हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಸ್ನೇಹ ವಿನಂತಿ: ಪ್ರಾರ್ಥನಾಪೂರ್ವಕವಾಗಿ ಆಯ್ಕೆಮಾಡಿ.
Daily Manna

ಸ್ನೇಹ ವಿನಂತಿ: ಪ್ರಾರ್ಥನಾಪೂರ್ವಕವಾಗಿ ಆಯ್ಕೆಮಾಡಿ.

Wednesday, 26th of February 2025
1 0 148
Categories : ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
"ನೀವು ನನ್ನಲ್ಲಿದ್ದು ಮನಶ್ಶಾಂತಿಯನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ "ಎಂದು ಕರ್ತನಾದ ಯೇಸು ಹೇಳಿದನು. (ಯೋಹಾನ 16:33).

ಈ ಲೋಕದಲ್ಲಿ ಹಾದು ಹೋಗುವುದು ಸುಲಭವಲ್ಲ ಎಂದು ಕರ್ತನಿಗೆ ತಿಳಿದಿತ್ತು, ಆದ್ದರಿಂದಲೇ ಆತನ ಕರುಣೆಯಲ್ಲಿ, ನಮಗೆ ಸಹಾಯ ಮಾಡುವ ಮತ್ತು ನಮ್ಮ ಪ್ರಯಾಣದಲ್ಲಿ ನಮಗೆ ಸಾಂತ್ವನ ನೀಡುವ ಬೆಂಬಲ ವ್ಯವಸ್ಥೆಗಳನ್ನು ಆತನು ಒದಗಿಸಿದ್ದಾನೆ. ನಮಗೆ ಲಭ್ಯವಿರುವ ದೇವರು ನೀಡಿರುವ  ಬೆಂಬಲ ವ್ಯವಸ್ಥೆಗಳಲ್ಲಿ ದೈವಿಕ ಸ್ನೇಹಿತರೂ ಕೂಡ ಒಂದು. ನೀವು ಜೀವನದಲ್ಲಿ ಇರಿಸಿಕೊಳ್ಳುವ ಸ್ನೇಹಿತರ ಬಗ್ಗೆ ಉದ್ದೇಶಪೂರ್ವಕವಾಗಿರುವುದು ಬಹಳ ಮುಖ್ಯ. ನೀವು ಪರಿಚಯ ಆಗುವ ಪ್ರತಿಯೊಬ್ಬರೊಡನೆಯೂ ನೀವು ಸ್ನೇಹ ಬೆಳೆಸಬೇಕಿಲ್ಲ. ನಿಮ್ಮ ಉತ್ಸಾಹ , ಗುರಿಗಳು ಅಥವಾ ಕನಸುಗಳೊಂದಿಗೆ ಹೊಂದಿಕೊಳ್ಳುವ, ಅವುಗಳನ್ನೇ ಗುರಿಯಾಗಿಟ್ಟು ಕೊಳ್ಳುವ ಬಯಕೆಯೊಂದಿಗೆ ಉದ್ದೇಶಪೂರ್ವಕ ಸ್ನೇಹ ಬರುತ್ತದೆ. ಇಲ್ಲದಿದ್ದರೆ, ನೀವು ಸಹವಾಸ ಮಾಡುವ ಜನರಿಂದ ನೋವನ್ನು ಅನುಭವಿಸಬಹುದು  ಮತ್ತು, ಖಂಡಿತವಾಗಿಯೂ, ದೇವರು ನೀವು ನೊಂದುಕೊಳ್ಳುವುದನ್ನು  ನೋಡಲು ಬಯಸುವುದಿಲ್ಲ, ಏಕೆಂದರೆ ಆತನು ಯಾವಾಗಲೂ ತನ್ನ ಮಕ್ಕಳಿಗೆ ಉತ್ತಮವಾದದ್ದನ್ನೇ  ಬಯಸುಸುವವನಾಗಿದ್ದಾನೆ. 

ದೇವರಿಂದ  ಪ್ರಬಲವಾಗಿ ಉಪಯೋಗಿಸಲ್ಪಟ್ಟ ಮಹಿಳೆ ಒಮ್ಮೆ ಹೀಗೆ  ಹೇಳಿದರು, "ನಿಮ್ಮನ್ನು ಬೆಂಬಲಿಸಲು ಸರಿಯಾದ ಜನರು ನಿಮ್ಮ ಸುತ್ತಲೂ ಇದ್ದಾಗ ಏನು ಬೇಕಾದರೂ ನೀವು ಮಾಡಲು  ಸಾಧ್ಯವಾಗುತ್ತದೆ."

ಎಸ್ತೇರಳ ಪುಸ್ತಕದಲ್ಲಿರುವ ಹಾಮಾನನ ವೃತ್ತಾಂತವು ನಮಗೆ ಬಹಳಷ್ಟು ಹೇಳುತ್ತದೆ. ಹಾಮಾನನು ಯೆಹೂದ್ಯರ ಶತ್ರುವಾಗಿದ್ದು  ಅವರನ್ನು ಕೊಲ್ಲಲು ಮಾರ್ಗಗಳನ್ನು ಹುಡುಕುತ್ತಿದ್ದನು. ಇತರ ಯಹೂದಿಗಳೊಂದಿಗೆ ಸೆರೆಯಲ್ಲಿ ಒಯ್ಯಲ್ಪಟ್ಟ ಯಹೂದಿ ಮೊರ್ದೆಕೈಯನ್ನು ಅವನು ದ್ವೇಷಿಸುತ್ತಿದ್ದನು. ಒಂದು ದಿನ ಹಾಮಾನನನ್ನು ರಾಜನ ಔತಣಕ್ಕೆ ಆಹ್ವಾನಿಸಲಾಯಿತು ಮತ್ತು ಅದರ ಬಗ್ಗೆ ಅವನು ತನ್ನ  ಹೆಂಡತಿ ಮತ್ತು ಸ್ನೇಹಿತರಿಗೆ ತಿಳಿಸಿದನು. ಅವನು  ಮೊರ್ದೆಕೈ ಜೊತೆ ಅವನಿಗಾದ ಮಾತಿನ ಸಂಘರ್ಷದ ಕುರಿತು ಅವರೊಂದಿಗೆ ಕೆಟ್ಟದಾಗಿ ಉಲ್ಲೇಖಿಸಿದ. ಆಗ ಹಾಮಾನನ ಹೆಂಡತಿ ಮತ್ತು ಅವನ  ಸ್ನೇಹಿತರು ಕೊಟ್ಟ ಸಲಹೆ ಏನು ಗೊತ್ತಾ?
 
"ಅದಕ್ಕೆ ಅವನು ಪತ್ನಿಯಾದ ಜೆರೆಷಳೂ ಅವನ ಎಲ್ಲಾ ಆಪ್ತರೂ - ಐವತ್ತು ಮೊಳ ಎತ್ತರವಾದ ಒಂದು ಗಲ್ಲುಮರವನ್ನು ಸಿದ್ಧಮಾಡಿಸಿ ನಾಳೆ ಅರಸನ ಅಪ್ಪಣೆಯನ್ನು ಪಡಕೊಂಡು ಮೊರ್ದೆಕೈಯನ್ನು ಅದಕ್ಕೆ ನೇತುಹಾಕಿಸಬೇಕು; ಆಮೇಲೆ ನೀನು ಸಂತೋಷದಿಂದ ಅರಸನ ಜೊತೆಯಲ್ಲಿ ಔತಣಕ್ಕೆ ಹೋಗಬಹುದು ಎಂದು ಹೇಳಿದರು. ಹಾಮಾನನು ಈ ಮಾತಿಗೆ ಮೆಚ್ಚಿ ಗಲ್ಲುಮರವನ್ನು ಸಿದ್ಧಮಾಡಿಸಿದನು." ಎಸ್ತೇರಳು 5:14 ನಮಗೆ ಹೇಳುತ್ತದೆ.

ಹಾಮಾನನು ದೈವಿಕ ಸ್ನೇಹಿತರನ್ನು ಹೊಂದಿದ್ದರೆ ಏನಾಗಿರುತಿತ್ತು ಊಹಿಸಿ; ಅಂತಹ ಕ್ರೂರ ಮಾತುಗಳು ಅವರ ಬಾಯಿಂದ ಹೊರಡುತ್ತಿದ್ದವೇ? 

"ಮೋಸ ಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ." ಎಂದು ಸತ್ಯವೇದ ನಮ್ಮನ್ನು ಎಚ್ಚರಿಸುತ್ತದೆ, "(1 ಕೊರಿಂಥ 15:33) 

ದೇವರೊಂದಿಗೆ ನಡೆಯುವಾಗ ನೀವು  ದೈವಿಕ ಸ್ನೇಹಿತರನ್ನು ಹೊಂದಿರುವಂತದ್ದು ಅಗತ್ಯವಾಗಿದೆ. ನೀವು ತುಂಬಾ ದಣಿದುಹೋದಾಗ  ಮತ್ತು ಕುಗ್ಗಿ ಹೋಗಿದ್ದೇನೆ  ಎಂದು ಭಾವಿಸುವಾಗ, ನಿಮಗಾಗಿ ಪ್ರಾರ್ಥಿಸಲು ನೀವು ಯಾರನ್ನಾದರೂ ಹೊಂದಿದ್ದೀರಾ? ನೀವು ಎಲ್ಲರೊಂದಿಗೆ ಪ್ರೀತಿಯಿಂದ ಇರಬಹುದು ಮತ್ತು ಎಲ್ಲರೊಡನೆ ನಗಬಹುದು ಮತ್ತು ತಮಾಷೆ ಮಾಡಬಹುದು, ನಿಮ್ಮ ಆಲೋಚನೆಗಳನ್ನು ಮುಕ್ತವಾಗಿ ಚರ್ಚಿಸಲು ಮತ್ತು ಹಂಚಿಕೊಳ್ಳಲು ನಿಮಗೆಸೂಕ್ತವಾದ ಒಬ್ಬರು ನಿಮಗಾಗಿ  ಬೇಕು ಎಂಬುದನ್ನು ಅರ್ಥಮಾಡಿಕೊಳ್ಳಿ.  ತೈಲವೂ ಸುಗಂಧದ್ರವ್ಯಗಳೂ ಹೇಗೋ ವಿುತ್ರನ ಸಂಭಾಷಣೆಯಿಂದ ಅನುಭವಕ್ಕೆ ಬರುವ ಸ್ನೇಹರಸವು ಹಾಗೆ ಮನೋಹರ"ಎಂದು ಜ್ಞಾನೋಕ್ತಿ 27:9 ಹೇಳುತ್ತದೆ.

ನಿಮ್ಮ ಕಾರ್ಯಗಳನ್ನು ಯಾರಾದರೂ ಪ್ರಾಮಾಣಿಕವಾಗಿ ಮತ್ತು ಅಂತಿಮವಾಗಿ ದೇವರ ವಾಕ್ಯದ ಮಸೂರದಿಂದ ನಿರ್ಣಯಿಸುವ ಸ್ನೇಹಿತರನ್ನು ನೀವು ಬಯಸಬೇಕು. ಸತ್ಯವು ಕಹಿಯಾಗಿ ತೋರಿದರೂ , ಪ್ರೀತಿಯಲ್ಲಿ ಸತ್ಯವನ್ನು ಹೇಳುವ ಮೂಲಕ ಅದನ್ನು ನಿಮ್ಮ ಕಿವಿಗೆ ಮುಟ್ಟಿಸುವ ವ್ಯಕ್ತಿಯನ್ನು ನೀವು ಬಯಸಿರಿ. ನಿಮ್ಮ ಜೀವನದ ಮೇಲೆ  ಧನಾತ್ಮಕವಾಗಿ ಪರಿಣಾಮ ಬೀರುವ ಉತ್ತಮ ಸಲಹೆ ಮತ್ತು ಮಾತುಗಳು ನಿಮಗೆ ಬೇಕು. ಅನನೀಯನ ಹೆಂಡತಿ ಒಂದು ವೇಳೆ  ಒಳ್ಳೆಯ ಸಲಹೆ ನೀಡಿದ್ದರೆ, ಅನನೀಯನು ತನ್ನ ಮನಸ್ಸನ್ನು ಬದಲಾಯಿಸುವ ಸಾಧ್ಯತೆಯಿದ್ದು  ಮಾರಾಟ ಮಾಡಿದ ಭೂಮಿಯಿಂದ ಬಂದ ಆದಾಯದ ಬಗ್ಗೆ ಸುಳ್ಳು ಹೇಳುತ್ತಿರಲಿಲ್ಲ. ಆದರೆ ಕೆಟ್ಟದ್ದನ್ನು ಮಾಡಲು ಅವರು ಇಬ್ಬರೂ ಒಂದಾದರು.

ಆದ್ದರಿಂದ, ಜೀವನದ ಹಾದಿಯಲ್ಲಿ ನಡೆಯುವಾಗ, ನಿಮಗೆ ಆತ್ಮಭರಿತ  ಸ್ನೇಹಗಳು ಬೇಕಾಗುತ್ತವೆ, ಅದು  ನಿಮ್ಮನ್ನು ಮರಳಿ ಟ್ರ್ಯಾಕ್‌ಗೆ ತಂದು  ನಿಮ್ಮನ್ನು ನಿರಂತರವಾಗಿ ಸರಿಯಾದ ಹಾದಿಯಲ್ಲಿ ಇರಿಸುತ್ತದೆ. 

Bible Reading: Numbers 31-32
Prayer
ತಂದೆಯೇ,  ನನ್ನ ಮಾತನ್ನು ಕೇಳಲು ಯಾವಾಗಲೂ ನೀನು ಇರುವುದಕ್ಕಾಗಿ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. ದೈವಿಕ ಸ್ನೇಹಿತರು ನಿರಂತರವಾಗಿ ನನ್ನ ದಾರಿಯಲ್ಲಿ ನೀನು ಕರೆತರಬೇಕೆಂದು ನಾನು ಪ್ರಾರ್ಥಿಸುತ್ತೇನೆ. ನನ್ನ ಮಾರ್ಗವು ನಿನ್ನ  ಮಾರ್ಗಗಳೊಂದಿಗೆ ಹೊಂದಿಸುವಂತ  ಜನರನ್ನು ನನ್ನೊಂದಿಗೆ ಸೇರಿಸಬೇಕೆಂದು  ನಾನು ಯೇಸುವಿನ ಬಲವಾದ ನಾಮದಲ್ಲಿ ಬೇಡುತ್ತೇನೆ . ಆಮೆನ್.


Join our WhatsApp Channel


Most Read
● ದೂರದಿಂದ ಹಿಂಬಾಲಿಸುವುದು
● ಕರ್ತನನ್ನು ಮೆಚ್ಚಿಸಲಿರುವ ಖಚಿತವಾದ ಮಾರ್ಗ.
● ಎದುರಾಗುವ ವಿರೋಧಗಳನ್ನು ನಂಬಿಕೆಯಿಂದ ಎದುರಿಸುವುದು.
● ಅಶ್ಲೀಲತೆಯಿಂದ ಬಿಡುಗಡೆ ಕಡೆಗಿನ ಪಯಣ
● ನೋವಿನಲ್ಲೂ ದೇವರಿಗೆ ಒಡಂಬಟ್ಟು ನಡೆಯುವುದನ್ನು ಕಲಿಯುವುದು
● ಸಮಾಧಾನದ ಮೂಲ :ಕರ್ತನಾದ ಯೇಸು
● ಪುರುಷರು ಏಕೆ ಪತನಗೊಳ್ಳುವರು -3
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login