I. ನಾವು ನಮಗೆ ದೇವರು ಕೊಟ್ಟ ಸಮಯದಿಂದ ಆತನನ್ನು ಆರಾಧಿಸುತ್ತೇವೆ.
"ಆರು ದಿನಗಳು ಕೆಲಸನಡೆಯಬೇಕು; ಏಳನೆಯ ದಿನವು ಪರಿಶುದ್ಧವಾದ ದಿನ; ಅದು ಯೆಹೋವನಿಗೆ ಮೀಸಲಾದ ಸಬ್ಬತ್ ದಿನವಾದ್ದರಿಂದ ಅದರಲ್ಲಿ ನೀವು ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಿಬಿಡಬೇಕು". (ವಿಮೋಚನಕಾಂಡ 35:2)
ನೀವು ಯಾರನ್ನಾದರೂ "ಜೀವನ ಹೇಗಿದೆ?" ಎಂದು ಕೇಳಿದಾಗ ಅವರು "ನಾನು ಬ್ಯುಸಿ" ಎಂದು ಉತ್ತರಿಸುವ ಸಾಧ್ಯತೆಯಿದೆ. ನೀವು ಜಾಗರೂಕರಾಗಿಲ್ಲದಿದ್ದರೆ, ಈ ಕಾರ್ಯನಿರತತೆಯು ಕರ್ತ ನೊಂದಿಗಿನ ನಮ್ಮ ಸಂಬಂಧಕ್ಕೂ ನುಸುಳಬಹುದು. ನಾವು ಆತ ಕೊಟ್ಟ ನಮ್ಮ ಸಮಯದಿಂದ ದೇವರನ್ನು ಆರಾಧಿಸಬೇಕು. ನಾವು ಅದನ್ನು ಮಾಡುವುದು ಹೇಗೆ?
1. ಸಮಯವು ದೇವರ ಕೊಡುಗೆಯಾಗಿದೆ ಎಂಬ ಅಂಶವನ್ನು ಒಪ್ಪಿಕೊಳ್ಳಿರಿ.
2. ಈ ಭೂಮಿಯ ಮೇಲಿನ ನಮ್ಮ ಸಮಯವು ಶಾಶ್ವತತೆಗೆ ಹೋಲಿಸಿದರೆ ಮಿತವಾದದ್ದು ಎಂದು ತಿಳಿಯಿರಿ.
ಆದ್ದರಿಂದ, ದೇವರು ನಮ್ಮನ್ನು ಏನು ಮಾಡಲು ಕರೆದಿದ್ದಾನೆ ಎಂಬುದನ್ನು ಸಾಧಿಸಲು ನಾವು ಜ್ಞಾನದಿಂದ ಮತ್ತು ಉದ್ದೇಶಪೂರ್ವಕವಾಗಿ ಬದುಕಬೇಕು.
ಕೀರ್ತನೆಗಾರನು ಇದನ್ನು ಒಪ್ಪಿಕೊಂಡನು.
" ನಾನಾದರೋ ಯೆಹೋವನೇ, ನಿನ್ನಲ್ಲೇ ಭರವಸವಿಟ್ಟಿದ್ದೇನೆ; ನೀನೇ ನನ್ನ ದೇವರೆಂದು ಹೇಳಿಕೊಂಡಿದ್ದೇನೆ.
ನನ್ನ ಆಯುಷ್ಕಾಲವು ನಿನ್ನ ಕೈಯಲ್ಲಿದೆ;...
(ಕೀರ್ತನೆ 31:14-15)
ನಮ್ಮ ಸಮಯದಿಂದ ದೇವರನ್ನು ಆರಾಧಿಸಲು, ನಾವು ಆತನಿಗಾಗಿ ಸಮಯವನ್ನು ಮೀಸಲಿಡಲು ಕಲಿಯಬೇಕು. ಸಮಯವನ್ನು ಮೀಸಲಿಡುವುದು ಎಂದರೆ ಲಭ್ಯವಿರುವ ಸಮಯವನ್ನು ಪರಿಣಾಮಕಾರಿಯಾಗಿ ಬಳಸಲು ಕಲಿಯುವುದು.
ನೀವು ಪ್ರತಿದಿನ ಈ ಕೆಳಗಿನ ಪ್ರಾರ್ಥನೆಯನ್ನು ಪ್ರಾರ್ಥಿಸಬೇಕು: .
ನಮ್ಮ ದಿನಗಳು ಕೊಂಚವೇ ಎಂದು ಎಣಿಸಿಕೊಳ್ಳುವ ಹಾಗೆ ನಮಗೆ ಕಲಿಸು; ಆಗ ಜ್ಞಾನದ ಹೃದಯವನ್ನು ಪಡಕೊಳ್ಳುವೆವು.(ಕೀರ್ತನೆ 90:12)
II. ಆರಾಧನೆ ಎಂದರೆ ನಮ್ಮಲ್ಲಿನ ಅತ್ಯುತ್ತಮವಾದದ್ದನ್ನು ನೀಡುವುದು ಎಂದರ್ಥ.
ಸರ್ವಶಕ್ತನಾದ ದೇವರು, ಸಂಪೂರ್ಣವಾಗಿ ಸ್ವಾವಲಂಬಿಯಾಗಿರುವವನು ಆತನು ಆತನ ಜೀವನ ಸಾಗಿಸಲು ಯಾವುದೇ ರೀತಿಯಲ್ಲಿ ನಮ್ಮಿಂದ ಯಾವುದೇ ಉಡುಗೊರೆಯನ್ನು ಬಯಸುವುದಿಲ್ಲ.
”ತಾನೇ ಎಲ್ಲರಿಗೂ ಜೀವಶ್ವಾಸ ಮುಂತಾದದ್ದೆಲ್ಲವನ್ನೂ ಕೊಡುವವನಾಗಿರಲಾಗಿ ಕೊರತೆಯಿದ್ದವನಂತೆ ಮನುಷ್ಯರ ಕೈಗಳಿಂದ ಸೇವೆಹೊಂದುವವನೂ ಅಲ್ಲ". (ಅ. ಕೃ 17:25 )
ಪೂರ್ವ ದೇಶದಿಂದ ಬಂದ ಜ್ಞಾನಿಗಳು (ಜೋಯೀಷರು) ಕರ್ತನಾದ ಯೇಸುವನ್ನು ಆರಾಧಿಸಲು ಬಂದಾಗ, “ಅವರು ಅಡ್ಡಬಿದ್ದು ಆತನನ್ನು ಆರಾಧಿಸಿದರು. ನಂತರ ಅವರು ತಮ್ಮ ನಿಧಿಯ ಪೆಟ್ಟಿಗೆಗಳನ್ನು ತೆರೆದು ಚಿನ್ನ, ಧೂಪ ಮತ್ತು ರಕ್ತಬೋಳವನ್ನು ಕಾಣಿಕೆಯಾಗಿ ಅರ್ಪಿಸಿದರು.” (ಮತ್ತಾಯ 2:11)
ಸ್ಪಷ್ಟವಾಗಿ, ಆರಾಧನೆ ಮತ್ತು ಕಾಣಿಕೆ ಇವು ಪರಸ್ಪರ ಸಂಬಂಧ ಹೊಂದಿವೆ. ಕಾಣಿಕೆಯು ಆರಾಧನೆಯ ಅಭಿವ್ಯಕ್ತಿಯಾಗಿದೆ. ಫಿಲಿಪ್ಪಿಯ ಸಭೆಯ ಸದಸ್ಯರು ಅಪೊಸ್ತಲ ಪೌಲನ ಸೇವೆಯನ್ನು ಬೆಂಬಲಿಸಲು ತಮ್ಮ ಹಣವನ್ನು ನೀಡಿದಾಗ, ದೇವರು ಅದನ್ನು "ದೇವರಿಗೆ ಮೆಚ್ಚಿಕೆಯಾದದ್ದು, ಸುಗಂಧವಾಸನೆಯೇ, ಇಷ್ಟ ಯಜ್ಞವೇ." ಎಂದು ಪರಿಗಣಿಸಿದನು (ಫಿಲಿಪ್ಪಿ 4:18).
Bible Reading: Jeremiah 13-15
Confession
ನನ್ನ ದೇವರಾದ ಕರ್ತನನ್ನು ನಾನು ಘನಪಡಿಸುತ್ತೇನೆ ಮತ್ತು ಆತನ ಪಾದಪೀಠದಲ್ಲಿ ಅಡಬಿದ್ದು ಆರಾಧಿಸುತ್ತೇನೆ, ಏಕೆಂದರೆ ಆತನು ಪರಿಶುದ್ಧನು. (ಕೀರ್ತನೆ 99:5)
Join our WhatsApp Channel

Most Read
● ಮಾತಿನಲ್ಲಿರುವ ಶಕ್ತಿ● ಐಕ್ಯತೆ ಮತ್ತು ವಿಧೇಯತೆಯ ಒಂದು ದರ್ಶನ
● ದಿನ 27:40 ದಿನಗಳ ಉಪವಾಸ ಪ್ರಾರ್ಥನೆ
● ಯೇಸು ಈಗ ಪರಲೋಕದಲ್ಲಿ ಏನು ಮಾಡುತ್ತಿದ್ದಾನೆ?
● ದಿನ 36:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಸಫಲತೆ ಎಂದರೇನು?
● ವ್ಯಸನಗಳನ್ನು ನಿಲ್ಲಿಸುವುದು
Comments