾಗಾದರೆ ದೇವರಿಗೆ ಅಧೀನರಾಗಿರಿ; ಸೈತಾನನನ್ನು ಎದುರಿಸಿರಿ, ಆಗ ಅವನು ನಿಮ್ಮಿಂದ ಓಡಿಹೋಗುವನು." ಎಂದುಯಾಕೋಬ 4:7 ಹೇಳುತ್ತದೆ. ನಮ್ಮ ನಿಜವಾದ ಶತ್ರು ಬೇರೆ ಬೇರೆ ರೀತಿಯ ಸಂಗೀತದೊಂದಿಗೆ ಆರಾಧಿಸುವ ಅಥವಾ ಸ್ವಲ್ಪ ವಿಭಿನ್ನವಾಗಿ ಉಡುಪು ಧರಿಸುವ ಸಹ ವಿಶ್ವಾಸಿಯಲ್ಲ. ನಮ್ಮ ನಿಜವಾದ ಶತ್ರು ಸೈತಾನ, ಅವನು ವಿಭಜಿಸಲು ಮತ್ತು ನಾಶಮಾಡಲು ಪ್ರಯತ್ನಿಸುತ್ತಿರುತ್ತಾನೆ. 

ನಾವು ಅವನನ್ನು ವಿರೋಧಿಸುವತ್ತ ಗಮನಹರಿಸುವಾಗ, ನಾವು ಅವನ ಕೋಟೆಗಳನ್ನು ಕೆಡವಬಲ್ಲ ಪ್ರಬಲ ಶಕ್ತಿಯಾಗುತ್ತೇವೆ. ಇಂದು, ನಮ್ಮ ಆತ್ಮೀಕ ಆಯುಧಗಳನ್ನು ನಿಜವಾದ ಶತ್ರುವಿನ ಕಡೆಗೆ ಮತ್ತೆ ಗುರಿಯಾಗಿಸಿಕೊಳ್ಳುವಂತೆ ನಮಗೆ ನಾವೇ  ಸವಾಲು ಮಾಡಿಕೊಳ್ಳೋಣ, ಒಡೆಯಲು ಅಲ್ಲ. ಕಟ್ಟುವ ಪ್ರತಿಜ್ಞೆ ಮಾಡೋಣ. ಹೆಚ್ಚು ಪ್ರಾರ್ಥಿಸುವತ್ತಾ ಮತ್ತು ಕಡಿಮೆ ಟೀಕಿಸುತ್ತಾ, ಹೆಚ್ಚು ಅರ್ಥಮಾಡಿಕೊಳ್ಳುವತ್ತಾ ಮತ್ತು ಕಡಿಮೆ ತೀರ್ಪು ಮಾಡುವತ್ತ, ಹೆಚ್ಚು ಪ್ರೀತಿಸುತ್ತಾ ಮತ್ತು ಕಡಿಮೆ ವಾದಿಸಬೇಕೆಂದು ಬದ್ಧರಾಗೋಣ. ನಾವು ಇದನ್ನು ಮಾಡುವಾಗ, ಕೋಟೆಗಳು ಕೆಳಗುರುಳುತ್ತಿವೆ ಎಂಬುದಾಗಿ ನಾವು ಕಂಡುಕೊಳ್ಳುತ್ತೇವೆ.

ಹಾಗೆಯೇ ಯೋಹಾನ 17:21 ರಲ್ಲಿ ಕ್ರಿಸ್ತನು ಪ್ರಾರ್ಥಿಸಿದ ಪ್ರಾರ್ಥನೆಯಾದ" ನೀನು ನನ್ನನ್ನು ಕಳುಹಿಸಿಕೊಟ್ಟಿದ್ದೀ ಎಂದು ಲೋಕವು ನಂಬುವದಕ್ಕಾಗಿ ಅವರೆಲ್ಲರೂ ಒಂದಾಗಿರಬೇಕೆಂತಲೂ ತಂದೆಯೇ, ನೀನು ನನ್ನಲ್ಲಿಯೂ ನಾನು ನಿನ್ನಲ್ಲಿಯೂ ಇರುವ ಪ್ರಕಾರ ಅವರೂ ನಮ್ಮಲ್ಲಿ ಇರಬೇಕೆಂತಲೂ ಕೇಳಿಕೊಳ್ಳುತ್ತೇನೆ." ಎನ್ನುವುದನ್ನೂ ಸಹ ನಾವು ಪೂರೈಸುತ್ತಿದ್ದೇವೆ.

Bible Reading: Matthew 13-14

Daily Manna in Audio: 
Prayer
ದೇವರೇ, ಯೇಸುನಾಮದಲ್ಲಿ ನಾನು ನಿನ್ನ ದೈವಿಕ ಜ್ಞಾನವನ್ನೇ ಹುಡುಕುತ್ತೇನೆ. ನನ್ನ ಆಲೋಚನೆಗಳನ್ನು ಮಾರ್ಗದರ್ಶಿಸು, ನನ್ನ ಹೆಜ್ಜೆಗಳನ್ನು ನಿರ್ದೇಶಿಸು ಮತ್ತು ನಿನ್ನ ಪವಿತ್ರಾತ್ಮನಿಂದ ನನ್ನನ್ನು ತುಂಬಿಸು, ಆಗ ನಾನು ನಿನ್ನ ಪರಿಪೂರ್ಣ ಚಿತ್ತದಲ್ಲಿ ನಡೆಯಬಲ್ಲೆನು. ಆಮೆನ್.

Join our WhatsApp Channel


Most Read
● ವರ್ಗಗಳು : ದೇವರ ಹೆಸರುಗಳು
● ಯೇಸು ಅಂಜೂರದ ಮರವನ್ನು ಏಕೆ ಶಪಿಸಿದನು?
● ಕೆಂಪು ದೀಪದ ಎಚ್ಚರಿಕೆ ಗಂಟೆ
● ಆತ್ಮನ ಎಲ್ಲಾ ವರಗಳನ್ನು ನಾನು ಬಯಸಬಹುದೇ?
● ಬೀಜದಲ್ಲಿರುವ ಶಕ್ತಿ -2
● ಸಿದ್ದವಾಗಿರದ ಲೋಕದಲ್ಲಿ ಸಿದ್ಧತೆ
● ದೈವೀಕ ಅನುಕ್ರಮ -2
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login