हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಕರ್ತನು ಹೃದಯವನ್ನೇ ಶೋಧಿಸುವವನಾಗಿದ್ದಾನೆ.
Daily Manna

ಕರ್ತನು ಹೃದಯವನ್ನೇ ಶೋಧಿಸುವವನಾಗಿದ್ದಾನೆ.

Tuesday, 6th of February 2024
1 2 691
Categories : ಮಾನವ ಹೃದಯ (Human Heart)
 ನಾವು ಮಾಡುವ ಎಲ್ಲಾ ಸಂಗತಿಗಳಿಗೂ ನಮ್ಮ ಹೃದಯವೇ (ಆತ್ಮಿಕ ಮನುಷ್ಯನೇ) ಮೂಲ ಸ್ಥಾನ.
‭
"ಯೆಹೋವನಾದ ನಾನು ಪ್ರತಿಯೊಬ್ಬನಿಗೂ ಕರ್ಮಫಲವನ್ನು ಅವನವನ ನಡತೆಗೆ ತಕ್ಕ ಹಾಗೆ ಕೊಡಬೇಕೆಂದು ಹೃದಯವನ್ನು ಪರೀಕ್ಷಿಸುವವನೂ ಅಂತರಿಂದ್ರಿಯವನ್ನು ಶೋಧಿಸುವವನೂ ಆಗಿದ್ದೇನೆ."(ಯೆರೆಮೀಯ‬ ‭17:10‬)

ಕರ್ತನು ತಾನೇ ಹೃದಯವನ್ನು ಮನುಷ್ಯನ ಆಂತರಿಕ ವ್ಯಕ್ತಿಯನ್ನು ಶೋಧಿಸುವವನಾಗಿದ್ದಾನೆ. ಕರ್ತನು ಏಕೆ ಹೀಗೆ ಮಾಡುತ್ತಾನೆ? ಏಕೆಂದರೆ ನಮ್ಮ ಜೀವಿತದಲ್ಲಿನ ಪ್ರತಿಯೊಂದು ಕ್ರಿಯೆಗಳು, ಕೆಲಸಗಳು, ಪ್ರಯತ್ನಗಳು ಇತ್ಯಾದಿ ಎಲ್ಲ ಸಂಗತಿಗಳೂ ಹೃದಯದಿಂದಲೇ ಹುಟ್ಟುವಂಥದ್ದಾಗಿದೆ. ನಾವು ಮಾಡುವ ಕಾರ್ಯಗಳು ಆಡುವ ಮಾತುಗಳೆಲ್ಲವೂ ಪ್ರಪ್ರಥಮವಾಗಿ ಅವು ಆಂತರಿಕವಾಗಿ ನಾವು ಏನಾಗಿದ್ದೇವೋ ಅದರ ಉತ್ಪನ್ನವೇ ಆಗಿರುತ್ತದೆ.

ನಿಮ್ಮ ಹೃದಯವು ಅಥವಾ ಆತ್ಮಿಕ ಮನುಷ್ಯನು ಆನಂದ ಕರವಾಗಿ ಮುಂದುವರೆಯಲು ಅದಕ್ಕಾಗಿ ಯಾವಾಗಲೂ ನಿಮ್ಮನ್ನು ನಗಿಸುವ, ನಿಮ್ಮ ಕಡೆಯ ದೃಷ್ಟಿ ಬೀರುವ ಅಥವಾ ನಿಮ್ಮನ್ನು ಅಭಿನಂದಿಸುವಂತಹ ಸಂಗತಿಗಳೇ ಇರಬೇಕು ಎನ್ನುವ ವಿಚಾರಗಳನ್ನು ಅನುಮತಿಸ ಬೇಡಿರಿ. ನೀವು ಇಂತಹ ಕಲ್ಪನೆಗಳಿಗೆ ಪ್ರವೇಶವನ್ನು ನೀಡಲು ಆರಂಭಿಸಿದರೆ ಇದು ನಿಮಗೆ ತಿರುಗಿಸಿ ನಿಮ್ಮ ಸಂಬಂಧಗಳನ್ನೂ, ನಿಮ್ಮ ವೃತ್ತಿಯನ್ನೂ  ಗಂಭೀರವಾಗಿ ಬಾಧಿಸಲಾರಂಭಿಸಿ, ಅಷ್ಟೇ ಅಲ್ಲದೇ ನಿಮ್ಮ ಜೀವಿತದ ಪ್ರತಿಯೊಂದನ್ನೂ ಬಾದಿಸಲಾರಂಭಿಸುತ್ತದೆ. ಏಕೆಂದರೆ ನೀವು ಮಾಡುವ ಎಲ್ಲಾ ಕಾರ್ಯಗಳಿಗೂ ಹೃದಯವೇ ಮೂಲವಾಗಿದೆ

ನಮ್ಮ ಹೃದಯಗಳನ್ನು ನಾವು ಏಕೆ ಜಾಗರೂಕವಾಗಿ ಕಾಯ್ದುಕೊಳ್ಳಬೇಕು?
 ಏಕೆಂದರೆ ನಮ್ಮ ಹೃದಯವೇ ನಿರಂತರ ದಾಳಿಗೆ ಒಳಗಾಗುವಂತದ್ದಾಗಿದೆ.ಸೋಲೋಮನನು ನಿಮ್ಮ ಹೃದಯವನ್ನು ಜಾಗರೂಕತೆಯಿಂದ ಕಾಯ್ದುಕೊಳ್ಳಿ ಎಂದು ಹೇಳುತ್ತಿದ್ದಾನೆ ಎಂದರೆ, ನೀವು ಯುದ್ಧ ರಂಗದಲ್ಲಿ ವಾಸಿಸುತ್ತಿದ್ದು ಅಪಾಯದ ಸಂಭಾವ್ಯದಲ್ಲಿ ಇದ್ದೀರಿ ಎಂದು ಅರ್ಥ.

ನಮ್ಮಲ್ಲಿ ಅನೇಕರು ಈ ಯುದ್ಧದ ಸಂಗತಿಯ ವಾಸ್ತವತೆಯನ್ನು ಮರೆತುಬಿಡುತ್ತಾರೆ. ನಮ್ಮನ್ನು ನಾಶ ಮಾಡಲೇಬೇಕೆಂದು ನಿರ್ಧರಿಸಿಕೊಂಡ ವೈರಿಯು ನಮಗಿದ್ದಾನೆ. ಅವನು ದೇವರನ್ನು ಮಾತ್ರ ಎದುರಿಸುವವನಾಗಿರದೆ ಆತನಿಗೆ ಒಡಂಬಟ್ಟ ಎಲ್ಲವನ್ನೂ- ನಮ್ಮನ್ನು ಒಳಗೊಂಡು ಪ್ರತಿಯೊಂದನ್ನೂ ವಿರೋಧಿಸುವವನಾಗಿದ್ದಾನೆ.

ಈ ವೈರಿಯು ನಮ್ಮ ಹೃದಯದ ಮೇಲೆ ದಾಳಿ ಮಾಡಲು ಎಲ್ಲಾ ರೀತಿಯ ಅಸ್ತ್ರಗಳನ್ನು ಬಳಸುತ್ತಾನೆ. ಇವು ಮೇಲಿಂದ ಮೇಲೆ ನಮ್ಮ ಮೇಲೆ ಎರಗಿ ನಮ್ಮನ್ನು ನಿರಾಶೆಗೂ ಅಧೈರ್ಯಕ್ಕೂ ಅಥವಾ ಇನ್ನೂ ಹೆಚ್ಚಾಗಿ ಭ್ರಮನಿರಸನಕ್ಕೂ ನಡೆಸಿಬಿಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವರಂತೂ ತಮ್ಮ ಪ್ರಯತ್ನಗಳನ್ನೆಲ್ಲಾ ಕೈ ಚೆಲ್ಲಿಬಿಡುತ್ತಾರೆ ಅಥವಾ ಅಂಥ ಅಸ್ತ್ರಗಳಿಗೆ  ಶರಣಾಗಿ ಬಿಡುವ  ಪ್ರಚೋದನೆಗಳಿಗೆ ಒಳಗಾಗಿಬಿಡುತ್ತಾರೆ.

 ಆದುದರಿಂದಲೇ ನೀವಾಗಲಿ ನಾನಾಗಲಿ ನಮ್ಮನ್ನು ಉಳಿಸಿಕೊಳ್ಳಬೇಕೆಂದರೆ, ಇತರರನ್ನು ಉಜ್ಜೀವಿಸಬೇಕೆಂದರೆ ನಾವು ನಮ್ಮ ಹೃದಯಗಳನ್ನು ಜಾಗರೂಕತೆಯಿಂದ ಕಾಯ್ದುಕೊಳ್ಳಲೇಬೇಕು. ನಾವು ಇದನ್ನು ಮಾಡದೆ ಹೋದರೆ ನಾವು ಎಲ್ಲವನ್ನು ಕಳೆದುಕೊಂಡು ಬಿಡುತ್ತೇವೆ.
Prayer
ತಂದೆಯೇ ನಿನ್ನ ಆತ್ಮನ ಮೂಲಕ ನಮ್ಮ ಆತ್ಮೀಯ ಮನುಷ್ಯನ ಮೇಲೆ ನಿನ್ನ ಪ್ರೀತಿಯನ್ನು ಸುರಿಸು. ಆ ಪ್ರೀತಿಯನ್ನು ತಿರುಗಿ ನಿನಗೂ ಇತರರಿಗೂ ತಲುಪಿಸುವಂತೆ ನಮ್ಮ ಹೃದಯವು ನಿನ್ನ ಆ ಪ್ರೀತಿಯು ತುಂಬಿ-ಹೊರಸೂಸಲಿ. (ರೋಮಾ 5:5)

ತಂದೆಯೇ, ಯೇಸುಕ್ರಿಸ್ತನಿಗೆ ತೋರಿಸಿದ ಪ್ರೀತಿಯನ್ನು ನಮಗೂ ಅನುಗ್ರಹಿಸೆಂದು ಯೇಸುನಾಮದಲ್ಲಿ ಬೇಡುತ್ತೇವೆ. (ಯೋಹಾನ 17:26).

 ತಂದೆಯೇ, ನನ್ನ ಪೂರ್ಣ ಹೃದಯದಿಂದಲೂ, ಪೂರ್ಣ ಪ್ರಾಣದಿಂದಲೂ, ಪೂರ್ಣ ಬಲದಿಂದಲೂ, ಪೂರ್ಣ ಬುದ್ಧಿಯಿಂದಲೂ ನಿನ್ನನ್ನು ಪ್ರೀತಿಸಲು ನಿನ್ನ ಕೃಪೆಯನ್ನು ನನಗೆ ಅನುಗ್ರಹಿಸು.(ಮಾರ್ಕ 12:30).

ತಂದೆಯೇ, ಯೇಸುವಿನ ಪ್ರೀತಿ ಅಗಾಧತೆಯನ್ನು ಗ್ರಹಿಸಿಕೊಳ್ಳುವಂತೆಯೂ ಅದರಲ್ಲಿ ಸ್ಥಿರವಾಗಿ ಯಾವಾಗಲೂ ನೆಲೆಗೊಂಡಿರುವಂತೆಯೂ ಯೇಸು ನಾಮದಲ್ಲಿ ನಿನ್ನ ಕೃಪೆಯನ್ನು ಅನುಗ್ರಹಿಸು.(ಯೋಹಾನ 15:9) ಆಮೆನ್.

Join our WhatsApp Channel


Most Read
● ದೈವಿಕ ಅನುಕ್ರಮ - 1
● ಕನಸುಗಳ ಕೊಲೆಪಾತಕರು
● ಎದುರಾಗುವ ವಿರೋಧಗಳನ್ನು ನಂಬಿಕೆಯಿಂದ ಎದುರಿಸುವುದು.
● ದಿನ 04: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕರ್ತನು ಎಂದಿಗೂ ಕೈ ಬಿಡುವುದಿಲ್ಲ
● ಸಿಟ್ಟಿನ ಬಲೆಯಿಂದ ದೂರ ಉಳಿಯುವುದು
● ಅದ್ಭುತಗಳಲ್ಲಿ ಕಾರ್ಯ ಮಾಡುವುದು - ಕೀಲಿಕೈ #2
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login