Daily Manna
3
3
64
ಇದು ಕೇವಲ ಸಾಂದರ್ಭಿಕವಾಗಿ ಹೇಳುವ ಶುಭಾಶಯವಲ್ಲ
Monday, 12th of May 2025
Categories :
ವಿಧೇಯತೆ (Obedience)
ಇಂದಿನ ಸಮಾಜದಲ್ಲಿ, "ಆಶೀರ್ವಾದಗಳು" ಎಂಬ ಪದವನ್ನು ಬಹು ಸಾಮಾನ್ಯವಾಗಿ ಒಂದು ಸರಳ ಶುಭಾಶಯವಾಗಿಯೂ ಬಳಸಲಾಗುತ್ತದೆ. "ಯಾರಾದರೂ ಸೀನಿದರೆ ಸಾಕು 'ದೇವರು ನಿಮ್ಮನ್ನು ಆಶೀರ್ವದಿಸಲಿ' ಎಂದು ಹೇಳುವಂತದ್ದು ಸಾಮಾನ್ಯ ಮಾತಾಗಿದ್ದು , ಅನೇಕ ಜನರು ಇದನ್ನು ಆಶೀರ್ವಾದವೆಂದು ಭಾವಿಸುವುದಿಲ್ಲವಾದರೂ ಮತ್ತು ಹೆಚ್ಚಿನವರಿಗೆ ಅವರು ಅದನ್ನು ಏಕೆ ಹೇಳುತ್ತಾರೆಂದು ತಿಳಿದಿಲ್ಲವಾದರೂ ಬಾಲ್ಯದಿಂದಲೇ ಸರ್ವೇ ಸಾಮಾನ್ಯವಾಗಿ ಕಲಿಸಲ್ಪಟ್ಟಿರುತ್ತದೆ.
ಆದಾಗ್ಯೂ, ಸತ್ಯವೇದ ದೃಷ್ಟಿಕೋನದಿಂದ, ಆಶೀರ್ವಾದಗಳು ಹೆಚ್ಚಿನ ಮಹತ್ವ ಮತ್ತು ಶಕ್ತಿಯನ್ನು ಕೂಡಿದ್ದದ್ದಾಗಿದೆ. ಸತ್ಯ ದೇವರು ಮತ್ತು ಮನುಷ್ಯರು ಇಬ್ಬರೂ ಸಹ ಆಶೀರ್ವಾದಗಳನ್ನು ನೀಡುವವರಾಗಿದ್ದು ಜನರ ಭವಿಷ್ಯವನ್ನು ಪ್ರಕಟ ಪಡಿಸಿ ಅದನ್ನು ವ್ಯಾಖ್ಯಾನಿಸಿ ಮತ್ತು ಸ್ಥಾಪಿಸುವವರಾಗಿದ್ದಾರೆ.
ಆಶೀರ್ವಾದಗಳ ಪ್ರಾಮುಖ್ಯತೆಯು ಸತ್ಯವೇದದಲ್ಲಿ ಸ್ಪಷ್ಟವಾಗಿದ್ದು ,ದೇವರು ಇಸ್ರಾಯೇಲ್ಯರನ್ನೂ ಮತ್ತು ನಮ್ಮನ್ನು -ನಾವು ಆತನಿಗೆ ತೋರುವ ವಿಧೇಯತೆ ಮೇಲೆ ಮತ್ತು ಆತನೊಂದಿಗಿನ ಸಂಬಂಧದ ಆಧಾರದ ಮೇಲೆ ಆಶೀರ್ವಾದಗಳು ಇಲ್ಲವೇ ಶಾಪಗಳು, ಜೀವ ಅಥವಾ ಮರಣದ ನಡುವೆ ಯಾವುದನ್ನು ಬೇಕೋ ಅದನ್ನು ಆಯ್ಕೆ ಮಾಡಲು ಕರೆಯುತ್ತಾನೆ.
"ನೋಡಿರಿ; ನಾನು ಜೀವಶುಭಗಳನ್ನೂ ಮರಣಾಶುಭಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ. ನಾನು ಈಗ ನಿಮಗೆ ಬೋಧಿಸುವ ಪ್ರಕಾರ ನೀವು ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನು ಹೇಳಿದ ಮಾರ್ಗದಲ್ಲಿ ನಡೆದು ಆತನ ಆಜ್ಞಾವಿಧಿ ನಿರ್ಣಯಗಳನ್ನು ಅನುಸರಿಸಿದರೆ ನೀವು ಬದುಕಿಕೊಂಡು ಹೆಚ್ಚುವಿರಿ; ಮತ್ತು ನೀವು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಅಭಿವೃದ್ಧಿಪಡಿಸುವನು. ಆದರೆ ನೀವು ಆತನನ್ನು ಬಿಟ್ಟು ಆತನ ಮಾತನ್ನು ಕೇಳಲೊಲ್ಲದೆ ಮರುಳುಗೊಂಡವರಾಗಿ ಇತರ ದೇವರುಗಳನ್ನು ಪೂಜಿಸಿ ಸೇವಿಸಿದರೆ ನೀವು ಸ್ವಾಧೀನಮಾಡಿಕೊಳ್ಳುವದಕ್ಕೆ ಯೊರ್ದನ್ ಹೊಳೆಯನ್ನು ದಾಟಿಹೋಗುವ ದೇಶದಲ್ಲಿ ಬಹುಕಾಲ ಇರದೆ ನಾಶವಾಗಿಯೇ ಹೋಗುವಿರೆಂದು ನಾನು ಈಗ ನಿಮಗೆ ಖಂಡಿತವಾಗಿ ತಿಳಿಸುತ್ತೇನೆ. ನಾನು ಜೀವಮರಣಗಳನ್ನೂ ಆಶೀರ್ವಾದಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮ್ಯಾಕಾಶಗಳು ಸಾಕ್ಷಿಗಳಾಗಿರಲಿ. ಆದದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ; "ಎಂದು ಧರ್ಮೋಪದೇಶಕಾಂಡ 30:15-19 ಹೇಳುತ್ತದೆ.
ಆದಿಕಾಂಡ 12:2-3, ದೇವರು ಅಬ್ರಹಾಮನನ್ನು ಆಶೀರ್ವದಿಸುತ್ತಾ, "ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸಿ ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು. ನೀನು ಆಶೀರ್ವಾದನಿಧಿಯಾಗುವಿ. ನಿನ್ನನ್ನು ಹರಸುವವರನ್ನು ಹರಸುವೆನು; ನಿನ್ನನ್ನು ಶಪಿಸುವವರನ್ನು ಶಪಿಸುವೆನು. ನಿನ್ನ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವದು ಎಂದು ಹೇಳಿದನು.
ಈ ದೈವಿಕ ಆಶೀರ್ವಾದವು ಅಬ್ರಹಾಮನ ಮತ್ತು ಅವನ ವಂಶಸ್ಥರ ಭವಿಷ್ಯವನ್ನು ವ್ಯಾಖ್ಯಾನಿಸಿತು ಮತ್ತು ಪ್ರತಿಸ್ಥಾಪಿಸಲ್ಪಟ್ಟಿತು. ಮತ್ತೊಂದು ಉದಾಹರಣೆಯನ್ನು ಅರಣ್ಯಕಾಂಡ 6:24-26 ರಲ್ಲಿ ಕಾಣಬಹುದು, ಅಲ್ಲಿ ಕರ್ತನು ಮೋಶೆಗೆ ಆರೋನ ಮತ್ತು ಅವನ ಪುತ್ರರಿಗೆ ಇಸ್ರೇಲ್ ಮಕ್ಕಳನ್ನು ಈ ಕೆಳಗಿನ ಮಾತುಗಳಿಂದ ಆಶೀರ್ವದಿಸುವಂತೆ ಸೂಚಿಸಿದನು: "ಯೆಹೋವನು ನಿಮ್ಮನ್ನು ಆಶೀರ್ವದಿಸಿ ಕಾಪಾಡಲಿ; ಯೆಹೋವನು ಪ್ರಸನ್ನಮುಖದಿಂದ ನಿಮ್ಮನ್ನು ನೋಡಿ ನಿಮ್ಮ ಮೇಲೆ ದಯವಿಡಲಿ; ಯೆಹೋವನು ನಿಮ್ಮ ಮೇಲೆ ಕೃಪಾಕಟಾಕ್ಷವಿಟ್ಟು ಶಾಂತಿಯನ್ನು ಅನುಗ್ರಹಿಸಲಿ ಎಂಬದೇ. ಹೀಗೆ ಅವರು ಇಸ್ರಾಯೇಲ್ಯರ ಮೇಲೆ ನನ್ನ ಹೆಸರನ್ನು ಉಚ್ಚರಿಸಲಾಗಿ ನಾನು ಅವರನ್ನು ಆಶೀರ್ವದಿಸುವೆನು"
ಈ ಆಶೀರ್ವಾದವು ಆತನು ತನ್ನ ಜನರಿಗೆ ನೀಡುವ ರಕ್ಷಣೆ, ಕೃಪೆ ಮತ್ತು ಸಮಾಧಾನಕ್ಕಿರುವ ಪ್ರಬಲ ಪ್ರಾರ್ಥನೆಯಾಗಿದೆ. ಶಾಪಗಳು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಬಹುದಾದಂತೆಯೇ, ಆಶೀರ್ವಾದಗಳನ್ನು ಸಹ ಪೀಳಿಗೆ ಯಿಂದ ಪೀಳಿಗೆಗೆ ಸಹ ರವಾನಿಸಬಹುದು.
ಉದಾಹರಣೆಗೆ, ದೇವರ ಒಡಂಬಡಿಕೆಯು ಅಬ್ರಹಾಮನಿಗೆ ಮಾತ್ರ ಸೀಮಿತವಾಗದೇ , ಅದು ಅವನ ವಂಶಸ್ಥರಿಗೂ ಸಹ ವಿಸ್ತರಿಸಲ್ಪಟ್ಟಿತು (ಆದಿಕಾಂಡ 12:2-3). ಇದಲ್ಲದೆ, ವಿಮೋಚನಕಾಂಡ 20:6 ರಲ್ಲಿ, ಕರ್ತನು "ನನ್ನನ್ನು ಪ್ರೀತಿಸಿ ನನ್ನ ಆಜ್ಞೆಗಳನ್ನು ಕೈಕೊಳ್ಳುವವರಿಗೋ ಸಾವಿರ ತಲೆಗಳವರೆಗೆ ದಯೆ ತೋರಿಸುವವನಾಗಿಯೂ ಇದ್ದೇನೆ."ಎಂದು ಭರವಸೆ ನೀಡುತ್ತಾನೆ. ಇದು ನಂಬಿಗಸ್ತರಾಗಿ ಉಳಿಯುವವರಿಗೆ ಬಹು ತಲೆಮಾರುಗಳವರೆಗೂ ವ್ಯಾಪಿಸಿರುವ ದೇವರ ಆಶೀರ್ವಾದಗಳ ನಿತ್ಯತೆಯ ಸ್ವರೂಪವನ್ನು ಎತ್ತಿ ತೋರಿಸುತ್ತದೆ.
Bible Reading: 2 Kings 21-23
Confession
ನನ್ನ ಕಿವಿಗಳು ನನ್ನ ದೇವರಾದ ಕರ್ತನ ಧ್ವನಿಯನ್ನು ಕೇಳುತ್ತವೆ ಮತ್ತು ಕರ್ತನು ವಾಗ್ದಾನ ಮಾಡಿದ ಎಲ್ಲಾ ಆಶೀರ್ವಾದಗಳು ನನ್ನ ಮೇಲೆ ಬಂದು ನನ್ನನ್ನು ಹಿಂಬಾಲಿಸುವುದು. ಆಮೆನ್!
Join our WhatsApp Channel

Most Read
● ಅಧರ್ಮಗಳ ಆಳ್ವಿಕೆಯ ಬಲವನ್ನು ಮುರಿಯುವುದು - I● ಮನುಷ್ಯರ ಸಂಪ್ರದಾಯಗಳು
● ಕೆಟ್ಟ ನಡವಳಿಕೆಗಳಿಂದ ಬಿಡುಗಡೆ
● ನಾವು ಸಭೆಯಾಗಿ ನೇರವಾಗಿ ಕೂಡಿಕೊಳ್ಳದೆ ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ಸಭೆಯ ಆರಾಧನೆಯಲ್ಲಿ ಭಾಗವಹಿಸಬಹುದೇ?
● ದುಷ್ಟ ಮಾದರಿಗಳಿಂದ ಹೊರಬರುವುದು.
● ಯಾವಾಗ ಸುಮ್ಮನಿರಬೇಕು ಮತ್ತು ಯಾವಾಗ ಮಾತನಾಡಬೇಕು
● ಸೆರೆಯಲ್ಲಿ ದೇವರ ಸ್ತೋತ್ರ
Comments