हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ದೇವರ ರೀತಿಯ ನಂಬಿಕೆ
Daily Manna

ದೇವರ ರೀತಿಯ ನಂಬಿಕೆ

Friday, 24th of May 2024
4 3 423
Categories : ನಂಬಿಕೆ (Faith)
"ಯೇಸು ಹೇಳಿದ್ದೇನಂದರೆ - ನಿಮಗೆ ದೇವರಲ್ಲಿ ನಂಬಿಕೆಯಿರಲಿ. ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನಾದರೂ ಈ ಬೆಟ್ಟಕ್ಕೆ - ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು ಎಂದು ಹೇಳಿ ತನ್ನ ಮನಸ್ಸಿನಲ್ಲಿ ಸಂಶಯಪಡದೆ ತಾನು ಹೇಳಿದ್ದು ಆಗುವದೆಂದು ನಂಬಿದರೆ ಅವನು ಹೇಳಿದಂತೆಯೇ ಆಗುವುದು"(ಮಾರ್ಕ‬ ‭11:22‭-‬23‬ )

ಅನೇಕ ಬಾರಿ ನಮ್ಮ ಜೀವಿತಗಳಲ್ಲಿ ಅಂಧಕಾರದ ಹೊರತು ಬೇರೆ ಏನನ್ನೂ ಕಾಣದಂತ ಅಹಿತಕರವಾದ ಕರುಣಾಜನಕವಾದ ಸನ್ನಿವೇಶಗಳನ್ನು ಹಾದು ಹೋಗುವ ಪರಿಸ್ಥಿತಿ ಎದುರಾಗುತ್ತದೆ. ನಮ್ಮ ಸುತ್ತಲೂ ಅಸಾಧ್ಯತೆಗಳ ಗೋಡೆಗಳು ಮತ್ತು ಶೂನ್ಯತೆಯೇ ತುಂಬಿರುವಾಗ ನಾವು  ನಂಬಿಕೆಯನ್ನು ಅರಿಕೆ ಮಾಡುವ ಬದಲು ಭಯ- ನಿರಾಶೆಗಳ ಖಾಲಿ ಮಾತುಗಳನ್ನೇ ಆಗಾಗ್ಗೆ ಆಡುತ್ತಿರುತ್ತೇವೆ. ಆಗ ನಮ್ಮ ಸಮಸ್ಯೆಗಳು ನಮ್ಮ ಜೀವಿತವನ್ನು ಅಸಹಾಯಕರಾಗಿ ನಾವು ಮುಳುಗಿ ಹೋಗುವಂತಹ ಸಾಗರವನ್ನಾಗಿ ಮಾಡಿಬಿಡುತ್ತದೆ.

ಆದರೆ ಮೇಲಿನ ದೇವರ ವಾಕ್ಯದ ಪ್ರಕಾರ ದೇವರ ರೀತಿಯ ನಂಬಿಕೆಯೊಬ್ಬರಲ್ಲಿ ಇದ್ದಾಗ ಎಂದಿಗೂ ಭಯದ ಮಾತಾಡಲು ಅವಕಾಶ ಕೊಡುವುದಿಲ್ಲ. ನಿಮ್ಮಲ್ಲಿ ದೇವರ ರೀತಿಯ ನಂಬಿಕೆ ಇದೆಯೋ ಇಲ್ಲವೋ ಎಂಬುದು ನೀವು ಸಮಸ್ಯೆಗಳ ಆಳವಾದ ಸುಳಿಯಲ್ಲಿ ಸಿಲುಕಿದಾಗ ನಿಮ್ಮ ಬಾಯಿಂದ ಹೊರಡುವ ಮಾತುಗಳಿಂದಲೇ ತಿಳಿದು ಬರುತ್ತದೆ. ನಿಮ್ಮ ನಂಬಿಕೆ ಎಂತದ್ದು ಎಂಬುದನ್ನು ನಿಮ್ಮ ಮಾತುಗಳೇ ಬಯಲು ಪಡಿಸುತ್ತವೆ. ಹೇಗೂ ನಾವು ಎಷ್ಟೇ ನಂಬಿಕೆ ಕುರಿತು ಮಾತಾಡುವವರಾಗಿದ್ದರೂ  ಅದನ್ನು ನಮ್ಮ ಅಂತರ್ಯದಲ್ಲಿ ಹೊಂದಿರುವುದು ಒಳ್ಳೆಯದು. ಹಾಗಾಗಿ ದೇವರ ರೀತಿಯ ನಂಬಿಕೆ ಎಂಬುದು ದೇವರನ್ನು ನಂಬುವ ಹೃದಯದ ಕಾರ್ಯವಾಗಿದೆ ಮತ್ತು ಬಾಯಿಯೂ ಸಹ ಅದನ್ನೇ ಅರಿಕೆ ಮಾಡುತ್ತದೆ. ನೀವು ದೇವರ ರೀತಿಯ ನಂಬಿಕೆ ಹೃದಯದಲ್ಲಿ ತುಂಬಿಟ್ಟುಕೊಂಡು ಬಾಯಲ್ಲಿ  ಸೋಲುವ ಮಾತನ್ನು ಆಡಲು ಸಾಧ್ಯವಿಲ್ಲ.

ಈ ಒಂದು ವಾಕ್ಯವೃಂದದಿಂದ ಆಯ್ದುಕೊಂಡ ವಚನದಲ್ಲಿ ಯೇಸು ತನ್ನ ಶಿಷ್ಯರನ್ನು ದೇವರ ಮೇಲೆ ನಂಬಿಕೆ ಇಡಬೇಕೆಂದು ಉತ್ತೇಜನಪಡಿಸಲಾರಂಭಿಸುತ್ತಾನೆ. ಯೇಸು ತನ್ನ ಶಿಷ್ಯರು ದೇವರಲ್ಲಿ ಏಕೆ ನಂಬಿಕೆ ಇಡಬೇಕೆಂದು ಕಾರಣವನ್ನು ಕೊಡುತ್ತಾನೆ. ಆ ರಹಸ್ಯವು ಇಲ್ಲಿದೆ! ದೇವರ ಮೇಲೆ ಆಧಾರಗೊಂಡಂತ ನಂಬಿಕೆಯು ಆತನ ಸರ್ವಶಕ್ತತೆಯಲ್ಲಿನಾ ಬಲದ ಮೇಲಿರುವ ಕದಲಿಸಲಾಗದ ವಿಶ್ವಾಸವನ್ನು ಮತ್ತು ಆತನಲ್ಲಿರುವ ಎಂದಿಗೂ ಬದಲಾಗದ ಒಳ್ಳೆಯತನವನ್ನು ಪ್ರಕಟಿಸುವ ಕ್ರಿಯಾ ರೂಪವಾಗಿದೆ (ಮಾರ್ಕ್ 5:34)

ಅಸಾಧ್ಯವಾದಂತಹ ಸನ್ನಿವೇಶದಲ್ಲಿ ದೇವರ ರೀತಿಯ ನಂಬಿಕೆಯು ತರಬಲ್ಲ ಪರಿಹಾರದ ಮೇಲೆ ಬೆಳಕು ಚೆಲ್ಲಲು ಯೇಸು ಬಳಸಿದ ಅತಿಶಯೋಕ್ತಿಯನ್ನು ಸ್ವಲ್ಪ ಊಹಿಸಿಕೊಳ್ಳಿರಿ."ಯಾವನಾದರೂ ಆ ಬೆಟ್ಟಕ್ಕೆ.... ಹೇಳಿದರೆ" ಎಂದು ಯೇಸು ಹೇಳಿದ್ದಾನೆ.ಯೇಸು ಎಣ್ಣೆ ಮರದ ಗುಡ್ಡವನ್ನು ರೂಪಕವಾಗಿ ಬಳಸಿಕೊಂಡು ಈ ಮಾತನ್ನು ಹೇಳಿದ್ದಾನೆ ಏಕೆಂದರೆ ಆ ಬೆಟ್ಟವು ಕದಲದ ವಸ್ತುವಾಗಿ ಪ್ರತಿನಿಧಿಸುತ್ತದೆ.ಬೆಟ್ಟವು ಬಹಳ ಗಟ್ಟಿಯಾಗಿದ್ದು  ಅದನ್ನು ಕದಲಿಸಲು ಅಸಾಧ್ಯ. ನಾವೂ ಸಹ ನಮ್ಮ ಜೀವಿತಗಳಲ್ಲಿ ಇದೊಂದು ಬದಲಾಗದ ಸಮಸ್ಯೆ ಎನ್ನುವ ಸನ್ನಿವೇಶಗಳನ್ನು ಹಾದು ಹೋಗುತ್ತವೆ ತಾನೇ? ಹೌದು!

ಆ ಕದಲಿಸಲಾರದ ಬೆಟ್ಟವನ್ನು ಕದಲಿಸಲು ಯೇಸು ಹೇಳಿದಂತ ಸಾಧನವನ್ನು ನೀವು ಗಮನಿಸಿದ್ದೀರಾ? ಅದು ನಂಬಿಕೆಯ ವಾಕ್ಯವಲ್ಲದೆ ಮತ್ತ್ಯಾವುದು? ಆ ಅಸಾಧ್ಯ ಸನ್ನಿವೇಶಗಳಿಗೆ ನೀವು ಏನನ್ನು ಹೇಳುತ್ತಿರೋ ಅದು ಬಹಳ ಮುಖ್ಯವಾಗಿದೆ. ಏಕೆಂದರೆ ಆ ವಾಕ್ಯಗಳು ಮನುಷ್ಯನ ವಾಸ್ತವತೆಯ ಅಡಿಪಾಯಗಳನ್ನು ಗಟ್ಟಿಗೊಳಿಸುತ್ತದೆ.
ಕರ್ತನಾದ ಯೇಸು ಇನ್ನೂ ಮುಂದುವರೆದು ಹೇಳಿದ್ದೇನೆಂದರೆ ನಂಬಿಕೆಯಿಂದ"ಹೋಗಿ ಆ ಸಮುದ್ರಕ್ಕೆ ಬೀಳು " ಎಂದು ಆಡುವ ಮಾತುಗಳು ಕೇವಲ ಅಸಾಧ್ಯವಾದ ಸಂದಿಗ್ಧವಾದ ಸನ್ನಿವೇಶಗಳನ್ನು ಬದಲಾಯಿಸಲಿರುವ ಶಕ್ತಿಯುತವಾದ ಸಾಧನೆಗಳಷ್ಟೇ ಅಲ್ಲದೆ ನಮ್ಮನ್ನು ಮತ್ತೆ ಎಂದಿಗೂ ಆ ಸನ್ನಿವೇಶವನ್ನು ಕಾಣದಂತೆ ನಮ್ಮನ್ನು ಸ್ಥಳಾಂತರಿಸಿಬಿಡುತ್ತದೆ. ಎಂಥ ಅದ್ಭುತ! ಅದುವೇ ಜೀವನದ ಸವಾಲುಗಳ ಮೇಲೆ ನಮ್ಮಲ್ಲಿರುವ ಸುಭದ್ರವಾದ ವಿಜಯ.

ನೀವು ಆ ಬೆಟ್ಟವನ್ನು ಮತ್ತೊಂದು ಕಡೆಗೆ ಸ್ಥಳಾಂತರಿಸಿ ಬಿಟ್ಟರೆ, ಯಾರಿಗೆ ಗೊತ್ತು?ನಿಮ್ಮ ಪ್ರಯಾಣವು ಆ ಮಾರ್ಗದಲ್ಲಿ ಸರಾಗವಾಗಿ ಸಾಗಬಹುದು. ಆದ್ದರಿಂದ ಯೇಸು ಹೇಳಿದ್ದೇನೆಂದರೆ ನಂಬಿಕೆಯಿಂದ  ನಿಮಗೆ ಅಡೆತಡೆಗಳಾಗಿ ಇರುವ ಸಮಸ್ಯೆಗಳಾದ ಬೆಟ್ಟವನ್ನು ಹಿಂತಿರುಗಿ ಬರಲಾರದಂತ ಸಮುದ್ರಕ್ಕೆ ಹಾಕಿರಿ. ಅದುವೇ ವಿಸ್ತ್ರತ ವಿಜಯದ ಚಿತ್ರಣ. ನಂಬಿಕೆಯಿಂದ ಕೂಡಿದ ಪ್ರಾರ್ಥನೆಯು ಮನುಷ್ಯರಿಗೆ ಅಸಾಧ್ಯವಾದ ಕಾರ್ಯಗಳನ್ನು ದೇವರ ಶಕ್ತಿಯ ಮೂಲಕ ಸಾಧ್ಯವಾಗುವಂತೆ ಮಾಡುತ್ತದೆ ಎಂಬುದನ್ನು ಎಂದಿಗೂ ಮರೆಯಬೇಡಿರಿ.
Prayer
Father, thank You because you always hear me. I face all my mountains of challenges today by faith, knowing that no situation or difficulty is impossible for You. In Jesus' name. Amen!

Join our WhatsApp Channel


Most Read
● ಪ್ರಾರ್ಥನೆಯ ಪರಿಮಳ
● ಕರ್ತನು ಹೃದಯವನ್ನೇ ಶೋಧಿಸುವವನಾಗಿದ್ದಾನೆ.
● ಸುಮ್ಮನೆ ಓಡಬೇಡಿ.
● ದಿನ 31:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 14:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದೇವರಿಗಾಗಿ ದಾಹದಿಂದಿರುವುದು
● ಅಧರ್ಮಗಳ ಆಳ್ವಿಕೆಯ ಬಲವನ್ನು ಮುರಿಯುವುದು - I
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login