हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಯಹೂದವು ಮುಂದಾಗಿ ಹೊರಡಲಿ
Daily Manna

ಯಹೂದವು ಮುಂದಾಗಿ ಹೊರಡಲಿ

Friday, 22nd of March 2024
4 3 491
Categories : ಸ್ತುತಿ (Praise)
"ದೇವರು ಯೆಹೂದದೇಶದಲ್ಲಿ ಖ್ಯಾತಿಗೊಂಡವನು; ಇಸ್ರಾಯೇಲ್ಯರಲ್ಲಿ ಆತನ ನಾಮವು ದೊಡ್ಡದು."(ಕೀರ್ತನೆಗಳು‬ ‭76:1‬)

ಯೂದ (ಇಬ್ರಿಯದಲ್ಲಿ ಯಹೂದನು) ಇವನು ಯಾಕೋಬನ ನಾಲ್ಕನೇ ಮಗನು. ಇವನ ವಂಶಾವಳಿಯಲ್ಲಿಯೇ ಮೆಸ್ಸಿಯನು ಹುಟ್ಟಿದ್ದು. (ಆದಿಕಾಂಡ 29:35,49: 8-12)

ಆಸಕ್ತಿಕರ ವಿಷಯವೇನೆಂದರೆ "ಯಹೂದ" ಎಂಬ ಪದದ ಅರ್ಥ ಉಪಕಾರ ಸ್ತುತಿ ಎಂದು. ಯಹೂದದಲ್ಲೇ(ಉಪಕಾರ ಸ್ತುತಿಯಲ್ಲಿಯೇ)ದೇವರು ತಿಳಿಯಲ್ಪಡುವನು ಅಥವಾ ಪ್ರಕಟಿಸಲ್ಪಡುವನು ಎಂದು.

ದೇವರು ಯೆಹೂದದೇಶದಲ್ಲಿ ಖ್ಯಾತಿಗೊಂಡವನು. (ಕೀರ್ತನೆಗಳು‬ ‭76:1).ನಾವು ದೇವರನ್ನು ಸ್ತುತಿಸುವಾಗ ಆತನು ಮಹಿಮೆ ಹೊಂದುತ್ತಾನೆ.

ಯಾಕೋಬನ ಹೆಂಡತಿಯಾದ ಲೆಯಾಳು ತನ್ನ 4ನೇ ಮಗನಿಗೆ ಯಹೂದ ಎಂದು ಹೆಸರಿಟ್ಟಳು ಏಕೆಂದು ನಿಮಗೆ ಗೊತ್ತೇ?

ಏಕೆಂದರೆ ಅವಳಿಗೆ ಗೊತ್ತಿತ್ತು ತನ್ನ ಗಂಡನಾದ ಯಾಕೋಬನಿಗೆ ತನ್ನ ಮೇಲೆ ಪ್ರೀತಿ ಇಲ್ಲ ಎಂದು. ಈ ನಿಜವನ್ನು ಅರಿತಿದ್ದರೂ ಆಕೆಯೂ ಮೂರೂ ಮಕ್ಕಳನ್ನು ಹಡೆದಳು. ಈ ಮಧ್ಯದಲ್ಲಿ ಆಕೆಯು ಒಂದು ನಿರ್ಧಾರಕ್ಕೆ ಬಂದಳು ಅದೇನೆಂದರೆ ನನ್ನ ಗಂಡನು ನನ್ನನ್ನು ಪ್ರೀತಿಸುತ್ತಿಲ್ಲ ಎಂದು ಗೋಳಾಡುವ ಬದಲು ತನ್ನನ್ನು ತಗ್ಗಿಸಿಕೊಂಡಳು. ಈ ಬಾರಿ "ಆಕೆಯು ತಿರಿಗಿ ಗರ್ಭಿಣಿಯಾಗಿ ಗಂಡುಮಗುವನ್ನು ಹೆತ್ತು - ಈಗ ಯೆಹೋವನಿಗೆ ಉಪಕಾರಸ್ತುತಿ ಮಾಡುವೆನು ಎಂದು ಹೇಳಿ ಅದಕ್ಕೆ ಯೆಹೂದಾ ಎಂದು ಹೆಸರಿಟ್ಟಳು.(ಆದಿಕಾಂಡ‬ ‭29:35).ಯಹೂದನು ಹುಟ್ಟಿದಾಗ ಇದು ನಡೆಯತು.

ಯೆಹೂದನು ದೇವರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಂತೆ ಇಂದಿಗೂ ಸಹ ನಾವು ಮಾಡುವ ಉಪಕಾರ ಸ್ತುತಿಯು ದೇವರ ಹೃದಯದಲ್ಲಿ ವಿಶೇಷ ಸ್ಥಾನ ಪಡೆಯುತ್ತದೆ. ಇದುವೇ ದೇವರಿಂದ ದೊರಕುವ ಆಶೀರ್ವಾದಗಳನ್ನು ಹೊಂದಲು ಇರುವ ಕೀಲಿ ಕೈಯಾಗಿದೆ.

"ಯೆಹೋಶುವನು ಮರಣಹೊಂದಿದ ನಂತರ ಇಸ್ರಾಯೇಲ್ಯರು - ಕಾನಾನ್ಯರೊಡನೆ ಯುದ್ಧಮಾಡುವದಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು ಎಂದು ಯೆಹೋವನನ್ನು ಕೇಳಲು [2] ಆತನು ಅವರಿಗೆ - ಯೆಹೂದ್ಯರು ಹೋಗಲಿ; ಇಗೋ, ದೇಶವನ್ನು ಅವರಿಗೆ ಒಪ್ಪಿಸಿದ್ದೇನೆ ಅಂದನು."(‭‭ನ್ಯಾಯಸ್ಥಾಪಕರು‬ ‭1:1‭-‬2‬)

 ನ್ಯಾಯಸ್ಥಾಪಕರು 20:18ರಲ್ಲಿ ಇದೇ ಸಂಗತಿಯನ್ನು ತಿರುಗಿ ನಾವು ಕಾಣಬಹುದು. ಯುದ್ಧದ ಸಮಯ ಬಂದಾಗ ಯಹೂದವು ಮುಂದಾಗಿ ಹೊರಟಿತು. ನಾವು ಆತ್ಮಿಕ ಯುದ್ಧಕ್ಕೆ ಹೇಗೆ ಪ್ರವೇಶಿಸಬೇಕು ಎಂಬುದಕ್ಕೆ ಪ್ರವಾದನಾ ರೂಪದ ಚಿತ್ರಣ ಇದಾಗಿದೆ. ನೀವು ಯಾವ ರೀತಿಯ ಯುದ್ಧವನ್ನು ಎದುರಿಸುತ್ತಿದ್ದೀರೋ ನನಗೆ ತಿಳಿದಿಲ್ಲ. ಆದರೆ ನೀವು ಏಕಾಂಗಿಯಾಗಿ ಆ ಯುದ್ಧ ರಂಗವನ್ನು ಪ್ರವೇಶಿಸದೇ ಯಹೂದವನ್ನು ನೀವು ಮುಂದಾಗಿ ಕಳುಹಿಸಿ ಕೊಡಬೇಕೆಂದು ನಾನಿಂದು ನಿಮಗೆ ಪ್ರವಾದನ ರೂಪದ ಸೂಚನೆ ನೀಡಲು ಬಯಸುತ್ತೇನೆ. ದೇವರಿಗೆ ಉಪಕಾರ ಸ್ತುತಿಯೇ ಪ್ರಪ್ರಥಮವಾಗಿ ಹೊರಡಲಿ.

ಸಮಸ್ಯೆಗಳ ಕುರಿತು ಪರಿಸ್ಥಿತಿಯನ್ನು ಕುರಿತು ಗೊಣಗುತ್ತಾ ದೂರುತ್ತಾ ಪ್ರಾರ್ಥನೆಯನ್ನು ಆರಂಭಿಸಬೇಡಿರಿ. ಯಹೂದವು ಮುಂದಾಗಿ ಹೊರಡಲಿ. ನೋಡಿರಿ ಯಹೂದನು ಯಾಕೋಬನ ನಾಲ್ಕನೇ ಮಗನಾಗಿದ್ದನು. ಆದರೂ ದೇವರ ಕ್ರಮವನ್ನು ನೋಡಿರಿ ಇವನೇ ಮೊದಲನೆಯವನಾಗಿ ಎಣಿಸಲ್ಪಟ್ಟನು.

ನಿಮಗೆ ದೇವರನ್ನು ಸ್ತುತಿಸಲು ಮನಸ್ಸಿಲ್ಲದಿರಬಹುದು. ನಿಮ್ಮ ಜೀವನದ ಪರಿಸ್ಥಿತಿಯಲ್ಲಿ ದೇವರಿಗೆ ಉಪಕಾರ ಸ್ತುತಿ ಹೇಳುವಂತದ್ದು ಏನೂ ಇಲ್ಲ ಎಂತಲೂ ಎನಿಸುತ್ತಿರಬಹುದು. ಆದರೂ ಆತನನ್ನು ಸ್ತುತಿಸಿರಿ ಏಕೆಂದರೆ ಆತನೊಬ್ಬನೇ ಎಲ್ಲಾ ಸ್ತುತಿ -ಸ್ತೋತ್ರಕ್ಕೆ ಯೋಗ್ಯನು.
2ಪೂರ್ವಕಾಲವೃತ್ತಾಂತ 20 ರಲ್ಲಿ ಅರಸನಾದ ಯಹೋಶಾಫಾಟನ್ನು ಮರಳಿನಷ್ಟು ಶತ್ರು ಸೈನ್ಯವು ತನಗೆ ಎದುರಾಗಿ ನಿಂತಿರುವುದನ್ನು ಕಂಡನು. ಅವನು ಈ ಯುದ್ಧವು ತನ್ನ ಬಲಕ್ಕೆ ಮೀರಿದ್ದು ಎಂದು ಗ್ರಹಿಸಿಕೊಂಡನು. ಇದುವೇ ಅವನು ದೇವರ ಮುಖವನ್ನು ಎದುರು ನೋಡುವಂತೆ ಮಾಡಿತು. ಜಯ ಹೊಂದಲು ಅಸಾಧ್ಯವಾದಂತಹ ಈ ಯುದ್ಧವನ್ನು ಅವನು ಹೇಗೆ ಪ್ರವೇಶಿಸಿದನು ನಿಮಗೆ ಗೊತ್ತೇ?

 "ಅವರು ಉತ್ಸಾಹ ಧ್ವನಿಯಿಂದ ಕೀರ್ತಿಸುವದಕ್ಕೆ ಪ್ರಾರಂಭಿಸಲು ಯೆಹೋವನು ಯೆಹೂದ್ಯರಿಗೆ ವಿರೋಧವಾಗಿ ಬಂದ ಅಮ್ಮೋನಿಯರನ್ನೂ ಮೋವಾಬ್ಯರನ್ನೂ ಸೇಯೀರ್ ಪರ್ವತದವರನ್ನೂ ನಶಿಸುವದಕ್ಕೋಸ್ಕರ ಅವರಲ್ಲಿ ಹೊಂಚುಹಾಕುವವರನ್ನು ಇರಿಸಿದ್ದರಿಂದ ಅಮ್ಮೋನಿಯರೂ ಮೋವಾಬ್ಯರೂ ಸೇಯೀರ್ ಪರ್ವತದವರ ಮೇಲೆ ಬಿದ್ದು ಅವರನ್ನು ಪೂರ್ಣವಾಗಿ ಸಂಹರಿಸಿಬಿಟ್ಟರು;(‭‭2 ಪೂರ್ವಕಾಲವೃತ್ತಾಂತ‬ ‭20:22‬)

ನೀವು ಯಾವ ರೀತಿಯ ಯುದ್ಧವನ್ನು ಎದುರಿಸುತ್ತಿದ್ದೀರೋ ನನಗೆ ತಿಳಿದಿಲ್ಲ. ಅದು ರೋಗಗಳಾಗಿರಬಹುದು ಕೋರ್ಟ್ ಕೇಸ್ ಆಗಿರಬಹುದು. ನಿಮ್ಮ ಗ್ರಾಹಕರ ಸಮಸ್ಯೆ ಇರಬಹುದು ಅಥವಾ ಸಮುದಾಯದ ಸಮಸ್ಯೆ ಇರಬಹುದು ಅಥವಾ ಬಹುಕಾಲದಿಂದ ಇರುವ ಕೌಟುಂಬಿಕ ಕಲಹಗಳಾಗಿರಬಹುದು. ಮೊದಲು ನಿಮ್ಮ ಬಾಯಿಂದ ದೇವರ ಸ್ತುತಿಯು ಹೊರಡಲಿ. ನಿಮ್ಮ ಹೊಟ್ಟೆ ಒಳಗಿಂದ ದೇವರ ಸ್ತುತಿಯ ನದಿಯು ಪ್ರವಾಹೋಪಾದಿಯಲ್ಲಿ ಉಕ್ಕಲಿ (ಯೋಹಾನ7:38).ಈ 2024ರ ಎಲ್ಲಾ ದಿನಗಳಲ್ಲೂ ನಿಮ್ಮ ತುಟಿಗಳು ಸ್ತೋತ್ರ -ಕೀರ್ತನೆಗಳಿಂದ ತುಂಬಿರಲಿ.

ದೇವಕುಮಾರನಾದ ಯೇಸು ಕ್ರಿಸ್ತನ ಜನನದ ರಾತ್ರಿಯ ಸಮಯದಲ್ಲೂ ಸಹ ಆತನು ಸ್ತೋತ್ರಗಳ ಮೂಲಕವೇ ಭೂಲೋಕಕ್ಕೆ ಪರಿಚಯಿಸಲ್ಪಟ್ಟನು.

"ಅದೇನಂದರೆ, ಈ ಹೊತ್ತು ನಿಮಗೋಸ್ಕರ ದಾವೀದನೂರಲ್ಲಿ ಒಬ್ಬ ರಕ್ಷಕನು ಹುಟ್ಟಿದ್ದಾನೆ. ಆತನು ಕರ್ತನಾಗಿರುವ ಕ್ರಿಸ್ತನೇ.
ಫಕ್ಕನೆ ಆ ದೂತನ ಸಂಗಡ ಪರಲೋಕಸೈನ್ಯದವರ ಒಂದು ದೊಡ್ಡ ಗುಂಪು ಕಾಣಿಸಿಕೊಂಡು - ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ ದೇವರು ಅವರಿಗೆ ಒಲಿಯುತ್ತಾನೆ ಎಂದು ದೇವರನ್ನು ಕೊಂಡಾಡುತ್ತಾ ಹೇಳಿದರು."(ಲೂಕ‬ ‭2:11,13,14‬)
Prayer
ದಯಮಾಡಿ ನೋಹ ಆಪ್ ನಲ್ಲಿರುವ ತಂದೆ- ಮಗ- ಪವಿತ್ರಾತ್ಮ ದೇವರ ಸ್ತೋತ್ರಗಳನ್ನು ಸ್ತೋತ್ರದ ವಿಭಾಗದಲ್ಲಿ ಕಂಡುಕೊಂಡು ಸ್ತೋತ್ರ ಮಾಡಲು ಅದನ್ನು ಉಪಯೋಗಿಸಿರಿ. ಇದನ್ನು ಮುಂದಿನ 21 ದಿನಗಳವರೆಗೆ ಮಾಡಿರಿ (ಇದು ಪ್ರವಾದನಾ ಸೂಚನೆಯಾಗಿದೆ ಇದನ್ನು ನಿರ್ಲಕ್ಷಿಸಬೇಡಿರಿ).


Join our WhatsApp Channel


Most Read
● ನೀವು ಯೇಸುವನ್ನು ಹೇಗೆ ದೃಷ್ಟಿಸುವಿರಿ?
● ಕೃಪೆಯ ವಾಹಕರಾಗಿ ಮಾರ್ಪಡುವುದು.
● ನಿಮ್ಮ ಸಮಸ್ಯೆಗಳು ಮತ್ತು ನಿಮ್ಮ ನಡವಳಿಕೆಗಳು
● ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವುದು -4
● ಧನ್ಯನಾದ ಮನುಷ್ಯ
● ದರ್ಶನ ಹಾಗೂ ಸಾಕಾರದ ನಡುವೆ...
● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login