Daily Manna
3
3
104
ದೇವರ ರಾಜ್ಯದಲ್ಲಿ ದೀನತ್ವ ಮತ್ತು ಸನ್ಮಾನ
Friday, 21st of November 2025
Categories :
ನಮ್ರತೆ (Humility)
ಸುವಾರ್ತೆಗಳಲ್ಲಿ, ಸ್ನಾನಿಕ ಯೋಹಾನನ ಜೀವನದ ಮೂಲಕ ನಾವು ದೀನತೆ ಮತ್ತು ಸನ್ಮಾನದ ಆಳವಾದ ನಿರೂಪಣೆಯನ್ನು ಕಾಣುವವರಾಗುತ್ತೇವೆ. ಯೋಹಾನ 3:27 ದೇವರ ರಾಜ್ಯದ ಸಂಸ್ಕೃತಿಯ ಬಗ್ಗೆ ಬಹಳಷ್ಟು ಮಾತನಾಡುವ ಒಂದು ಕ್ಷಣವನ್ನು ಸೆರೆಹಿಡಿದಿಡುತ್ತದೆ. ಹರಡುತ್ತಿರುವ ವಿವಾದದ ನಡುವೆಯೂ ತನ್ನ ಶಿಷ್ಯರೊಂದಿಗೆ ಮಾತನಾಡುತ್ತಾ, ಸ್ನಾನಿಕನಾದ ಯೋಹಾನನು ಆಳವಾದ ಜ್ಞಾನದ ಮಾತುಗಳನ್ನು ಹೇಳುತ್ತಾನೆ, "ಮನುಷ್ಯನಿಗೆ ಪರಲೋಕದಿಂದ ಅನುಗ್ರಹಿಸದ ಹೊರತು ಮನುಷ್ಯನು ಯಾವುದನ್ನೂ ಹೊಂದಲು ಸಾಧ್ಯವಿಲ್ಲ."ಎಂದು.
ಈ ಸರಳ ಆದರೆ ಆಳವಾದ ಸ್ವೀಕರಣಾ ಮನೋಭಾವವು ದೇವರ ರಾಜ್ಯದ ಆಂತರಿಕ ಮೌಲ್ಯಗಳ ಕುರಿತು ಚರ್ಚೆಗೆ ವೇದಿಕೆಯನ್ನು ಸಿದ್ಧಪಡಿಸುತ್ತದೆ: ಅದುವೇ ದೀನತೆ ಮತ್ತು ಸನ್ಮಾನ ಎನ್ನುವ ಸಂಗತಿಗಳು. ದೇವರ ರಾಜ್ಯವು ಲೋಕವು ಆಚರಿಸುವ ಮೌಲ್ಯಗಳಿಗೆ ವಿರುದ್ಧವಾಗಿ ನಡೆಯುವ ತತ್ವಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಇದು ಕಡೆಯವರು ಮೊದಲಿಗರಾಗಿ ಇರುವ ರಾಜ್ಯವಾಗಿದೆ (ಮತ್ತಾಯ 20:16), ಮತ್ತು ಇಲ್ಲಿ ನಾಯಕರಾದವರು ಸೇವೆ ಸಲ್ಲಿಸುವವರಾಗಿತ್ತಾರೆ (ಮತ್ತಾಯ 20:26-28). ಇಲ್ಲಿ ಸ್ನಾನಿಕನಾದ ಯೋಹಾನನು ತಾನು ತನ್ನ ದೃಷ್ಟಿಯನ್ನು ತನ್ನ ಸ್ವಾರ್ಥದ ಮೇಲಿಂದ ತೆಗೆದು ಕ್ರಿಸ್ತನ ಕಡೆಗೆ ಗಮನವನ್ನು ತನ್ನ ದೃಷ್ಟಿ ಯನ್ನು ಕೇಂದ್ರೀಕರಿಸಬೇಕು ಆರಿಸಿಕೊಂಡಾಗ ಈ ಸಂಸ್ಕೃತಿಯನ್ನು ಉದಾಹರಿಸಿ, ನಿಜವಾದ ದೀನತೆಯು ತನ್ನ ಬಗ್ಗೆ ಕೀಳರಿಮೆಯನ್ನು ಯೋಚಿಸುವುದಲ್ಲ ಆದರೆ ತನ್ನನ್ನು ತಾನು ತಗ್ಗಿಸಿಕೊಳ್ಳುವುದು ಎಂಬುದನ್ನು ಪ್ರದರ್ಶಿಸಿದನು.
ಇಂದಿನ ಕಾಲದಲ್ಲಿ, ದೀನತೆಯನ್ನು ಹೆಚ್ಚಾಗಿ ದೌರ್ಬಲ್ಯ ಅಥವಾ ಮಹತ್ವಾಕಾಂಕ್ಷೆಯ ಕೊರತೆ ಎಂದು ತಪ್ಪಾಗಿ ಪರಿಗಣಿಸಲಾಗುತ್ತಿದೆ. ಆದಾಗ್ಯೂ, ಸತ್ಯವೇದವು ದೀನತೆಎಂದರೆ ದೇವರ ಮೇಲಿನ ನಮ್ಮ ಅವಲಂಬನೆಯನ್ನು ಗುರುತಿಸುವ ಒಂದು ಬಲವಾಗಿದೆ. ಇದು ಜ್ಞಾನೋಕ್ತಿ 22:4 ರಲ್ಲಿ ಚೆನ್ನಾಗಿ ಸೆರೆಹಿಡಿಯಲ್ಪಟ್ಟಿದೆ, ಅದು ಹೇಳುತ್ತದೆ, " ಧನ, ಮಾನ ಮತ್ತು ಜೀವಗಳು ದೀನಭಾವಕ್ಕೂ, ಯೆಹೋವನ ಭಯಕ್ಕೂ ಫಲ."ಎಂದು. ಪ್ರತಿಯೊಂದು ಒಳ್ಳೆಯ ಮತ್ತು ಪರಿಪೂರ್ಣ ವಾದ ದಾನವು ಮೇಲಿನಿಂದ ಬರುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಂಡಾಗ (ಯಾಕೋಬ 1:17), ನಾವು ನಮ್ಮ ಯಶಸ್ಸು ಮತ್ತು ವೈಫಲ್ಯಗಳನ್ನು ದೇವರ ಸಾರ್ವಭೌಮತ್ವದ ಬೆಳಕಿನಲ್ಲಿ ನೋಡಲು ಪ್ರಾರಂಭಿಸಿ ಸ್ಪರ್ಧೆಯು ಸಹಕಾರಕ್ಕೆ ದಾರಿ ಮಾಡಿಕೊಡುತ್ತದೆ.
ಯೇಸುವಿನ ಮುಂದಾಳುವಾಗಿ ಬಂದ ಸ್ನಾನಿಕ ಯೋಹಾನನ ಪಾತ್ರವು ಪ್ರಮುಖವಾಗಿತ್ತು. ಆದರೂ, ಅನುಯಾಯಿಗಳಿಗಾಗಿ ಯೇಸುವಿನೊಂದಿಗೆ ಸ್ಪರ್ಧಿಸುವ ಆಯ್ಕೆ ಎದುರುಗೊಂಡಾಗ , ಅವನು ಅದಕ್ಕೆ ಬದಲಾಗಿ ಯೇಸುವನ್ನು ಗೌರವಿಸಬೇಕೆಂಬುದನ್ನು ಆರಿಸಿಕೊಂಡನು. "ಆತನು ವೃದ್ಧಿಯಗಬೇಕು, ನಾನು ಕಡಿಮೆಯಾಗಬೇಕು" (ಯೋಹಾನ 3:30) ಎಂದು ಹೇಳುವ ಶಾಸ್ತ್ರಕ್ಕೆ ಯೋಹಾನನ ಜೀವನವು ಸಾಕ್ಷಿಯಾಗಿತ್ತು.
ಇತರರನ್ನು ಮೇಲಕ್ಕೆತ್ತುವುದು, ಕೆಲವೊಮ್ಮೆ ನಮಗಿಂತ ಮೇಲಕ್ಕೆತ್ತುವುದು, ಇದು ದೇವರ ರಾಜ್ಯದಲ್ಲಿ ಗೌರವದ ಸಾರವಾಗಿದೆ ಆಗ ದೇವರು ಬರೆಯುತ್ತಿರುವ ಭವ್ಯವಾದ ನಿರೂಪಣೆಯಲ್ಲಿ ನಮ್ಮ ಪಾತ್ರಗಳೇನೆಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಕ್ರಿಸ್ತನ ದೇಹದಲ್ಲಿ, ಪ್ರತಿಯೊಬ್ಬ ಸದಸ್ಯನು ತನಗಾಗಿ ವಿಶಿಷ್ಟ ಕಾರ್ಯವನ್ನು ಹೊಂದಿದ್ದಾನೆ (1 ಕೊರಿಂಥ 12:12-27). ದೇಹದ ಒಂದು ಭಾಗವು ಗೌರವಿಸಲ್ಪಟ್ಟಾಗ, ಪ್ರತಿಯೊಂದು ಭಾಗವು ಸಂತೋಷಪಡುತ್ತದೆ.ದೇವರ ರಾಜ್ಯದಲ್ಲಿ ಮತ್ತೊಬ್ಬರ ಸಾಧನೆಗೆ ಸನ್ಮಾನ ದೊರೆತಾಗ ನಮ್ಮದೇ ಆದ ಯಶಸ್ಸು ಎಂದು ಸಂತೋಷಪಡುವುದು- ಇದುವೇ ನಿಜವಾದ ದೀನತೆ. ನಮ್ಮಲ್ಲಿ ನಂಬಿಕೆಯನ್ನು ಹುಟ್ಟಿಸುವವನೂ ಮತ್ತು ಪೂರ್ಣಗೊಳಿಸುವವನೂ ಆದ ಯೇಸುವಿನ ಮೇಲೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸುವ ಮೂಲಕ (ಇಬ್ರಿಯ 12:2), ನಾವು ಸ್ಪರ್ಧೆಗಿಳಿಯುವ ಪ್ರಚೋದನೆಯನ್ನು ವಿರೋಧಿಸಬಹುದು ಮತ್ತು ಅದರ ಬದಲಾಗಿ ಆತನ ರಾಜ್ಯದ ವಿಸ್ತರಣೆಗಾಗಿ ಸಹಕರಿಸಬಹುದು.
ಕೊಲೊಸ್ಸೆ 2:19 ಪ್ರೇರೇಪಿಸುವಂತೆ ನಾವು ಕ್ರಿಸ್ತನಲ್ಲಿ ನಮ್ಮನ್ನು ನೆಲೆಗೊಳಿಸಿಕೊಳ್ಳುವಾಗ, ದೇವರಿಂದ ಬರುವ ಸನ್ಮಾನದಲ್ಲಿ ನಾವು ಬೆಳೆಯುತ್ತೇವೆ. ಯೇಸುವಿನೊಂದಿಗಿನ ಶಾಶ್ವತ ಸಂಬಂಧದಲ್ಲಿ ನಾವು ವಿನಮ್ರರಾಗಿ ಉಳಿಯಲು ಕೃಪೆಯನ್ನು ಮತ್ತು ಇತರರನ್ನು ಪ್ರಾಮಾಣಿಕವಾಗಿ ಗೌರವಿಸುವ ಸಾಮರ್ಥ್ಯವನ್ನು ಕಂಡುಕೊಳ್ಳುತ್ತೇವೆ. ಇದು ಸಾಧನೆಯಿಂದ ದೂರ ಸರಿಯುವ ನಿಷ್ಕ್ರಿಯ ದೀನಭಾವವಲ್ಲ, ಆದರೆ ಎಲ್ಲಾ ಆಶೀರ್ವಾದಗಳ ಮೂಲವನ್ನು ಗುರುತಿಸುವ ಸಕ್ರಿಯವಾದ ದೀನತೆಯಾಗಿದೆ.
ಆದಿಸಭೆಯು ನಮಗೆ ಕಾರ್ಯರೂಪದ ದೀನತೆಯ ಸುಂದರ ಚಿತ್ರಣವನ್ನು ನೀಡುತ್ತದೆ. ಅಪೊಸ್ತಲರ ಕೃತ್ಯಗಳು 4:32 ಹೇಳುವಂತೆ, " ಕ್ರಿಸ್ತನನ್ನು ನಂಬಿದವರ ಹೃದಯವೂ, ಪ್ರಾಣವೂ ಒಂದೇ ಆಗಿತ್ತು. ಯಾರೂ ತಮ್ಮ ಸ್ವತ್ತನ್ನು ತನ್ನದು ಎಂದು ಭಾವಿಸದೆ ಎಲ್ಲರೂ ಅದನ್ನು ಹುದುವಾಗಿ ಹಂಚಿಕೊಳ್ಳುತ್ತಿದ್ದರು. ಮತ್ತು ಕರ್ತನಾದ ಯೇಸುವಿನ ಪುನರುತ್ಥಾನಕ್ಕೆ ಅಪೊಸ್ತಲರು ಬಹು ಬಲವಾಗಿ ಸಾಕ್ಷಿ ಹೇಳುತ್ತಿದ್ದರು; ದೇವರ ದಯವು ಅವರೆಲ್ಲರ ಮೇಲೆ ಪೂರ್ಣವಾಗಿತ್ತು. ಅವರಲ್ಲಿ ಕೊರತೆಪಡುತ್ತಿದ್ದವನೂ ಒಬ್ಬನೂ ಇರಲಿಲ್ಲ,... ಅವರ ದೀನತೆಯು ಅವರಲ್ಲಿ ಐಕ್ಯತೆ ಮತ್ತು ಗೌರವದ ಭಾವನೆಯನ್ನು ಬೆಳೆಸಿ, ಅದು ಕರ್ತನಾದ ಯೇಸುವಿನ ಪುನರುತ್ಥಾನಕ್ಕೆ ಪ್ರಬಲ ಸಾಕ್ಷಿಯಾಗುವಂತೆ ಮಾಡಿತು.
ಈ ಸತ್ಯಗಳನ್ನು ನಾವು ನೋಡುವಾಗ, . ನಾವು ಪರಸ್ಪರ ಪೂರ್ಣಗೊಳಿಸಬೇಕಾದ ಸ್ಥಳದಲ್ಲಿ ಸ್ಪರ್ಧಿಸುತ್ತಿದ್ದೇವೆಯೇ? ನಾವು ನಮಗಾಗಿ ಸ್ವಂತ ಮಾನವನ್ನು ಹುಡುಕುತ್ತಿದ್ದೇವೆಯೇ ಅಥವಾ ನಾವು ದೇವರನ್ನು ಮತ್ತು ಇತರರನ್ನು ಗೌರವಿಸಲು ನೋಡುತ್ತಿದ್ದೇವೆಯೇ? ಎಂದು ನಮ್ಮ ಮಾರ್ಗಗಳನ್ನು ಪರಿಗಣಿಸೋಣ
Bible Reading: Acts 12-13
Prayer
ತಂದೆಯೇ, ನಿಮ್ಮ ರಾಜ್ಯದಲ್ಲಿ ನಾನು ದೀನತೆಯಿಂದಲೂ ಮತ್ತು ಗೌರವಾನ್ವಿತನಾಗಿರಲು ಸಹಾಯ ಮಾಡಿ. ನೀವು ನನ್ನನ್ನು ನೋಡುವಂತೆಯೇ ನಾನು ನನ್ನನ್ನು ನೋಡಿಕೊಳ್ಳಲು ಮತ್ತು ನೀವು ಅವರನ್ನು ಗೌರವಿಸುವಂತೆ ಇತರರನ್ನು ನಾನು ಗೌರವಿಸುವಂತೆಯೇ ನನಗೆ ಸಹಾಯ ಮಾಡಿ. ನನ್ನ ಜೀವನವು ನಿಮ್ಮ ರಾಜ್ಯ ಮತ್ತು ನಿಮ್ಮ ಮೌಲ್ಯಗಳಿಗೆ ಸಾಕ್ಷಿಯಾಗಲಿ. ಯೇಸುವಿನ ಹೆಸರಿನಲ್ಲಿ. ಆಮೆನ್
Join our WhatsApp Channel
Most Read
● ಈ ದಿನಮಾನಗಳಲ್ಲಿ ಕಾಣುವ ಅಪರೂಪದ ಸಂಗತಿ● ನಿಮ್ಮ ಜಗತ್ತನ್ನು ರೂಪಿಸಲು ನಿಮ್ಮ ಕಲ್ಪನೆಯನ್ನು ಬಳಸಿಕೊಳ್ಳಿ.
● ನಮ್ಮ ರಕ್ಷಕನ ಬೇಷರತ್ತಾದ ಪ್ರೀತಿ
● ನಿಮ್ಮ ಹೃದಯವನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಿ
● ಕೃಪೆಯ ಮೇಲೆ ಕೃಪೆ
● ಕ್ರಿಸ್ತ ಕೇಂದ್ರಿತ ಮನೆಯನ್ನು ನಿರ್ಮಿಸುವುದು.
● ಅನ್ಯಭಾಷೆಯನ್ನಾಡುವುದು ಪ್ರಗತಿಯನ್ನು ತರುತ್ತದೆ.
Comments
