हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ದಿನ 39 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Daily Manna

ದಿನ 39 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.

Monday, 30th of December 2024
4 0 162
Categories : ಉಪವಾಸ ಮತ್ತು ಪ್ರಾರ್ಥನೆ (Fasting and prayer)
ನನಗೊಂದು ಅದ್ಭುತದ ಅಗತ್ಯವಿದೆ.

"ನೀವು ನೋಡುವಂಥ ನಿಮಗೆ ಗುರುತಿರುವಂಥ ಈ ಮನುಷ್ಯನು ನೆಟ್ಟಗಾದದ್ದಕ್ಕೆ ಆತನ ಹೆಸರಿನಲ್ಲಿ ಇಟ್ಟ ನಂಬಿಕೆಯೇ ಕಾರಣ; ಆ ಹೆಸರೇ ಇವನನ್ನು ಬಲಪಡಿಸಿತು. ಆತನ ಮೂಲಕ ಉಂಟಾಗಿರುವ ನಂಬಿಕೆಯೇ ಇವನಿಗೆ ನಿಮ್ಮೆಲ್ಲರ ಮುಂದೆ ಪೂರ್ಣಕ್ಷೇಮವನ್ನು ಕೊಟ್ಟಿತು."(ಅಪೊಸ್ತಲರ ಕೃತ್ಯಗಳು‬ ‭3:16‬ )

ಅದ್ಭುತ ಕಾರ್ಯಗಳೆಂದರೆ ಮಾನವನ ವಿವರಣೆಗೆ ಮೀರಿದಂತ ದೇವರಿಂದಾಗುವ ಅಲೌಕಿಕ ಕಾರ್ಯವಾಗಿದೆ. ಅದ್ಭುತಗಳನ್ನು ವಿವರಿಸಲು ಸಾಧ್ಯವಿಲ್ಲ. ಅವು ದೇವರ ಬಲದ ಮೂಲಕ ಮನುಷ್ಯರು ಆನಂದಿಸಬಹುದಾದ ಒಂದು ಸಂಗತಿಯಾಗಿದೆ. ಜೀವನದಲ್ಲಿ ಒಂದಲ್ಲ ಒಂದು ಸಮಯದಲ್ಲಾದರೂ ನಾವೆಲ್ಲರೂ ದೇವರಿಂದ ಆಗುವ ಅದ್ಭುತವನ್ನು ಖಂಡಿತವಾಗಿ ಅನುಭವಿಸಿರುತ್ತೇವೆ.

ಯೇಸುಕ್ರಿಸ್ತನು ಭೂಮಿಯ ಮೇಲಿದ್ದ ಪರ್ಯಂತರವೆಲ್ಲ ಆತನ ಜೀವಿತದ ಕಾಲದಲ್ಲಿ ಅದ್ಭುತ ಕಾರ್ಯಗಳು ಜರಗಿದ್ದನ್ನು ನಾವು ಕಾಣಬಹುದು. ಅದ್ಭುತ ಕಾರ್ಯಗಳು ಆತನಿಗೆ ಸರ್ವೇಸಾಮಾನ್ಯವಾಗಿತ್ತು. ಅಪೋಸ್ತಲರು ಸಹ ಅದ್ಭುತಗಳನ್ನು ಮಾಡಿದರು. ವಿಷಕಾರಿಯಾದ ಹಾವೊಂದು ಪೌಲನ ಕೈಗಳನ್ನು ಸುತ್ತಿಕೊಂಡಾಗ ಜನರೆಲ್ಲ ಪೌಲನು ಸತ್ತು ಹೋದಾನು ಎಂದು ಭಾವಿಸಿದರು ಆದರೆ ಪೌಲನಿಗೆ ಏನು ಆಗಲಿಲ್ಲ(ಅಪೋಸ್ತಲರ ಕೃತ್ಯಗಳು 28:4-6). ಪೌಲನು ಅದ್ಭುತವನ್ನು ಅನುಭವಿಸಿದನು. ದೇವರು ಯೇಸುವಿನ ಮೂಲಕ ಮತ್ತು ಅಪೋಸ್ತಲರ ಮೂಲಕ ಅದ್ಭುತ ಕಾರ್ಯಗಳನ್ನು ಮಾಡಿಸಿದನು

ಹಳೆ ಒಡಂಬಡಿಕೆಯ ಕಾಲದಲ್ಲೂ ಸಹ ನಾವು ವಿವಿಧ ರೀತಿಯ ಅದ್ಭುತ ಕಾರ್ಯಗಳನ್ನು ನೋಡಬಹುದು. ಇಂದು ನಮ್ಮ ಪ್ರಾರ್ಥನೆಯಲ್ಲಿ ದೇವರು ನಮ್ಮ ಜೀವಿತಗಳಲ್ಲಿ ಅದ್ಭುತಗಳನ್ನು ಮಾಡಲೆಂದು ಬೇಡಿಕೊಳ್ಳುವತ್ತ ನಮ್ಮ ಗಮನವನ್ನು ಕೇಂದ್ರೀಕರಿಸೋಣ. ನಿಮಗೆ ಯಾವ ಕ್ಷೇತ್ರದಲ್ಲಿ ಅದ್ಭುತ ಬೇಕೊ ನನಗೆ ತಿಳಿಯದು. ಆದರೆ ಯೇಸು ನಾಮದಲ್ಲಿ ಈ ಕಾಲದಲ್ಲಿಯೇ ನಿಮಗೊಂದು ಅದ್ಭುತ ಉಂಟಾಗಲಿ ಎಂದು ಪ್ರಾರ್ಥಿಸುತ್ತೇನೆ ಮತ್ತು ಹಾಗೆ ಆಗುವುದು ಎಂದು ನಾನು ನಂಬುತ್ತೇನೆ.

ಜನರಿಗೆ ಅದ್ಭುತ ಕಾರ್ಯಗಳು ಏಕೆ ಬೇಕು?

1. ಅವರಲ್ಲಿರುವ ಮನಷ್ಯ ಶಕ್ತಿಯೆಲ್ಲಾ ವಿಫಲಗೊಂಡಾಗ ಅವರಿಗೆ ಒಂದು ಅದ್ಭುತ ಬೇಕಾಗುತ್ತದೆ.

2. ಅವರ ಸಾಮರ್ಥ್ಯಕ್ಕೆ ಮೀರಿದ ಹೋರಾಟವು ಅವರ ಕಣ್ಮುಂದೆ ಬಂದು ನಿಂತಾಗ ಅವರಿಗೆ ಒಂದು ಅದ್ಭುತ ಬೇಕಾಗುತ್ತದೆ.

3. ಅವರಲ್ಲಿರುವ ನಿರೀಕ್ಷೆಯೆಲ್ಲಾ ಕಳೆದು ಹೋದ ಮೇಲೆ, ಇನ್ನು ಯಾವುದೇ ನಿರೀಕ್ಷೆಯೂ ಇಲ್ಲ ಎನ್ನುವಾಗ ಅವರಿಗೆ ಒಂದು ಅದ್ಭುತ ಬೇಕಾಗುತ್ತದೆ.

4. ಅವರ ಪರಿಸ್ಥಿತಿಗಳು ಕಟ್ಟಕಡೆಯ ಸ್ಥಿತಿಗೆ ಬಂದು ಬಿಟ್ಟಾಗ ಅವರಿಗೆ ಅದ್ಭುತ ಬೇಕಾಗುತ್ತದೆ.

5. ಎಲ್ಲಾ ಪರಿಸ್ಥಿತಿಗಳು ಅವರಿಗೆ ಪ್ರತಿಕೂಲವಾಗಿರುವಾಗ ಅವರಿಗೆ ಈ ಪರಿಸ್ಥಿತಿ ಯಾಕೆ ಬಂತು ಎಂದು ಬೇರೆಯವರಿಗೆ ವಿವರಿಸಲು ಅವರ ಕೈಯಲ್ಲಿ ಸಾಧ್ಯವಿಲ್ಲದಿರುವಾಗ ಅವರಿಗೆ ಒಂದು ಅದ್ಭುತ ಬೇಕಾಗುತ್ತದೆ.

6.ಅವರು ಅವಮಾನಕ್ಕೀಡಾದಾಗ ಜನರೆಲ್ಲ ಪರಿಹಾಸ್ಯ ಮಾಡುವ ಪರಿಸ್ಥಿತಿ ಬಂದಾಗ,ಒಂದು ಅದ್ಭುತದ ಅವಶ್ಯಕತೆ ಅವರಿಗಿದೆ.

7. ಮರಣಕರ ವ್ಯಾದಿಯು ಅವರನ್ನು ಎದುರಿಸುತ್ತಿರುವಾಗ ಅವರಿಗೆ ಒಂದು ಅದ್ಭುತ ಬೇಕಾಗಿರುತ್ತದೆ.

8. ಅವರಿಗೆ ಒಂದು ಸೌಲಭ್ಯದ ಅತ್ಯಗತ್ಯ ಇರುವಾಗ ಅವರಿಗೆ ಒಂದು ಅದ್ಭುತವು ಬೇಕಾಗಿರುತ್ತದೆ.

9. ಅವರಿಗೆ ಸಹಾಯ ಮಾಡುವವರು ಯಾರೂ ಇಲ್ಲದಿರುವಾಗ ಅವರಿಗೆ ಒಂದು ಅದ್ಭುತದ ಅಗತ್ಯವಿರುತ್ತದೆ.

ಜನರನ್ನು ಅಪಹರಣ ಮಾಡಿ ಕೂಡಿಟ್ಟಿರುವಾಗ ಅವರನ್ನು ಬಿಡಿಸಲು ಯಾರ ಸಹಾಯವು ಅವರಿಗೆ ಇಲ್ಲದಿರುವ ಸಮಯದಲ್ಲಿ ಒಂದು ಅದ್ಭುತವು ಜರುಗಿ  ಮರಳಿ ಅವರು ತಮ್ಮ ಪ್ರೀತಿಪಾತ್ರರನ್ನು ಸೇರಿಕೊಂಡಿರುತ್ತಾರೆ ಎನ್ನುವಂತ  ಕೆಲವೊಂದು ಸಂಗತಿಗಳನ್ನು ನಾನು ಕೇಳಿದ್ದೇನೆ.

ನಿಮಗೆ ಅದ್ಭುತ ಬೇಕಾದಾಗ ನೀವು ಮಾಡಬೇಕಾದ ಸಂಗತಿಗಳಾವುವು?

1.ನಿಮ್ಮಲ್ಲಿ  ನಂಬಿಕೆಯನ್ನು ಬೆಳೆಸಿಕೊಳ್ಳಿ: ನಮ್ಮ ಇಂದಿನ ನಿರೂಪಣ ವಾಕ್ಯವನ್ನು ನೋಡುವುದಾದರೆ ಆ ಶಿಷ್ಯನು ಯೇಸುಕ್ರಿಸ್ತನ ನಾಮದಲ್ಲಿ ಇಟ್ಟಂತಹ ನಂಬಿಕೆಯನ್ನು ನೀವು ಕಾಣಬಹುದು. ಯೇಸುವಿನ ನಾಮವು ಪ್ರಕೃತಿಯಲ್ಲಿಯೇ ಅದ್ಭುತವಾದಂತಹ ನಾಮವಾಗಿದೆ ಏಕೆಂದರೆ ದೇವರ ವಾಕ್ಯವು ಹೇಳುತ್ತದೆ ಆತನಿಗೆ ಅದ್ಭುತ ಸ್ವರೂಪನು ಎಂಬ ಹೆಸರಿದೆ ಎಂದು. ಅದರ ಅರ್ಥವೇ ಅದ್ಬುತ.(ಯೆಶಾಯ 9:6).
 ಹಾಗಾಗಿ ದೇವರಲ್ಲಿಯೂ ಮತ್ತು ಯೇಸುಕ್ರಿಸ್ತನ ನಾಮದಲ್ಲಿಯೂ ನಿಮ್ಮ ನಂಬಿಕೆಯನ್ನು ಕಟ್ಟಿಕೊಳ್ಳಿ ಏಕೆಂದರೆ ಈ ಕ್ಷಣದಲ್ಲಿ ಅದ್ಭುತಗಳನ್ನು ಉಂಟು ಮಾಡುವಂಥದ್ದು ಇದೇ ಆಗಿದೆ.
2.ಅದ್ಭುತವನ್ನು ನಿರೀಕ್ಷಿಸಿ: ನೀವು ಅದ್ಭುತವನ್ನು ನಿರೀಕ್ಷಿಸಬೇಕು.
ನೀವು ಎಂದಿಗೂ ಸಮಸ್ಯೆಗಳನ್ನು ನಿರೀಕ್ಷಿಸಬೇಡಿರಿ. ಅವಮಾನವನ್ನು ನಿರೀಕ್ಷಿಸಬೇಡಿರಿ. ಸಾವನ್ನು ನಿರೀಕ್ಷಿಸಬೇಡಿರಿ. ನಿಮ್ಮ ಭೌತಿಕ ಆಯಾಮದಲ್ಲಿ ಏನೇ ಜರಗುತ್ತಿದ್ದರೂ ಸರಿಯೇ ದೇವರ ಪ್ರವೇಶಿಕೆಯನ್ನು ನಿರೀಕ್ಷಿಸಿರಿ. ನೀವು ಅದ್ಭುತವನ್ನೇ ನಿರೀಕ್ಷಿಸಬೇಕು. ನಿನ್ನ ನಿರೀಕ್ಷೆಯು ವ್ಯರ್ಥವಾಗದು ಎಂದು ದೇವರ ವಾಕ್ಯ ಹೇಳುತ್ತದೆ. (ಜ್ಞಾನೋಕ್ತಿ 23:18) ನೀವು ಅದ್ಬುತವನ್ನು ನಿರೀಕ್ಷಿಸದೇ ಇದ್ದರೆ ನೀವು ಅದ್ಭುತವನ್ನು ಆನಂದಿಸುವುದು  ಕಷ್ಟಕರ.
3.ಅದ್ಭುತಕ್ಕಾಗಿ ಪ್ರಾರ್ಥಿಸಿ: ನಿಮಗೆ ಅಗತ್ಯವಿರುವ ಸಂಗತಿಗಳಿಗೆಲ್ಲಾ ಪ್ರಾರ್ಥನೆ ಒಂದೇ ಸಾಕಾದದ್ದು. ಪ್ರಾರ್ಥನೆಯೇ ಬಾಗಿಲನ್ನು ತೆರೆಯಲಿರುವ ಮುಖ್ಯವಾದ ಕೀಲಿ ಕೈಯಾಗಿದೆ. ನೀವು ಅದ್ಭುತ ಹೊಂದಲು ಪ್ರಾರ್ಥಿಸಲೇಬೇಕು.
4.ಕೃತಜ್ಞತಾ ಸ್ತೋತ್ರವನ್ನು ಸಲ್ಲಿಸಿ ಆರಾಧಿಸಿರಿ. ಯೇಸುವು ರೊಟ್ಟಿ ಮತ್ತು ಮೀನನ್ನು ಸಾವಿರಾರು ಜನರಿಗೆ ಹಂಚುವಷ್ಟು ಹೆಚ್ಚಿಸುವುದಕ್ಕೆ ಮೊದಲು ಆತನು ಅದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿದನು (ಯೋಹಾನ 6:11). ಕೃತಜ್ಞತಾ ಸ್ತೋತ್ರವು ಅದ್ಭುತವನ್ನು ಆಕರ್ಷಿಸುತ್ತದೆ.
ಆರಾಧನೆ ಸ್ತುತಿ ಮತ್ತು ಸ್ತೋತ್ರಗಳು ಅದ್ಭುತಗಳನ್ನು ಆಕರ್ಷಿಸುತ್ತವೆ. ಪೌಲಸೀಲರು ಸೆರೆಮನೆಯಲ್ಲಿ ಹಾಕಲ್ಪಟ್ಟಿದ್ದಾಗ ಅವರು ಸ್ತುತಿ ಪದಗಳನ್ನು ಹಾಡುತ್ತಿದ್ದರು ಆಗ ಭೂಕಂಪ ಉಂಟಾಯಿತು.(ಅಪೋಸ್ತಲರ ಕೃತ್ಯ16:25- 26). ಭೂಕಂಪವು ಸಹ ಅದ್ಭುತವೇ. ನೀವು ಈ ರೀತಿಯ ಉದ್ಗಾರಗಳನ್ನು ಮಾಡುವುದನ್ನು ಕಲಿಯಬೇಕು ಅದು ದೇವರ ಪ್ರಸನ್ನತೆಯನ್ನು ಆಕರ್ಷಿಸುತ್ತದೆ. ನೀವು ಕಷ್ಟಗಳನ್ನು ಕೊರತೆಗಳನ್ನು ಹಾದು ಹೋಗುವಾಗ ನೀವು ಹೆಚ್ಚು ಹೆಚ್ಚಾಗಿ ಗುಣುಗುಟ್ಟುತ್ತೀರಿ ನೀವು ಎಷ್ಟು ಗೊಣಗುಟ್ಟುತ್ತೀರೋ ನಿಮ್ಮ ಅದ್ಭುತಗಳು ಸಹ ಅಷ್ಟೇ ದೂರ ಓಡಿ ಹೋಗುತ್ತವೆ.

ಅದು ಹೇಗೆ ಜರಗಲು ಸಾಧ್ಯ ಎಂಬುದನ್ನು ನೀವು ತಿಳಿದಿರಬೇಕಾದ ಅವಶ್ಯಕತೆ ಇಲ್ಲ. ದೇವರೇ ಸ್ವತಹ ತನ್ನ ಹೆಜ್ಜೆಯನ್ನು ಇಟ್ಟು ನಿಮಗೆ ಸಹಾಯ ಮಾಡಲು ಬರುತ್ತಾನೆ.

Bible Reading Plan: Revelation 8-15
Prayer
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೆರೋ ಎಂದು ಖಚಿತ ಪಡಿಸಿಕೊಳ್ಳಿ.

1. ಓ ಕರ್ತನೇ, ಈ ಸಮಯದಲ್ಲಿಯೇ ಯೇಸು ನಾಮದಲ್ಲಿ ಒಂದು ಅದ್ಭುತವು ನನ್ನ ಜೀವಿತದಲ್ಲಿ ಜರುಗಬೇಕಾಗಿದೆ (ಯೆರೆಮಿಯ 32:27).

2. ತಂದೆಯೇ, ಈ ತಿಂಗಳಿಗಾಗಿಯೇ ಈ ಕಾಲಕ್ಕಾಗಿ ಅದ್ಭುತವಾಗಿ ಸೌಲಭ್ಯಗಳೆಲ್ಲ ಉಂಟಾಗಿ ಯೇಸು ನಾಮದಲ್ಲಿ ನನ್ನೆಲ್ಲಾ ಹಣಕಾಸಿನ ಕೊರತೆಗಳು ನೀಗಲ್ಪಡಲಿ ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ. (ಫಿಲಿಪ್ಪಿ4:19)

3. ತಂದೆಯೇ, ನನ್ನ ಜೀವಿತದ ಇದೇ ಕಾಲದಲ್ಲಿಯೇ ಅಭಿವೃದ್ಧಿಯಾಗುವ, ಹೆಚ್ಚುವರಿಯಾಗುವ ಅದ್ಭುತಗಳನ್ನು ಯೇಸು ನಾಮದಲ್ಲಿ ಉಂಟಾಗಲೆಂದು ಪ್ರಾರ್ಥಿಸುತ್ತೇನೆ (2ಕೊರಿಯಂತ 9:8).

4.ತಂದೆಯೇ, ನನ್ನ ಜೀವಿತದಲ್ಲಿ ನಿನ್ನ ಅದ್ಭುತವಾದ ಸಹಾಯವು ದೊರಕಲೆಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ. ( ಕೀರ್ತನೆಗಳು 121:1- 2)

5.ಈ ವರ್ಷದ ಎಲ್ಲಾ ದಿನವೂ ನನ್ನ ಜೀವಿತದ ಎಲ್ಲಾ ಕ್ಷೇತ್ರದಲ್ಲಿಯೂ ಆರ್ಥಿಕತೆಯ ಅದ್ಭುತವನ್ನು ಯೇಸು ನಾಮದಲ್ಲಿ ನಾನು ಅನುಭವಿಸುವೆನು. (ಧರ್ಮಪದೇಶಕಾಂಡ 28.12)

6.ತಂದೆಯೇ ಮಾರ್ಗವೇ ಇಲ್ಲದಂತ ಸ್ಥಳದಲ್ಲಿ ಯೇಸು ನಾಮದಲ್ಲಿ ನನಗಾಗಿ ಮಾರ್ಗವನ್ನುಂಟು ಮಾಡು. (ಯೆಶಾಯ 43:19)

7. ಯೇಸು ನಾಮದಲ್ಲಿ ನಾನು ಅದ್ಭುತದಲ್ಲಿ ನಡೆಯುವೆನು.  ಯೇಸು ನಾಮದಲ್ಲಿ ನಾನು ಸಮೃದ್ಧಿಯಲ್ಲಿ ನಡೆಯುವೆನು.  ಯೇಸು ನಾಮದಲ್ಲಿ ನಾನು ಜಯೋತ್ಸವದಲ್ಲಿ ನಡೆಯುವೆನು. (3 ಯೋಹಾನ1-2)

8.ನನ್ನ ಜೀವಿತಕ್ಕೆ ವಿರುದ್ಧವಾಗಿ ಮುಚ್ಚಲ್ಪಟ್ಟಿರುವ ಯಾವುದೇ ಅದ್ಭುತದ ಬಾಗಿಲುಗಳಾಗಲೀ ಯೇಸು
ನಾಮದಲ್ಲಿ ಅದು ನನಗಾಗಿ ಈಗಲೇ ತೆರೆಯಲ್ಪಡಲಿ. (ಪ್ರಕಟನೆ 3:8).

9. ತಂದೆಯೇ, ನನಗಾಗಿ ನೂತನ ಬಾಗಿಲುಗಳು ತೆರೆಯಲ್ಪಡಲಿ. ಆಶೀರ್ವಾದದ ಬಾಗಿಲುಗಳು ನನ್ನನ್ನು ಉನ್ನತ ಸ್ಥಿತಿಗೇರಿಸುವ ಬಾಗಿಲುಗಳು ಮತ್ತು ನನ್ನನ್ನು ಅಭಿವೃದ್ಧಿಪಡಿಸುವಂತಹ ಬಾಗಿಲುಗಳು ಯೇಸು ನಾಮದಲ್ಲಿ ನನಗಾಗಿ ತೆರೆಯಲ್ಪಡಲಿ. ( ಕೀರ್ತನೆಗಳು 84.11 )

10. ನಾನು ನನ್ನ ಜೀವನದಲ್ಲಿ ಕಳೆದುಕೊಂಡ ಎಲ್ಲಾ ಆಶೀರ್ವಾದಗಳು ಮತ್ತು ಅವಕಾಶಗಳು ಯೇಸು ನಾಮದಲ್ಲಿ ನನಗೆ ಹಿಂದಿರುಗಿ ಬರಲಿ. ನನಗೆ ಇದು ಹೇಗೆ ಆಗುವುದೋ ತಿಳಿಯದು. ಆದರೆ ಖಂಡಿತವಾಗಿಯೂ ಈ ಕಾಲದಲ್ಲಿಯೇ ಅದು ಯೇಸು ನಾಮದಲ್ಲಿ ಉಂಟಾಗುವುದು. ಆಮೆನ್ (ಯೋವೇಲ 2:25)


Join our WhatsApp Channel


Most Read
● ನಂಬತಕ್ಕ ಸಾಕ್ಷಿ
● ಅಂತ್ಯಕಾಲದ ಸಮಯದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು: #2
● ಆರಾಧನೆ : ಸಮಾಧಾನಕ್ಕಿರುವ ಕೀಲಿ ಕೈ
● ಬೀಜದಲ್ಲಿರುವ ಶಕ್ತಿ-1
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನಮ್ಮ ರಕ್ಷಕನ ಬೇಷರತ್ತಾದ ಪ್ರೀತಿ
● ದೇವರಿಗಾಗಿ ದಾಹದಿಂದಿರುವುದು
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login