हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ನಿಮ್ಮ ಮೇರೆಯಲ್ಲಿಯೇ ಇರಿ
Daily Manna

ನಿಮ್ಮ ಮೇರೆಯಲ್ಲಿಯೇ ಇರಿ

Thursday, 13th of February 2025
2 0 188
Categories : Secrets of Esther: Series
"ತಮ್ಮನ್ನು ತಾವೇ ಹೊಗಳಿಕೊಳ್ಳುವ ಕೆಲವರಲ್ಲಿ ನಮ್ಮನ್ನು ಸೇರಿಸಿಕೊಳ್ಳುವದಕ್ಕಾಗಲಿ ಅವರಿಗೆ ಹೋಲಿಸಿಕೊಳ್ಳುವದಕ್ಕಾಗಲಿ ನಮಗೆ ಧೈರ್ಯಸಾಲದು; ಅವರಂತೂ ತಮ್ಮ ತಮ್ಮೊಳಗೆ ತಮ್ಮನ್ನು ಅಳತೆಮಾಡಿಕೊಂಡು ತಮತಮಗೆ ಹೋಲಿಸಿಕೊಂಡು ವಿವೇಕವಿಲ್ಲದವರಾಗಿದ್ದಾರೆ. "(2 ಕೊರಿಂಥ 10:12).

ಇಂದು ನಾವು ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಜನರು ಕೆಲಸದಲ್ಲಿಯಾಗಲೀ , ಕುಟುಂಬಗಳಲ್ಲಿಯಾಗಲೀ  ಮತ್ತು ಎಲ್ಲಕ್ಕಿಂತ ಕೆಟ್ಟದಾಗಿ ಸಭೆಯಲ್ಲಿಯೇ ಆಗಲಿ  ಇತರರ ಅಂತಸ್ತನ್ನು ಮತ್ತು ಜಾಣತನವನ್ನು  ಮೀರಿಸುವ ಪ್ರಕ್ರಿಯೆಯಲ್ಲಿ  ದಿನೇದಿನೆ ಅಭಿವೃದ್ಧಿ ಹೊಂದುತ್ತಿದ್ದಾರೆ.  ತಮ್ಮನ್ನು ತಾವು ಒಳ್ಳೆಯವರೆಂದುಕೊಂಡು ಬೇರೆಯವರು ತಮಗಿಂತಲೂ  ಉತ್ತಮರಾಗಿರ ಬಹುದು  ಎಂದು ನೋಡುವ ಮನಸ್ಥಿತಿಯೇ ಇಲ್ಲದವರಾಗಿದ್ದಾರೆ.  ತಮ್ಮ ಜೀವನದಲ್ಲಿ ಆಗಿರುವ ದೇವರ ಎಲ್ಲಾ ಒಳ್ಳೆಯತನವನ್ನು ಕಡೆಗಣಿಸಿ  ದೇವರು ತಮಗಾಗಿ ಏನನ್ನೂ ಮಾಡಿಲ್ಲ ಎಂದು ದೂರುತ್ತಿರುತ್ತಾರೆ. ಏಕೆಂದರೆ ಅವರು ಇತರರ ಜೊತೆಗೆ ತಮ್ಮನ್ನು ಹೋಲಿಸಿನೋಡಿಕೊಳ್ಳುವ ಪ್ರವೃತ್ತಿ ಹೊಂದಿದ್ದಾರೆ. ಅಂತಹ ಜನರು ಇತರರಿಗಿಂತ ತಾವು  ಉತ್ತಮವಾಗಿದ್ದಾಗ  ಪ್ರಶಾಂತವಾಗಿರುತ್ತಾರೆ, ಆದರೆ ಅವರ ತಂಡದ ಸದಸ್ಯರು ಅಥವಾ ಸಭೆಯವರು ದೇವರು ಮಾಡಿದ್ದನ್ನು ಸಾಕ್ಷಿ ಹೇಳುವ ಕ್ಷಣದಲ್ಲಿ ಅವರಲ್ಲಿ  ಕಹಿತನ ಹುಟ್ಟಿ  ದ್ವೇಷವನ್ನು ಬೆಳೆಸಿಕೊಳ್ಳುತ್ತಾರೆ. ನೀವು ಹೀಗಿಯೇ ಇದ್ದೀರಾ?  ಇತರರ ಜೀವನದಲ್ಲಿ ದೇವರ ಕಾರ್ಯಗಳು  ಕಾಣಿಸಿಕೊಳ್ಳುವಾಗ ನಿಮ್ಮ ಪ್ರತಿಕ್ರಿಯೆ ಏನಾಗಿದೆ ? 

ಎಸ್ತೇರಳ  ಕಾಲದಲ್ಲಿಯೂ   ರಾಜನ  ಸ್ತ್ರೀಯರು ತುಂಬಿದ್ದ ಅಂತಪುರದಲ್ಲಿ  ಈ ಸ್ಪರ್ಧಾತ್ಮಕ ಮನೋಭಾವವು ಹೇಗಿರುತ್ತದೆ ಎಂದು ಚಿತ್ರಿಸಲು ಹೆಚ್ಚು ಕಲ್ಪನೆಯ ಅಗತ್ಯವಿಲ್ಲ. ಅಲ್ಲಿದ್ದಿರಬಹುದಾದ ಕ್ಷುಲ್ಲಕ ಪೈಪೋಟಿ, ಅಂತಃಕಲಹ, ಅಸೂಯೆ ಮತ್ತು ಹೊಟ್ಟೆಕಿಚ್ಚುನ್ನು ಸ್ವಲ್ಪ  ಕಲ್ಪಿಸಿಕೊಳ್ಳಿ. ನಿಮ್ಮ ಸುತ್ತಲಿರುವ ಎಲ್ಲವೂ ಮತ್ತು ಎಲ್ಲರೂ ನಿಮ್ಮ ದೇಹದ ಸ್ಥಿತಿ ಮತ್ತು ಆಕಾರ ಮತ್ತು ನಿಮ್ಮ ಮುಖದ ಸೌಂದರ್ಯಕ್ಕೆ ಮಾತ್ರ ಮನ್ನಣೆ ನೀಡುತ್ತಿರುವಾಗ ಆತ್ಮೀಕ ವಿವೇಕವನ್ನು ಕಾಪಾಡಿಕೊಳ್ಳುವುದು ಎಷ್ಟು ಕಠಿಣವಾಗಿರುತ್ತದೆ ಎಂದು ಸ್ವಲ್ಪ  ಊಹಿಸಿ ನೋಡಿ!

ಆದಾಗಿಯೂ,  ತನ್ನ ಶತ್ರುಗಳನ್ನು ಒಳಗೊಂಡಂತೆ ಅಧಿಕಾರದ ಸ್ಥಾನದಲ್ಲಿರುವ ಎಲ್ಲರಿಗೂ ಎಸ್ತೇರಳ ಬಗ್ಗೆ ಒಂದು ರೀತಿಯ ಅಲೌಕಿಕ ಪ್ರೀತಿ ಮತ್ತು ಸೆಳವು ಇದ್ದು ತೀವ್ರವಾದ  ನಿಷ್ಠೆ ಮತ್ತು ದಯೆಯನ್ನು ಅವಳು ಗಳಿಸಿದಳು ಎಂದು ಇದು ತೋರುತ್ತಿದೆ ! ಜೊತೆಗೆ ಅವಳಿಗೆ ಮುನ್ನಡೆಯಲು ಮತ್ತು ಆಯಕಟ್ಟಿನ ಸ್ಥಾನದಲ್ಲಿ ನಿಲ್ಲಲು ಸಹ,  ಕಾಣದ ಕೈಯೊಂದು ಅವಳಿಗಿದ್ದ ಎಲ್ಲಾ ಅಡೆತಡೆಗಳನ್ನು ಬದಿಗೆ ಸರಿಸಿದಂತೆ ಕಾಣುತ್ತದೆ. ಎಸ್ತರ್ಳನ್ನು ಅರಸನಾದ ಅಹಶ್ವರೋಷನು ಒಂದು  ಕಾಮದ ವಸ್ತುವಿನಿಂದ ಅವನ ಪ್ರೀತಿಯ ವಸ್ತುವಾಗಿ ಉನ್ನತೀಕರಿಸಿದ ಆಕೆಯ ಪರವಾಗಿ ಆದ ಕಾರ್ಯವಾಗಿ ಅದು ಕಾಣುತ್ತದೆ.  ಜೀವಮಾನಾವೆಲ್ಲಾ ದುಡಿದ  ದುಡಿಮೆಗಿಂತ  ಒಂದು ದಿನದಲ್ಲಿ ದೊರಕುವ ದಯೆಯು ಹೆಚ್ಚು ಮೌಲ್ಯವುಳ್ಳದ್ದು! 

ಸತ್ಯವೇದವು ಎಸ್ತೇರಳು  2:15 ರಲ್ಲಿ "ಅರಸನ ಬಳಿಗೆ ಹೋಗುವದಕ್ಕೆ ಮೊರ್ದೆಕೈಯ ದತ್ತಪುತ್ರಿಯೂ ಅವನ ಚಿಕ್ಕಪ್ಪನಾದ ಅಬೀಹೈಲನ ಮಗಳೂ ಆದ ಎಸ್ತೇರಳ ಸರತಿ ಬಂದಾಗ ಅಂತಃಪುರ ಪಾಲಕನಾದ ಹೇಗೈ ಎಂಬ ರಾಜಕಂಚುಕಿಯು ನೇವಿುಸಿದ್ದನ್ನೇ ಹೊರತು ಆಕೆ ಬೇರೇನೂ ಕೇಳಲಿಲ್ಲ. ನೋಡುವವರೆಲ್ಲರೂ ಆಕೆಯನ್ನು ಮೆಚ್ಚುತ್ತಿದ್ದರು." ಎಂದು ಹೇಳುತ್ತದೆ. 

ಕೆಲವು ಕನ್ಯೆಯರು ಇತರರು ಏನನ್ನು ಬಳಸುತ್ತಿದ್ದಾರೆ ಎಂಬುದನ್ನು ನೋಡಿ ಪರಿಶೀಲಿಸಿರಬಹುದು ಮತ್ತು ತಾವು ಅದಕ್ಕಿಂತ ಶಕ್ತಿಶಾಲಿಯಾದ ಅಥವಾ ಹೆಚ್ಚು ಆಕರ್ಷಕವಾದ ವಸ್ತುಗಳಿಗೆ ಬೇಡಿಕೆಯಿಟ್ಟಿರಬಹುದು. ಬಹುಶಃ ಅವರು ಇತರ ಕನ್ಯೆಯರನ್ನು ತಮ್ಮ ಸೌಂದರ್ಯಕ್ಕೆ ಮಾನದಂಡವಾಗಿ ಬಳಸುತ್ತಿದ್ದರು ಎನಿಸುತ್ತದೆ. ಆದರೆ ಎಸ್ತರಳ ನಡೆ ವಿಭಿನ್ನವಾಗಿತ್ತು. 15 ನೇ ವಾಕ್ಯವನ್ನು ಓದುವಾಗ ರಾಣಿಯ ಸ್ಥಾನವು ಸ್ಪರ್ಧಾತ್ಮಕವಾಗಿದೆ ಎಂಬುದು  ಎಸ್ತರಳಿಗೆ ನಿಜವಾಗಿ  ತಿಳಿದಿದೆಯೇ ಎಂದು ನನಗೆ ಆಶ್ಚರ್ಯವಾಗುತ್ತದೆ. ಅವಳ ವಿನಂತಿಯು ಸ್ವಲ್ಪ ಮಟ್ಟಿಗೆ ನಿರ್ಧಾರದ ಕೊರತೆಯನ್ನು ತೋರುತ್ತದೆ.

ಅಯ್ಯೋ! ಅವಳು ತನ್ನ ಎಲ್ಲಾ  ಆಯ್ಕೆಯನ್ನು ರಾಜನ ಕಂಚುಕಿಗೆ ಬಿಟ್ಟು ಬಿಟ್ಟಿದ್ದಳು.

ಕ್ಷಮಿಸಿ, ಅದು ಯಾವ ರೀತಿಯ ಮನಸ್ಥಿತಿಯಾಗಿರಬಹುದು? ನಿಮಗೂ ಹಾಗೆ ಅನಿಸಬಹುದಲ್ಲವೇ. ಆದರೆ ಯಾರೊಬ್ಬರೂ ಇತರರ ಮೇರೆಗೆ ಹೋಗಿ  ಸ್ಪರ್ಧಿಸಲಾಗುವುದಿಲ್ಲ ಎಂಬುದನ್ನು  ಎಸ್ತರಳು  ತಿಳಿದಿದ್ದಳು. ಜೀವನವು ಒಂದು ಓಟ ಎಂದು ಅವಳು ತಿಳಿದಿದ್ದು ಆ  ಓಟವನ್ನು  ಓಡಲು ಪ್ರತಿಯೊಬ್ಬರೂ  ತಮ್ಮದೇ ಆದ ನಿರ್ದಿಷ್ಟ ಮೇರೆಯನ್ನು ಹೊಂದಿದ್ದಾರೆ ಎಂಬುದು ಆಕೆಗೆ ಗೊತ್ತಿತ್ತು. ಆಗಾಗ, ನಾವು ನಮ್ಮ ಮೇರೆಯನ್ನು ಬಿಟ್ಟು ಇತರರ ಮೆರೆಗಳಲ್ಲಿ ಓಡುವವರಾಗಿರುತ್ತೇವೆ. ಈಗ ನೀವು ಓಟವನ್ನು ಗೆದ್ದರೂ ಸಹ, ನೀವು ತಪ್ಪಾದ ಮೇರೆಯಲ್ಲಿ ಓಡಿರುವ ಕಾರಣ ನೀವು ಅನರ್ಹರಾಗುತ್ತೀರಿ ಎಂದು ಆಟದ ನಿಯಮ ಹೇಳುತ್ತದೆ. 

ನನ್ನ  ಪ್ರಿಯ ಸ್ನೇಹಿತರೇ, ನಿಮ್ಮ ಓಟವನ್ನು ನೀವು ಎದುರಿಸಿ ನಿಮ್ಮ  ಓಟವನ್ನು ನೀವು ಓಡಿ. ನಿಮ್ಮನ್ನೂ ಒಳಗೊಂಡಂತೆ ದೇವರು ತನ್ನ ಎಲ್ಲಾ ಮಕ್ಕಳಿಗಾಗಿಯೂ  ವಿಭಿನ್ನ ಯೋಜನೆಗಳನ್ನು ಹೊಂದಿದ್ದಾನೆ. ಆತನಿಗೆ "ಬಹು-ಹೃದಯವುಳ್ಳ ದೇವರು" ಎಂತಲೂ  ಕರೆಯುತ್ತಾರೆ. ಏಕೆಂದರೆ ಆತನು ತನ್ನ ಎಲ್ಲಾ ಮಕ್ಕಳಿಗೂ ವಿಭಿನ್ನ ಸ್ಥಾನವನ್ನು ಹೊಂದಿದ್ದಾನೆ. ಸ್ಪರ್ಧಾತ್ಮಕ ಮನೋಭಾವವು ಇತರರ ಪ್ರಗತಿಯ ಬಗ್ಗೆ ಅಸೂಯೆ ಮತ್ತು ಹೊಟ್ಟೆಕಿಚ್ಚು ಪಡುವಂತೆ ಮಾಡುತ್ತದೆ. ರೋಮ 12:15 ರಲ್ಲಿ , "ಸಂತೋಷಪಡುವವರೊಂದಿಗೆ  ಹರ್ಷಿಸಿರಿ " ಎಂದು ಸತ್ಯವೇದ ಹೇಳುತ್ತದೆ.  ಅವರನ್ನು ಅಭಿನಂದಿಸಿ ಏಕೆಂದರೆ ಯಾರೇ  ಯಶಸ್ಸು ಹೊಂದಿದರೂ ಅದು ನಿಮ್ಮ ವೈಫಲ್ಯಕ್ಕೆ ಕಾರಣವಾಗುವುದಿಲ್ಲ. ಎಲ್ಲಾ ಪಕ್ಷಿಗಳು ಒಂದಕ್ಕೊಂದು ಹೊಡೆದುಕೊಳ್ಳದೆ  ಹಾರುವಷ್ಟು ಆಕಾಶವು ವಿಶಾಲವಾಗಿದೆ. ಎರಡು ವಿಮಾನಗಳ ನಡುವೆ ಗಾಳಿಯಲ್ಲಿ ಘರ್ಷಣೆಯಿಂದಾಗಿ  ವಿಮಾನ ಅಪಘಾತಗಳಾಯಿತು ಎಂಬುಧರ ಬಗ್ಗೆ ನೀವು ಎಷ್ಟು ಸುದ್ದಿ ಕೇಳಿದ್ದೀರಿ ? ಆಕಾಶವು ವಿಶಾಲವಾಗಿದೆ. 

ಆದ್ದರಿಂದ ಸಂತೋಷವಾಗಿರಿ ಮತ್ತು ನಿಮ್ಮ ಓಟವನ್ನು ಮುಂದುವರಿಸಿ. ಒಬ್ಬ ಜ್ಞಾನಿಯಾದ ವ್ಯಕ್ತಿಯು  ಒಮ್ಮೆ  ಹೀಗೆ ಹೇಳಿದರು, "ದೇವರು ನನ್ನ ನೆರೆಹೊರೆಯವರನ್ನು ಆಶೀರ್ವದಿಸಿದಾಗ, ನಾನು ಅದನ್ನು ಸಂಭ್ರಮಿಸುತ್ತೇನೆ ಏಕೆಂದರೆ ನಮ್ಮ ದೇವರು ನಮ್ಮ ಪಕ್ಕದ ಮನೆಯಲ್ಲಿಯೇ ಇದ್ದಾನೆ .ಹಾಗಾಗಿ  ಆತನು ಶೀಘ್ರದಲ್ಲೇ ನನ್ನ ಮನೆಗೂ ಬರುತ್ತಾನೆ ಎಂಬುದನ್ನು ಅದು ತೋರಿಸುತ್ತದೆ" ಎಂದು . ಇದು ನಿಮ್ಮ ಮನೋಭಾವವಾಗಿರಬೇಕು.ರಾಜ ಕಂಚುಕಿಯು ಎಸ್ತರಳನ್ನು ಆರಿಸಿಕೊಂಡಂತೆ ದೇವರು ನಿಮಗಾಗಿ ಆಯ್ಕೆ ಮಾಡಲು ಅನುಮತಿಸಿ, ಆಗ ಅದು ಯಾವಾಗಲೂ ನಿಮಗೆ ಉತ್ತಮವಾಗಿರುತ್ತದೆ ಎಂದು ನೀವು ಖಚಿತವಾಗಿರುತ್ತೀರಿ. 

Bible Reading: Numbers 1-2 
Prayer
ತಂದೆಯೇ, ನಾನು ಶಾಂತ ಮನೋಭಾವವನ್ನು ಹೊಂದಿಕೊಳ್ಳಲು  ನೀವು ನನಗೆ ಸಹಾಯ ಮಾಡಬೇಕೆಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನನ್ನಲ್ಲಿರುವ ಪ್ರತಿ ಸ್ಪರ್ಧಾತ್ಮಕ ಮನೋಭಾವವನ್ನು ತೊಡೆದುಹಾಕಲು ನೀವು ನನಗೆ ಸಹಾಯ ಮಾಡಬೇಕೆಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ ಆಗ ನಾನು ಶಾಂತವಾಗಿ ಬದುಕಬಹುದು.  ನನ್ನ ನೆರೆಯವರಿಗಾಗಿ ನನ್ನಲ್ಲಿ  ಪ್ರೀತಿಯ ಆತ್ಮವು ಉಕ್ಕಬೇಕೆಂದು  ನನ್ನ ಹೃದಯವನ್ನು ಯೇಸುನಾಮದಲ್ಲಿ ತೆರೆದುಕೊಡುತ್ತೇನೆ. ಆಮೆನ್.

Join our WhatsApp Channel


Most Read
● ಇತರರಿಗಾಗಿ ಪ್ರಾರ್ಥಿಸುವುದು
● ಯಹೂದವು ಮುಂದಾಗಿ ಹೊರಡಲಿ
● ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ಆಂತರಿಕ ಸ್ವಸ್ಥತೆಯನ್ನು ತರುತ್ತದೆ.
● ನೀವು ಎಷ್ಟು ಜೋರಾಗಿ ಮಾತಾಡ ಬಲ್ಲಿರಿ?
● ಶಾಪಗ್ರಸ್ತ ವಸ್ತುವನ್ನು ತೆಗೆದುಹಾಕಿ .
● ಸಫಲತೆ ಎಂದರೇನು?
● ಧೈರ್ಯವಾಗಿರಿ.!
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login