"ಹತಾಶೆ ಸಮಯಗಳು ಅಷ್ಟೇ ಹತಾಶೆಯ ಅಳತೆಯನ್ನೇ ಮತ್ತೇ ಬರಮಾಡುತ್ತವೆ." ಎಂದು ಲೋಕವು ಹೇಳುತ್ತದೆ
ಆದರೆ ದೇವರ ರಾಜ್ಯದಲ್ಲಿ, ಹತಾಶೆಯ ಸಮಯಗಳು ಅಸಾಧಾರಣ ಅಳತೆಯನ್ನೇ ಬರಮಾಡುತ್ತದೆ.
ಆದರೆ, "'ಅಸಾಧಾರಣ ಅಳತೆ ' ಎಂದರೆ ನೀವು ಯಾವುದನ್ನು ಕುರಿತು ಹೇಳುತ್ತೀರಿ?" ಎಂದು ನೀವು ಕೇಳಬಹುದು
ಯೆಶಾಯ 59:19 ನಮಗೆ ಹೇಳುತ್ತದೆ: ಶತ್ರು ಪ್ರವಾಹದಂತೆ ಬಂದಾಗ, ಕರ್ತನ ಆತ್ಮನು ಅವನ ವಿರುದ್ಧ ತನ್ನ ಒಂದು ಮಾನದಂಡದ ಅಲೆಯನ್ನು ಎಬ್ಬಿಸುತ್ತಾನೆ. (ಯೆಶಾಯ 59:19)
ದೇವರ ಆತ್ಮನು ಯಾವಾಗಲೂ ಶತ್ರು ಮಾಡಲು ಪ್ರಯತ್ನಿಸುತ್ತಿರುವುದಕ್ಕಿಂತ ಹೆಚ್ಚಿನ ಮಾನದಂಡದ ಕಾರ್ಯವನ್ನು ಎತ್ತಿಹಿಡಿಯುತ್ತಾನೆ.
ನಮ್ಮ ಹತಾಶೆಗೆ ಸತ್ಯವೇದವು ಸೂಚಿಸುವಂತದ್ದು 'ಪ್ರವಾದನ ಕೀರ್ತನೆ ' ಧರ್ಮಗ್ರಂಥದಲ್ಲಿ ಪ್ರವಾದನಾ ಕೀರ್ತನೆಯು ಯಾವಾಗಲೂ ಪ್ರಗತಿಯ ಸಾಧನವಾಗಿದೆ.
"ಯೆಹೋಷಾಫಾಟನು ಹೆದರಿ ಯೆಹೋವನನ್ನೇ ಆಶ್ರಯಿಸಿಕೊಳ್ಳಬೇಕೆಂದು ನಿರ್ಣಯಿಸಿಕೊಂಡು ಯೆಹೂದ್ಯರೆಲ್ಲರೂ ಉಪವಾಸಮಾಡಬೇಕೆಂದು ಪ್ರಕಟಿಸಿದನು." (2 ಪೂರ್ವಕಾಲವೃತ್ತಾಂತ 20:3)
ಒಂದು ದಿನ, ರಾಜ ಯೆಹೋಷಾಫಾಟನಿಗೆ 'ದೊಡ್ಡ ಸೈನ್ಯ' ತನ್ನ ರಾಜ್ಯದ ವಿರುದ್ಧ ಬರುತ್ತಿದೆ ಎಂಬ ಸುದ್ದಿ ಬಂದಿತು ಎಂದು 2 ಪೂರ್ವಕಾಲವೃತ್ತಾಂತ 20 ನಮಗೆ ಹೇಳುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಅವನು ಕರ್ತನ ಮೇಲೆ ಆಧಾರಗೊಳ್ಳಲು ಪ್ರಾರಂಭಿಸಿದನು.
ಈಗ ನೀವು ಕರ್ತನನ್ನು ನಿರೀಕ್ಷಿಸುವುದಕ್ಕೂ ಮತ್ತು ಕೇವಲ ಪ್ರಾರ್ಥಿಸುವುದಕ್ಕೂ ನಡುವೆ ವ್ಯತ್ಯಾಸವಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ನನಗೆ ವಿವರಿಸಲು ಅನುಮತಿಸಿ: ನೀವು ಕರ್ತನನ್ನು ನಿರೀಕ್ಷಿಸುತ್ತಿರುವಾಗ, ನೀವು ಪ್ರಾರ್ಥಿಸುತ್ತೀರಿ. ಆದಾಗ್ಯೂ, ನೀವು ಪ್ರಾರ್ಥಿಸುವಾಗಲೆಲ್ಲಾ, ನೀವು ನಿಜವಾಗಿಯೂ ಕರ್ತನನ್ನು ನಿರೀಕ್ಷಿಸಬಹುದು ಅಥವಾ ಇಲ್ಲದಿರಬಹುದು.
ಅದು ನಿಮ್ಮ ಅಗತ್ಯತೆಗಳು, ನಿಮ್ಮ ಜೀವನ ಇತ್ಯಾದಿಗಳ ಕುರಿತಾಗಿ ಇರಬಹುದು. ನಾನು ಹೇಳಲು ಪ್ರಯತ್ನಿಸುತ್ತಿರುವುದನ್ನು ನೀವು ಅರ್ಥೈಸಿಕೊಳ್ಳುತ್ತಿದ್ದೀರಿ ಎಂದು ನಾನು ಭಾವಿಸುತ್ತೇನೆ.
ನಾವು ಕರ್ತನನ್ನು ನಿರೀಕ್ಷಿಸುವಾಗ, ಅದು ಆತನ ಕುರಿತು - ಆತನ ಉಪಸ್ಥಿತಿ, ಆತನಿಂದ ಬರುವ ವಾಕ್ಯವನ್ನು ಎದುರು ನೋಡುವವರಾಗಿರುತ್ತೇವೆ. ಆಗ ನಮ್ಮ ಮನಸ್ಸು ಸಂಪೂರ್ಣವಾಗಿ ಆತನ ಮೇಲೆ ಕೇಂದ್ರೀಕೃತವಾಗಿರುತ್ತದೆ. ನಮ್ಮ ಅಗತ್ಯಗಳೆಲ್ಲ ಹಿಂದಾಗುತ್ತವೆ.ಕೆಲವೊಮ್ಮೆ, ಪ್ರಾರ್ಥನೆಯಲ್ಲಿ, ಅದು ಆತನ ಕುರಿತಾಗೀರದೇ ನಮ್ಮ ಕುರಿತೇ ಆಗಿರಬಹುದು.
ಇಲ್ಲಿ ಕರ್ತನನ್ನು ನಿರೀಕ್ಷಿಸುವ ಜನರಾದ ಅವರಿಗೆ ಪ್ರತಿಕ್ರಿಯೆಯಾಗಿ, ಆತನು: '"ಯುದ್ಧವು ನಿಮ್ಮದಲ್ಲ, ಆದರೆ ದೇವರದು".ಎನ್ನುವ ಪ್ರವಾದನಾ ವಾಕ್ಯವನ್ನು ಕಳುಹಿಸಿದನು.ನೀವು ಆತನನ್ನು ಹುಡುಕುವಾಗ ಯಾವಾಗಲೂ ಪ್ರವಾದನೆಯ ವಾಕ್ಯಗಳು ಹೊರಬರುತ್ತವೆ.
ಪ್ರವಾದನೆಯ ವಾಕ್ಯ ಎಂದರೆ ದೇವರು ನಮ್ಮ ಪರಿಸ್ಥಿತಿಯಲ್ಲಿ ತನ್ನ ಮನಸ್ಸಿನ ಮಾತುಗಳನ್ನು ಆಡುವುದೇ ಆಗಿರುತ್ತದೆ ಹೊರತು ಬೇರೇನೂ ಅಲ್ಲ. ಅನೇಕರು ಈ ವಾಕ್ಯದಲ್ಲಿ ಅತಿರೇಕಕ್ಕೆ ಹೋಗಿದ್ದಾರೆ.
'ಯುದ್ಧವು ನಿಮ್ಮದಲ್ಲ ಆದರೆ ದೇವರದು' ಎಂದರೆ ದೇವರು ಯುದ್ಧ ಮಾಡಿಕೊಳ್ಳಲಿ ಎನ್ನುತ್ತಾ ನೀವು ಎಲ್ಲೋ ಅಡಗಿಕೊಳ್ಳುವುದು ಎಂದಲ್ಲ. ನೀವು ಯುದ್ಧವನ್ನು ಎದುರಿಸಬೇಕಾಗುತ್ತದೆ, ಆದರೆ ಒಳ್ಳೆಯ ಸುದ್ದಿ ಎಂದರೆ ನೀವು ಹೋರಾಡಬೇಕಾಗಿಲ್ಲ.
ದಾವೀದನು ಗೋಲಿಯಾತನನ್ನು ಎದುರಿಸಬೇಕಾಯಿತು, ಆದರೆ ಹೋರಾಟವನ್ನು ಕರ್ತನೇ ಮಾಡಿದನು. ಇಂದು ನೀವು ಯಾವುದೇ ಅಡೆತಡೆಗಳನ್ನು ಎದುರಿಸುತ್ತಿದ್ದರೂ, ಕರ್ತನನ್ನು ನಿರೀಕ್ಷಿಸಿಕೊಳ್ಳಲು ಪ್ರಾರಂಭಿಸಿ. ನೀವು ಎದುರಿಸುತ್ತಿರುವ ಪರಿಸ್ಥಿತಿಯ ಕುರಿತು ಕರ್ತನು ತನ್ನ ಮನಸ್ಸಿನ ಮಾತನ್ನು ಹೇಳುತ್ತಾನೆ.
ಈಗ ನೀವು ಅವುಗಳ ಬಗ್ಗೆ ಆತನ ಮನಸ್ಸನ್ನು ತಿಳಿದಿರುವಿರಿ, ಮುಂದುವರಿಯಿರಿ ಮತ್ತು ಅವುಗಳನ್ನು ಎದುರಿಸಿ. ಗೆಲುವು ನಿಮ್ಮದು. ನೀವು ಜಯಶಾಲಿಗಿಂತ ಹೆಚ್ಚಿನವರಾಗಿದ್ದೀರಿ.
Bible Reading: Isaiah 2-5
Confession
ತಂದೆಯೇ, ನಾನು ಜಯಶಾಲಿಗಿಂತ ಹೆಚ್ಚಾದವಳಾ/ ನಾದ್ದರಿಂದ ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. ಏಕೆಂದರೆ ಯೇಸು ನನ್ನನ್ನು ಪ್ರೀತಿಸುತ್ತಾನೆ. ನಾನು ನಿನ್ನನ್ನು ಪೂರ್ಣ ಹೃದಯದಿಂದ ಹುಡುಕಬೇಕೆಂಬುದನ್ನೇ ಆರಿಸಿಕೊಂಡಿದ್ದೇನೆ. ದಯವಿಟ್ಟು ನನ್ನ ಪರಿಸ್ಥಿತಿಯ ಕುರಿತು ನಿನ್ನ ಮನಸ್ಸಿನ ಮಾತನ್ನು ಹೇಳು ಇದರಿಂದ ನೀನು ನೋಡುವ ಹಾಗೆಯೇ ನಾನು ನನ್ನ ಪರಿಸ್ಥಿತಿಯನ್ನು ನೋಡುತ್ತೇನೆ. ಯೇಸುವಿನ ಹೆಸರಿನಲ್ಲಿ ಬೇಡಿ ಹೊಂದಿದ್ದೇನೆ ತಂದೆಯೇ, ಆಮೆನ್.
Join our WhatsApp Channel

Most Read
● ಪ್ರಾಚೀನ ಇಸ್ರೇಲ್‌ನ ಮನೆಗಳಿಂದ ಕಲಿಯಬೇಕಾದ ಪಾಠಗಳು● ದೇವರನ್ನು ಸ್ತುತಿಸಲು ಇರುವ ಸತ್ಯವೇದಕ್ಕನುಸಾರವಾದ ಕಾರಣಗಳು
● ಕ್ರಿಸ್ತನ ರಾಯಭಾರಿಗಳು
● ವ್ಯಸನಗಳನ್ನು ನಿಲ್ಲಿಸುವುದು
● ನೀತಿಯ ವಸ್ತ್ರ
● ಪ್ರೀತಿಯ ಹುಡುಕಾಟ
● ಹಣಕಾಸಿನ ಅವ್ಯವಸ್ಥೆಯಿಂದ ಪಾರಾಗುವುದು ಹೇಗೆ?
Comments