हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಇಂತಹ ಪರಿಶೋಧನೆಗಳು ಏಕೆ?
Daily Manna

ಇಂತಹ ಪರಿಶೋಧನೆಗಳು ಏಕೆ?

Wednesday, 8th of January 2025
4 1 183
Categories : ಪರಿಶೋಧನೆ (Testing)
"ಆದ್ದರಿಂದ ನೀವು ಸದ್ಯಕ್ಕೆ ಸ್ವಲ್ಪಕಾಲ ಅಗತ್ಯವಿದ್ದಲ್ಲಿ ನಾನಾ ವಿಧ ಕಷ್ಟಗಳಲ್ಲಿ ದುಃಖಿಸುವವರಾಗಿದ್ದರೂ, ಹರ್ಷಿಸುವವರಾಗಿದ್ದೀರಿ.  (1 ಪೇತ್ರ 1:6)

"ಆಗ ಇಲ್ಲದವನಾಗಿರುತ್ತಿದ್ದೆನು. ನನ್ನನ್ನು ಗರ್ಭದಿಂದ ಸಮಾಧಿಗೆ ಹೊತ್ತುಕೊಂಡು ಹೋಗುತ್ತಿದ್ದರು.(ಯೋಬ  10:19)

1.‘ಸ್ವಲ್ಪ ಕಾಲ’ ಎಂಬ ವಾಕ್ಯವನ್ನು ಗಮನಿಸಿ.
 ಪರಿಶೋಧನೆಗಳು ಈ ಲೋಕದಲ್ಲಿ ತಾತ್ಕಾಲಿಕವಾಗಿರುತ್ತವೆ. " ನಮಗೋಸ್ಕರ ಮುಂದಿನ ಕಾಲದಲ್ಲಿ ಪ್ರತ್ಯಕ್ಷವಾಗುವ ಮಹಿಮಪದವಿಯನ್ನು ಆಲೋಚಿಸಿ ಈಗಿನ ಕಾಲದ ಕಷ್ಟಗಳು ಅಲ್ಪವೇ ಸರಿ ಎಂದು ಎಣಿಸುತ್ತೇನೆ." ಎಂಬುದನ್ನು  ನಾವು ನಿರಂತರವಾಗಿ ನೆನಪಿಸಿಕೊಳ್ಳಬೇಕು (ರೋಮ 8:18).

" ಹೇಗಂದರೆ ಕ್ಷಣಮಾತ್ರವಿರುವ ನಮ್ಮ ಹಗುರವಾದ ಸಂಕಟವು ಅತ್ಯಂತಾಧಿಕವಾದ ಪ್ರತಿಫಲವನ್ನು ಉಂಟುಮಾಡಿ ನಮಗೆ ನಿರಂತರವಾಗಿರುವ ಗೌರವವಾದ ಪ್ರಭಾವವನ್ನು ದೊರಕಿಸುತ್ತದೆ."(2 ಕೊರಿಂಥ 4:17) 

2."ಅಗತ್ಯವಿದ್ದಲ್ಲಿ" ಎಂಬ ಪದಗುಚ್ಛವನ್ನು ಗಮನಿಸಿ.
ಅವಶ್ಯವಿದ್ದರೆ ಮಾತ್ರ ಪರಿಶೋಧನೆಗಳು ನಮಗೆ ಬರುತ್ತವೆ. ದೇವರು, ಆತನ ಅನಂತ ಜ್ಞಾನದಲ್ಲಿ , ನಮ್ಮ ಆತ್ಮೀಕ ಆರೋಗ್ಯಕ್ಕೆ  ಅಗತ್ಯವಾದ ಬೆಳವಣಿಗೆಯನ್ನು ಉತ್ತೇಜಿಸುವುದಕೋಸ್ಕರ  ಯಾವ ರೀತಿಯ ಪರೀಕ್ಷೆಗಳನ್ನು ವಿನ್ಯಾಸಗೊಳಿಸಬೇಕು ಎಂಬುದನ್ನು  ನಿಖರವಾಗಿ ತಿಳಿದವನಾಗಿದ್ದಾನೆ .

ಉದಾಹರಣೆಗೆ, ಪೌಲನಿಗೆ “ಶರೀರದಲ್ಲಿ ಒಂದು ಶೂಲ”ವನ್ನು  ಕೊಡಲು ದೇವರು ಸೈತಾನನಿಗೆ  ಅನುಮತಿಸಿದನು. ಆದರೆ ಅದು ಅವನ ಒಳ್ಳೆಯದಕ್ಕಾಗಿಯೇ  ಮತ್ತು ನಿರ್ದಿಷ್ಟ ಉದ್ದೇಶಕ್ಕಾಗಿಯೇ. ಅವನು ಹೆಮ್ಮೆಪಡಲು ಅವಕಾಶ ಕೊಡಬಾರದೆಂದೆ ಅನುಮತಿಸಿದ್ದನು. (2 ಕೊರಿಂಥ 12:7-10 ನೋಡಿ).

3.ಮತ್ತೊಮ್ಮೆ, 'ವಿವಿಧ ಪರಿಶೋಧನೆಗಳು ' ಎಂಬ ಪದಗುಚ್ಛವನ್ನು ನೋಡಿ. 
ಪರಿಶೋಧನೆಗಳು ವಿವಿಧ ರೀತಿಯಲ್ಲಿ  ಮತ್ತು ವಿವಿಧ ಪ್ರಮಾಣದಲ್ಲಿ ಬರುತ್ತವೆ. ಕೆಲವೊಮ್ಮೆ ಅವು ನಮ್ಮ ದೇಹವನ್ನು ಮತ್ತು ಕೆಲವೊಮ್ಮೆ ನಮ್ಮ ಮನಸ್ಸನ್ನು ಬಾಧಿಸುತ್ತವೆ. ಬಹುತೇಕ ಸಮಯದಲ್ಲಿ ಅವುಗಳು ನಮ್ಮ ಆರಾಮ ವಲಯಗಳನ್ನು ಮತ್ತು ಇತರ ಸಮಯಗಳಲ್ಲಿ, ನಮ್ಮ ಪ್ರೀತಿಪಾತ್ರರನ್ನು ಬಾಧಿಸುವವುಗಳಾಗಿರುತ್ತವೆ. ಅವುಗಳ ಮೂಲವು ಏನೇ ಇರಲಿ, ದೇವರು ನಮ್ಮನ್ನು ಕ್ರಿಸ್ತನಂತೆ ಶಿಸ್ತು ಗೊಳಿಸಲು ಬಳಸುವುದರಿಂದ ದೈವಿಕತೆಯಲ್ಲಿ ತರಬೇತಿ ಪಡೆಯಲು ಈ ಪರಿಶೋಧನೆಗಳು ಅವಕಾಶಗಳನ್ನು ಮಾಡಿ ಕೊಡುತ್ತವೆ (ಇಬ್ರಿಯ 12: 6, 11). 

"ಬಂಗಾರವು ನಾಶವಾಗುವಂಥದಾಗಿದ್ದರೂ ಅದನ್ನು ಬೆಂಕಿಯಲ್ಲಿ ಪುಟಾಹಾಕಿ ಶೋಧಿಸುವದುಂಟಷ್ಟೆ. ಬಂಗಾರಕ್ಕಿಂತ ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವ ಮಾನಗಳನ್ನು ಉಂಟುಮಾಡುವದು. (1 ಪೇತ್ರ 1:7) 

ನೀವು ನಾಶನವನ್ನು ಅನುಭವಿಸಬೇಕೆಂದು  ದೇವರು ಶೋಧನೆಗಳನ್ನು ನೇಮಿಸುವುದಿಲ್ಲ , ಆದರೆ ನಿಮ್ಮ ನಂಬಿಕೆಯ "ವಾಸ್ತವತೆಯನ್ನು " ಸಾಬೀತುಪಡಿಸಲು ಅದನ್ನು ಬರಮಾಡುತ್ತಾನೆ. ವಿಶ್ವ ಮಾನದಂಡಗಳ ಪ್ರಕಾರ ಚಿನ್ನವನ್ನು ಅಮೂಲ್ಯವಾದ ಲೋಹವೆಂದು ಪರಿಗಣಿಸಲಾಗಿದೆ. ಚಿನ್ನವನ್ನು ಶುದ್ಧೀಕರಿಸಲು, ಅದನ್ನು ಬೆಂಕಿಯ 
ಪುಟಕ್ಕೆ ಹಾಕುತ್ತಾರೆ. ಇದರಿಂದಾಗಿ ಚಿನ್ನದಲ್ಲಿ ಅಡಗಿರುವ ಕಲ್ಮಶಗಳನ್ನು ಬೇರ್ಪಡಿಸಿ  ಶುದ್ಧ ಚಿನ್ನವನ್ನು ಅದರಿಂದ  ಪಡೆದುಕೊಳ್ಳಬಹುದು.

ಅಂತೆಯೇ, ಪರಿಶೋಧನೆಗಳು ನಿಮ್ಮ ನಂಬಿಕೆಯನ್ನು  ಕುಲುಮೆಗೆ ಹಾಕಿ  ಶೋಧೀಸುತ್ತದೆ. ನಿಮ್ಮ ನಂಬಿಕೆಯನ್ನು ಶುದ್ಧೀಕರಿಸಲು ಮತ್ತದು "ಚಿನ್ನಕ್ಕಿಂತ ಹೆಚ್ಚು ಅಮೂಲ್ಯವಾದುದು" (ಯೋಬ  23:10) ಎಂದು ಸಾಬೀತುಪಡಿಸಲು ಪರಿಶೋಧನೆಗಳು  ಅನುಮತಿಸಲ್ಪಡುತ್ತವೆ . 

Bible Reading : Genesis 25-26
Confession
ನಾನು ಪರಿಶೋಧಿಸಲ್ಪಟ್ಟರೂ ನಾನು ನಂಬಿಕೆಯಲ್ಲಿ ದೃಢವಾಗಿ ಉಳಿಯುವ ಧನ್ಯ ವ್ಯಕ್ತಿಯಾಗಿದ್ದೇನೆ . ನಾನು ಪ್ರತಿ ಪರಿಶೋಧನೆಗಳಿಗೊಳಗಾದಾಗಲೂ ಅದರಿಂದ ಮೊದಲಿಗಿಂತಇನ್ನೂ ಹೆಚ್ಚು  ಬಲವಾಗಿ  ಹೊರಬರುತ್ತೇನೆ. ದೇವರು ತನ್ನನ್ನು ಪ್ರೀತಿಸುವವರಿಗೆ ವಾಗ್ದಾನ ಮಾಡಿದ ಜೀವದ  ಕಿರೀಟವನ್ನು ನಾನು ಹೊಂದಿಕೊಳ್ಳುತ್ತೇನೆ . (ಯಾಕೋಬ  1:12)


Join our WhatsApp Channel


Most Read
● ದೈತ್ಯರ ಜನಾಂಗ
● ಅನ್ಯ ಭಾಷೆಯಲ್ಲಿ ಪ್ರಾರ್ಥಿಸಿ ಮತ್ತು ಆತ್ಮಿಕವಾದ ನವಚೇತನವನ್ನು ಹೊಂದಿಕೊಳ್ಳಿರಿ
● ದೇವರು ನಿಮ್ಮನ್ನು ಉಪಯೋಗಿಸಲು ಬಯಸುತ್ತಾನೆ.
● ನೀತಿಯ ವಸ್ತ್ರ
● ರೂಪಾಂತರ ಹೊಂದಲು ಇರುವ ಸಾಮರ್ಥ್ಯ.
● ಆಳವಾದ ನೀರಿನೊಳಗೆ
● ದಿನ 01 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ 
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login