हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಆತನ ಆವರ್ತನಕ್ಕೆ ಅನುಗುಣವಾಗಿ ನಮ್ಮನ್ನು ಹೊಂದಿಸಿಕೊಳ್ಳುವುದು.
Daily Manna

ಆತನ ಆವರ್ತನಕ್ಕೆ ಅನುಗುಣವಾಗಿ ನಮ್ಮನ್ನು ಹೊಂದಿಸಿಕೊಳ್ಳುವುದು.

Sunday, 4th of May 2025
1 0 107
Categories : ದೇವರ ಉಪಸ್ಥಿತಿ (Presence of God) ದೇವರೊಂದಿಗೆ ಆತ್ಮೀಯತೆ (Intimacy with God)
ಒಂದು ದಿನ ಒಂದು ಪ್ರವಾದನೆಯ ಸೇವೆಯ ನಂತರ, ಕೆಲವು ಯುವಕರು ನನ್ನ ಬಳಿಗೆ ಬಂದು, "ನಾವು ದೇವರ ಧ್ವನಿಯನ್ನು ನಮಗಾಗಿ ಎಷ್ಟು  ಸ್ಪಷ್ಟವಾಗಿ ಕೇಳಬಹುದು?" ಎಂದು ಕೇಳಿದರು. ಆ ಸೇವೆಯಲ್ಲಿರಲು ಅವರು ಎಷ್ಟು ಮೈಲುಗಳಷ್ಟು ದೂರ ಓಡಿದ್ದರು, ಮತ್ತು ಇದು ಕೇವಲ ಸಾಂದರ್ಭಿಕ ಪ್ರಶ್ನೆಯಾಗಿರಲಿಲ್ಲ ಎಂಬುದನ್ನು ನಾನು ಗ್ರಹಿಸಬಲ್ಲೆ. ಅವರು ನಿಜವಾಗಿಯೂ ದೇವರಿಗಾಗಿ ದಾಹಾವುಳ್ಳವರಾಗಿದ್ದರು. 

ದೇವರು ಆಯ್ದುಕೊಂಡ ಕೆಲವರೊಂದಿಗೆ ಮಾತ್ರವೇ  ಸಂವಹನ ನಡೆಸುತ್ತಾನೆ ಎಂಬುದು ಒಂದು ಸಾಮಾನ್ಯವಾಗಿರುವ  ತಪ್ಪು ಕಲ್ಪನೆ. ಅದು ನಿಜವಲ್ಲ. ದೇವರು ಎಲ್ಲರೊಂದಿಗೂ  ಮಾತನಾಡುತ್ತಾನೆ. ಆತನು ಎಲ್ಲರ  ಎಲ್ಲದರ ದೇವರಾಗಿದ್ದು  ಮತ್ತು ಎಲ್ಲಕ್ಕಿಂತ ಉನ್ನತನಾದವನು ಎಂಬ ಅಂಶವನ್ನು ಇದು ಸಾಬೀತುಪಡಿಸುತ್ತದೆ. ಆತನು ಫರೋಹನೊಂದಿಗೆ ಮಾತನಾಡಿದನು. ಯೋನನನ್ನು ನುಂಗಿದ ತಿಮಿಂಗಿಲದೊಂದಿಗೆ ಮಾತನಾಡಿದನು. ದೇವರು ಯಾವಾಗಲೂ ಮಾತನಾಡುತ್ತಿರುತ್ತಾನೆ. 

ದೇವರು ಎಲ್ಲರೊಂದಿಗೆ ಮಾತನಾಡುತ್ತಿದ್ದರೆ, ನಾವು ದೇವರ ಧ್ವನಿಯನ್ನು ಏಕೆ ಕೇಳಲು ಸಾಧ್ಯವಾಗುತ್ತಿಲ್ಲ? ತಿಮಿಂಗಿಲಗಳು, ಭವ್ಯವಾದ  ಮತ್ತು ಬುದ್ಧಿಯುಳ್ಳ  ಸಮುದ್ರ ಸಸ್ತನಿಗಳಾಗಿ, ಅವುಗಳ ಬಲವಾದ ಸಾಮಾಜಿಕ ಅನುಬಂಧಗಳು ಮತ್ತು ಸಂಕೀರ್ಣವಾದ  ಸಂವಹನ ವ್ಯವಸ್ಥೆಗಳಿಗೆ ಹೆಸರುವಾಸಿಯಾಗಿದೆ. ಅವು "ಪಾಡ್‌ಗಳು" ಎಂದು ಕರೆಯಲ್ಪಡುವ ನಿಕಟವಾಗಿ ಹೆಣೆದ ಗುಂಪುಗಳಲ್ಲಿ ಪ್ರಯಾಣಿಸುತ್ತವೆ, ಇದು ಕೆಲವೇ ತಿಮಿಂಗಿಲಗಳಾಗಿದ್ದಿರ ಬಹುದು ಇಲ್ಲವೇ ಹಲವಾರು  ಡಜನ್ ಸಂಖ್ಯೆಯಲ್ಲಿರಬಹುದು . ಈ ಪಾಡ್‌ಗಳು ಬೆಂಬಲ ಸಮುದಾಯಗಳಾಗಿ ಕಾರ್ಯನಿರ್ವಹಿಸುತ್ತವೆ, ಅಲ್ಲಿ ಅವು ಬೇಟೆಯಾಡಲು, ಪರಸ್ಪರ ಒಂದನ್ನೊಂದು ರಕ್ಷಿಸಲು ಮತ್ತು ತಮ್ಮ ಮರಿಗಳನ್ನು ಬೆಳೆಸಲು ಒಟ್ಟಿಗೆ ಕೆಲಸ ಮಾಡುತ್ತವೆ. 

ತಿಮಿಂಗಿಲಗಳು ತಮ್ಮ ಪಾಡ್‌ಗಳಲ್ಲಿ ಸಂವಹನ ನಡೆಸಲು ಮತ್ತು ಸಾಮಾಜಿಕವಾಗಿ ಸಂವಹನ ನಡೆಸಲು ವೈವಿಧ್ಯಮಯ ಧ್ವನಿಗಳನ್ನು ಬಳಸುತ್ತವೆ. ಕ್ಲಿಕ್‌ಗಳು, ಶಿಳ್ಳೆಗಳು ಮತ್ತು ಪಲ್ಸ್ ಕರೆಗಳು ಇವು ಅವು ಉತ್ಪಾದಿಸುವ ಮೂರು ಪ್ರಾಥಮಿಕ ರೀತಿಯ ಶಬ್ದಗಳಾಗಿವೆ. ನಮಗೆ ಅವು ಕೇವಲ ಶಬ್ದಗಳು ಆದರೆ ಗುಂಪಿನಲ್ಲಿರುವ ಮತ್ತೊಂದು ತಿಮಿಂಗಿಲಕ್ಕೆ ಅದುವೇ  ವಿಷಯವನ್ನು ಕೇಳಲು, ಅದು ಮಾತನಾಡಲು ; ಬಳಸುವ ಪರಸ್ಪರ ಸಂವಹನ ಮಾರ್ಗಗಳಾಗಿವೆ.

ನೀವು ಮತ್ತು ನಾನು ಸಂವಹನದಿಂದ  ವಂಚಿತರಾಗುವುಕ್ಕೂ  ಅಥವಾ ಸಂವಹನ ಮಾಡಲಾಗುತ್ತಿರುವುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿರುವದಕ್ಕೂ  ಮುಖ್ಯ ಕಾರಣ, ನಾವು ಆತನ ಕ್ಷೇತ್ರಕ್ಕೆ ಹೊಂದಿಕೊಳ್ಳದಿರುವುದಾಗಿದೆ. ನೀವು ಮತ್ತು ನಾನು ಆತನ ಕ್ಷೇತ್ರದ ಹೊರಗಿದ್ದೇವೆ ಮತ್ತು ಆದ್ದರಿಂದ ನಮಗೆ ಅವು ಕೇವಲ ಗ್ರಹಿಸಲಾಗದ ಶಬ್ದಗಲಾಗಿರುತ್ತವೆ  ಮತ್ತು ಆತನಿಗೆ ಅದು ಸಂವಹನವಾಗಿರುತ್ತದೆ. 

ಕರ್ತನಾದ ಯೇಸು ಕ್ರಿಸ್ತನು ತನ್ನ ಸುತ್ತಲಿನವರಿಗೆ ಪರಿಚಿತವಾಗಿರುವ ಸಾಮಾನ್ಯ ಭಾಷೆಯನ್ನು ಮಾತನಾಡುತ್ತಾ ಭೂಮಿಯ ಮೇಲೆ ನಡೆಯುವಾಗಲೂ, ಅನೇಕರು ಆತನ ಸಂದೇಶವನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳ ಅರ್ಥವನ್ನು ಗ್ರಹಿಸಲು ಹೆಣಗಾಡಿದರು. ಆತನು ಆ ಕಾಲದ ಶಾಲೆಗಳಲ್ಲಿ ಕಲಿಸಲಾಗುತ್ತಿದ್ದ ಅರಾಮಿಕ್ ಭಾಷೆಯನ್ನೇ  ಮಾತನಾಡುತ್ತಿದ್ದನು, ಆದರೂ  ಆತನು ತನ್ನ ಬೋಧನೆಗಳನ್ನು ಹಂಚಿಕೊಂಡಾಗ, ಅನೇಕರು ಗೊಂದಲಕ್ಕೊಳಗಾಗಿದ್ದರು. ಇದು ಏಕೆ ಸಂಭವಿಸಿತು? ಯೇಸುವಿನ ಮಾತುಗಳು ಆತ್ಮೀಕ ಅರ್ಥದಿಂದ ತುಂಬಿರತ್ತಿದ್ದವು ಮತ್ತು ಆತನ ಸಂದೇಶವನ್ನು ನಿಜವಾಗಿಯೂ ಗ್ರಹಿಸಲು ಆತ್ಮೀಕ ಕ್ಷೇತ್ರಕ್ಕೆ ಒಳಪಡುವಂತ ಅಗತ್ಯವಿತ್ತು. 
" ನೀವು ನನ್ನ ಮಾತನ್ನು ಗ್ರಹಿಸದೆ ಇರುವದಕ್ಕೆ ಕಾರಣವೇನು? ನನ್ನ ಬೋಧನೆಗೆ ಕಿವಿಗೊಡಲಾರದೆ ಇರುವದೇ ಕಾರಣ."ಎಂದು  ಯೋಹಾನ 8:43 ರಲ್ಲಿ ಯೇಸು ಹೇಳುತ್ತಾನೆ. ಆತ್ಮೀಕವಾಗಿ ಹೊಂದಿಕೊಳ್ಳದವರಿಗೆ ಆತನ ಬೋಧನೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅಪೊಸ್ತಲ ಪೌಲನು 1 ಕೊರಿಂಥ 2:14 ರಲ್ಲಿ ಇದನ್ನು ಮತ್ತಷ್ಟು ಒತ್ತಿಹೇಳುತ್ತಾ, " ಪ್ರಾಕೃತಮನುಷ್ಯನು ದೇವರಾತ್ಮನ ವಿಷಯಗಳನ್ನು ಬೇಡವೆನ್ನುತ್ತಾನೆ; ಅವು ಅವನಿಗೆ ಹುಚ್ಚುಮಾತಾಗಿ ತೋರುತ್ತವೆ; ಅವು ಆತ್ಮವಿಚಾರದಿಂದ ತಿಳಿಯ ತಕ್ಕವುಗಳಾಗಿರಲಾಗಿ ಅವನು ಅವುಗಳನ್ನು ಗ್ರಹಿಸಲಾರನು." ಎಂದು ಹೇಳುತ್ತಾನೆ. 

ಮತ್ತಾಯ 13:13 ರಲ್ಲಿರುವಂತೆ, ಆತ್ಮೀಕ ಸತ್ಯಗಳನ್ನು ವಿವರಿಸಲು ಕರ್ತನಾದ ಯೇಸು ಆಗಾಗ್ಗೆ ದೃಷ್ಟಾಂತಗಳಲ್ಲಿ ಮಾತನಾಡಿದ್ದಾನೆ: "ನಾನು ಅವರ ಸಂಗಡ ಸಾಮ್ಯರೂಪವಾಗಿ ಮಾತಾಡುವದಕ್ಕೆ ಕಾರಣವೇನಂದರೆ ಅವರಿಗೆ ಕಣ್ಣಿದ್ದರೂ ನೋಡುವದಿಲ್ಲ, ಕಿವಿಯಿದ್ದರೂ ಕೇಳುವದಿಲ್ಲ ಮತ್ತು ತಿಳುಕೊಳ್ಳುವದಿಲ್ಲ " ಆತನ ಬೋಧನೆಗಳು ಯಾವಾಗಲೂ ಒಬ್ಬ ವ್ಯಕ್ತಿಯು ಆತ್ಮದ ಕ್ಷೇತ್ರಕ್ಕೆ ಹೊಂದಿಕೊಳ್ಳಬೇಕೆಂದು ಬಯಸುತ್ತವೆ."ಬದುಕಿಸುವಂಥದು ಆತ್ಮವೇ; ಮಾಂಸವು ಯಾವದಕ್ಕೂ ಬರುವದಿಲ್ಲ. ನಾನು ನಿಮಗೆ ಹೇಳಿರುವ ಮಾತುಗಳೇ ಆತ್ಮವಾಗಿಯೂ ಜೀವವಾಗಿಯೂ ಅವೆ.  (ಯೋಹಾನ 6:63)

ಕರ್ತನಾದ ಯೇಸು ತನ್ನ ಮಾತುಗಳು ಆತ್ಮದಿಂದ ಕೂಡಿದ್ದು  ನೀವು ಆತ್ಮೀಕತೆಗೆ ಸಂವೇದನಾಶೀಲರಾಗುವವರೆಗೂ  ನೀವು ಅವುಗಳನ್ನು ಕೇಳಲು ಸಾಧ್ಯವಿಲ್ಲ ಎಂದು ಹೇಳಿದನು. ಅಲ್ಲಿಯವರೆಗೂ ಆತನು ನಿಮ್ಮೊಂದಿಗೆ ಮಾತನಾಡುವಾಗ ಅದು ತಿಮಿಂಗಿಲದ ಶಬ್ದಕ್ಕಿಂತ ಭಿನ್ನವಾಗಿರುವುದಿಲ್ಲ. ಅದು ಅರ್ಥಹೀನವಾಗಿರುತ್ತದೆ, ದೇವರು ಮಾತನಾಡುತ್ತಿದ್ದರೂ ಸಹ, ಅನೇಕರು ಇನ್ನೂ ಕತ್ತಲೆಯಲ್ಲಿ ತಡಕಾಡುತ್ತಿದ್ದಾರೆ. ನೀವು ಆ ಕ್ಷೇತ್ರದ ಹೊರಗೆ ಇರುವವರೆಗೆ ಅದು ಕೇವಲ ಶಬ್ದವಾಗಿರುತ್ತದೆ. 

ಆದ್ದರಿಂದ ಪಕ್ಕದಲ್ಲಿ ನಿಂತು ಅದನ್ನು ಕೇಳಿದ ಜನರು ಅದು ಗುಡುಗಿತು ಎಂದು ಹೇಳಿದರು. ಇತರರು, "ಒಬ್ಬ ದೇವದೂತನು ಅವನೊಂದಿಗೆ ಮಾತನಾಡಿದ್ದಾನೆ" ಎಂದು ಹೇಳಿದರು. (ಯೋಹಾನ 12:29)

 ಶಬ್ದವು ಗಾಳಿ ಅಥವಾ ಇನ್ನೊಂದು ಮಾಧ್ಯಮದ ಮೂಲಕ ಚಲಿಸುವ ಕಂಪನವಾಗಿದೆ, ಆದರೆ ಆ  ಶಬ್ದವು ಸಂದೇಶ ಮತ್ತು ಅರ್ಥವನ್ನು ಹೊಂದಿರುತ್ತದೆ. ಈ ಸಂದರ್ಭದಲ್ಲಿ, ದೈವಿಕ ಧ್ವನಿಯ ಶಬ್ದವು ದೇವರ ಶಕ್ತಿಯ ಭೌತಿಕ ಅಭಿವ್ಯಕ್ತಿಯನ್ನು ಪ್ರತಿನಿಧಿಸುತ್ತದೆ, ಆದರೆ ಧ್ವನಿಯು ಸ್ವತಃ ಸಂದೇಶವನ್ನು ಹೊಂದಿದ್ದು  ಆತನ ಪ್ರಸನ್ನತೆಯನ್ನು  ಹೊಂದಿರುತ್ತದೆ.

ಯೇಸು ಸ್ಪಷ್ಟವಾಗಿ ಧ್ವನಿಯನ್ನು ಕೇಳುವಾಗ  ಇತರರು ಕೇವಲ ಶಬ್ದವನ್ನು ಮಾತ್ರ ಕೇಳಿದರು ಎಂಬ ಅಂಶವು ದೈವಿಕ ಸಂವಹನವನ್ನು ಗ್ರಹಿಸುವಲ್ಲಿ ಆತ್ಮೀಕ ಸಂವೇದನೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂಬುದನ್ನು  ಸೂಚಿಸುತ್ತದೆ.

 ದೇವರ ಮಗನಾಗಿ ಯೇಸು ತಂದೆಯೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದನು, ಧ್ವನಿ ಮತ್ತು ಸಂದೇಶವನ್ನು ಸ್ಪಷ್ಟವಾಗಿ ಗ್ರಹಿಸಲು ಆತನು ಅವಕಾಶ ಮಾಡಿಕೊಟ್ಟನು. ದೇವರೊಂದಿಗಿನ ಆಳವಾದ ಸಂಬಂಧದ ಮೂಲಕ ಆತ್ಮೀಕ ಸಂವೇದನೆಯನ್ನು ಬೆಳೆಸಿಕೊಳ್ಳಬಹುದು. ನಾವು ನಮ್ಮ ನಂಬಿಕೆಯಲ್ಲಿ ಬೆಳೆದು ದೇವರನ್ನು ಹೆಚ್ಚು ನಿಕಟವಾಗಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಂತೆ, ಪ್ರಪಂಚದ ಗದ್ದಲ ಮತ್ತು ಗೊಂದಲಗಳ ನಡುವೆ ಆತನ ಧ್ವನಿಯನ್ನು ಗ್ರಹಿಸಲು ನಾವು ಉತ್ತಮವಾಗಿ ಸಜ್ಜಾಗುತ್ತೇವೆ.

Bible Reading: 2 Kings 4
Prayer
ತಂದೆಯೇ, ನನ್ನ ಆತ್ಮೀಕ ಕಿವಿಗಳನ್ನು ತೆರೆದು  ಅವುಗಳನ್ನು ನಿಮ್ಮ ಧ್ವನಿಗೆ ಸರಿಹೊಂದುವಂತೆ ಯೇಸುನಾಮದಲ್ಲಿ ಟ್ಯೂನ್ ಮಾಡಿ. ಆಮೆನ್!!

Join our WhatsApp Channel


Most Read
● ವಿವೇಚನೆ v/s ತೀರ್ಪು
● ದಿನ 08:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಆರಾಧನೆಯ ಪರಿಮಳ
● ದೇವರಿಗಾಗಿ ದಾಹದಿಂದಿರುವುದು
● ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವುದು -5
● ಆತನ ಪರಿಪೂರ್ಣ ಪ್ರೀತಿಯಲ್ಲಿರುವ ಬಿಡುಗಡೆಯನ್ನು ಕಂಡುಕೊಳ್ಳುವುದು
● ಪರಿಶೋಧನೆಯ ಸಮಯದಲ್ಲಿ ನಂಬಿಕೆ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login