हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಬದಲಾಗಲು ಇರುವ ತೊಡಕುಗಳು.
Daily Manna

ಬದಲಾಗಲು ಇರುವ ತೊಡಕುಗಳು.

Wednesday, 6th of March 2024
3 3 542
Categories : ಬದಲಾವಣೆ (Change)
ನೀವು ಯಾವಾಗಲೂ ಮಾಡಿದ್ದನ್ನೇ ಮಾಡುತ್ತಿದ್ದರೆ ಹೊಸ ಸಂಗತಿಗಳು ಜರಗುತ್ತದೆ ಎಂದು ನೀವು ನಿರೀಕ್ಷಿಸಲು ಸಾಧ್ಯವಿಲ್ಲ. ಒಂದು ಅಡಿಗೆಯಲ್ಲಿ ಹೊಸ ರುಚಿಯನ್ನು ನೀವು ನಿರೀಕ್ಷಿಸಬೇಕಾದರೆ ಬೇರೆ ಏನನ್ನಾದರೂ ನೀವು ಅಡುಗೆ ಮಾಡುವ ಕ್ರಮದಲ್ಲಿ ಅಥವಾ ಹಾಕುವ ಪದಾರ್ಥಗಳಲ್ಲಿ ಬದಲಾಯಿಸಿರಬೇಕಲ್ಲವೇ. ನೀವು ಹೊಸ ಬೆಳೆಯನ್ನು ನೋಡಬೇಕಾದರೆ ನೀವು ಬಿತ್ತುವ ಬೀಜವನ್ನು ಬದಲಾಯಿಸಬೇಕು.ಸರಳವಾಗಿ ಇಡುವ ಒಂದು ಬದಲಾವಣೆ ಹೆಜ್ಜೆಯು ಪ್ರತಿಫಲದ ಗುಣಮಟ್ಟವನ್ನು ಪ್ರಮಾಣವನ್ನು ಬದಲಾಯಿಸುತ್ತದೆ

ಪ್ರತಿಯೊಬ್ಬರ ವೈಯಕ್ತಿಕ ಜೀವಿತದಲ್ಲಿ 5 ಸಂಗತಿಗಳು ಅವರು ಬದಲಾವಣೆ ಹೊಂದಲು ತೊಡಕಾಗಿರುತ್ತದೆ.

1. ಅಹಂಕಾರ
ಅಹಂಕಾರವು ನಾನೇನೂ ಬದಲಾಗಬೇಕಾದ ಅವಶ್ಯಕತೆ ಇಲ್ಲ ಎನ್ನುತ್ತದೆ. ಅಹಂಕಾರವು ತನ್ನ ಸ್ವಬುದ್ಧಿಯ ಮೇಲೆ ಆಧಾರಗೊಂಡು ತನ್ನಗನಿಸಿದಂತೆಯೇ ಕಾರ್ಯ ಮಾಡಲು ಆಸಕ್ತಿ ತೋರುತ್ತದೆ. ಅಹಂಕಾರವು ದೇವರ ಮಾರ್ಗದಲ್ಲಿ ತನ್ನ ಕಾರ್ಯ ಮಾಡಲು ಆಸಕ್ತಿ ತೋರುವುದಿಲ್ಲ.

ದೀನ ಮನಸ್ಸು ದೇವರ ಮಾರ್ಗದಲ್ಲಿ ಕಾರ್ಯ ಮಾಡಲು ಆಸಕ್ತಿ ತೋರಿಸುತ್ತದೆ.

"ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ."(ರೋಮಾಪುರದವರಿಗೆ‬ ‭12:2‬)

ಅಹಂಕಾರವು ಬದಲಾವಣೆ ಹೊಂದಲು ಇರುವ ತೊಡಕಾಗಿದೆ ಅದು ಯಾವಾಗಲೂ ನಾನು ಬದಲಾಗುವ ಅವಶ್ಯಕತೆ ಇಲ್ಲ ಎಂದೇ ಹೇಳುತ್ತದೆ. ಅಹಂಕಾರವು ಯಾವಾಗಲೂ ತನ್ನ ಪ್ರಸ್ತುತ ಸ್ಥಿತಿಯಲ್ಲೇ ಇರಲು ಬಯಸುತ್ತದೆ. ಅಹಂಕಾರಕ್ಕೆ ತನ್ನದೇ ಆದ ವಿಚಾರಾಧಾರೆ ಇರುತ್ತದೆ. ನಿಮ್ಮ ಜೀವಿತದಲ್ಲಿ ಎಲ್ಲಿಯವರೆಗೂ ಅಹಂಕಾರಕ್ಕೆ ಜಾಗವಿರುವುದೋ ಅಲ್ಲಿಯವರೆಗೂ ನೀವು ಬದಲಾಗಲು ಸಾಧ್ಯವೇ ಇಲ್ಲ.

2. ಭಯ
ಭಯವು ನನಗೆ ಬದಲಾಗಲು ಭಯವಿದೆ ಎನ್ನುತ್ತದೆ.
ನೀವು ನನಗೆ ಬದಲಾಗಲು ಹೇಳುತ್ತೀರಿ, ಆದರೆ ನನಗೆ ಇದರಿಂದ ಬರುವ ಅಪಾಯಗಳನ್ನು ಎದುರಿಸಲು ಭಯವಾಗುತ್ತದೆ ಎನ್ನುತ್ತದೆ

ಇಂಥವರಿಗೆ ಬದಲಾಗಲು ಭಯ ಆದ್ದರಿಂದಲೇ ಅವರು ಯಾವುದೇ ಹೊಸ ಸಂಗತಿಗಳ ಕಡೆಗೆ ಹೆಜ್ಜೆ ಇಡದೆ ಅವರು ಈಗ ಇಡುತ್ತಿರುವ ಹೆಜ್ಜೆಗಳ ಮೇಲೆಯೇ ಜೋತು ಬಿದ್ದಿರುತ್ತಾರೆ.ತಾವು ತಪ್ಪಾದ ದೋಣಿಯಲ್ಲಿ ಸಾಗುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳುವುದನ್ನು ಬಿಟ್ಟು ತಮಗಿರುವ ಭಯದ ದೆಸೆಯಿಂದ ತಾವು ನಂಬಿರುವ ಅದೇ ನಂಬಿಕೆಯ ವ್ಯವಸ್ಥೆಯ ಮೇಲೆಯೇ ಜನರು ಅನೇಕ ಬಾರಿ ಜೋತು ಬೀಳುತ್ತಾರೆ. ಅದು ಅವರ ಸುಭದ್ರತೆ ಎನಿಸುವ ವ್ಯವಸ್ಥೆಯಾಗಿರುತ್ತದೆ. ಅವರಿಗೆ ಅವರು ಏನನ್ನುತ್ತಾರೋ? ಇವರು ಏನು ಅನ್ನುತ್ತಾರೋ? ಎಂಬ ಭಯ. ಆ ಭಯವೇ ಅವರು ಬದಲಾವಣೆ ಹೊಂದದಂತೆ ಅವರನ್ನು ತಡೆದು ನಿಲ್ಲಿಸುತ್ತದೆ

"ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಶಿಕ್ಷಣಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ."(‭‭2 ತಿಮೊಥೆಯನಿಗೆ‬ ‭1:7‬)

ನಿಮ್ಮ ಗತಕಾಲದಲ್ಲಿ ನಡೆದುದ್ದನ್ನು ನೆನೆಸಿ ಭಯಪಡಬೇಡಿರಿ ದೇವರು ಕೊಡಬೇಕೆನ್ನುತ್ತಿರುವ ಅತ್ಯುತ್ತಮವಾದ ಸಂಗತಿಯನ್ನು ಬಿಟ್ಟು ಕೇವಲ ಉತ್ತಮವಾದದಕ್ಕೆ ಸಂತೃಪ್ತಿಪಟ್ಟುಕೊಂಡು ಕುಳಿತುಕೊಳ್ಳಬೇಡಿ "ಅತ್ಯುತ್ತಮವಾದದ್ದಕ್ಕೆ ಉತ್ತಮ ಎಂಬುದೇ ಶತ್ರು" ಎಂದು ಒಬ್ಬರು ಹೇಳಿದ್ದಾರೆ.

ಭಯದಿಂದ ಹೊರಬರಲು ಇದುವೇ ಸುಸಮಯವಾಗಿದೆ. ಇದುವೇ ನೀರಿನ ಮೇಲೆ ನಡೆಯಬೇಕಾದ ಸಮಯವಾಗಿದೆ. ಭಯದಿಂದ ಹೊರಬರಲು ಇದುವೇ ಯೇಸುವಿನ ಮೇಲೆ ದೃಷ್ಟಿಯ ನೀಡಬೇಕಾದ ಸಮಯವಾಗಿದೆ.
ಮಹತ್ತರವಾದ ಬದಲಾವಣೆಯೊಂದು ಬರುತ್ತಲಿದೆ.
Prayer
ತಂದೆಯೇ, ನನ್ನ ಹೃದಯವನ್ನು ಶೋಧಿಸು. ನನ್ನಲ್ಲಿರುವ ಎಲ್ಲಾ ಅಹಂಕಾರವನ್ನು ತೊಡೆದುಹಾಕು. ನಿನ್ನ ಮಗನಾದ ಯೇಸುವಿನಲ್ಲಿದ್ದ ದೀನತ್ವದ ವಸ್ತ್ರವನ್ನು ನನಗೆ ತೊಡಿಸು.

ತಂದೆಯೇ ನೀನು ನನಗೆ ಭಯದ ಆತ್ಮವನ್ನು ಕೊಡದೇ ಬಲ-ಪ್ರೀತಿ- ಶಿಕ್ಷಣದ ಆತ್ಮವನ್ನು ನೀನು ನನಗೆ ಅನುಗ್ರಹಿಸಿರುವುದಕ್ಕಾಗಿ ನಿನಗೆ ಸ್ತೋತ್ರ ಸಲ್ಲಿಸುತ್ತೇನೆ.


Join our WhatsApp Channel


Most Read
● ದಿನ 01 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ 
● ಸೆರೆಯಲ್ಲಿ ದೇವರ ಸ್ತೋತ್ರ
● ಅಚ್ಚುಮೆಚ್ಚಲ್ಲ, ಆದರೆ ಆತ್ಮೀಯತೆ
● ಸಮಯದ ಸೂಚನೆಗಳ ವಿವೇಚನೆ.
● ನಿಮ್ಮ ನಂಬಿಕೆಯಲ್ಲಿ ರಾಜಿ ಮಾಡಿಕೊಳ್ಳಬೇಡಿ
● ಪರಿಶೋಧನೆಯ ಸಮಯದಲ್ಲಿ ನಂಬಿಕೆ
● ಭೂಮಿಗೆ ಉಪ್ಪೋ ಅಥವಾ ಉಪ್ಪಿನ ಸ್ತಂಭವೋ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login