हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಅನ್ಯ ಭಾಷೆಯಲ್ಲಿ ಪ್ರಾರ್ಥಿಸಿ ಮತ್ತು ಆತ್ಮಿಕವಾದ ನವಚೇತನವನ್ನು ಹೊಂದಿಕೊಳ್ಳಿರಿ
Daily Manna

ಅನ್ಯ ಭಾಷೆಯಲ್ಲಿ ಪ್ರಾರ್ಥಿಸಿ ಮತ್ತು ಆತ್ಮಿಕವಾದ ನವಚೇತನವನ್ನು ಹೊಂದಿಕೊಳ್ಳಿರಿ

Tuesday, 9th of April 2024
3 0 576
Categories : ಅನ್ಯಭಾಷೆಯನ್ನಾಡುವುದು (Speak in Tongues)
"ಹೌದು, ತೊದಲು ಮಾತಿನವರು, ಅನ್ಯಭಾಷಿಗಳು, ಇವರ ಮೂಲಕವಾಗಿಯೇ ಯೆಹೋವನು ಈ ಜನರ ಮಧ್ಯದಲ್ಲಿ ಮಾತಾಡುವನು.12ಆತನು ಮೊದಲು - ಇದೇ ನಿಮಗೆ ಆವಶ್ಯಕವಾದ ವಿಶ್ರಾಂತಿ, ಬಳಲಿದವರನ್ನು ವಿಶ್ರಮಗೊಳಿಸಿರಿ, ನಿಮಗೆ ಅನುಕೂಲವಾದ ಉಪಶಮನವು ಇದೇ.. "(‭‭ಯೆಶಾಯ‬ ‭28:11‭-‬12‬)

 ಸ್ಮಿತ್ ವಿಗಲ್ಸ್ ವರ್ತ್ ಒಬ್ಬ ದೊಡ್ಡ ದೇವಸೇವಕರು. ಮೊದಲು ಇವರು ಕೊಳಾಯಿ ಕೆಲಸ ಮಾಡುವವರಾಗಿದ್ದರು. ಆದರೆ ಸಾವಿರಾರು ಜನರ ಜೀವನವನ್ನು ಮುಟ್ಟಲು ಕರ್ತನು ಇವರನ್ನು ಬಳಸಿಕೊಂಡನು. ಇವರ ಅತ್ಯದ್ಭುತವಾದ ಸೇವೆಯಲ್ಲಿ ಅನೇಕರು ಸ್ವಸ್ತತೆಯನ್ನು ಪಡೆದರು ಅನೇಕರು ಬಿಡುಗಡೆಯನ್ನು ಹೊಂದಿಕೊಂಡರು.

ವಿಗಲ್ಸ್ ವರ್ತ್ ರವರು ಒಮ್ಮೆ ಒಂದು ಮರಣದ ಮನೆಗೆ ಹೋದರು. ಅಲ್ಲಿ ಆ ಹೆಣವನ್ನು ಮೂರು ದಿನದಿಂದ ಇಡಲ್ಪಟ್ಟಿತ್ತು. ಇವರು ದೇವರಿಂದ ಅಲ್ಲಿಗೆ ಸೇವೆಗಾಗಿ ಕಳುಹಿಸಿ ಕೊಡಲ್ಪಟ್ಟಿದ್ದರು. ಅವರು ತಟ್ಟನೆ ಸತ್ತವನ ಕುಟುಂಬದವರಿಗೆ ಆ ಕೋಣೆಯನ್ನು ಬಿಟ್ಟು ಹೊರಗೆ ಹೋಗುವಂತೆ ಹೇಳಿದರು. ನಂತರ ಸತ್ತ ವ್ಯಕ್ತಿಯನ್ನು ಎಳೆದು ಶವಪೆಟ್ಟಿಗೆಯಿಂದ ಹೊರತೆಗೆದರು! ಗೋಡೆಗೆ ಆ ಸತ್ತ ವ್ಯಕ್ತಿಯ ದೇಹವನ್ನು ಒರಗಿಸಿ ಅದರ ಎದುರು ನಿಂತು "ಬದುಕು" ಎಂದು ಆಜ್ಞಾಪಿಸಿದರು.ನಂತರ ಆ ವ್ಯಕ್ತಿಯ ದೇಹವನ್ನು ಬಿಟ್ಟರು. ತಕ್ಷಣವೇ ಮರಗಟ್ಟಿದ ಆ ಶವದ ದೇಹವು ದೊಪ್ಪೆಂದು ನೆಲಕ್ಕೆ ಬಿದ್ದಿತ್ತು. ಇಷ್ಟಾದಾಗಲೇ ನಾನಾಗಲಿ ನೀವಾಗಲಿ ಆ ಜಾಗದಲ್ಲಿ ಇದ್ದಿದ್ದರೆ ನಮ್ಮ ಪ್ರಯತ್ನವನ್ನು ಬಿಟ್ಟುಬಿಡುತ್ತಿದ್ದೆವು. ನಮ್ಮಲ್ಲಿ ಅನೇಕರಿಗೆ ವಿಗಲ್ಸ್ ವರ್ತ್ ರವರಿಗೆ ಇದ್ದಂತಹ ನಂಬಿಕೆ ಇಲ್ಲ (ದೇವರೇ ನಮಗೆ ಸಹಾಯ ಮಾಡು)

ಮತ್ತೆ ವಿಗಲ್ಸ್ ವರ್ತ್ ರವರು ಆ ಶವದ ಕೋಟನ್ನು ಹಿಡಿದು ಎತ್ತಿ  ಗೋಡೆಗೆ ಒರಗಿಸಿ ಮತ್ತೊಮ್ಮೆ ಅವರು ಜೋರಾಗಿ "ನಾನು ಒಮ್ಮೆ ಹೇಳಿದೆ, ಆದರೆ ನಾನೀಗ ಮತ್ತೊಮ್ಮೆ ನಿನಗೆ ಹೇಳುತ್ತಿದ್ದೇನೆ, ಬದುಕು" ಎಂದರು. ಮತ್ತೆ ಆ ಮರಗಟ್ಟಿದ ಶವ ಮೊದಲಿನಂತೆ ದಡಮ್ಮನೆ ನೆಲಕ್ಕೆ ಬಿತ್ತು. ಆ ಬಡ ಕುಟುಂಬದ- ಸತ್ತವನ ಮನೆಯಲ್ಲಿ ಮುಚ್ಚಿದ ಬಾಗಿಲಿನ ಕೋಣೆಯೊಳಗೆ ಏನಾಗುತ್ತಿದೆಯೋ ಯಾಕೆ ಈ ಶಬ್ದ ಬರುತ್ತಿದೆಯೋ ಎಂಬುದು ಒಬ್ಬರಿಗೂ ಅರ್ಥವಾಗುತ್ತಿರಲಿಲ್ಲ.

ಮೂರನೇ ಬಾರಿ ಮತ್ತೆ ಆ ಮರ ಗಟ್ಟಿದ ಭಾರವಾದ ಹೆಣವನ್ನು  ಗೋಡೆಗೆ ಒತ್ತಿ ನಿಲ್ಲಿಸಿ, ಅವರು ತಮ್ಮ ಬೆರಳನ್ನು ಆ ಹೆಣದ ಮುಖಕ್ಕೆ ತೋರಿಸುತ್ತಾ "ನಾನು ಒಂದು ಸಾರಿ ಹೇಳಿದೆ, ಎರಡು ಸಾರಿ ಹೇಳಿದೆ, ಆದರೆ ಈಗ ಮೂರನೇ ಸಾರಿ ಹೇಳುತ್ತಿದ್ದೇನೆ "ಈಗ ಜೀವಿಸು" ಎಂದರು. ತಕ್ಷಣವೇ ಆ ಸತ್ತ ವ್ಯಕ್ತಿಯು ಕೆಮ್ಮಲು ಆರಂಭಿಸಿ, ತನ್ನ ತಲೆಯನ್ನು ಕೊಡವಿಕೊಂಡು, ತನ್ನ ಮುಖವನ್ನು ಒರೆಸಿಕೊಳ್ಳುತ್ತಾ ಆ ಅಂತ್ಯಕ್ರಿಯೆಯ ಮನೆ ಒಳಗಿಂದ ಹೊರಕ್ಕೆ ನಡೆದು ಬಂದನು! ಈ ರೀತಿಯ ಅದ್ಭುತವಾದಂತಹ ಸತ್ತವರ ಏಳುವಿಕೆಯು ಸ್ಮಿತ್ ವಿಗಲ್ಸ್ ವರ್ತ್ ರವರ ಸೇವೆಯಲ್ಲಿ ಒಂದು ಸಾರಿ ಅಲ್ಲ ಎರಡು ಸಾರಿ ಅಲ್ಲ 14 ಸಾರಿ ನಡೆಯಿತು.

ಅವರಿಗೆ 80 ವರ್ಷವಾದರೂ ಆ ಇಳಿ ವಯಸ್ಸಿನಲ್ಲೂ ಸಹ ಅವರ ಈ ಚೈತನ್ಯ ಶಕ್ತಿ ಕೊಂಚವೂ ಕಡಿಮೆಯಾಗಿರಲಿಲ್ಲ. ಒಬ್ಬರು ಅವರನ್ನು "ನೀವು ರಜೆಯನ್ನು ತೆಗೆದುಕೊಳ್ಳುವುದಿಲ್ಲವೇ" ಎಂದು ಪ್ರಶ್ನಿಸಿದರು. ತಕ್ಷಣವೇ ಅವರು "ನಾನು ಪ್ರತಿನಿತ್ಯ ರಜೆಯನ್ನು ತೆಗೆದುಕೊಳ್ಳುವೆನು" ಎಂದು ಪ್ರತ್ಯುತ್ತರಿಸಿ, "ನಾನು ಪ್ರತಿನಿತ್ಯವೂ ಅನ್ಯ ಭಾಷೆಯ ನಾಡುತ್ತಾ ನನ್ನನ್ನು ನಾನು ಚೈತನ್ಯಪಡಿಸಿಕೊಳ್ಳುವೆನು, ಇದರಲ್ಲೇ ವಿಶ್ರಾಂತಿ ಪಡೆವೆನು. ಇದುವೇ ನನ್ನ ನಿಜವಾದ ವಿಶ್ರಾಂತಿ ರಜೆ" ಎಂದು ವಿವರಿಸಿದರು.

ಇಂದಿನ ಒತ್ತಡ ತುಂಬಿದ-ಅವಿಶ್ರಾಂತ ವೇಳಾಪಟ್ಟಿಯ ಕಾಲಮಾನದಲ್ಲಿ ಮತ್ತು ಇತರೆ ಜೀವನದ ಹೊರೆಗಳನ್ನು ನಾವು ಹೊತ್ತಿರುವಾಗ ನಮಗೆ ನಿಶ್ಚಿತವಾಗಿಯೂ ಆಗಾಗ್ಗೆ  ಹೊಸ ಚೈತನ್ಯ ಒಂದು ಬೇಕು ಎನಿಸುತ್ತದೆ. ಅದು ನಿಜವಾಗಿಯೂ ದೇವರ ಸಾನಿಧ್ಯದಲ್ಲಿ ನಾವು ಏಕಾಂತವಾಗಿ ಬಂದಾಗ ಮಾತ್ರ ದೊರಕುವಂತದ್ದಾಗಿದೆ. "ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು."(ಮತ್ತಾಯ‬ ‭11:28‬ )ಎಂದು ಯೇಸುವು ನಿಮ್ಮನ್ನು ಆಹ್ವಾನಿಸುತ್ತಾನೆ.

ನೀವು ಇತ್ತೀಚೆಗೆ ನಿರುದ್ಸಾಹ ಗೊಂಡಿರಬಹುದು, ದಣಿದು ಹೋಗಿರಬಹುದು ಅಥವಾ ನಿಶಕ್ತರಾಗಿರಬಹುದು. ಈಗ ನೀವು ಮಾಡಬೇಕಾಗಿದ್ದೇನೆಂದರೆ ಅನ್ಯ ಭಾಷೆಯಲ್ಲಿ ಸ್ವಲ್ಪ ಕಾಲ ದೇವರನ್ನು ಪ್ರಾರ್ಥಿಸಿರಿ ನೀವು ಯೋಚಿಸುವುದಕ್ಕಿಂತಲೂ ಊಹಿಸುವುದಕ್ಕಿಂತಲೂ ಮೀರಿದ ಚೈತನ್ಯವನ್ನು ನೀವು ಇದರಿಂದ ಹೊಂದುಕೊಳ್ಳುವಿರಿ.

(ಈ ದೈನಂದಿನ ಮನ್ನಾದಿಂದ ನಿಮಗಾದ ಆಶೀರ್ವಾದಗಳನ್ನು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಈ ಕೆಳಗೆ ಬರೆಯಿರಿ ಹಾಗೆಯೇ ದೇವರ ಕಾರ್ಯ ಕಾರ್ಯಗಳಿಗಾಗಿ ನಿಮ್ಮ ಕೊಡುವಿಕೆಗಳಿಂದ ಪ್ರೋತ್ಸಾಹಿಸುವುದನ್ನು ಮರೆಯಬೇಡಿರಿ)
Prayer
 ತಂದೆಯೇ, ನನ್ನೆಲ್ಲಾ ಅಪನಂಬಿಕೆಗಳನ್ನು ಕ್ಷಮಿಸಿ. ನಾನು ನನ್ನ ಹೃದಯಪೂರ್ವಕವಾಗಿ ನಿಮ್ಮ ಕಡೆಗೆ ತಿರುಗಿಕೊಳ್ಳುತ್ತೇನೆ ಮತ್ತು ನಿಮ್ಮ ಪ್ರಸನ್ನತೆಯಿಂದ ದೊರಕುವ ನವ ಚೈತನ್ಯವನ್ನು ಹೊಂದಿಕೊಳ್ಳುತ್ತೇನೆ. ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ. ಆಮೆನ್ (ಅ. ಕೃ.3:19)


Join our WhatsApp Channel


Most Read
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-II
● ಸ್ಥಿರತೆಯಲ್ಲಿರುವ ಶಕ್ತಿ
● ನೀವು ಎಷ್ಟು ಜೋರಾಗಿ ಮಾತಾಡ ಬಲ್ಲಿರಿ?
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ‭‭ಕ್ರಿಸ್ತನಲ್ಲಿ ಅರಸರೂ ಯಾಜಕರೂ..
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಕರ್ತನು ಹೃದಯವನ್ನೇ ಶೋಧಿಸುವವನಾಗಿದ್ದಾನೆ.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login