Daily Manna
2
1
42
ಪ್ರಾರ್ಥನೆಯಲ್ಲಿ ಗೊಂದಲಗಳನ್ನು ನಿವಾರಿಸುವುದು ಹೇಗೆ?
Thursday, 14th of August 2025
Categories :
ಚಿತ್ತಚಂಚಲತೆ(Distraction)
ಪ್ರಾರ್ಥನೆ (prayer)
ನೀವು ಎಂದಾದರೂ ಪ್ರಾರ್ಥಿಸಲು ಕುಳಿತಿದ್ದರೂ ನಿಮಗೆ ಅರಿವೇ ಇಲ್ಲದಂತೆ ನಿಮ್ಮ ಮನಸ್ಸು ಪಟ್ಟಣದಾದ್ಯಂತ ಅಲೆದಾಡುತ್ತಿದೆ ಎಂದು ಎನಿಸಿದುಂಟಾ? ಪ್ರಾರ್ಥನೆಯ ಸಮಯದಲ್ಲಿ ಗೊಂದಲಗಳು ಮತ್ತು ಅಡಚಣೆಗಳು ಎಲ್ಲರೂ ಎದುರಿಸುವ ಸಾಮಾನ್ಯ ಹೋರಾಟವಾಗಿದೆ.
ಈ ಯುದ್ಧದಲ್ಲಿ ನೀವು ಒಬ್ಬಂಟಿಯಾಗಿಲ್ಲ. ಆದಾಗ್ಯೂ, ಒಳ್ಳೆಯ ಸುದ್ದಿ ಎಂದರೆ ನೀವು ಅದನ್ನು ಜಯಿಸಬಹುದು. ಸತ್ಯವೇದ ಹೇಳುತ್ತದೆ, “ಆ ಫಿಲಿಷ್ಟಿಯನು ನಾಲ್ವತ್ತು ದಿವಸ ಹೊತ್ತಾರೆಯಲ್ಲಿಯೂ ಸಾಯಂಕಾಲದಲ್ಲಿಯೂ ಬಂದು ಬಂದು ಅದೇ ಪ್ರಕಾರ ಕೂಗುತ್ತಾ ನಿಲ್ಲುತ್ತಿದ್ದನು. (1 ಸಮುವೇಲ 17:16)
ಅಂದರೆ ಬೆಳಗ್ಗೆ ಮತ್ತು ಸಂಜೆ ಯಜ್ಞವನ್ನು ಅರ್ಪಿಸುವ ಸಮಯದಲ್ಲಿ ಗೋಲಿಯಾತನು ಬಂದು ಇಸ್ರಾಯೇಲ್ಯರನ್ನು ತೊಂದರೆಪಡಿಸಲು ಪ್ರಯತ್ನಿಸುತ್ತಿದ್ದನು ಎಂಬುದು ನಿಮಗೆ ತಿಳಿದಿದೆಯೇ?
ಸರಳವಾಗಿ ಹೇಳುವುದಾದರೆ, ಈ ಅಡಚಣೆಯು ಪ್ರಾರ್ಥನೆಯ ಸಮಯದಲ್ಲಿತ್ತು. ಪ್ರಾರ್ಥನೆಯ ಸಮಯದಲ್ಲಿ ನೀವು ನಿಶ್ಚಲತೆಯನ್ನು ಕಂಡುಕೊಳ್ಳಲು ಹೆಣಗಾಡುತ್ತಿದ್ದರೆ, ಪ್ರಾರ್ಥನೆಯಲ್ಲಿ ಉತ್ತಮ ಏಕಾಗ್ರತೆ ಪಡೆಯಲು ನಿಮಗೆ ಸಹಾಯ ಮಾಡುವ ಈ ಎರಡು ಸಲಹೆಗಳನ್ನು ಹಂಚಿಕೊಳ್ಳಲು ನನಗೆ ಅನುಮತಿಸಿ.
1. ಮೃದುವಾದ ವಾದ್ಯ ಸಂಗೀತವನ್ನು ಬಳಸಿ.
ಸಂಗೀತವು ಅದು ಬೇರೆ ಯಾವುದೇ ಸಂವಹನ ಸಾಧನದಂತೆ ನಮ್ಮ ಹೃದಯ ಮತ್ತು ಮನಸ್ಸುಗಳೊಂದಿಗೆ ಮಾತನಾಡುವ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ. ಸಂಗೀತವು ಎಲ್ಲಾ ಭಾಷಾ ಅಡೆತಡೆಗಳನ್ನು ಮೀರುತ್ತದೆ. ನಾನು ಪ್ರಾರ್ಥಿಸುವಾಗ ನಾನು ಆಗಾಗ್ಗೆ ಮೃದುವಾದ ವಾದ್ಯ ಸಂಗೀತವನ್ನು ಹಿನ್ನೆಲೆಯಾಗಿ ಬಳಸುತ್ತೇನೆ.
ಇದು ಪ್ರಾರ್ಥನೆಯಲ್ಲಿ ಉತ್ತಮವಾಗಿ ಏಕಾಗ್ರತೆ ವಹಿಸಲು ನನಗೆ ಸಹಾಯ ಮಾಡುತ್ತದೆ, ಆದರೆ ಮೃದುವಾದ ವಾದ್ಯ ಸಂಗೀತವು ನನ್ನ ಆತ್ಮದೊಂದಿಗೆ ಆಳವಾಗಿ ಮಾತನಾಡುತ್ತದೆ ಮತ್ತು ಗೊಂದಲಗಳನ್ನು ಮುಳುಗಿಸುತ್ತದೆ. ನಾನು ಆಗಾಗ್ಗೆ ಆರಾಧನೆ ಸಹ ಮಾಡುತ್ತಿರುತ್ತೇನೆ . ನೀವೂ ಪ್ರಯತ್ನಿಸಿ!
ಸಮಯವು ಹೇಗೆ ಕಳೆದುಹೋಗುತ್ತದೆ ಎಂಬುದನ್ನು ನೀವು ನೋಡುತ್ತೀರಿ.
2. ಪರ್ಯಾಯ ಸತ್ಯವೇದ ಓದುವಿಕೆ ಮತ್ತು ಪ್ರಾರ್ಥನೆ.
ಮಾಡಬೇಕಾದ ಕಾರ್ಯಗಳು ತುಂಬಾ ಇರುವುದರಿಂದ ನನ್ನ ಮನಸ್ಸು ಗಂಟೆಗೆ 200 ಕಿ.ಮೀ ವೇಗದಲ್ಲಿ ಓಡುತ್ತಿರುವ ಸಂದರ್ಭಗಳಿವೆ. ಅಂತಹ ಸಮಯದಲ್ಲಿ, ನಾನು ಮೃದುವಾದ ಆರಾಧನಾ ವಾದ್ಯ ಸಂಗೀತವನ್ನು ಹಾಕಿಕೊಂಡು ದೇವವಾಕ್ಯವನ್ನು ಓದಲು ಪ್ರಾರಂಭಿಸುತ್ತೇನೆ. ನಾನು ಇದನ್ನು ಮಾಡುತ್ತಿರುವಾಗ, ನನ್ನ ಮನಸ್ಸು ಅಲೆದಾಡುವುದನ್ನು ನಿಲ್ಲಿಸುತ್ತದೆ ಮತ್ತು ಆತನ ಧ್ವನಿಗೆ ಹೊಂದಿಕೊಳ್ಳುತ್ತದೆ.
ಒಂದು ಹಂತದಲ್ಲಿ, ಒಂದು ವಾಕ್ಯವು ನಿಜವಾಗಿಯೂ ನನ್ನ ಹೃದಯದೊಂದಿಗೆ ಮಾತನಾಡಲು ಪ್ರಾರಂಭಿಸುತ್ತದೆ. ಆ ಕ್ಷಣದಲ್ಲಿ, ನಾನು ನನ್ನ ಹೃದಯದಲ್ಲಿ ಭಾರ ಅನುಭವಿಸುವವರೆಗೆ ನಾನು ಆ ವಾಕ್ಯ ಹಿಡಿದು ಪ್ರಾರ್ಥಿಸಲು ಪ್ರಾರಂಭಿಸುತ್ತೇನೆ. ನಂತರ ನಾನು ಮತ್ತೆ ಮುಂದಿನ ವಾಕ್ಯಗಳನ್ನು ಓದಲು ಹಿಂತಿರುಗುತ್ತೇನೆ.
ಇದು ದೇವರವಾಕ್ಯ ಮತ್ತು ಪ್ರಾರ್ಥನೆಯಲ್ಲೂ ಮತ್ತು ಆತನ ಉಪಸ್ಥಿತಿಯಲ್ಲಿ ಉತ್ತಮ ಸಮಯವನ್ನು ಕಳೆಯುವಾಗ ನನ್ನ ಮನಸ್ಸು ಅಲೆದಾಡುವುದನ್ನು ಅವು ತಡೆಯುತ್ತದೆ.
ಒಂದನ್ನು ನೆನಪಿಡಿ, ಕರ್ತನು ತನ್ನ ಉಪಸ್ಥಿತಿಯಲ್ಲಿ ಸಮಯ ಕಳೆಯಲು ನೀವು ಮಾಡುವ ಪ್ರತಿಯೊಂದು ಪ್ರಯತ್ನವನ್ನು ಆತನು ಮೆಚ್ಚುತ್ತಾನೆ. ಅದಕ್ಕಾಗಿಯೇ ಆತನು ತನ್ನ ಪವಿತ್ರಾತ್ಮನು ನಮ್ಮ ದೌರ್ಬಲ್ಯದಲ್ಲಿ ನಮಗೆ ಸಹಾಯ ಮಾಡುವುದಾಗಿ ನಮಗೆ ವಾಗ್ದಾನ ಮಾಡಿದನು. (ರೋಮ 8:26)
Bible Reading: Jeremiah 10-12
Prayer
ಯೆಹೋವನೇ, ಮೊರೆಯಿಡುತ್ತೇನೆ; ಬೇಗನೆ ಬಾ. ನಾನು ಮೊರೆಯಿಡುವಾಗ ನನ್ನ ಕೂಗನ್ನು ಲಾಲಿಸು.
ನನ್ನ ಪ್ರಾರ್ಥನೆಯು ಧೂಪದಂತೆಯೂ ನಾನು ಕೈಯೆತ್ತುವದು ಸಂಧ್ಯಾನೈವೇದ್ಯದಂತೆಯೂ ನಿನಗೆ ಸಮರ್ಪಕವಾಗಲಿ.(ಕೀರ್ತನೆಗಳು 141:1-2)
Join our WhatsApp Channel

Most Read
● ದೇವರ ಪ್ರೀತಿಯನ್ನು ಅನುಭವಿಸುವುದು● ದೇವರ ವಾಕ್ಯವನ್ನು ಹೊಂದಿಕೊಳ್ಳಿರಿ.
● ಆಟ ಬದಲಿಸುವವ
● ನೀವೇ ಮಾದರಿಯಾಗಿರ್ರಿ
● ತಾವಾಗಿಯೇ ಹೇರಿಕೊಂಡ ಶಾಪಗಳಿಂದ ವಿಮೋಚನೆ
● ಇನ್ನು ಸಾವಕಾಶವಿಲ್ಲ.
● ನೆಪ ಹೇಳುವ ಕಲೆ
Comments