Daily Manna
1
0
62
ಮಧ್ಯಸ್ಥಿಕೆಯ ಬಗ್ಗೆ ಪ್ರವಾದನಾ ಪಾಠ -1
Tuesday, 12th of August 2025
Categories :
ಪ್ರಾರ್ಥನೆ (prayer)
ಮಧ್ಯಸ್ತಿಕೆ ಪ್ರಾರ್ಥನೆ (Intercession)
"ಆ ದೇಶದಲ್ಲಿ ಬರವು ಬಹುಘೋರವಾಗಿತ್ತು. ಅವರು ಐಗುಪ್ತದೇಶದಿಂದ ತಂದಿದ್ದ ದವಸವು ಮುಗಿದನಂತರ ಅವರ ತಂದೆಯು ಅವರಿಗೆ - ನೀವು ತಿರಿಗಿ ಹೋಗಿ ಇನ್ನು ಸ್ವಲ್ಪ ಧಾನ್ಯವನ್ನು ಕೊಂಡುಕೊಂಡು ಬನ್ನಿರಿ ಅಂದನು. ಅದಕ್ಕೆ ಯೆಹೂದನು - ಆ ಮನುಷ್ಯನು ನಮಗೆ, ನಿಮ್ಮ ತಮ್ಮನನ್ನು ಕರಕೊಂಡುಬಂದ ಹೊರತು ನನ್ನ ಮುಖವನ್ನು ನೋಡಕೂಡದು ಎಂದು ಖಂಡಿತವಾಗಿ ಹೇಳಿದನಲ್ಲಾ"(ಆದಿಕಾಂಡ 43:1-3)
ಈಗ ಅಲ್ಲಿ ಕ್ಷಾಮವು ಭೀಕರವಾಗಿದೆ. ಯಾಕೋಬನ ಮಕ್ಕಳು ಈಜಿಪ್ಟ್‌ಗೆ ತಮ್ಮ ಮೊದಲ ಪ್ರಯಾಣದಿಂದ ತಂದ ಆಹಾರ ಧಾನ್ಯಗಳು ಮುಗಿದುಹೋಗಿವೆ. ಅವರು ಈಗ ಹಸಿವಿನಿಂದ ಸಾಯುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅವರ ತಂದೆಯಾದ ಯಾಕೋಬನು ಆಹಾರವನ್ನು ಪಡೆಯಲು ಈಜಿಪ್ಟ್‌ಗೆ ಮತ್ತೆ ಭೇಟಿ ನೀಡಬೇಕೆಂದು ಒತ್ತಾಯಿಸುತ್ತಾನೆ.
ಎಲ್ಲರೂ ಶಾಂತವಾಗಿರುವುದನ್ನು ಗಮನಿಸಿ, ಆದರೆ ಯೆಹೂದನು ತನ್ನ ತಂದೆಯಾದ ಯಾಕೋಬನಿಗೆ ತನ್ನ ಆಂತರ್ಯದ ಮಾತುಗಳನ್ನು ಹೇಳುತ್ತಾನೆ.
ಇದು ನಮಗೆ ಹೀಗೆ ಹೇಳುತ್ತದೆ:
• ಮಧ್ಯಸ್ಥಗಾರ ಎಂದರೆ ತಂದೆಗೆ ತನ್ನ ಆಂತರ್ಯದ ಮಾತುಗಳನ್ನು ವ್ಯಕ್ತಪಡಿಸುವವನು.
• ಮಧ್ಯಸ್ಥಗಾರ ಎಂದರೆ ತಂದೆಗೆ ಪರಿಸ್ಥಿತಿಯನ್ನು ಸ್ಪಷ್ಟವಾಗಿ ಪ್ರಸ್ತುತಪಡಿಸುವ ವ್ಯಕ್ತಿ.
"ಆಗ ಯೆಹೂದನು ತನ್ನ ತಂದೆಯಾದ ಇಸ್ರಾಯೇಲನಿಗೆ - ನೀನೂ ನಾವೂ ನಮ್ಮ ಮಕ್ಕಳೂ ಎಲ್ಲರೂ ಸಾಯದೆ ಬದುಕಿಕೊಳ್ಳುವಂತೆ ಆ ಹುಡುಗನನ್ನು ನನ್ನ ಜೊತೆಯಲ್ಲಿ ಕಳುಹಿಸಿಕೊಡಪ್ಪಾ; ನಾವು ಹೊರಟು ಹೋಗುವೆವು. ನಾನೇ ಅವನಿಗೆ ಹೊಣೆ; ಅವನ ವಿಷಯ ನನ್ನನ್ನೇ ಕೇಳಬಹುದು. ನಾನು ಅವನನ್ನು ತಿರಿಗಿ ಕರಕೊಂಡು ಬಂದು ನಿನ್ನೆದುರಿನಲ್ಲಿ ನಿಲ್ಲಿಸದೆ ಹೋದರೆ ಆ ದೋಷ ಎಂದೆಂದಿಗೂ ನನ್ನ ಮೇಲೆ ಇರಲಿ. ನಾವು ತಡಮಾಡದಿದ್ದರೆ ಇಷ್ಟರೊಳಗೆ ಎರಡನೆಯ ಸಾರಿ ಹೋಗಿ ಬರುತ್ತಿದ್ದೆವು ಎಂದು ಹೇಳಿದನು."(ಆದಿಕಾಂಡ 43:8-10)
ಯೆಹೂದನ ಮಾತುಗಳನ್ನು ಗಮನಿಸಿ. "ನಾನು ಅವನನ್ನು ಹಿಂತಿರುಗಿಸದಿದ್ದರೆ, ಆ ತಪ್ಪನ್ನು ನಾನೇ ಹೊರುತ್ತೇನೆ". ಸಹೋದರರಲ್ಲಿ ಯಾರೂ ಮಾತನಾಡುತ್ತಿಲ್ಲ. ಏನಾಗುತ್ತಿದೆ ಎಂಬುದರ ಕುರಿತು ಅವರಿಗೆ ಯಾವುದೇ ತೊಂದರೆ ಇಲ್ಲ ಎಂಬಂತೆ ಕಾಣುತ್ತಿದೆ. ಆದರೆ ಇಲ್ಲಿ ಯೆಹೂದನು ಅವರೆಲ್ಲರ ಪರವಾಗಿ ಮಧ್ಯಸ್ತಿಕೆಗಾರನಾಗಿ ನಿಂತಿದ್ದಾನೆ.
ಇದು ಮತ್ತೊಮ್ಮೆ ನನಗೆ ಹೇಳುತ್ತಿರುವುದು.
• ಮಧ್ಯಸ್ಥಗಾರ ಎಂದರೆ ಮಧ್ಯದಲ್ಲಿ ನಿಲ್ಲಲು ಸಿದ್ಧನಾಗಿರುವ ವ್ಯಕ್ತಿ.
ಯೆಹೂದನ ಮಧ್ಯಸ್ಥಿಕೆಯು ಅವನ ಕುಟುಂಬವನ್ನು ಮಾತ್ರವಲ್ಲದೆ ಇಡೀ ಕುಲವನ್ನು ಕ್ಷಾಮ ಮತ್ತು ಸನ್ನಿಹಿತವಾಗಿದ್ದ ಮರಣದಿಂದ ರಕ್ಷಿಸಿತು.
ಅದೇ ರೀತಿ, ನಿಮ್ಮ ಮಧ್ಯಸ್ಥಿಕೆಯು ನಿಮ್ಮ ಕುಟುಂಬವನ್ನು ಮಾತ್ರವಲ್ಲದೆ ಕ್ರಿಸ್ತನ ದೇಹವನ್ನು ಸಹ ಉಳಿಸುತ್ತದೆ. ದೇವರು ನಿಜವಾಗಿಯೂ ಹುಡುಕುತ್ತಿರುವ ಎರಡು ರೀತಿಯ ಜನರಿದ್ದಾರೆ.
1. ಆರಾಧಕರು
ಯೋಹಾನ 4:23-24 ನಮಗೆ ಹೇಳುವುದೇನೆಂದರೆ, ಕರ್ತನು ಸ್ವತಃ ಸತ್ಯದಿಂದ ತಂದೆಯನ್ನು ಆರಾಧಿಸುವ ಆರಾಧಕರನ್ನು ಹುಡುಕುತ್ತಿದ್ದಾನೆ.
2. ಮಧ್ಯಸ್ಥಗಾರರು
"ನಾನು ದೇಶವನ್ನು ಹಾಳುಮಾಡದಂತೆ ನನ್ನೆದುರಿಗೆ ದೇಶರಕ್ಷಣೆಗಾಗಿ ಪೌಳಿಯ ಒಡಕಿನಲ್ಲಿ ನಿಲ್ಲುವದಕ್ಕೂ ಗೋಡೆಯನ್ನು ಗಟ್ಟಿಮಾಡುವದಕ್ಕೂ ತಕ್ಕವನನ್ನು ನಾನು ಹುಡುಕಲು ಯಾರೂ ಸಿಕ್ಕಲಿಲ್ಲ."(ಯೆಹೆಜ್ಕೇಲ 22:30)
ದೇವರು ಇನ್ನೂ ತನಗೂ ಜನರಿಗೂ ಮದ್ಯದಲ್ಲಿ ನಿಲ್ಲಬಲ್ಲ ವ್ಯಕ್ತಿಯನ್ನು ಹುಡುಕುತ್ತಿದ್ದಾನೆ. ದೇವರು ಮಧ್ಯಸ್ಥಗಾರನನ್ನು ಕಂಡುಕೊಂಡರೆ, ದೇವರು ತನ್ನ ಜೊತೆಗೆ -ದುಡಿಮೆ ಮಾಡಬಲ್ಲ ವ್ಯಕ್ತಿಯನ್ನು ಹೊಂದಿರುತ್ತಾನೆ. ಸತ್ಯವೆಂದರೆ ಆರಾಧಕರೂ ಮತ್ತು ಮಧ್ಯಸ್ಥಗಾರರೂ ನೀವು ಎರಡೂ ಆಗಿರಬಹುದು.
ಅಬ್ರಹಾಮನು ಒಬ್ಬ ನಿಜವಾದ ಆರಾಧಕನೂ ಮತ್ತು ಮಧ್ಯಸ್ಥಗಾರನೂ ಎರಡೂ ಆಗಿದ್ದನು, ದಾವೀದನು ಆರಾಧಕನೂ ಮತ್ತು ಮಧ್ಯಸ್ಥಗಾರನೂ ಎರಡೂ ಆಗಿದ್ದನು.
Bible Reading: Jeremiah 5-6
Prayer
ತಂದೆಯೇ, ಕರುಣಾ ಸದನದೊಂದಿಗೆ ಸಂಪರ್ಕ ಹೊಂದಿದ ಪ್ರತಿಯೊಬ್ಬ ವ್ಯಕ್ತಿಯನ್ನು ಈ ವರ್ಷ ಅವರ ಅಲೌಕಿಕ ತಿರುವುಗಾಗಿ ಶ್ರೇಷ್ಠತೆಯ ಆತ್ಮದೊಂದಿಗೆ ಯೇಸುನಾಮದಲ್ಲಿ ಸಬಲಗೊಳಿಸು.
ತಂದೆಯೇ, ಕರುಣಾ ಸದನ ಸಭೆಯಲ್ಲಿ ಅನಾರೋಗ್ಯ ಮತ್ತು ನೋವು ಅನುಭವಿಸುತ್ತಿರುವ ಪ್ರತಿಯೊಬ್ಬರನ್ನು ಗುಣಪಡಿಸಿ ಮತ್ತು ಅವರನ್ನು ಪರಿಪೂರ್ಣ ಆರೋಗ್ಯಕ್ಕೆ ಯೇಸುನಾಮದಲ್ಲಿ ಪುನಃಸ್ಥಾಪಿಸು.
ತಂದೆಯೇ, ಕರುಣಾ ಸದನ ಸಭೆಗಳಿಗೆ ಸಂಪರ್ಕ ಹೊಂದಿದ ಪ್ರತಿಯೊಬ್ಬ ವ್ಯಕ್ತಿಯನ್ನು ಸೈತಾನನ ಎಲ್ಲಾ ಆಕ್ರಮಣಗಳಿಂದ ಬಿಡುಗಡೆ ಮಾಡಿ ಮತ್ತು ಈಗಲೇ ಅವರಿಗೆ ಯೇಸುನಾಮದಲ್ಲಿ ಬಿಡುಗಡೆ ಉಂಟಾಗಲಿ.
Join our WhatsApp Channel

Most Read
● ಭಯಪಡಬೇಡ.● ಕ್ರಿಸ್ತನ ಮೂಲಕ ಜಯಶಾಲಿಗಳು
● ಶ್ರೇಷ್ಠತೆಯ ಬೆನ್ನಟ್ಟುವಿಕೆ.
● ಕಾವಲುಗಾರನು
● ಆತನಿಗೆ ಯಾವುದೇ ಮಿತಿಯಿಲ್ಲ.
● ನಂಬಿಕೆಯಲ್ಲಿ ದೃಢವಾಗಿ ನಿಲ್ಲುವುದು
● ಶಾಂತಿಯು ನಮ್ಮ ಬಾಧ್ಯತೆಯಾಗಿದೆ.
Comments