हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಮೂರು ನಿರ್ಣಾಯಕ ಪರೀಕ್ಷೆಗಳು
Daily Manna

ಮೂರು ನಿರ್ಣಾಯಕ ಪರೀಕ್ಷೆಗಳು

Thursday, 10th of October 2024
2 0 275
Categories : ಶಿಷ್ಯತ್ವ (Discipleship)
"ರಂಗಸ್ಥಾನದಲ್ಲಿ ಓಡುವದಕ್ಕೆ ಗೊತ್ತಾದವರೆಲ್ಲರೂ ಓಡುತ್ತಾರಾದರೂ ಒಬ್ಬನು ಮಾತ್ರ ಬಿರುದನ್ನು ಹೊಂದುತ್ತಾನೆ ಎಂಬದು ನಿಮಗೆ ತಿಳಿಯದೋ? ಅವರಂತೆ ನೀವೂ ಬಿರುದನ್ನು ಪಡಕೊಳ್ಳಬೇಕೆಂತಲೇ ಓಡಿರಿ. ಅದರಲ್ಲಿ ಹೋರಾಡುವವರೆಲ್ಲರು ಎಲ್ಲಾ ವಿಷಯಗಳಲ್ಲಿ ವಿುತವಾಗಿರುತ್ತಾರೆ. ಅವರು ಬಾಡಿಹೋಗುವ ಜಯಮಾಲಿಕೆಯನ್ನು ಹೊಂದುವದಕ್ಕೆ ಸಾಧನೆಮಾಡುತ್ತಾರೆ; ನಾವಾದರೋ ಬಾಡಿಹೋಗದ ಜಯಮಾಲಿಕೆಯನ್ನು ಹೊಂದುವದಕ್ಕೆ ಸಾಧನೆ ಮಾಡುವವರಾಗಿದ್ದೇವೆ. ಹೀಗಿರಲಾಗಿ ನಾನು ಸಹ ಗುರಿಗೊತ್ತಿಲ್ಲದವನಾಗಿ ಓಡದೆ ಗೆಲ್ಲಬೇಕೆಂದಿರುವ ಅವರಂತೆಯೇ ಓಡುತ್ತೇನೆ; ನಾನು ಗಾಳಿಯನ್ನು ಗುದ್ದುವವನಾಗಿರದೆ ಗೆಲ್ಲಬೇಕೆಂದವನಾಗಿ ಗುದ್ದಾಡುತ್ತೇನೆ. ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿಕೊಂಡೇನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನ ಪಡಿಸಿಕೊಳ್ಳುತ್ತೇನೆ."(1 ಕೊರಿಂಥದವರಿಗೆ 9:24-27)

"ಯಾಕಂದರೆ ಉದ್ಧಾರವು ಮೂಡಲಿಂದಾಗಲಿ ಪಡುವಲಿಂದಾಗಲಿ ಅರಣ್ಯದಿಂದಾಗಲಿ ಬರುವದಿಲ್ಲ."(ಕೀರ್ತನೆಗಳು 75:6)

ವೃತ್ತಿ ಎನ್ನುವಂತದ್ದು ನೀವು ಆಯ್ಕೆ ಮಾಡಿಕೊಂಡುವಂತದ್ದಾಗಿದೆ. ಆದರೆ "ಕರೆ" ಎಂಬುದು ದೇವರಿಂದ ಹೊಂದಿಕೊಳ್ಳುವಂಥದ್ದಾಗಿದೆ.

ವೃತ್ತಿ ಎಂಬುದು ನೀವು ನಿಮಗೋಸ್ಕರ ಮಾಡಿಕೊಳ್ಳುವಂತದ್ದು. ಆದರೆ " ಕರೆ " ಎಂಬುವಂಥದು ನೀವು ದೇವರಿಗಾಗಿ ಮಾಡುವಂತದ್ದಾಗಿದೆ.

ದೇವರು ನಮ್ಮನ್ನು ಕರೆದಾಗ ನಾವು ಸರಿಯಾಗಿ ಸಿದ್ದರಾಗಿರಬೇಕಾಗಿರುತ್ತದೆ. ದೇವರು ಅರ್ಹ ವ್ಯಕ್ತಿಗಳನ್ನು ಕರೆಯುವುದಿಲ್ಲ. ಆದರೆ ಕರೆದಂತ ವ್ಯಕ್ತಿಯನ್ನು ಅರ್ಹರನ್ನಾಗಿ ಮಾಡುತ್ತಾನೆ. ಅದರ ಅರ್ಥವೇನು?

"ಆದರೆ ಮೋಶೆ ಯೆಹೋವನಿಗೆ - ಸ್ವಾಮೀ, ನಾನು ಮೊದಲಿನಿಂದಲೂ ನೀನು ದಾಸನ ಸಂಗಡ ಮಾತಾಡಿದ ಮೇಲೆಯೂ ವಾಕ್ಚಾತುರ್ಯವಿಲ್ಲದವನು; ನನ್ನ ಮಾತೂ ನಾಲಿಗೆಯೂ ಮಂದವಾಗಿವೆ ಎಂದು ಹೇಳಲು ಯೆಹೋವನು ಅವನಿಗೆ - ಮನುಷ್ಯರಿಗೆ ಬಾಯಿ ಕೊಟ್ಟವರಾರು? ಒಬ್ಬನು ಮೂಕನಾಗಿ ಮತ್ತೊಬ್ಬನು ಕಿವುಡನಾಗಿ ಒಬ್ಬನು ಕಣ್ಣುಳ್ಳವನಾಗಿ ಮತ್ತೊಬ್ಬನು ಕಣ್ಣಿಲ್ಲದವನಾಗಿ ಇರಬೇಕೆಂದು ನೇವಿುಸಿದವರಾರು? ಯೆಹೋವನಾಗಿರುವ ನಾನಲ್ಲವೇ. ಹೀಗಿರುವದರಿಂದ ನೀನು ಹೊರಟುಹೋಗು; ನಾನು ನಿನ್ನ ಬಾಯಿಗೆ ಸಹಾಯವಾಗಿದ್ದು ನೀನು ಮಾತಾಡಬೇಕಾದದ್ದನ್ನು ಬೋಧಿಸುವೆನು ಎಂದು ಹೇಳಿದನು. ಅದಕ್ಕೆ ಮೋಶೆ - ಸ್ವಾಮೀ, ಈ ಕಾರ್ಯಕ್ಕೆ ಬೇರೊಬ್ಬನನ್ನು ನೇವಿುಸಬೇಕು ಎನ್ನಲು.. "(ವಿಮೋಚನಕಾಂಡ 4:10-13)

ದೇವರು ಮೋಶೆಯನ್ನು ತನ್ನ ಜನರಾದ ಇಸ್ರಾಯೆಲ್ಯಾರನ್ನು ಐಗುಪ್ತದಿಂದ ಬಿಡಿಸಲು ಕರೆದನು. ಆದರೆ ಮೋಶೆಯು ತನ್ನ ವಾಕ್ಚತುರ್ಯದ ಕೊರತೆಯ ಕಾರಣದಿಂದ ದೇವರ ಯೋಜನೆಯನ್ನು ಪೂರ್ಣಗೊಳಿಸಲು ತಾನು ಅನರ್ಹ ಎಂದು ಅಂದುಕೊಂಡನು. ಆದರೆ ಆ ಕೊರತೆಯೂ ದೇವರು ಮೋಷೆಯನ್ನು ಉಪಯೋಗಿಸಿಕೊಳ್ಳದಂತೆ ತಡೆಯಲಾಗಲಿಲ್ಲ.

ದೇವರು ನಮ್ಮಲ್ಲಿ ಪ್ರತಿಯೊಬ್ಬರನ್ನು ಒಂದು ಉದ್ದೇಶಕ್ಕಾಗಿ ಕರೆದಿದ್ದಾನೆ. ಹೇಗೂ ನಾವು ನಮ್ಮ ಜೀವಿತದಲ್ಲಿನ ಉದ್ದೇಶ ಹಾಗೂ ಕರೆಯನ್ನು ಪೂರ್ಣಗೊಳಿಸಲು ನಮಗೆ ಪ್ರಸ್ತುತ ಕೊಟ್ಟಿರುವ ಕೆಲಸಗಳಲ್ಲಿ ಸಣ್ಣ ಸಣ್ಣ ಸಂಗತಿಗಳಲ್ಲೂ ನಾವು ನಂಬಿಗಸ್ತರಾಗಿರಬೇಕು.

ಒಬ್ಬನಿಗೆ ಕೊಟ್ಟಿರುವ ಸಣ್ಣ ಸಣ್ಣ ಕೆಲಸಗಳಲ್ಲೂ ಒಬ್ಬನು ನಂಬಿಗಸ್ತನಾಗಿದ್ದರೆ, ಆಮೇಲೆ ವೇದಿಕೆಯ ಮುಖ್ಯಸ್ಥಾನಕ್ಕೆ ಅವನು ಬರಬಹುದು. ದಾವೀದನ್ನು ಚಿಯೋನಿನ ಅರಸನಾಗಿ ಆಳ್ವಿಕೆ ಮಾಡುವ ಮೊದಲು ಅವನು ಈ ಮೂರು ಸ್ಥಳಗಳಲ್ಲಿ ನಂಬಿಗಸ್ತನಾಗಿ ಕಂಡು ಬಂದನು. ಅವುಗಳನ್ನು ಜಾಗರೂಕತೆಯಿಂದ ಪರಿಶೀಲಿಸಿ- ನೀವು ಸಹ ಈ ಮೂರು ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕು.

1) ಬೆತ್ಲೆಹೆಮ್ ನಲ್ಲಿರುವ ತನ್ನ ಮನೆಯಲ್ಲಿ

ಇಲ್ಲಿಯೇ ದಾವೀದನು ಜವಾಬ್ದಾರಿಯನ್ನು ಕಲಿತುಕೊಂಡದ್ದು ತನ್ನ ಕುಟುಂಬಕ್ಕೆ ಅಗತ್ಯವಾಗಿ ಬೇಕಿದ್ದ ಜೀವನೋಪಾಯದ ಕೆಲಸಕ್ಕೆ ಬೆಂಬಲವನ್ನು ನೀಡುವ ಮೂಲಕ, ದೇವರೊಂದಿಗಿನಾ ತನ್ನ ಸಂಬಂಧವನ್ನು ಬೆಳೆಸಿಕೊಳ್ಳುವ ಮೂಲಕ ಅದನ್ನು ಕಲಿತುಕೊಂಡನು. ಜೊತೆಗೆ ದೇವರ ಅನುಗ್ರಹದಿಂದ ಇತರರ ಅಸಮಾಧಾನವನ್ನು ಜಯಿಸುವುದನ್ನೂ ಕಲಿತನು. ಒಬ್ಬರು ಒಮ್ಮೆ ಹೀಗೆ ಹೇಳಿದ್ದಾರೆ "ದಾನ ಧರ್ಮವು ಮನೆಯಿಂದಲೇ ಆರಂಭವಾಗುತ್ತದೆ" ಎಂದು. ನೀವು ಸಣ್ಣ ಸಣ್ಣ ಕಾರ್ಯಗಳಲ್ಲಿ ನಂಬಿಗಸ್ತರಾಗಿರುವ ಮೂಲಕ ದೊಡ್ಡ ದೊಡ್ಡ ಕಾರ್ಯ ಯೋಜನೆಗಳನ್ನು ನಿರ್ವಹಿಸಲು ಅರ್ಹರಾಗುತ್ತೀರಿ. ಇಲ್ಲಿಯೇ ನಿಮ್ಮ ಗುಣವು ಅಭಿವೃದ್ಧಿ ಹೊಂದಿ ನಿಮ್ಮ ವಿಶ್ವಾಸಾರ್ಹತೆ ಸಾಬೀತಾಗುತ್ತದೆ.

ದಾವಿದನು ತನ್ನ ತಂದೆಯ ಕುರಿಗಳನ್ನು ಮೇಯಿಸುವ ಕಾರ್ಯದಲ್ಲಿ ನಂಬಿಗಸ್ತನಾಗಿದ್ದನು. ಅವುಗಳನ್ನು ರಕ್ಷಿಸಲು ಸಿಂಹ ಮತ್ತು ಕರಡಿಗಳ ವಿರುದ್ಧವೂ ಹೋರಾಡಲು ಸಹ ಅವನು ಸಿದ್ದನಾಗಿದ್ದನು. ದೇವರು ಅವನ ಈ ನಿಷ್ಠೆಯನ್ನು ನೋಡಿ ತನ್ನ ಜನರ ಮೇಲೆ ಕುರುಬನಾಗಿ ನೇಮಿಸಿದನು. ದೇವರು ತನ್ನ ತಂದೆಯ ಮನೆಯ ವ್ಯವಹಾರಗಳನ್ನು ನೋಡಿಕೊಳ್ಳುವಂತಹ ಮಗ ಅಥವಾ ಮಗಳನ್ನು ಹುಡುಕುತ್ತಿದ್ದಾನೆ ಹೊರತು ಅಲೆಮಾರಿಯಾಗಿ ಅಲೆದಾಡುವ ಆಧ್ಯಾತ್ಮಿಕ ಪಿಪಾಸುಗಳನ್ನಲ್ಲ.

2) ಅದ್ದುಲಮ್ ಗುಹೆಯಲ್ಲಿ ಇರುವಾಗ

ಸಮಾಜದಲ್ಲಿರುವ ಅಸಮರ್ಪಕ ಮತ್ತು ತಿರಸ್ಕಾರಗಳ ನಡುವೆ ಬದುಕುವ ಮೂಲಕ, ಜನರಿಂದ ಏನನ್ನೂ ಕೂಡ ಪ್ರತಿಯಾಗಿ ನಿರೀಕ್ಷಿಸದೆ ಇತರರಿಗೆ ತನ್ನನ್ನೆ ಸಮರ್ಪಿಸಿಕೊಳ್ಳಲು ದಾವೀದನು ಕಲಿತುಕೊಂಡನು. ಅವನ ಜೀವದ ಮೇಲೆ ಆಕ್ರಮಣವಾದರೂ ಪ್ರೀತಿ ಮಾಡುವುದನ್ನು, ಸೇವೆ ಮಾಡುವುದನ್ನು ಅವನು ಮರೆಯಲಿಲ್ಲ ಅಸಮರ್ಥ ಹಾಗೂ ತಿರಸ್ಕೃತ ಜನರನ್ನು ಪರಾಕ್ರಮಿಗಳನ್ನಾಗಿ ಸಿದ್ದ ಮಾಡಿದ ಸ್ಥಳವು ಇದುವೇ ಆಗಿದೆ. ಅದ್ದುಲಾಮ್ಗ ವಿಯೇ ನಮ್ಮ ಒಂದು ಭೌತಿಕ ರಾಜ್ಯವು ನಾಶಪಡಿಸಿ ದೇವರ ರಾಜ್ಯದ ಆಳ್ವಿಕೆಯನ್ನು ನಮ್ಮ ಮೂಲಕ ಪ್ರಕಟ ಪಡಿಸುತ್ತದೆ.ಇಲ್ಲಿಯೇ ದೇವರು ನಮ್ಮ ಹೃದಯದಲ್ಲಿರುವ ಪ್ರತಿಯೊಂದು ಸ್ವಯಂ ಅನ್ವೇಷಣೆ ಸ್ವಯಂ ಸೇವೆಯ ಉದ್ದೇಶಗಳೊಂದಿಗೆ ವ್ಯವಹರಿಸುತ್ತಾನೆ. ದುಃಖಕರ ಸಂಗತಿ ಎಂದರೆ ನಮ್ಮಲ್ಲಿ ಅನೇಕರು ಈ ಗುಹೆಗೆ ಎಂದಿಗೂ ಹೋಗುವುದಿಲ್ಲ.

3) ಹೆರ್ಮನ್ ಪರ್ವತದ ಮೇಲೆ

"ಹೆರ್ಮನ್" ಪದದ ಅರ್ಥ ಒಡಂಬಡಿಕೆ. ಹೆರ್ಮೋನ್ ಪರ್ವತವು ಇಸ್ರಾಯೇಲ್ ದೇಶದಲ್ಲಿಯೇ ಅತಿ ಎತ್ತರದ ಪರ್ವತವಾಗಿದೆ ಮತ್ತೆ ಈ ಪರ್ವತದ ಮೇಲೆ ಏರಲು ಸುಲಭವಾದ ದಾರಿಯು ಇರಲಿಲ್ಲ. ಇದನ್ನು ಏರಲು ಎಲ್ಲ ರೀತಿಯ ಹತ್ತುವಿಕೆ ವಿಧಾನಗಳನ್ನು ಅನುಸರಿಸಬೇಕಾಗಿತ್ತು. ಸಂಬಂಧಗಳ ನಡುವೆ ಇರುವ ಒಡಂಬಡಿಕೆಯು ಕೂಡ ಹೆಚ್ಚು ಕಡಿಮೆ ಹೀಗೆ ಇರುತ್ತದೆ. ಒಪ್ಪಂದಗಳಿಂದ ಕೂಡಿದ ಸಂಬಂಧಗಳಲ್ಲಿ ಯಾವಾಗಲೂ ಯಾವುದೇ ಸಂದರ್ಭಗಳನ್ನೂ ಲೆಕ್ಕಿಸದೆ , ನಷ್ಟವನ್ನು ಲೆಕ್ಕಿಸದೆ ಯಾವುದೇ ನೋವುಗಳನ್ನು ಲೆಕ್ಕಿಸದೆ ನಿಷ್ಠೆಯಿಂದಲೂ ಸತ್ಯತೆಯಿಂದಲು ಕ್ಷಮಾ ಭಾವದಿಂದಲೂ ವರ್ತಿಸಬೇಕಾಗುತ್ತದೆ.

ನಾವು ಈ ರೀತಿಯಲ್ಲಿ ಬದುಕಲು ಆರಂಭಿಸುವಾಗ ಪರಿಹಾರಗಳಿಗಾಗಿ ಲೋಕವು ಚಿಯೋನ್ (ಚರ್ಚ್) ಕಡೆಗೆ ತಿರುಗಿ ನೋಡುತ್ತದೆ. ಏಕೆಂದರೆ ದೇವರು ನಮ್ಮೊಳಗೆ ಕಾರ್ಯ ಮಾಡುವುದನ್ನು ಅವರು ನೋಡುವವರಾಗಿರುತ್ತಾರೆ.
Prayer
ತಂದೆಯೇ, ನಾನು ನಮ್ರತೆ- ದೀನತ್ವದಿಂದ, ತಾಳ್ಮೆಯಿಂದ ಪ್ರೀತಿಯಿಂದ ಪರಸ್ಪರ ಸಹಿಸಿಕೊಳ್ಳುವ ಮೂಲಕ ಐಕ್ಯತೆಯನ್ನು ಕಾಪಾಡಿಕೊಳ್ಳಲು ಯಾವಾಗಲೂ ಉತ್ಸುಕವಾಗಿರುವಂತಹ ಕರೆಗೆ ಯೋಗ್ಯವಾದ ರೀತಿಯಲ್ಲಿ ನಡೆದುಕೊಳ್ಳುವಂತೆ ಅಗತ್ಯವಾದ ಕೃಪೆಯನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸು.


Join our WhatsApp Channel


Most Read
● ಹಣಕಾಸಿನ ಅವ್ಯವಸ್ಥೆಯಿಂದ ಪಾರಾಗುವುದು ಹೇಗೆ?
● ಅನ್ಯ ಭಾಷೆಯಲ್ಲಿ ಪ್ರಾರ್ಥಿಸಿ ಮತ್ತು ಆತ್ಮಿಕವಾದ ನವಚೇತನವನ್ನು ಹೊಂದಿಕೊಳ್ಳಿರಿ
● ದಿನ 27:40 ದಿನಗಳ ಉಪವಾಸ ಪ್ರಾರ್ಥನೆ
● ವಾಕ್ಯದಲ್ಲಿರುವ ಜ್ಞಾನ
● ಪರಿಪೂರ್ಣ ಬ್ರ್ಯಾಂಡ್ ನಿರ್ವಾಹಕ.
● ನಿರುತ್ಸಾಹ ಪಡಿಸುವ ಬಾಣಗಳನ್ನು ಜಯಿಸುವುದು-1
● ದಿನ 08:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login