हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ನಿಮ್ಮ ಹೃದಯವನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಿ
Daily Manna

ನಿಮ್ಮ ಹೃದಯವನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಿ

Monday, 2nd of June 2025
1 0 106
Categories : ಮಾನವ ಹೃದಯ (Human Heart)
ಪವಿತ್ರಾತ್ಮನ ಪ್ರೇರಣೆಯ ಮೂಲಕ ಅರಸನಾದ ಸೊಲೊಮೋನನು: "ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ, ಅದರೊಳಗಿಂದ ಜೀವಬುಗ್ಗೆಗಳು ಹೊರಡುವವು." ಎಂದು ಬರೆದನು(ಜ್ಞಾನೋಕ್ತಿ 4:23) '

ಕಾಪಾಡಿಕೊಳ್ಳಿ ' ಎಂಬ ಪದದ ಅರ್ಥ. ನಾವು ನಮ್ಮ ಹೃದಯಗಳನ್ನು ಶ್ರದ್ಧೆಯಿಂದ ಕಾಯಬೇಕು ಎಂದಾಗಿದೆ. 

ನಿಮ್ಮ ಹೃದಯವನ್ನು ಎಲ್ಲಕ್ಕಿಂತ ಹೆಚ್ಚಾಗಿ ಕಾಪಾಡಿಕೊಳ್ಳಿ, ಏಕೆಂದರೆ ಅದುವೇ   ನಿಮ್ಮ ಜೀವನದ ಹಾದಿಯನ್ನು ನಿರ್ಧರಿಸುತ್ತದೆ. (ಜ್ಞಾನೋಕ್ತಿ 4:23 NLT)

"ಎಲ್ಲಕ್ಕಿಂತ ಹೆಚ್ಚಾಗಿ" ಎಂಬ ವಾಕ್ಯವನ್ನು ಗಮನಿಸಿ ಇದರರ್ಥ ನಮ್ಮ ಹೃದಯಗಳನ್ನು ಕಾಪಾಡುವ ಈ ಚಟುವಟಿಕೆಯು ಪ್ರತಿದಿನ ನಮ್ಮ ಪ್ರಮುಖ ಆದ್ಯತೆಯ ಪಟ್ಟಿಯಾಗಿರಬೇಕು. ದೇಹವನ್ನು ರಕ್ಷಿಸುವ ಬಗ್ಗೆ ನೀವು ಬಹುಶಃ ಬೋಧನೆಗಳನ್ನು ಕೇಳಿರಬಹುದು ಮತ್ತು ಅದು ಒಳ್ಳೆಯದೇ  ಆದರೆ ನಾವು ನಮ್ಮ ಹೃದಯಗಳನ್ನು ಸಹ ರಕ್ಷಿಸಿಕೊಳ್ಳಬೇಕಾಗಿದೆ.

ಸತ್ಯವೇದ  ಹೃದಯದ ಬಗ್ಗೆ ಉಲ್ಲೇಖಿಸುವಾಗ, ಅದು ರಕ್ತ ಪರಿಚಲನೆಗೆ ಕಾರಣವಾಗಿರುವ ಭೌತಿಕ ಅಂಗವನ್ನು ಉಲ್ಲೇಖಿಸುತ್ತಿಲ್ಲ ಎಂಬುದನ್ನು ಗುರುತಿಸುವುದು ಬಹಳ ಮುಖ್ಯ. ಬದಲಾಗಿ, ಅದು ನಮ್ಮ ಆಂತರಿಕ ಮನುಷ್ಯನನ್ನು - ನಮ್ಮ ಆತ್ಮೀಕ  ಮನುಷ್ಯನನ್ನು ಕುರಿತು ಅದು  ಮಾತನಾಡುತ್ತದೆ.

ಪರಿಣಾಮವಾಗಿ, ನಮ್ಮ ಹೃದಯಗಳನ್ನು ಕಾಪಾಡುವುದು ಎಂದರೆ ನಮ್ಮ ಮನಸ್ಸುಗಳು, ಆಲೋಚನೆಗಳು, ಭಾವನೆಗಳು ಮತ್ತು ಆಸೆಗಳನ್ನು ಒಳಗೊಂಡ  ನಮ್ಮ ಆತ್ಮೀಕಮನುಷ್ಯನನ್ನು  ರಕ್ಷಿಸುವುದಾಗಿರುತ್ತದೆ. ಈ ಆತ್ಮೀಕ ರಕ್ಷಣೆ ಎನ್ನುವಂತದ್ದು  ದೇವರೊಂದಿಗಿನ ನಮ್ಮ ಸಂಪರ್ಕದ ಪರಿಶುದ್ಧತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು, ಬೆಳವಣಿಗೆಯನ್ನು ಬೆಳೆಸಿಕೊಳ್ಳಲು  ಮತ್ತು ಕರ್ತನೊಂದಿಗಿನ ನಮ್ಮ ಸಂಬಂಧವನ್ನು ಪೋಷಿಸಲು ಸಹಾಯ ಮಾಡುತ್ತದೆ.

 ನಾವು ನಮ್ಮ ಹೃದಯಗಳನ್ನು ಏಕೆ ಕಾಪಾಡಬೇಕು?
 1.ಏಕೆಂದರೆ ನಿಮ್ಮ ಹೃದಯ (ಆಂತರಿಕ ಮನುಷ್ಯನು) ಅತ್ಯಂತ ಮೌಲ್ಯಯುತವಾಗಿದೆ.

ಸ್ವಲ್ಪ ಸಮಯದ ಹಿಂದೆ ನಾನು ಕೆನಡಾದಲ್ಲಿದ್ದೆ. ನಾನು ತಂಗಿದ್ದ ಸುಂದರ ಸ್ಥಳ ಅದು ಮತ್ತು ಅಲ್ಲಿನ ಆತಿಥೇಯರು ಸಹ ತುಂಬಾ ದಯೆ ತೋರಿಸಿದರು. ಅವರು ನಿಜವಾಗಿಯೂ ನಮ್ಮನ್ನು ತುಂಬಾ  ಚೆನ್ನಾಗಿ ನೋಡಿಕೊಂಡರು. ದೇವರು ಅವರನ್ನು ಎಲ್ಲ ರೀತಿಯಲ್ಲೂ ಆಶೀರ್ವದಿಸುತ್ತಾನೆ. ಈ  ಜನರು ಪ್ರತಿ ಬುಧವಾರ ರಾತ್ರಿ ತಮ್ಮ ಕಸವನ್ನು ಸರಿಯಾಗಿ ವಿಂಗಡಿಸಿ ಬೀದಿಯಲ್ಲಿ ಪ್ಯಾಕ್ ಮಾಡುವುದನ್ನು ನಾನು ನೋಡಿದೆ. ಗುರುವಾರ ಬೆಳಿಗ್ಗೆ ಕಸದ ಟ್ರಕ್ ಅದನ್ನು ಎತ್ತಿಕೊಳ್ಳುತ್ತಿತ್ತು. ಇಡೀ ರಾತ್ರಿ ಕಸವನ್ನು ಕಾವಲು ಕಾಯದೆ ಬಿಡಲಾಗಿತ್ತು. ಏಕೆ? ಏಕೆಂದರೆ ಅದು ನಿಷ್ಪ್ರಯೋಜಕವಾದದ್ದು. 

ಕಲ್ಪನೆ ಸರಳವಾಗಿದೆ. ಯಾರೂ ನಿಷ್ಪ್ರಯೋಜಕ ವಸ್ತುಗಳನ್ನು ಕಾಪಾಡುವುದಿಲ್ಲ. ಹಾಗಾದರೆ ದೇವರ ವಾಕ್ಯವು ನಮ್ಮ ಹೃದಯಗಳನ್ನು ಎಲ್ಲಕ್ಕಿಂತ ಹೆಚ್ಚಾಗಿ ಕಾಪಾಡಿಕೊಳ್ಳಬೇಕೆಂದು ನಮಗೆ ಆಜ್ಞಾಪಿಸುವುದಾದರೆ , ನಮ್ಮ ಹೃದಯಗಳು ಆತನ ದೃಷ್ಟಿಯಲ್ಲಿ ಎಷ್ಟು ಮೌಲ್ಯಯುತವಾಗಿರಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ನಾವು ನಿಜವಾಗಿಯೂ ಯಾರಾಗಿದ್ದೇವೋ  ಅದುವೇ ನಮ್ಮ ಹೃದಯ (ನಮ್ಮ ಆಂತರಿಕ ಮನುಷ್ಯ)ವಾಗಿದೆ. ಅದು ನಮ್ಮ ಅಸ್ತಿತ್ವದ ಮೂಲ. ನಮ್ಮ ಎಲ್ಲಾ ಕನಸುಗಳು, ನಮ್ಮ ಆಸೆಗಳು ಮತ್ತು ನಮ್ಮ ಉತ್ಸಾಹಗಳು ಇಲ್ಲಿ ವಾಸಿಸುತ್ತವೆ. ದೇವರು ಮತ್ತು ಇತರ ಜನರೊಂದಿಗೆ ಸಂಪರ್ಕ ಸಾಧಿಸುವ ಮತ್ತು ಸಂವಹನ ನಡೆಸುವ ಭಾಗ ಇದಾಗಿದೆ.

ನಾವು ಇತ್ತೀಚಿಗೆ  'ಹೃದಯ ಮಾತು' ಎಂಬ ಒಂದು ವಿಚಾರ ಸಂಕಿರಣವನ್ನು ನಡೆಸಿದ್ದೆವು , ಅಲ್ಲಿ ಒಬ್ಬ ಪ್ರಖ್ಯಾತ ಹೃದ್ರೋಗ ತಜ್ಞರು ಆರೋಗ್ಯಕರ ಜೀವನವನ್ನು ನಡೆಸಬೇಕಾದರೆ ನಮ್ಮ ದೈಹಿಕ ಹೃದಯವನ್ನು ಹೇಗೆ ಸರಿಯಾಗಿ ನೋಡಿಕೊಳ್ಳಬೇಕು ಎಂಬುದರ ಕುರಿತು ಕೆಲವು ಮಾಹಿತಿ ಹಂಚಿಕೊಂಡರು. ಅದೇ ರೀತಿಯಲ್ಲಿ, ನಮ್ಮ ಆತ್ಮೀಕ ಹೃದಯವಾದ  'ನಮ್ಮ ಆಂತರಿಕ ಮನುಷ್ಯನನ್ನು ನಿರ್ಲಕ್ಷಿಸಲಾಗುವುದಿಲ್ಲ ಏಕೆಂದರೆ ಅದು ಅತ್ಯಂತ ಮೌಲ್ಯಯುತವಾಗಿದೆ. 

Bible Reading: 2 Chronicles 31-32
Prayer
ತಂದೆಯೇ, ನಾನು ನಿನ್ನಿಂದ ಎಂದಿಗೂ ದೂರವಾಗದಂತೆ ಕರ್ತನ ಭಯದ ಆತ್ಮವನ್ನು ನನ್ನ ಹೃದಯದಲ್ಲಿ  ಬಿಡುಗಡೆ ಮಾಡು (ಯೆರೆಮೀಯ 32:40)

ತಂದೆಯೇ, ನಿನ್ನ ಮಹಿಮೆಯ ಪ್ರಕಟಣೆಯಿಂದ ನನ್ನ ಹೃದಯವನ್ನು ಸ್ಪರ್ಶಸಿ , ಇದರಿಂದ ನಾನು ನಿನ್ನ ಮುಂದೆ ಭಯದಿಂದ ಬದುಕಬಹುದು. 

ತಂದೆಯೇ, ನಿನ್ನ ಮಹಿಮೆಯ ಪ್ರಭಾವದ ಮುಂದೆ ನನ್ನ ಆತ್ಮವು ನಡುಗುವಂತೆ ಮಾಡುವ ನಿನ್ನ ಪವಿತ್ರ ಪ್ರಸನ್ನತೆಯನ್ನು ಬಿಡುಗಡೆ ಮಾಡು. ನನ್ನ ಹೃದಯವನ್ನು ನಿನ್ನ ಹೃದಯ ಮತ್ತು ವಾಕ್ಯಕ್ಕೆ ಸಮನ್ವಯಗೊಳಿಸಿ ದೇವರ ಭಯದಲ್ಲಿ ನಾನು ಆನಂದಿಸುವಂತೆ ಮಾಡು ಎಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ . ಆಮೆನ್

Join our WhatsApp Channel


Most Read
● ದಿನ 36:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೇವರನ್ನು ಸ್ತುತಿಸಲು ಇರುವ ಸತ್ಯವೇದಕ್ಕನುಸಾರವಾದ ಕಾರಣಗಳು 
● ಒಂದು ಗಂಟೆ ಹಾಗೂ ಒಂದು ದಾಳಿಂಬ ಹಣ್ಣು
● ವಿವೇಕಿಯಾಗಿರಿ
● ನಂಬಿಕೆಯಲ್ಲಿ ದೃಢವಾಗಿ ನಿಲ್ಲುವುದು
● ಎದುರಾಗುವ ವಿರೋಧಗಳನ್ನು ನಂಬಿಕೆಯಿಂದ ಎದುರಿಸುವುದು.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login