हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ನಿಮ್ಮ ಹೃದಯವನ್ನು ಕಾಪಾಡಿಕೊಳ್ಳುವುದು ಹೇಗೆ?
Daily Manna

ನಿಮ್ಮ ಹೃದಯವನ್ನು ಕಾಪಾಡಿಕೊಳ್ಳುವುದು ಹೇಗೆ?

Wednesday, 4th of June 2025
1 0 119
Categories : ಮಾನವ ಹೃದಯ (Human Heart)
ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿ, ಏಕೆಂದರೆ ಅದು ನಿಮ್ಮ ಜೀವನದ ಹಾದಿಯನ್ನು ನಿರ್ಧರಿಸುತ್ತದೆ. (ಜ್ಞಾನೋಕ್ತಿ 4:23 ) 

ಈ ವಾಕ್ಯವು ಬೇರೆ ಯಾರಾದರೂ ನಿಮ್ಮ ಹೃದಯವನ್ನು ಕಾಯುತ್ತಾರೆ ಎಂದು ಅದು ಹೇಳುತ್ತಿಲ್ಲ  ಎಂಬುದನ್ನು ಗಮನಿಸಿ. ದೇವರು ನಿಮ್ಮ ಹೃದಯವನ್ನು ಕಾಪಾಡುತ್ತಾನೆ, ನಿಮ್ಮ ನೆರೆಯವನು ನಿಮ್ಮ ಹೃದಯವನ್ನು ಕಾಪಾಡುತ್ತಾನೆ ಅಥವಾ ನಿಮ್ಮ ಪಾಸ್ಟರ್  ನಿಮ್ಮ ಹೃದಯವನ್ನು ಕಾಪಾಡುತ್ತಾನೆ ಎಂದು ಅದು ಹೇಳುತ್ತಿಲ್ಲ. ನೀವೇ  ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಬೇಕು ಎಂದು ಅದು ಹೇಳುತ್ತದೆ. 

ಲೋಕವು ನಿಮ್ಮ ಹೃದಯವನ್ನು ನಂಬಿ,ನಿಮ್ಮ ಹೃದಯವನ್ನು ಅನುಸರಿಸಿ, ನಿಮ್ಮ ಹೃದಯ ಹೇಳುವುದನ್ನು ಆಲಿಸಿ ಎಂದೆಲ್ಲಾ  ಹೇಳುತ್ತದೆ ಎಂಬುದು  ನನಗೆ ತಿಳಿದ ವಿಷಯವೇ. ಆದರೆ ದೇವರವಾಕ್ಯವು  ಹೃದಯವನ್ನು ಅನುಸರಿಸುವಂತೆ ಹೇಳುವುದಿಲ್ಲ; ಬದಲಿಗೆ ಅದು ನಿಮ್ಮ ಹೃದಯಕ್ಕೆ  ಉಪದೇಶಿಸಿ ಎಂದು ಹೇಳುತ್ತದೆ. ಅದು ಯಾವುದನ್ನು  ಅನುಸರಿಸಬೇಕೆಂದು ಕಲಿಸಿಕೊಡಿ ಎಂದು ಹೇಳುತ್ತದೆ. 

ಹಾಗಾದರೆ ನೀವು ಅದನ್ನು ಹೇಗೆ ಮಾಡುತ್ತೀರಿ? 
ಜ್ಞಾನೋಕ್ತಿ 4 ರ ಉಳಿದ ಭಾಗವು ಪರಿಗಣಿಸಿ ನೋಡುವಾಗ ಅದು  ನಮಗೆ ನಾಲ್ಕು ವಿಷಯಗಳನ್ನು ನೀಡುತ್ತದೆ: 

1.ನೀವು ಏನನ್ನು  ಮಾತನಾಡುತ್ತೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ.

"ಸೊಟ್ಟ ಮಾತುಗಳನ್ನು ನಿನ್ನಿಂದ ತೊಲಗಿಸಿಬಿಡು, ತುಟಿಗಳ ವಕ್ರತೆಯನ್ನು ದೂರಮಾಡು." ಜ್ಞಾನೋಕ್ತಿ 4:24.
ನೀವು ಮಾತನಾಡುವ ಮಾತುಗಳ ವಿಚಾರದಲ್ಲಿ ಜಾಗ್ರತೆ ವಹಿಸುವ ಮೂಲಕ ನಿಮ್ಮ ಹೃದಯವನ್ನು ಪೋಷಿಸಬಹುದು.

2.ನೀವು ಏನನ್ನು ನೋಡುತ್ತಿದ್ದೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ. 
"ನೆಟ್ಟಗೆ ದೃಷ್ಟಿಸು, ನಿನ್ನ ಕಣ್ಣುಗಳು ನಿನ್ನ ಮುಂದೆಯೇ ಇರಲಿ".ಜ್ಞಾನೋಕ್ತಿ 4:25
ನೀವು ಏನನ್ನು  (ಅಥವಾ ಯಾರನ್ನು) ನೋಡುತ್ತಿದ್ದೀರಿ? ಅದರ ಕುರಿತು ಜಾಗ್ರತೆ ವಹಿಸಿ.ಯಾಕೆಂದರೆ  ಕ್ರಿಸ್ತನು ಯಾವುದಕ್ಕಾಗಿ ಸತ್ತನೋ ಅವುಗಳೇ  ಹೆಚ್ಚಾಗಿ ರಂಜನೀಯವಾಗಿ ನಮಗೆ ಕಾಣುತ್ತಿರುತ್ತದೆ.

3.ನೀವು ಎಲ್ಲಿಗೆ ಹೆಜ್ಜೆಹಾಕುತ್ತಿದ್ದೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ. 
"ನೀನು ನಡೆಯುವ ದಾರಿಯ ಬಗ್ಗೆ ಗಮನವಿರಲಿ; ನೀನು ಕೈಗೊಳ್ಳುವ ಹಾದಿ ಸ್ಥಿರವಾಗಿರಲಿ".ಜ್ಞಾನೋಕ್ತಿ 4:26.
ಸಾಮಾನ್ಯವಾಗಿ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಲು  ಮತ್ತು ನೀವು ಏನು ಮಾತನಾಡುತ್ತಿದ್ದೀರಿ  ಮತ್ತು ನೋಡುತ್ತಿದ್ದೀರಿ  ಎಂಬುದನ್ನು ಬದಲಾಯಿಸಿಕೊಳ್ಳಬೇಕೆಂದರೆ  - ನೀವು ಎಲ್ಲಿ ಸುತ್ತಾಡುತ್ತೀರಿ ಮತ್ತು ಯಾರೊಂದಿಗೆ ಸುತ್ತಾಡುತ್ತೀರಿ ಎಂಬುದನ್ನು ಸಹ ಬದಲಾಯಿಸಬೇಕಾಗುತ್ತದೆ. 
"ನೀವು ಹುಟ್ಟುವ  ಕುಟುಂಬವನ್ನು  ಆಯ್ಕೆ ಮಾಡಿಕೊಳ್ಳಲು  ನಿಮಗೆ ಸಾಧ್ಯವಿಲ್ಲ ಆದರೆ ನೀವು ಖಂಡಿತವಾಗಿಯೂ ನಿಮ್ಮ ಸ್ನೇಹಿತರನ್ನು ಆಯ್ಕೆ ಮಾಡಬಹುದು. ಆಯ್ಕೆ ನಿಮ್ಮದು." ಎಂದು ಯಾರೋ ಒಬ್ಬರು ಹೇಳಿದ್ದಾರೆ.

4.ಯಾವುದಾದರೂ ಕೇಡಿನ ಸಂಗತಿ ಎಂದು ತೋರಿಬಂದರೆ, ಅದರಿಂದ ದೂರವಿರಿ.
"ನಿನ್ನ ಬಲಕ್ಕಾಗಲಿ, ಎಡಕ್ಕಾಗಲಿ ತಿರುಗಬೇಡ; ಕೇಡಿನಿಂದ ನಿನ್ನ ಕಾಲುಗಳು ದೂರವಿರಲಿ". ಜ್ಞಾನೋಕ್ತಿ 4:27 
ಈಗ, ಒಳ್ಳೆಯದು ಅಥವಾ ತಟಸ್ಥವಾದದ್ದು ಯಾವುದೇ ಆಗಲಿ  ನಮ್ಮ ಜೀವನದಲ್ಲಿ ದೇವರಿಗಿಂತ ಹೆಚ್ಚು ಮುಖ್ಯವಾದಾಗ ಅದು ಕೆಟ್ಟದಾಗಬಹುದು. ಉತ್ತಮ ಆಟವನ್ನು ನೋಡುವುದು; ಅದರಲ್ಲಿ ಯಾವುದೇ ತಪ್ಪಿಲ್ಲ, ಅದಕ್ಕೆ  ತುಂಬಾ ಮುಖ್ಯತ್ವ ನೀಡುವಾಗ ಒಂದು ವೇಳೆ  ನಿಮ್ಮ ನೆಚ್ಚಿನ ತಂಡವು ಸೋತರೆ  ವಾರವಿಡೀ ನಿಮ್ಮನ್ನು ಕೋಪಗೊಳ್ಳುವಂತೆಯೋ  ಅಥವಾ ಖಿನ್ನತೆಗೋ ಅದು  ಒಳಪಡಿಸುತ್ತದೆ. 

5.ಪ್ರಾರ್ಥನೆಯು ನಿಮ್ಮನ್ನು ಬಲಪಡಿಸುತ್ತದೆ ಮತ್ತು ನಿಮ್ಮನ್ನು ಎದೆಗುಂದದಂತೆ ಕಾಪಾಡುತ್ತದೆ. ಇದು ಹೇಗೆ ಸಂಭವಿಸುತ್ತದೆ?
"ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬದಕ್ಕೆ ಯೇಸು ತನ್ನ ಶಿಷ್ಯರಿಗೆ ಒಂದು ಸಾಮ್ಯ ಹೇಳಿದನು  “(ಲೂಕ 18:1)

ನಾವು ಪ್ರಾರ್ಥಿಸುವಾಗ, ಎಲ್ಲಾ ತಿಳುವಳಿಕೆಯನ್ನು ಮೀರುವ ದೇವರ ಶಾಂತಿಯು ಕ್ರಿಸ್ತ ಯೇಸುವಿನ ಮೂಲಕ ನಿಮ್ಮ ಹೃದಯಗಳನ್ನು ಮತ್ತು ಮನಸ್ಸುಗಳನ್ನು ಕಾಯುತ್ತದೆ. ನಾವು ದೇವರ ಮುಂದೆ ಬಂದು ನಮ್ಮ ವಿನಂತಿಗಳನ್ನು ಆತನಿಗೆ ತಿಳಿಸಿದಾಗ ಮಾತ್ರವೇ  ಈ ಶಾಂತಿ ಬರುತ್ತದೆ.

Bible Reading: 2 Chronicles 36, Ezra 1-2
Prayer
ತಂದೆಯೇ, ನಾನು ಬೇಕಾದ ಒಂದೇ ವಿಷಯದ ವ್ಯಕ್ತಿಯಾಗಿ ಬದುಕಲು ಬದ್ಧನಾಗಿದ್ದೇನೆ. ಬೆಥಾನಿಯ ಮರಿಯಳು ಮಾಡಿದಂತೆ ನಿಮ್ಮ ಪಾದಗಳ ಬಳಿ ನಿಯಮಿತವಾಗಿ ಕುಳಿತುಕೊಳ್ಳಲು ನನಗೆ ಸಹಾಯ ಮಾಡು. 
ಇಂದು ನಾನು ಕಲಿತ ಎಲ್ಲಾ ವಿಷಯಗಳನ್ನು ಕಾರ್ಯರೂಪಕ್ಕೆ ತರಲು ನನಗೆ ಯೇಸುನಾಮದಲ್ಲಿ  ಕೃಪೆಯನ್ನು ಅನುಗ್ರಹಿಸು. ಆಮೆನ್

Join our WhatsApp Channel


Most Read
● ದೇವರನ್ನು ಸ್ತುತಿಸಲು ಇರುವ ಸತ್ಯವೇದಕ್ಕನುಸಾರವಾದ ಕಾರಣಗಳು 
● ಒತ್ತಡವನ್ನು ಓಡಿಸಲು ಇರುವ ಮೂರು ಶಕ್ತಿಯುತ ಮಾರ್ಗಗಳು
● ಚಾಡಿಮಾತು ಸಂಬಂಧಗಳನ್ನು ಹಾಳುಮಾಡುತ್ತದೆ
● ಯಜಮಾನನ ಬಯಕೆ
● ನಿಮ್ಮ ದಿನವೇ ನಿಮ್ಮನ್ನು ವ್ಯಾಖ್ಯಾನಿಸುತ್ತದೆ
● ದಿನ 35:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಅಗ್ನಿಯು ಸುರಿಯಲ್ಪಡಬೇಕು
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login