हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ವಾಕ್ಯದಿಂದ ಬೆಳಕು ಬರುತ್ತದೆ
Daily Manna

ವಾಕ್ಯದಿಂದ ಬೆಳಕು ಬರುತ್ತದೆ

Sunday, 21st of July 2024
2 1 498
Categories : ದೇವರವಾಕ್ಯ ( Word of God )
ಬೆಳಕು ಮತ್ತು ಕತ್ತಲು ಎಂದಿಗೂ ಜೊತೆಗೆ ಇರಲಾಗದು. ಒಂದರ ಉಪಸ್ಥಿತಿಯು ಮತ್ತೊಂದರ ಅನುಪಸ್ಥಿತಿಯನ್ನು ಸೂಚಿಸುತ್ತದೆ. ವಾಸ್ತವವಾಗಿ, ಒಬ್ಬ  ಪ್ರಸಿದ್ಧ ಕ್ರೈಸ್ತ ವಿದ್ವಾಂಸರು ಇದನ್ನು ಹೀಗೆ ಹೇಳಿದ್ದಾರೆ " ಬೆಳಕನ್ನು ಒದಗಿಸಿದರೆ ಸಾಕು  ಕತ್ತಲು ತಾನಾಗಿ ಮಾಯವಾಗುತ್ತದೆ" ಹೇಗೂ ಕತ್ತಲೆಂದರೆ ಅದು ಕೇವಲ ಭೌತಿಕವಾದ ಬೆಳಕಿನ ಅನುಪಸ್ಥಿತಿಯನ್ನು ಹೇಳದೆ ಅದಕ್ಕಿಂತಲೂ ಹೆಚ್ಚಿನ ಅರ್ಥವನ್ನು ಕೊಡಬಲ್ಲದ್ದಾಗಿದೆ.

ಸ್ವಾಭಾವಿಕವಾಗಿ ಭೌತಿಕವಾದ ಕತ್ತಲಲ್ಲಿ ಒಬ್ಬರು ಏನನ್ನೂ ಕಾಣಲು ಸಾಧ್ಯವಾಗುವುದಿಲ್ಲ. ಏನು ಮಾಡುವುದು ಎಂದು ಅರಿಯದೆ ಕಂಗಾಲಾಗುತ್ತಾರೆ. ಸವಿಸ್ತಾರವಾಗಿ ಹೇಳಬೇಕೆಂದರೆ, ಕತ್ತಲಿನ ಸ್ಥಿತಿಯು ಗೊಂದಲ, ನಿರಾಶೆ, ಮರೆವು, ಚಿಂತಾಭಾರ, ನಷ್ಟ ಇತ್ಯಾದಿ ಕ್ಷಣಗಳನ್ನು ಒಳಗೊಂಡಿರುತ್ತದೆ.ಆದರೂ ಒಂದು ಶುಭ ಸುದ್ದಿ ಏನೆಂದರೆ ಈ ಕತ್ತಲು  ಎಷ್ಟೇ ಉದ್ದಗಲಕ್ಕೂ  ಇದ್ದರೂ ಅದಕ್ಕೆ ಪರಿಹಾರವೆಂದರೆ ಅಲ್ಲಿ ಬೆಳಕನ್ನು ಒದಗಿಸುವುದಾಗಿದೆ.

ಸತ್ಯವೇದದಲ್ಲಿ ಸರ್ವವ್ಯಾಪಕತೆಯನ್ನು ಹೊಂದಿದಂತ ಬೆಳಕಿನ ಒಂದು ವಿಧವನ್ನು ನಾವು ನೋಡುತ್ತೇವೆ. ಈ ಬೆಳಕು ನಮ್ಮ ಸವಾಲುಗಳು ಯಾವುದೇ ಹಂತದಲ್ಲಿದ್ದರೂ ಸಹ ಅದನ್ನು ಇದು ಎದುರಿಸಬಲ್ಲದು ಇದು ನಮ್ಮ ಜೀವಿತದಲ್ಲಿ ನಾವು  ಏನನ್ನು ಮಾಡಬೇಕೆಂದು ಮಾರ್ಗ ತೋರಿಸುವಂತಹದ್ದಾಗಿದೆ. ಅದುವೇ ದೇವರ ವಾಕ್ಯವೆಂಬ ಬೆಳಕು.

"ನಿನ್ನ ವಾಕ್ಯವಿವರಣೆಯಿಂದ.... ಜ್ಞಾನೋದಯವಾಗುವದು."(ಕೀರ್ತನೆಗಳು 119:130)

ಆದ್ದರಿಂದ ನಮ್ಮ ಹೃದಯದಲ್ಲಿ ದೇವರ ವಾಕ್ಯದ ಪ್ರವೇಶಕ್ಕೆ ಅನುಮತಿಸುವುದು ಅತ್ಯಂತ ಅಗತ್ಯವಾದ ಕಾರ್ಯವಾಗಿದೆ. ಇದು ಕತ್ತಲನ್ನು ಹೋಗಲಾಡಿಸಿ ನಮ್ಮ ಜೀವನವನ್ನು ಬೆಳಕಿನಿಂದ ತುಂಬಿಸುತ್ತದೆ. ಇದರಿಂದ ಗೊಂದಲಗಳು ನಿವಾರಣೆಯಾಗುತ್ತದೆ. ನಿರುದ್ಸಾಹ ಪಲಾಯನವಾಗುತ್ತದೆ. ಸ್ಪಷ್ಟತೆಯು ದೊರಕುತ್ತದೆ. ಆದಾಗಿಯೂ ಇದು ಸ್ವಯಂ ಚಾಲಿತವಾಗಿ ಸಂಭವಿಸಿ ಬಿಡುವುದಿಲ್ಲ. ಏಕೆಂದರೆ ನಾವು ಯಾವಾಗಲೂ ನಮ್ಮ ಸತ್ಯವೇದವನ್ನು ನಮ್ಮೊಡನೆ ಕೊಂಡೊಯುತ್ತಲೇ ಇರುತ್ತೇವೆ. ಆದರೂ ಅದರಲ್ಲಿನ ವಾಕ್ಯಗಳು ನಮ್ಮ ಹೃದಯವನ್ನು ಅಂದರೆ ನಮ್ಮ ಆಂತರಿಕ ವ್ಯಕ್ತಿಯನ್ನು ಸೀಳಿಕೊಂಡು ಹೋಗಬೇಕು. ವಾಕ್ಯಗಳು ನಮ್ಮೊಳಗೆ ಆ ರೀತಿ ಬರುವುದರ ಅರಿವು ಕೂಡ ನಮಗೆ ಇರಬೇಕು.

"ನಿನ್ನ ವಾಕ್ಯವಿವರಣೆಯಿಂದ ಯುಕ್ತಿಹೀನರಿಗೆ ಜ್ಞಾನೋದಯವಾಗುವದು."(ಕೀರ್ತನೆಗಳು 119:130)

ನಾವು ದೇವರ ವಾಕ್ಯಗಳನ್ನು ಅರಿತುಕೊಳ್ಳುವಾಗ ನಮಗೆ ಜ್ಞಾನೋದಯವಾಗುತ್ತದೆ. ನಾವು ನಮ್ಮ ಜೀವಿತಕ್ಕೆ ಸೂಕ್ತವಾಗಿ ಅದನ್ನು ಅನ್ವಯಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ ನಾವು ದೇವರ ವಾಕ್ಯಗಳನ್ನು ಮೇಲೆ ಮೇಲೆ ಮಾತ್ರ ಓದಿಕೊಂಡು ಹೋಗದೆ ಅದರ ಅರ್ಥವನ್ನು ಆಳವಾಗಿ ತಿಳಿದುಕೊಳ್ಳಲು ನಿರಂತರವಾಗಿ ಪ್ರಯತ್ನಿಸಬೇಕು. ಅದಕ್ಕಾಗಿ  ನಾವು ಶ್ರದ್ಧೆಯಿಂದ ವಾಕ್ಯವನ್ನು ಅಧ್ಯಯನ ಮಾಡೋಣ ಮತ್ತು ದೇವರ ಬೆಳಕು ನಮ್ಮ ಮೇಲೆ ಉದಯಿಸುವವರೆಗೂ ಧ್ಯಾನಿಸುತ್ತಲೇ ಇರೋಣ.

ಈ ಕಾರ್ಯವು ನಮ್ಮಿಂದ ಬದ್ಧತೆಯನ್ನು ನಿರೀಕ್ಷಿಸುತ್ತದೆ ನಾವು ಪವಿತ್ರಾತ್ಮನೊಂದಿಗೆ ಅನ್ಯೋನ್ಯತೆಯನ್ನು ಕಾಪಾಡಿಕೊಂಡಾಗ ಮಾತ್ರ ಇದು ಸಾಧ್ಯವಾಗುತ್ತದೆ.

ಅಪೋಸ್ತಲನಾದ ಪೌಲನು ಎಫಸ್ಸೆ 1:17-19 ರಲ್ಲಿ ಹೀಗೆ ಪ್ರಾರ್ಥಿಸುವಾಗ ನಾವು ಇದರಲ್ಲಿರುವ ಅಗದವಾದ ಪ್ರಾಮುಖ್ಯತೆಯನ್ನು ನೋಡುವವರಾಗುತ್ತೇವೆ.
"ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ಪ್ರಭಾವಸ್ವರೂಪನಾದ ತಂದೆಯೂ ಆಗಿರುವಾತನು ತನ್ನ ವಿಷಯವಾಗಿ ತಿಳುವಳಿಕೆಯನ್ನು ಕೊಟ್ಟು ಇದುವರೆಗೆ ಗುಪ್ತವಾಗಿದ್ದ ಸತ್ಯಾರ್ಥಗಳನ್ನು ತಿಳುಕೊಳ್ಳುವ ಜ್ಞಾನವುಳ್ಳ ಆತ್ಮವನ್ನು ನಿಮಗೆ ದಯಪಾಲಿಸಬೇಕೆಂದು ಪ್ರಾರ್ಥಿಸುತ್ತೇನೆ. ಆತನು ನಿಮ್ಮ ಮನೋನೇತ್ರಗಳನ್ನು ಬೆಳಗಿಸಿ ಆತನಿಂದ ಕರಿಸಿಕೊಂಡವರು ನಿರೀಕ್ಷಿಸುವ ಪದವಿ ಎಂಥದೆಂಬದನ್ನೂ ದೇವಜನರೆಂಬ ಆತನ ಸ್ವಾಸ್ಥ್ಯದ ಮಹಿಮಾತಿಶಯವು ಎಂಥದೆಂಬದನ್ನೂ ನಂಬುವವರಾದ ನಮ್ಮಲ್ಲಿ ಆತನು ಸಾಧಿಸುವ ಪರಾಕ್ರಮವು ಎಷ್ಟು ಅತಿಶಯವಾದದ್ದೆಂಬದನ್ನೂ ನೀವು ತಿಳುಕೊಳ್ಳುವಂತೆ ಅನುಗ್ರಹಿಸಲಿ."



Prayer
ತಂದೆಯೇ, ನನಗೆ ಜ್ಞಾನೋದಯವನ್ನು ಉಂಟುಮಾಡುವ ನಿನ್ನ ವಾಕ್ಯದ ಬೆಳಕಿಗಾಗಿ ನಿನಗೆ ಸ್ತೋತ್ರ. ನಿನ್ನ ವಾಕ್ಯದ ಬೆಳಕು ನನ್ನ ಹೃದಯ ಮೇಲೆ ಉದಯಿಸಲಿ. ನನ್ನ ಮನೋ ನೇತ್ರಗಳು ಬೆಳಗಲಿ. ನಿನ್ನ ವಾಕ್ಯಗಳು ನನ್ನ ಜೀವನದಲ್ಲಿ ಫಲ ಕೊಡಲಿ ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ. ಆಮೆನ್.


Join our WhatsApp Channel


Most Read
● ಉತ್ತಮವು ಅತ್ಯುತ್ತಮವಾದದಕ್ಕೆ ಶತೃ
● ಕ್ರಿಸ್ತನ ರಾಯಭಾರಿಗಳು
● ಆತನ ಬಲದ ಉದ್ದೇಶ.
● ಪರಿಪೂರ್ಣ ಬ್ರ್ಯಾಂಡ್ ನಿರ್ವಾಹಕ.
● ದಿನ 05:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಅಭಿಷೇಕಕ್ಕಿರುವ ಪ್ರಪ್ರಥಮ ಶತೃ
● ಚಿಕ್ಕ ಸಂಗತಿಗಳೂ ಸಹ ಮಹತ್ತರ ಉದ್ದೇಶಗಳನ್ನು ಪೂರೈಸಬಲ್ಲವು.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login