हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿ - 1
Daily Manna

ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿ - 1

Monday, 26th of August 2024
2 2 461
Categories : ಆತ್ಮೀಕ ಶಕ್ತಿ ( Spiritual Strength)
ಕರೋನದಂತ ಸಾಂಕ್ರಾಮಿಕ ರೋಗದಿಂದಾದ ಒಂದು ದುಷ್ಪರಿಣಾಮ ಏನೆಂದರೆ ಇದರಿಂದ ಜನರು ಸಾಕಷ್ಟು ಕುಗ್ಗಿ ಹೋಗಿ- ಬಳಲಿ ಹೋದರು. ಹೊರ ತೋರಿಕೆಗೆ ಎಲ್ಲವೂ ಚೆನ್ನಾಗಿಇರುವಂತೆ ಕಾಣಿಸುತ್ತಿದ್ದರೂ ಆಂತರಿಕವಾಗಿ ಹರಿದು- ಹತಾಶರಾಗಿದ್ದಾರೆ.ಅವರ ವೈಯಕ್ತಿಕ ಜೀವನದಲ್ಲಿ ನಡೆದಿರುವ ಅಥವಾ ಅವರ ಸುತ್ತ ನಡೆಯುತ್ತಿರುವ ಘಟನೆಗಳಿಂದಾಗಿ ಅವರ ನಂಬಿಕೆಯು  ಹಿಂದೆಂದಿಗಿಂತಲೂ ತೀವ್ರವಾದ ಪರೀಕ್ಷೆಗೊಳಗಾಗಿದೆ.

" ಪಾಸ್ಟರ್ ರವರೇ ನನಗೆ ಒಂದು ಸ್ವಲ್ಪವಾದರೂ ಪ್ರಾರ್ಥಿಸಬೇಕು ಎಂದು ಎನಿಸುತ್ತಿಲ್ಲ. ಒಂದು ವಾಕ್ಯವನ್ನಾದರೂ ಓದಲು ನನ್ನ ಕೈಯಲ್ಲಿ ಆಗುತ್ತಿಲ್ಲ. ನಾನೀಗ ಕೇವಲ ನಿದ್ದೆ ಮಾಡುತ್ತಲಿರುತ್ತೇನೆ ಇಲ್ಲವಾದರೆ ನಿರಂತರವಾಗಿ ಟಿವಿಯನ್ನು ನೋಡುತ್ತಿರುತ್ತೇನೆ " ಎಂದು ಅನೇಕ ಜನರು ನನಗೆ ಬರೆಯುತ್ತಾರೆ.

ಮತ್ತೊಬ್ಬ ಯುವತಿಯು "ಪಾಸ್ಟರ್ ರವರೇ ನಾನು ಮದ್ಯ ಪಾನ ಮಾಡಲು ಆರಂಭಿಸಿದ್ದೇನೆ. ಆದರೆ ನಾನು ಅದನ್ನು ದ್ವೇಷಿಸುತ್ತೇನೆ. ಆದರೂ ನಾನು ಏಕೆ ಹೀಗೆ ಮಾಡುತ್ತಿದ್ದೇನೆ ಎಂದು ನನಗೆ ನಿಜವಾಗಿಯೂ ತಿಳಿಯುತ್ತಿಲ್ಲ. ಇದು ತಪ್ಪೆಂದು ನನಗೆ ಗೊತ್ತು. ದಯಮಾಡಿ ನನಗೆ ಸಹಾಯ ಮಾಡಿ" ಎಂದು ಬರೆದಿದ್ದಳು. ಕೆಲವು ಜನರು ನಿದ್ದೆ ಮಾಡಲು ಒಮ್ಮೆಲೇ ಮೂರ್ನಾಲ್ಕು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ತಾವೇ ಒಪ್ಪಿಕೊಂಡಿದ್ದಾರೆ.

ನಾನು ಇದನ್ನು ಮುಂದುವರಿಸುವ ಮೊದಲು ಒಂದು ವಿಷಯವನ್ನು ಮತ್ತೆ ಮತ್ತೆ ಸ್ಪಷ್ಟವಾಗಿ ಹೇಳುತ್ತೇನೆ. ಅದೇನೆಂದರೆ ನಾನು ಈ ಮೊದಲು ಪ್ರಸ್ತಾಪಿಸಿದ ಈ ಜನರೆಲ್ಲರೂ ಕೆಟ್ಟ ಜನರಲ್ಲ. ಎಲ್ಲೋ ಒಂದು ಹಾದಿಯಲ್ಲಿ ತಮ್ಮ ಆತ್ಮಿಕ ಶಕ್ತಿಯನ್ನು ಕಳೆದುಕೊಂಡಿದ್ದಾರೆ ಅಷ್ಟೇ.
ಅವರ ಆತ್ಮಿಕ ಮನುಷ್ಯನು ದುರ್ಬಲನಾದ್ದರಿಂದ ತಾವು ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿದಿದ್ದರೂ ಅವರು ಈ ಕೆಲಸಗಳನ್ನು ಮಾಡುತ್ತಿದ್ದಾರೆ. 

ಆದರೆ ಒಂದು ಒಳ್ಳೆಯ ಸುದ್ದಿ ಏನೆಂದರೆ ನೀವು ನಿಮ್ಮ ಆತ್ಮೀಕ ಶಕ್ತಿಯನ್ನು ಬೆಳೆಸಿಕೊಳ್ಳಬಹುದು. ಎಲ್ಲಾ ವಿರೋಧಗಳ ಹೊರತಾಗಿಯೂ,ಎಲ್ಲಾ ಹಿಂಸೆಗಳ ಹೊರತಾಗಿಯೂ, ನಿಮಗೆ ಎದುರಾಗಿ ಬೀಸುವ ಎಲ್ಲಾ ಬಿರುಗಾಳಿಗಳ ಹೊರತಾಗಿಯೂ, ನಿಮಗಾಗಿ ದೇವರು ಇಟ್ಟ ನಿಮ್ಮ ಕರೆಯನ್ನು ನೀವು ಪೂರೈಸಬಹುದು.

ನಿಮ್ಮ ಆತ್ಮಿಕ ಬಲವನ್ನು ಬೆಳೆಸಿಕೊಳ್ಳಲು ಮಾಡಬೇಕಾದದ್ದೇನು.?

ನಾನು ಈ ಮುಂಚಿತವಾಗಿ ಹೇಳಿದಂತೆ ಆತ್ಮಿಕ ಬಲವನ್ನು ಬೆಳೆಸಿಕೊಳ್ಳಲು ಇರುವ ಅವಶ್ಯಕತೆ ಇರುವುದೇ ನೀವು ಯಾವುದೇ ರೀತಿಯಿಂದ ಆಗಲಿ ದೇವರ ಚಿತ್ತವನ್ನು ಪೂರೈಸುವುದಕ್ಕಾಗಿದೆ. ಬಲವಾದ ಆತ್ಮಿಕ ಮನುಷ್ಯನು ನಿಮ್ಮೊಳಗಿರುವಾಗ ನಿಮ್ಮ ಆತ್ಮಿಕ ಮನುಷ್ಯನು ಧೈರ್ಯವಾಗಿ ಯಾವ ನೋವು ಬಂದರೂ, ಸಹಿಸಿಕೊಳ್ಳುತ್ತಾನೆ. ಆದರೆ ನಿಮ್ಮ ಆತ್ಮೀಕ ಮನುಷ್ಯನೇ ದುರ್ಬಲನಾದರೆ ಸಹಿಸುವವರಾರು? ( ಜ್ಞಾನೋಕ್ತಿ 18:14)

ನಾನು ಇತ್ತೀಚಿಗಷ್ಟೇ ಒಂದು ಸುದ್ದಿಯನ್ನು ಓದಿದೆ. ಅದರಲ್ಲಿ ಒಬ್ಬ ಪ್ರಖ್ಯಾತ ರೂಪದರ್ಶಿಯು 9ನೇ ಮಹಡಿಯ  ಬಾಲ್ಕನಿಯಿಂದ ಹಾರಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳೆಂ ಬುದ್ದಾಗಿ ಇತ್ತು. "ಅಷ್ಟೊಂದು ಧೈರ್ಯಶಾಲಿಯಾದ, ಸುಂದರವಾದ,ಯಶಸ್ವಿಯಾದ ಸ್ತ್ರೀಯು ಏಕೆ ಹೀಗೆ ಮಾಡಿಕೊಂಡಳು" ಎಂದು ಎಲ್ಲರೂ ಟೀಕಿಸುವುದನ್ನು ನಾನು ನೋಡಿದೆ. ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವಂತ ಅಗತ್ಯ ಆಕೆಗೆ ಏನಿದ್ದಿರಬಹುದು?

ಸ್ವಸ್ಥವಾದ ಆತ್ಮವು ಎಲ್ಲಾ ಪ್ರತಿಕೂಲತೆಗಳನ್ನು ಜಯಿಸುತ್ತದೆ
"ಆತ್ಮವು ವ್ಯಾಧಿಯನ್ನು ಸಹಿಸಬಲ್ಲದು, ಆತ್ಮವೇ ನೊಂದರೆ ಸಹಿಸುವವರು ಯಾರು?"(ಜ್ಞಾನೋಕ್ತಿಗಳು 18:14 )

ಜ್ಞಾನೋಕ್ತಿ 18: 14ರ ಮೆಸೇಜ್ ಭಾಷಂತರದಲ್ಲಿ "ನಾವು ಸ್ವಸ್ಥವಾದ ಆತ್ಮವು ಎಲ್ಲಾ ಪ್ರತಿಕೂಲತೆಗಳನ್ನು ಜಯಿಸುತ್ತದೆ. ಆದರೆ ಜಜ್ಜಿ ಹೋದ ಆತ್ಮದಿಂದ ಬಲಹೀನವಾದ ಆತ್ಮದಿಂದ ನೀವೇನನ್ನು ಮಾಡಲಾಗುವುದು? ಎಂದು ಓದುತ್ತೇವೆ.

ಇಂದು ನನಗೆ ಈ ಪ್ರಶ್ನೆಗೆ ಉತ್ತರ ಬೇಕು : ನೀವು ನಿಮ್ಮ ಆತ್ಮಗಳನ್ನು ಉಜ್ಜಿವಿಸಲು ನೀವು ಏನೆಲ್ಲಾ ಮಾಡಬಹುದು?

ಬಲವಾದ ಆತ್ಮ ಎಂದರೇನು.?

ಬಲವಾದ ಆತ್ಮವೆಂದರೆ ಅದು ವಿಶ್ವಾಸದಿಂದ ಕೂಡಿದ್ದು, ಗಟ್ಟಿಯಾಗಿದ್ದು, ನಿಶ್ಚಲವಾಗಿದ್ದು ಮತ್ತು ಎಲ್ಲದಕ್ಕೂ ಸಿದ್ಧವಾಗಿರುವ ಆತ್ಮವಾಗಿದೆ. ಅದು ಎಂತಹ ಪ್ರತಿಕೂಲ ಪರಿಸ್ಥಿತಿ ಇದ್ದರೂ ಚೇತರಿಸಿಕೊಳ್ಳುತ್ತದೆ. ಯಾವಾಗಲೂ ಸಂತೋಷದಿಂದಲೂ  ಶಾಂತಿಯಿಂದಲೂ ತುಂಬಿರುತ್ತದೆ. ಅದು ಎಂದಿಗೂ ದೈರ್ಯ ಗೆಡುವುದಿಲ್ಲ.ಶಾರೀರಿಕ ಆಕ್ರಮಣಗಳು, ಹಣಕಾಸಿನ ಹಿನ್ನಡೆಗಳ ಸಮಸ್ಯೆಗಳು, ವೃತ್ತಿ ಜೀವನದ ಹಿನ್ನೆಡೆಗಳು ಮತ್ತು ಶತ್ರು ನಿಮ್ಮ ಮೇಲೆ ಯಾವುದೇ ಬಾಣ ಬಿಟ್ಟರೂ ನೀವು ನಿಮ್ಮ ಧೈರ್ಯವನ್ನು ಬಿಟ್ಟುಬಿಡುವುದಿಲ್ಲ.

ಬಲವಾದ ಆತ್ಮವು ಆತ್ಮನ ಫಲವನ್ನು ಪ್ರದರ್ಶಿಸುತ್ತದೆ. ಬಲವಾದ ಆತ್ಮದ ಲಕ್ಷಣವೇನೆಂದರೆ ಪ್ರೀತಿ ಸಂತೋಷ ಸಮಾಧಾನ (ಗಲಾತ್ಯ 5:22-23). ಬಲವಾದ ಆತ್ಮವು ಎಂದಿಗೂ ತನ್ನ ಧೈರ್ಯವನ್ನು ಬಿಟ್ಟು ಬಿಡುವುದಿಲ್ಲ.

ಸತ್ಯವೇದದಲ್ಲಿ ಯೋಬನು ಎಂಬ ಒಬ್ಬ ದೇವ ಮನುಷ್ಯನಿದ್ದನು. ಅವನು ಅನೇಕ ಹಿನ್ನಡೆಗಳನ್ನು- ಆರ್ಥಿಕವಾಗಿ, ಶಾರೀರಿಕವಾಗಿ, ಬಾಂಧವ್ಯಗಳಲ್ಲಿ ಹೀಗೆ ಎಲ್ಲಾ ರೀತಿಯಲ್ಲಿಯೂ ಹಿನ್ನಡೆಗಳನ್ನು ಅನುಭವಿಸಿದನು. ಆದರೂ ಅವನು ತನ್ನ ನಂಬಿಕೆಯನ್ನು ಕಡೆಯವರೆಗೂ ತಾಳ್ಮೆಯಿಂದ ಸಹಿಸಿಕೊಂಡಿದ್ದನು. ಇದಕ್ಕೆ ಕಾರಣವೇನಿದ್ದಿರಬಹುದು? ಅದುವೇ ಬಲವಾದ ಆತ್ಮ. ಅದುವೇ ಬಲವಾದ ಆಂತರಿಕ ಶಕ್ತಿ.

"ಆದರೆ ಮನುಷ್ಯರಲ್ಲಿ ಆತ್ಮವೊಂದುಂಟು, ಸರ್ವಶಕ್ತನ ಶ್ವಾಸದಿಂದ ಅವರಿಗೆ ವಿವೇಕ ದೊರೆಯುತ್ತದೆ." ಎಂದು ಯೋಬ 32:8ರಲ್ಲಿ ಹೇಳುತ್ತಾನೆ.

 ಈ ಒಂದು ಆತ್ಮಿಕ ಮನುಷ್ಯನ ಕುರಿತ ತಿಳುವಳಿಕೆಯ ಕಾರಣದಿಂದಾಗಿಯೇ ಈ ಒಂದು ಆಂತರಿಕ ಮನುಷ್ಯನ ಕುರಿತ ತಿಳುವಳಿಕೆಯ ಕಾರಣದಿಂದಾಗಿಯೇ ಯೋಬನು ತನ್ನ ಎಲ್ಲಾ ಅಡತಡೆಗಳನ್ನು ಎದುರಿಸಿ ನಿಲ್ಲುವಂತೆ ಯೋಬನನ್ನು ಮಾಡಿತ್ತು.

ನಿಮಗಿರುವ ಶುಭ ಸುದ್ದಿ ಏನೆಂದರೆ ನಿಮ್ಮನ್ನು ಇಂದು ಅನಾರೋಗ್ಯವು ನಿರುತ್ಸಾಹ ಗೊಳಿಸದಂತಹ, ನಿರುತ್ಸಾಹವು ಬಗ್ಗಿಸಲು ಸಾಧ್ಯವಿಲ್ಲದಂತಹ, ಕೆಟ್ಟ ಸುದ್ದಿಗಳು ತಡೆದು ನಿಲ್ಲಿಸಲಾಗದಂತ ಯಾವ ಪ್ರತಿಕೂಲತೆಗಳು ಪರಿಣಾಮ ಬೀರದಂತ ಮಟ್ಟಕ್ಕೆ ನೀವು ನಿಮ್ಮ ಆತ್ಮವನ್ನು ತಂದು ನಿಲ್ಲಿಸಬಹುದು. ನೀವು ಈ ಮಟ್ಟದವರೆಗೂ ನಿಮ್ಮ ಆತ್ಮಿಕ ಮನುಷ್ಯನನ್ನು ಬಲಗೊಳಿಸಬಹುದು.
Confession
1. ತಂದೆಯಾದ ದೇವರೇ ಈ ದಿನದಲ್ಲಿಯೇ ನಾನು ಭೂಮಿಗೆ ನಂಬಿಕೆಯ ವಾಕ್ಯಗಳೆಂಬ ಬೀಜವನ್ನು ಬಿತ್ತಿ ನನ್ನ ಜೀವನದಲ್ಲಿ ಆತ್ಮಿಕವಾದ ಸ್ವಾಭಾವಿಕವಾದ ಫಲವನ್ನು ಫಲಿಸಬೇಕೆಂದು ಯೇಸು ನಾಮದಲ್ಲಿ ಘೋಷಿಸುತ್ತೇನೆ.

2. ನಾನು ಭೂಪರ ಲೋಕದ ದೇವರಾದ ಕರ್ತನ ಮೇಲೆಯೇ ಭರವಸೆ ಮತ್ತು ನಂಬಿಕೆಯನ್ನು ಇಟ್ಟಿರುವುದರಿಂದ ನಾನು ನನ್ನ ಆತ್ಮವನ್ನು ಜಜ್ಜಿ ಹೋಗುವಂತೆ ಬಿಟ್ಟುಕೊಡುವುದಿಲ್ಲ. ನಾನು ಯಾವಾಗಲೂ ಮೇಲಿನವನಾ/ಳಾಗಿರುತ್ತೇನೆಯೇ ಹೊರತು ಕೆಳಗಿನವನ/ಳಲ್ಲ. ನಾನು ಯಾವಾಗಲೂ ತಲೆಯಾಗಿರುತ್ತೇನೆಯೇ ಹೊರತು ಬಾಲವಲ್ಲ. ನಾನು ಹೊರಗೆ ಹೋಗುವಾಗ ಆಶೀರ್ವಾದ ಒಳಗೆ ಬರುವಾಗ ಆಶೀರ್ವಾದ ಎಂದು ಯೇಸು ನಾಮದಲ್ಲಿ ಘೋಷಿಸುತ್ತೇನೆ ಆಮೇನ್.


Join our WhatsApp Channel


Most Read
● ಎದುರಾಗುವ ವಿರೋಧಗಳನ್ನು ನಂಬಿಕೆಯಿಂದ ಎದುರಿಸುವುದು.
● ಸರಿಯಾದವುಗಳನ್ನು ಶೋಧಿಸಿ ಅವುಗಳನ್ನೇ ಹಿಬಾಲಿಸುವುದು.
● ಆರಂಭಿಕ ಹಂತದಲ್ಲಿಯೇ ಕರ್ತನನ್ನು ಕೊಂಡಾಡಿರಿ
● ಅಂತ್ಯಕಾಲದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು : #1
● ಹೆಚ್ಚಿನ ಹೊರೆ ಬೇಡ
● ನಿಮ್ಮ ಬಿಡುಗಡೆಯನ್ನು ಕಾಪಾಡಿಕೊಳ್ಳುವುದು ಹೇಗೆ
● ದೇವರು ದರ್ಶನಕೊಡುವ ಸಮಯವನ್ನು ಗುರುತಿಸಿಕೊಳ್ಳುವುದು
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login