हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಅಧರ್ಮದ ಆಳ್ವಿಕೆಯ ಬಲವನ್ನು ಮುರಿಯುವುದು-II
Daily Manna

ಅಧರ್ಮದ ಆಳ್ವಿಕೆಯ ಬಲವನ್ನು ಮುರಿಯುವುದು-II

Monday, 18th of March 2024
1 0 584
Categories : ಪಾಪ (sin)
ನಾನು ನಿನ್ನೆ ಹೇಳಿದ ಹಾಗೆ ಅಧರ್ಮವು ಸೈತಾನನಿಗೆ ಸಾಧನೆಯತ್ತ ಸಾಗುತ್ತಿರುವ ತಲೆಮಾರುಗಳಿಗೆ ತಂದೆ ಮಾಡಿದ ಪಾಪಗಳನ್ನು ಮಕ್ಕಳೂ ಮಾಡುವಂತೆ ಪ್ರೇರೇಪಿಸುವಂತಹ ಕಾನೂನು ಬದ್ಧ ಅಧಿಕಾರ ಕೊಡುತ್ತದೆ.

"ನಾನು ಆತನ ದೃಷ್ಟಿಯಲ್ಲಿ ನಿರ್ದೋಷಿಯು; ಪಾಪದಲ್ಲಿ ಬೀಳದಂತೆ ಜಾಗರೂಕತೆಯಿಂದ ನಡೆದುಕೊಂಡೆನು."(ಕೀರ್ತನೆಗಳು‬ ‭18:23‬)

ದಾವೀದನಿಗೆ ತಾನು ಪ್ರಾರ್ಥಿಸಿದರೆ ದೇವರು ಕೇಳಿ ತನಗೆ ಸದುತ್ತರವನ್ನು ಕೊಡುತ್ತಾನೆ ಎಂಬ ಭರವಸೆ ಇತ್ತು. ಏಕೆಂದರೆ ಅವನು ಅಧರ್ಮದ ಆಳ್ವಿಕೆಗೆ ತನ್ನನ್ನು ಒಪ್ಪಿಸಿ ಕೊಟ್ಟಿರಲಿಲ್ಲ ಎಂಬ ಭರವಸೆ ಅವನಿಗಿತ್ತು. ನೋಡಿರಿ, ಅಧರ್ಮವೆಂದರೆ ಒಂದು ನಿರ್ದಿಷ್ಟ ಬಲಹೀನತೆಯ ಕಡೆಗೆ ಬಾಗಿ ಒರಗುವುದಾಗಿದೆ.

ಸೈತಾನನು ದಾವಿದನನ್ನು ಅವನ ಕುಟುಂಬದ ವಂಶಾವಳಿಯಲ್ಲಿದ್ದ ಪಾಪಗಳಿಗೆ ಎಳೆಯುವ ಪ್ರಲೋಭನೆಗಳನ್ನು ಒಡ್ದುತ್ತಲೇ ಇದ್ದನು. ಆದರೆ ದಾವಿದನು ಆ ಸಮಯದಲ್ಲಿ ಈ ಪ್ರಲೋಭನೆಗಳ ಬಲಕ್ಕೆ ವಿರುದ್ಧವಾಗಿ ನಿಲ್ಲಲು ಕರ್ತನೊಂದಿಗೆ ಅನ್ಯೋನ್ಯವಾದಂತಹ ಸಂಬಂಧವನ್ನು ಬೆಳೆಸಿಕೊಂಡನು.

ನೀವೊಂದು ವಿಚಾರವನ್ನು ಅರ್ಥಮಾಡಿಕೊಳ್ಳಬೇಕೆಂದು ನಾನು ಇಲ್ಲಿ ಬಯಸುತ್ತೇನೆ. ಯಾವುದಾದರೂ ವ್ಯಕ್ತಿಯ ಮೇಲಿದ್ದ ಅಧರ್ಮದ ಆಳ್ವಿಕೆಯ ಬಲವು ಮುರಿಯಲ್ಪಟ್ಟಿದೆ ಎಂದರೆ ಅದರ ಅರ್ಥ ಆ ವ್ಯಕ್ತಿಯು ಪುನಃ ಶೋಧನೆಗೆ ಒಳಗಾಗುವುದೇ ಇಲ್ಲ ಎಂಬುದಲ್ಲ. ಸರಳವಾಗಿ ಹೇಳಬೇಕೆಂದರೆ ನಮಗೆ ಒದಗುವ ಯಾವುದೇ ಪ್ರಲೋಭನೆಗಳಿಗೆ "ಇಲ್ಲ" ಎಂದು ಹೇಳುವ ಅಧಿಕಾರ ನಮಗಿದೆ.

"ಯಾಕಂದರೆ ಪಾಪವು ನಿಮ್ಮ ಮೇಲೆ ಅಧಿಕಾರನಡಿಸದು; ನೀವು ಧರ್ಮಶಾಸ್ತ್ರಕ್ಕೆ ಅಧೀನರಲ್ಲ, ಕೃಪೆಗೆ ಅಧೀನರಾಗಿದ್ದೀರಷ್ಟೆ."(ರೋಮಾಪುರದವರಿಗೆ‬ ‭6:14‬)

ನೀವು ಯೇಸು ಕ್ರಿಸ್ತನನ್ನು ನಿಮ್ಮ ಕರ್ತನೂ ರಕ್ಷಕನೂ  ಎಂದು ಅಂಗೀಕಸಿಕೊಳ್ಳುವಾಗ ನೀವು ಕೃಪೆಯ ಅಧೀನದಲ್ಲಿರುತ್ತೀರಿ ಆ ಕೃಪೆಯೇ ನಿಮಗೆ ನಿರ್ದಿಷ್ಟವಾದ ಪಾಪಗಳಿಗೆ "ಇಲ್ಲ" ಎಂದು ಹೇಳುವಂತೆ ನಿಮ್ಮನ್ನು ಬಲಪಡಿಸುತ್ತದೆ. ನೀವು ಪಾಪಕ್ಕೆ ಅದೀನರಲ್ಲ ಬದಲಾಗಿ ಕೃಪೆಯು ನಿಮ್ಮ ಮೇಲೆ ಆಳ್ವಿಕೆ ನಡೆಸುತ್ತದೆ.

ನೋಡಿರಿ, ಯೇಸುವಿನಲ್ಲಿ ಪಾಪವಿಲ್ಲ. ಆತನ ಮೇಲೆ ರಕ್ತ ಸಂಬಂಧಿತವಾಗಿಯೂ ಸಹ ಯಾವುದೇ ಅಧರ್ಮವು ಆಳ್ವಿಕೆ ನಡೆಸುತ್ತಿರಲಿಲ್ಲ. ಆದರೂ ಎಲ್ಲಾ ರೀತಿಯಲ್ಲೂ ಆತನು ಶೋಧನೆಗೆ ಒಳಗಾದನು. ಆದರೆ ಪಾಪ ಮಾತ್ರ ಮಾಡಲಿಲ್ಲ.(ಇಬ್ರಿಯ 4:15 ಓದಿರಿ).

ನಮ್ಮಲ್ಲಿ ಪಾಪ ಸ್ವಭಾವವಿದೆ ಎಂಬುದಕ್ಕೆ ಗುರುತು ನಮ್ಮ ವಿರುದ್ಧ ಬರುವ ಶೋಧನೆಗಳಲ್ಲಿಲ್ಲ ಬದಲಾಗಿ ಅದು ನಮ್ಮಲ್ಲಿ ಪಾಪಕ್ಕೆ "ಇಲ್ಲ"ಎಂದು ಹೇಳುವ ಸಾಮರ್ಥ್ಯದ ಕೊರತೆಯಲ್ಲಿರುತ್ತದೆ.

ಅಧರ್ಮ ಮಾಡುವ ಎರಡನೆಯ ಸಂಗತಿ ಏನೆಂದರೆ ಅದು ನಮ್ಮೊಳಗಿನ ಆಂತರ್ಯದ ಆಲೋಚನೆಗಳು,ನಾವು ನಮ್ಮ ಬಗ್ಗೆ ಏನನ್ನು ತಿಳಿದುಕೊಂಡಿದ್ದೆವೋ ಅದನ್ನೇ ನಮ್ಮ ವ್ಯಕ್ತಿತ್ವವನ್ನಾಗಿ ರೂಪಿಸಿ ಬಿಡುತ್ತದೆ. ಒಂದು ಸರಿಯಾದ ವ್ಯಕ್ತಿತ್ವವು ದೇವರು ನಮ್ಮ ಬಗ್ಗೆ ಏನನ್ನು ಹೇಳುತ್ತಾನೋ ಅದನ್ನು ನಂಬುತ್ತದೆ. ಅಧರ್ಮದ ಸಮಸ್ಯೆ ಏನೆಂದರೆ ಅದು ನಾವು ನಮ್ಮ ಬಗ್ಗೆ ಏನನ್ನು ತಿಳಿದುಕೊಂಡಿದ್ದೆವೋ ಆ ನಂಬಿಕೆ ವ್ಯವಸ್ಥೆಯಂತೆ ನಮ್ಮನ್ನು ರೂಪಿಸುತ್ತದೆ.

"‭‭ಅರಸನಾದ ಉಜ್ಜೀಯನು ಕಾಲವಾದ ವರುಷದಲ್ಲಿ ಕರ್ತನು ಉನ್ನತೋನ್ನತ ಸಿಂಹಾಸನಾರೂಢನಾಗಿರುವದನ್ನು ಕಂಡೆನು. ಆತನ ವಸ್ತ್ರದ ನೆರಿಗೆಯು ಮಂದಿರದಲ್ಲೆಲ್ಲಾ ಹರಡಿತ್ತು.2 ಆತನ ಸುತ್ತ ಸೆರಾಫಿಯರು ಇದ್ದರು; ಪ್ರತಿಯೊಬ್ಬನು ಆರಾರು ರೆಕ್ಕೆಯುಳ್ಳವನಾಗಿ ಎರಡರಿಂದ ತನ್ನ ಮುಖವನ್ನು, ಎರಡರಿಂದ ತನ್ನ ಕಾಲುಗಳನ್ನು ಮುಚ್ಚಿಕೊಂಡು ಎರಡನ್ನು ಬಡಿಯುತ್ತಾ ನೆಲಸೋಕದೆ ನಿಂತಿದ್ದನು. 3ಆಗ ಒಬ್ಬನು ಮತ್ತೊಬ್ಬನಿಗೆ - ಸೇನಾಧೀಶ್ವರನಾದ ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು; ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿದೆ ಎಂದು ಕೂಗಿ ಹೇಳಿದನು. 4ಕೂಗುವವನ ಶಬ್ದಕ್ಕೆ ದ್ವಾರದ ಅಸ್ತಿವಾರವು ಕದಲಿತು; ಧೂಮವು ಮಂದಿರದಲ್ಲೆಲ್ಲಾ ತುಂಬಿತು. 5ಆಗ ನಾನು - ಅಯ್ಯೋ, ನನ್ನ ಗತಿಯನ್ನು ಏನು ಹೇಳಲಿ! ನಾಶವಾದೆನಲ್ಲಾ; ನಾನು ಹೊಲಸು ತುಟಿಯವನು, ಹೊಲಸು ತುಟಿಯವರ ಮಧ್ಯದಲ್ಲಿ ವಾಸಿಸುವವನು; ಇಂಥ ನನ್ನ ಕಣ್ಣುಗಳು ರಾಜಾಧಿರಾಜನನ್ನು, ಸೇನಾಧೀಶ್ವರನಾದ ಯೆಹೋವನನ್ನು ಕಂಡವು ಎಂದು ಕೂಗಿಕೊಳ್ಳಲು6 ಸೆರಾಫಿಯರಲ್ಲಿ ಒಬ್ಬನು ಯಜ್ಞವೇದಿಯಿಂದ ತಾನು ತಂಡಸದಲ್ಲಿ ತೆಗೆದ ಕೆಂಡವನ್ನು ಕೈಯಲ್ಲಿ ಹಿಡಿದುಕೊಂಡು ನನ್ನ ಬಳಿಗೆ ಹಾರಿ ಬಂದು 7ನನ್ನ ಬಾಯಿಗೆ ಮುಟ್ಟಿಸಿ - ಇಗೋ, ಇದು ನಿನ್ನ ತುಟಿಗಳಿಗೆ ತಗಲಿತು; ನಿನ್ನ ದೋಷವು ನೀಗಿತು, ನಿನ್ನ ಪಾಪಕ್ಕೆ ಪ್ರಾಯಶ್ಚಿತ್ತವಾಯಿತು ಅಂದನು. 8ಆಗ, ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು ಎಂಬ ಕರ್ತನ ನುಡಿಯನ್ನು ಕೇಳಿ, ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು ಅಂದೆನು." (ಯೆಶಾಯ‬ ‭6:1‭-‬8‬)

ಯೆಶಾಯನು ಸ್ವತಹಃ  ತನ್ನ ದೃಷ್ಟಿಯಲ್ಲಿ ತನ್ನನ್ನು ಅಯೋಗ್ಯನು ಪಾಪಿಷ್ಟನು ಎಂದು ಅಂದುಕೊಂಡಿದ್ದನು. ಅವನು ಪರಲೋಕದಿಂದ ಬಂದ ಬೆಂಕಿಯಿಂದ ಶುದ್ಧೀಕರಿಸಲ್ಪಟ್ಟ ಮೇಲೆ ಎರಡು ಸಂಗತಿಗಳು ಅವನಲ್ಲಿ ಜರಗಿದವು.

1).ಅವನು ದೇವರ ಸ್ವರವನ್ನು ಕೇಳಲು ಶಕ್ತನಾದನು.
2). ಉತ್ಸಾಹಪೂರ್ಣವಾಗಿ ದೇವರ ಕರೆಗೆ ಸ್ಪಂದಿಸಿದನು. (ಇಗೋ, ನಾನಿದ್ದೇನೆ. ನನ್ನನ್ನು ಕಳುಹಿಸು.ಎಂದು)

 ಅಧರ್ಮ ಮತ್ತು ಅದರ ಪರಿಣಾಮವು ನಾವು ಆತ್ಮಿಕವಾಗಿ ಜರುಗುತ್ತಿರುವ ಸಂಗತಿಗಳನ್ನು ಗ್ರಹಿಸಿಕೊಳ್ಳಲಾಗದಂತೆ ನಮ್ಮನ್ನು ಮಂಕು ಗೊಳಿಸುತ್ತದೆ. ನಾವು ದೇವರ ಮಾರ್ಗವನ್ನು ಗ್ರಹಿಸದೆ ನಮ್ಮ ಅನಿಸಿಕೆಗಳ ಮೇಲೆಯೇ ಚಿಂತಿಸುವಂತೆ ಮಾಡುತ್ತದೆ.

ಯೇಶಾಯನ ಅಧರ್ಮವು ಅವನಿಂದ ತೆಗೆಯಲ್ಪಟ್ಟಾಗ ಅವನಿಗೆ ತಾನು ಅಯೋಗ್ಯನೆಂಬ ಭಾವನೆ ಮತ್ತೆಂದಿಗೂ  ಬರಲಿಲ್ಲ. ಅವನು ತನ್ನನ್ನು ಮತ್ತೆಂದಿಗೂ ತಾನೊಂದು ಅಯೋಗ್ಯ ಪಾತ್ರೆ ಎಂದು ಅಂದುಕೊಳ್ಳಲಿಲ್ಲ.ಅವನೀಗ ಹೊಸದಾದ ವ್ಯಕ್ತಿತ್ವ ಹೊಂದಿದ ಹೊಸವ್ಯಕ್ತಿಯಾದನು. ನಾವು ಸಹ ದೇವರು ನಮ್ಮನ್ನು ನೋಡುವ ರೀತಿಯಲ್ಲಿಯೇ ನಮ್ಮನ್ನು ನೋಡಿಕೊಳ್ಳಬೇಕು.
Confession
ಕರ್ತನೇ, ನನ್ನ ಕುಟುಂಬದ ರಕ್ತ ಸಂಬಂಧ, ವೈವಾಹಿಕ ಜೀವನ ಮತ್ತು ಇತರ ಸಂಬಂಧಗಳ ಮೇಲೆ ದುಷ್ಪರಿಣಾಮ ಬೀರುವಂತೆ ನಾನು ಮಾಡಿದ ಎಲ್ಲಾ ಭಕ್ತಿಹೀನ ನಡವಳಿಕೆಗಳನ್ನು, ಆಡಿದ ಮಾತುಗಳನ್ನು, ಆಲೋಚನೆಗಳನ್ನು ಮತ್ತು ನಕರಾತ್ಮಕ ಭಾವನೆಗಳನ್ನು ಕರ್ತನೇ ನಿನಗೆ ಅರಿಕೆ ಮಾಡಿ ಯೇಸು ನಾಮದಲ್ಲಿ ಕ್ಷಮೆಯನ್ನು ಯಾಚಿಸುತ್ತೇನೆ.

ನನ್ನ ವಿರುದ್ಧವಾಗಿ ಅಥವಾ ಇತರರ ವಿರುದ್ಧವಾಗಿ ಮಾತಾಡಿದ ಎಲ್ಲಾ ಭಕ್ತಿಹೀನ ಮಾತುಗಳಿಗಾಗಿ ನಾನು ಪಶ್ಚಾತಾಪ ಪಡುತ್ತೇನೆ. ನನಗೆ ತೊಂದರೆ ಮಾಡಿದ ವ್ಯಕ್ತಿಗಳ ಮೇಲೆ ನನಗೆ ಇರುವ ಎಲ್ಲಾ ದ್ವೇಷಗಳನ್ನು ಪ್ರತಿಕಾರವನ್ನು ಯೇಸುನಾಮದಲ್ಲಿ ಬಿಟ್ಟುಬಿಡುತ್ತೇನೆ. ಏಕೆಂದರೆ "ಮುಯ್ಯಿ ತೀರಿಸುವುದು ನಿನ್ನ ಕೆಲಸ" ಎಂದು ನಿನ್ನ ವಾಕ್ಯ ಹೇಳುತ್ತದೆ.

ತಂದೆಯೇ, ನನ್ನ ಹಾಗೂ ನನ್ನ ಕುಟುಂಬಕ್ಕೆ ವಿರುದ್ಧವಾಗಿ ಕಾರ್ಯ ಮಾಡುತ್ತಿರುವ ಎಲ್ಲಾ ದುರಾಶೆಯ, ಲೋಭದ ಸ್ವಾರ್ಥ ಚಿಂತನೆಯ ಬಲವನ್ನು ಯೇಸು ನಾಮದಲ್ಲಿ ನಿರ್ಮೂಲ ಮಾಡು. ಹಣಕಾಸಿನ ವಿಚಾರದಲ್ಲಿ ದೇವರ ಕಾರ್ಯಕ್ಕೆ ಬೆಂಬಲಿಸುವ ಹೃದಯವನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸು.

Join our WhatsApp Channel


Most Read
● ಮೂರು ನಿರ್ಣಾಯಕ ಪರೀಕ್ಷೆಗಳು
● ಸರಿಪಡಿಸಿಕೊಳ್ಳಿರಿ
● ಅಂತ್ಯಕಾಲದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು : #1
● ಸಾಲದಿಂದ ಹೊರಬನ್ನಿ : ಕೀಲಿಕೈ #2
● ದೈವೀಕ ಶಿಸ್ತಿನ ಸ್ವರೂಪ-1
● ಸತ್ಯವೇದ ಆಧಾರಿತ ಸಮೃದ್ಧಿಯನ್ನು ಹೊಂದಲಿರುವ ರಹಸ್ಯ
● ಬದಲಾಗಲು ಇರುವ ತೊಡಕುಗಳು.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login