हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಭೂಮಿಗೆ ಉಪ್ಪಾಗಿದ್ದೀರಿ
Daily Manna

ಭೂಮಿಗೆ ಉಪ್ಪಾಗಿದ್ದೀರಿ

Saturday, 12th of April 2025
2 1 109
Categories : ಆಧ್ಯಾತ್ಮಿಕ ನಡಿಗೆ (Spiritual Walk)
ಉಪ್ಪು ಹೆಚ್ಚಿನ ಊಟಗಳಲ್ಲಿ ಬಳಸುವ  ಪ್ರಮುಖವಾದ ಸಾಮಗ್ರಿಯಾಗಿದೆ.  ಇದು ಆಹಾರದ ರುಚಿಯನ್ನು ಹೆಚ್ಚಿಸುವಂತದ್ದಾಗಿದೆ  ಪದಾರ್ಥಗಳಲ್ಲಿ ಅತ್ಯುತ್ತಮವಾದದ್ದನ್ನು ಹೊರತಂದು ಅಂತಿಮವಾಗಿ ಆಹಾರವನ್ನು ಹೆಚ್ಚು ಆನಂದದಾಯಕವಾಗಿಸುತ್ತದೆ. ಆದರೆ ನೀವು ರೆಸ್ಟೋರೆಂಟ್‌ಗೆ ಹೋದಾಗ ಅವರು ಉಪ್ಪಿಲ್ಲದ ಊಟವನ್ನು ನೀಡಿದರೆ ಏನು ಮಾಡುತ್ತೀರಿ ? ನಿಮಗೆ ಖಂಡಿತವಾಗಿಯೂ ಏನೋ ಕಾಣೆಯಾಗಿದೆ ಎಂದು ಅನಿಸುತ್ತದೆ ಮತ್ತು ಆ ಊಟವು ನಿಮ್ಮಲ್ಲಿ  ಅಸಂತೃಪ್ತಿ ಮೂಡಿಸುತ್ತದೆ.

ನೀವು ಭೂಮಿಗೆ ಉಪ್ಪಾಗಿದ್ದೀರಿ" (ಮತ್ತಾಯ 5:13) ಎನ್ನುವಂತದ್ದು ಯೇಸು ತನ್ನ ಶಿಷ್ಯರು ಹೇಗಿರುತ್ತಾರೆ ಎಂದು  ವಿವರಿಸಲು ಬಳಸಿದ ಸಾದೃಶ್ಯ ಇದು. ಅಂದರೆ  ನಾವು ಉಪ್ಪಿನಂತೆ 'ಆಗಬೇಕು' ಅಥವಾ ಉಪ್ಪಿನಂತೆ ಆಗಲು ಪ್ರಯತ್ನಿಸಬೇಕು ಎಂದು ಯೇಸು ಹೇಳಲಿಲ್ಲ. ಬದಲಾಗಿ ಆತನು  'ನೀವು ಭೂಮಿಗೆ ಉಪ್ಪಾಗಿದ್ದೀರಿ' ಎಂದು ಸರಳವಾಗಿ ಹೇಳಿದನು.

ಮತ್ತೊಂದು ಕುತೂಹಲಕಾರಿ ಭಾಗವೆಂದರೆ ಭೂಮಿಯಲ್ಲಿ ಅನೇಕ ಅಮೂಲ್ಯ ವಸ್ತುಗಳು - ಚಿನ್ನ, ವಜ್ರಗಳು, ಮಾಣಿಕ್ಯಗಳು, ಇತ್ಯಾದಿ ಇದ್ದರೂ - ಯೇಸು ತನ್ನ ಶಿಷ್ಯರನ್ನು  ವಜ್ರ ಅಥವಾ ಮಾಣಿಕ್ಯ ಎಂದು ಯಾರಿಗೂ ಎಂದಿಗೂ ಹೇಳಲಿಲ್ಲ. ಆತ ನಮ್ಮನ್ನು ಉಪ್ಪಿಗೆ ಹೋಲಿಸಿದನು. ಹಾಗೆ ಹೇಳುವಾಗ, ಹೇಗೆ ಉಪ್ಪು ಊಟದಲ್ಲಿ ರುಚಿಯನ್ನು ಹೆಚ್ಚಿಸುವ ಕಾರ್ಯ ಮಾಡುತ್ತದೆಯೋ, ಹಾಗೆ ನಾವು ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ವರ್ಧಿಸುವ, ಅದರ ಮೇಲೆ ಪ್ರಭಾವ ಬೀರುವ,ಅದನ್ನು  ಬದಲಾಯಿಸುವ ಮತ್ತು ಪ್ರಭಾವ ಬೀರುವ ಸಾಮರ್ಥ್ಯ ನಮಗಿದೆ ಎಂದು ಆತನು ಒತ್ತಿ ಹೇಳುತ್ತಿದ್ದನು.

ಸತ್ಯವೇದದಲ್ಲಿ 'ಉಪ್ಪು' ಎನ್ನುವ ಪದವನ್ನು  ಹಲವಾರು ಬಾರಿ ಉಲ್ಲೇಖಿಸಲಾಗಿದೆ ಮತ್ತು ಪ್ರತಿ ಬಾರಿಯೂ ಅದು ಈ ಸರಳ ಖನಿಜದಲ್ಲಿರುವ  ಮೌಲ್ಯವನ್ನೂ ಮತ್ತು ಮಹತ್ವವನ್ನು ಎತ್ತಿ ತೋರಿಸುತ್ತದೆ. ಯಾಜಕಕಾಂಡ 2:13 ರಲ್ಲಿ, ದೇವರು ಇಸ್ರಾಯೇಲ್ಯರಿಗೆ "ಎಲ್ಲಾ ನೈವೇದ್ಯ ಪದಾರ್ಥಗಳಿಗೂ ಉಪ್ಪುಹಾಕಿ ಸಮರ್ಪಿಸಬೇಕು. ಉಪ್ಪು ಯೆಹೋವನ ಸಂಗಡ ನಿಮಗಿರುವ ಒಡಂಬಡಿಕೆಯನ್ನು ಸೂಚಿಸುವದರಿಂದ ಅದು ಯಾವ ನೈವೇದ್ಯದ್ರವ್ಯವಾದರೂ ಉಪ್ಪಿಲ್ಲದೆ ಇರಬಾರದು. ನೀವು ಅರ್ಪಿಸುವ ಎಲ್ಲಾ ಪದಾರ್ಥಗಳಲ್ಲಿಯೂ ಉಪ್ಪು ಸೇರೇ ಇರಬೇಕು." ಎಂದು ಆಜ್ಞಾಪಿಸುತ್ತಾನೆ. ಈ ಉಪ್ಪಿನ ಒಡಂಬಡಿಕೆಯು ದೇವರು ಮತ್ತು ಆತನ ಜನರ ನಡುವಿನ ಶಾಶ್ವತ ಒಪ್ಪಂದವನ್ನು ಸಂಕೇತಿಸುತ್ತದೆ. 

ಯೋಬನ ಪುಸ್ತಕದಲ್ಲಿ, ಉಪ್ಪನ್ನು ಬುದ್ಧಿವಂತಿಕೆ ಮತ್ತು ತಿಳುವಳಿಕೆಯಂತೆಯೇ ಅಮೂಲ್ಯವಾದ ಸರಕು ಎಂದು ವಿವರಿಸಲಾಗಿದೆ. "ರುಚಿಯಿಲ್ಲದ ವಸ್ತುವನ್ನು ಉಪ್ಪಿಲ್ಲದೆ ತಿನ್ನಬಹುದೇ? ಅಥವಾ ಮೊಟ್ಟೆಯ ಬಿಳಿ ಭಾಗದಲ್ಲಿ ಯಾವುದೇ ರುಚಿ ಇದೆಯೇ? 
ಇಂಥಾ ಆಹಾರವು ನನಗೆ ಅಸಹ್ಯವಾಗಿದೆ; ಮುಟ್ಟಲಾರೆನು.
ಮುಟ್ಟಲು ಕೂಡ ನನಗೆ ಇಷ್ಟವಾಗಲಿಲ್ಲ, ಅಂಥ ಆಹಾರವು ನನಗೆ ಬೇಸರ. 
“ದೇವರು ನನ್ನ ವಿಜ್ಞಾಪನೆಯನ್ನು ಲಾಲಿಸಿದರೆ ಸಾಕು, ನಾನು ನಿರೀಕ್ಷಿಸಿದ್ದನ್ನು ದೇವರು ಕೊಟ್ಟರೆ ಲೇಸು. 
 ನನ್ನನ್ನು ಜಜ್ಜುವುದು ದೇವರಿಗೆ ಮೆಚ್ಚಿಗೆಯಾದರೆ, ದೇವರು ತನ್ನ  ಕೈಚಾಚಿ ನನ್ನ ಪ್ರಾಣವನ್ನು ತೆಗೆದುಕೊಳ್ಳಲಿ. 

ಹಾಗಿದ್ದರೆ, ಇದು ನನಗೆ ಆದರಣೆಯಾಗಿರುವುದು; ಪರಿಶುದ್ಧ ದೇವರ ಮಾತುಗಳನ್ನು ನನ್ನ ಅತ್ಯಂತ ಯಾತನೆಯಲ್ಲಿಯೂ ನಾನು ನಿರಾಕರಿಸಲಿಲ್ಲ; ಇದರಿಂದ ಬರುವ ಆನಂದವು ನನಗೆ ಇನ್ನೂ ಇರುವುದು.(ಯೋಬ 6:6-10). 

ಹೊಸ ಒಡಂಬಡಿಕೆಯು ಉಪ್ಪಿನ ಕುರಿತು ಮತ್ತು ಹೇಗೆ  ಅದು ಕ್ರೈಸ್ತರ ಜೀವನದ ಅತ್ಯಗತ್ಯ ಭಾಗವಾಗಿದೆ ಎಂಬುದರ ಕುರಿತೂ ಮಾತನಾಡುತ್ತದೆ. ಕೊಲೊಸ್ಸೆಯವರಿಗೆ 4:6 ರಲ್ಲಿ, ಪೌಲನು ತನ್ನ ಪತ್ರಿಕೆಯಲ್ಲಿ "ನಿಮ್ಮ  ಸಂಭಾಷಣೆ ಯಾವಾಗಲೂ ಪೂರ್ಣ ಕೃಪೆಯುಳ್ಳದ್ದೂ, ಉಪ್ಪಿನಿಂದ ಹದವುಳ್ಳದ್ದೂ ಆಗಿರಲಿ. ಹೀಗೆ ನೀವು ಪ್ರತಿಯೊಬ್ಬರಿಗೂ ಹೇಗೆ ಉತ್ತರಕೊಡಬೇಕು ಎಂಬುದನ್ನು ತಿಳಿದುಕೊಳ್ಳುವಿರಿ " ಎಂದು ಬರೆಯುತ್ತಾನೆ.ಇಲ್ಲಿ, ಉಪ್ಪನ್ನು ಕ್ರೈಸ್ತರು ತಮ್ಮ ಮಾತುಗಳಲ್ಲಿರುವ  ಅತ್ಯುತ್ತಮವಾದದ್ದನ್ನು ಹೊರತಂದು ಪರಿಣಾಮಕಾರಿಯಾಗಿ ಸಂವಹನ ನಡೆಸಲು ಸಹಾಯ ಮಾಡುವ ಏಜೆಂಟ್ ಆಗಿ ಕಂಡುಬರುತ್ತದೆ.

ಹಾಗಾದರೆ ಭೂಮಿಗೆ  ಉಪ್ಪಾಗಿರುವುದು ಎಂದರೇನು? 

ಹಾಗೆಂದರೆ  ನಾವು ಜನರಲ್ಲಿರುವ  ಅತ್ಯುತ್ತಮವಾದದ್ದನ್ನು ಹೊರತರುವ, ಅವರ ಜೀವನವನ್ನು ಉನ್ನತ ಪಡಿಸುವ ಮತ್ತು ದೇವರೊಂದಿಗೆ  ಉಪ್ಪಿನ ಒಡಂಬಡಿಕೆ ಮೂಲಕ ಶಾಶ್ವತ ಸಂಬಂಧವನ್ನು ಹೊಂದಿಸುವ  ಸಾಮರ್ಥ್ಯವನ್ನು ಹೊಂದಿದ್ದೇವೆ.

ಉಪ್ಪು ಊಟದಲ್ಲಿ ಯಾವ ಕಾರ್ಯ ಮಾಡುತ್ತದೆಯೋ, ಅದೇ ರೀತಿ ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಒಳ್ಳೆಯದಕ್ಕಾಗಿ ಪ್ರಭಾವಿಸುವ, ಬದಲಾಯಿಸುವ ಮತ್ತು ಪ್ರಭಾವಿಸುವ ಜವಾಬ್ದಾರಿ ನಮಗಿದೆ. 

ಸಾಮಾನ್ಯವಾಗಿ ಕತ್ತಲೆಯಾಗಿರುವ ಮತ್ತು ಸಂಚರಿಸಲು ಕಷ್ಟಕರವಾದ ಈ ಜಗತ್ತಿನಲ್ಲಿ ನಾವು ಹೊಳೆಯುವ ಬೆಳಕಾಗಿರಬೇಕು. ಕ್ರಿಸ್ತನ ಅನುಯಾಯಿಗಳಾಗಿ, ನಾವು ಲೋಕದಿಂದ ಭಿನ್ನವಾಗಿರಲು ಕರೆಯಲ್ಪಟ್ಟಿದ್ದೇವೆ. ಈ ಭೂಮಿಯಲ್ಲಿ ಎಲ್ಲೆಡೆ  ಉಳಿದಿರುವುದು ಮರಳು ಮಾತ್ರ ವಾಗಿರುವಾಗ ನಾವು ಬಂಡೆಯ ಮೇಲೆ ಇರುವ  ಮನೆಯಾಗಿರಬೇಕು. ದೇವರನ್ನು ಅರಿಯದ ಜನರಿಗೆ ನಾವು ಆಶ್ರಯವಾಗಿರಬೇಕು. 

"ದಂಡದಂತಿದ್ದ ಒಂದು ಅಳತೆ ಕೋಲು ನನಗೆ ಕೊಡಲಾಯಿತು. ನನಗೆ ಹೀಗೆ ಹೇಳಲಾಯಿತು: “ನೀನೆದ್ದು ದೇವರ ಆಲಯವನ್ನೂ ಬಲಿಪೀಠವನ್ನೂ ಅಳತೆಮಾಡಿ, ಆಲಯದಲ್ಲಿ ಆರಾಧನೆ ಮಾಡುವವರನ್ನು ಎಣಿಸು.  ಆಲಯಕ್ಕೆ ಹೊರಗಿರುವ ಅಂಗಳವನ್ನು ಅಳೆಯದೆ ಬಿಟ್ಟುಬಿಡು. ಏಕೆಂದರೆ ಅದು ಯೆಹೂದ್ಯರಲ್ಲದವರಿಗಾಗಿ ಬಿಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು ನಲವತ್ತೆರಡು ತಿಂಗಳು ತುಳಿದಾಡುವರು."(ಪ್ರಕಟನೆ 11:1-2)" 

“ನೀವು ಭೂಮಿಗೆ ಉಪ್ಪಾಗಿದ್ದೀರಿ. ಉಪ್ಪು ಸಪ್ಪಗಾದರೆ, ಅದಕ್ಕೆ ಉಪ್ಪಿನ ರುಚಿ ಹೇಗೆ ಬಂದೀತು? ಅದು ಹೊರಗೆ ಹಾಕಿ ತುಳಿಯುವುದಕ್ಕೆ ಯೋಗ್ಯವೇ ಹೊರತು ಬೇರೆ ಯಾವ ಕೆಲಸಕ್ಕೂ ಬರುವುದಿಲ್ಲ. (ಮತ್ತಾಯ 5:13)

ಇದು ಪ್ರಕಟನೆಯಲ್ಲಿನ ಮೇಲಿನ ಪ್ರವಾದನೆಗೆ ಹೋಲುತ್ತದೆ. ಅಲ್ಲಿ ಅನ್ಯಜನರು ಪವಿತ್ರ ನಗರವನ್ನು ನಲವತ್ತೆರಡು ತಿಂಗಳುಗಳ ಕಾಲ ತುಳಿಯುತ್ತಾರೆ. ದೇವಾಲಯದ ಹೊರಗಿನ ಅಂಗಳವನ್ನು ಅನ್ಯಜನರ ಕಾಲ ಕೆಳಗೆ ತುಳಿಯಲು ಹೇಗೆ ಕೊಡಲಾಗಿದೆಯೋ ಹಾಗೆಯೇ, ಕ್ರಿಸ್ತನ ಅನುಯಾಯಿಗಳಾಗಿ ನಾವು ನಮ್ಮ ಉಪ್ಪಿನಂಶವನ್ನು ಕಳೆದುಕೊಂಡು ಲೋಕಕ್ಕೆ ರುಚಿ ಮತ್ತು ಪ್ರಭಾವವನ್ನು ತರಲು ವಿಫಲವಾದರೆ, ನಾವೂ ಸಹ ಎಲ್ಲರಿಂದ ತುಳಿಯಲ್ಪಟ್ಟು ಮರೆತುಹೋಗಬಹುದು.

Bible Reading: 1 Samuel 31, 2 Samuel 1-2
Confession
ನಾನು ಭೂಮಿಗೆ ಉಪ್ಪಾಗಿದ್ದೇನೆ. ನಾನು ಸಂಪರ್ಕಿಸುವ ಪ್ರತಿಯೊಬ್ಬರೂ ಕರ್ತನಾದ ಯೇಸು ಕ್ರಿಸ್ತನ ಮಹಿಮೆಗಾಗಿ ಯೇಸುನಾಮದಲ್ಲಿ  ಸಕಾರಾತ್ಮಕವಾಗಿ ಪ್ರಭಾವಿತರಾಗುತ್ತಾರೆ. ಆಮೆನ್. 

Join our WhatsApp Channel


Most Read
● ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು : ಭಾಗ 2
● ಸಿಟ್ಟಿನ ಬಲೆಯಿಂದ ದೂರ ಉಳಿಯುವುದು
● ಅದು ನಿಮಗೆ ಮುಖ್ಯವಾದ್ದದಾದರೆ, ಅದು ದೇವರಿಗೂ ಮುಖ್ಯವೇ.
● ನೀವು ಪ್ರಾರ್ಥಿಸುವಿರಿ ಆತನು ನಿಮಗೆ ಕಿವಿಗೊಡುವನು
● ದೇವರು ಹೇಗೆ ಒದಗಿಸುತ್ತಾನೆ #2
● ಆತ್ಮೀಕ ಚಾರಣ
● ನಂಬಿಕೆ- ನಿರೀಕ್ಷೆ -ಪ್ರೀತಿ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login