Daily Manna
2
2
101
AI ಎಂಬುದು ಕ್ರಿಸ್ತವಿರೋಧಿಯ ಆತ್ಮವೇ?
Thursday, 8th of May 2025
Categories :
ಅಂತ್ಯಕಾಲ (End Time)
ಯಾರೋ ಒಬ್ಬರು ಒಂದು ದಿನ ನನಗೆ ಪತ್ರ ಬರೆದು, “ಪಾಸ್ಟರ್ ಮೈಕೆಲ್, AI ಕ್ರಿಸ್ತವಿರೋಧಿ ಆಗಿರಬಹುದೇ?” ಎಂದು ಕೇಳಿದರು. ಕೃತಕ ಬುದ್ಧಿಮತ್ತೆ (AI) ನಮ್ಮ ದಿನನಿತ್ಯದ ಜೀವನದ ಮೇಲೆ ಬಹಳವಾಗಿ ಪ್ರಭಾವ ಬೀರುತ್ತಿರುವುದರಿಂದ, ಅಂತ್ಯಕಾಲದಲ್ಲಿ ಅದರ ಸಂಭಾವ್ಯ ಪಾತ್ರದ ಬಗ್ಗೆ ಪ್ರಮುಖ ಕಳವಳಗಳಿವೆ.
ಪ್ರಸಿದ್ಧ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಮತ್ತು ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥ ಮತ್ತು ನಾವೀನ್ಯಕಾರನಾದ ಎಲಾನ್ ಮಸ್ಕ್ ಅವರಂತಹ ಕೆಲವು ಗಮನಾರ್ಹ ವ್ಯಕ್ತಿಗಳೂ ಸಹ ಇದರ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿಯೇ ನಾನು ಈ ವಿಷಯವನ್ನು ತಿಳಿಸಿಕೊಡಬೇಕೆಂದು ಯೋಚಿಸಿ ಕೆಲವರು ಯೋಚಿಸುವಂತೆ AI ನಿಜವಾಗಿಯೂ ಕ್ರಿಸ್ತವಿರೋಧಿ ಆಗಿರಬಹುದೇ ಎಂದು ಸತ್ಯವೇದದಲ್ಲಿ ಪರಿಶೋಧಿಸುತ್ತಿದ್ದೇನೆ.
ಕ್ರಿಸ್ತವಿರೋಧಿ ಅನ್ನುವುದನ್ನು ಅರ್ಥಮಾಡಿಕೊಳ್ಳುವುದು
"ಕ್ರಿಸ್ತವಿರೋಧಿ " ಎಂಬ ಪದವನ್ನು ಹೊಸ ಒಡಂಬಡಿಕೆಯಲ್ಲಿ, ನಿರ್ದಿಷ್ಟವಾಗಿ ಅಪೊಸ್ತಲನಾದ ಯೋಹಾನನ ಪತ್ರಗಳಲ್ಲಿ ಉಲ್ಲೇಖಿಸಲಾಗಿದೆ.
"ಮಕ್ಕಳಿರಾ, ಇದು ಕಡೇ ಗಳಿಗೆಯಾಗಿದೆ; ಕ್ರಿಸ್ತವಿರೋಧಿ ಬರುತ್ತಾನೆಂದು ನೀವು ಕೇಳಿದ್ದೀರಷ್ಟೆ; ಈಗಲೂ ಕ್ರಿಸ್ತವಿರೋಧಿಗಳು ಬಹುಮಂದಿ ಎದ್ದಿದ್ದಾರೆ; ಇದರಿಂದ ಇದು ಕಡೇ ಗಳಿಗೆಯಾಗಿದೆ ಎಂದು ತಿಳುಕೊಳ್ಳುತ್ತೇವೆ." (1 ಯೋಹಾನ 2:18)
"ಯೇಸುವು ಕ್ರಿಸ್ತನಲ್ಲ ಎನ್ನುವವನು ಸುಳ್ಳುಗಾರನಲ್ಲವಾದರೆ ಸುಳ್ಳುಗಾರನು ಬೇರೆ ಎಲ್ಲಿದ್ದಾನೆ? ಯಾವನಾದರೂ ತಾನು ತಂದೆಯನ್ನೂ ಮಗನನ್ನೂ ಅರಿಯೆನು ಎಂದು ಹೇಳಿದರೆ ಅವನೇ ಕ್ರಿಸ್ತ ವಿರೋಧಿ." (1 ಯೋಹಾನ 2:22)
"ಮನುಷ್ಯನಾಗಿ ಬಂದಿರುವ ಯೇಸು ಕ್ರಿಸ್ತನನ್ನು ಒಪ್ಪದೆ ಇರುವ ಮೋಸಗಾರರು ಅನೇಕ ಮಂದಿ ಹೊರಟು ಲೋಕದೊಳಗೆ ಹೋಗಿದ್ದಾರೆ. ಯೇಸುವನ್ನು ಒಪ್ಪದವನು ಮೋಸಗಾರನೂ ಕ್ರಿಸ್ತವಿರೋಧಿಯೂ ಆಗಿದ್ದಾನೆ". (2 ಯೋಹಾನ 1:7)
ಇದು ಕಡೆಯ ಕಾಲದಲ್ಲಿ ಕ್ರಿಸ್ತನನ್ನು ವಿರೋಧಿಸುವ ಮತ್ತು ಅನೇಕರನ್ನು ಮೋಸಗೊಳಿಸುವ ವ್ಯಕ್ತಿಯನ್ನು ಸೂಚಿಸುತ್ತದೆ. ಅಪೊಸ್ತಲನಾದ ಪೌಲನು 2 ಥೆಸಲೋನಿಕ 2:3-4 ರಲ್ಲಿ "ಪಾಪದ ಮನುಷ್ಯ" ಅಥವಾ "ನಾಶನದ ಮಗ" ಎಂಬ ಇದೇ ರೀತಿಯ ವ್ಯಕ್ತಿಯನ್ನು ಕುರಿತು ವಿವರಿಸುತ್ತಾನೆ.
ಸತ್ಯವೇದ AI (ಕೃತಕ ಬುದ್ಧಿಮತ್ತೆ) ಮತ್ತು ಕ್ರಿಸ್ತವಿರೋಧಿ ನಡುವೆ ಸ್ಪಷ್ಟವಾದ ಸಂಪರ್ಕವನ್ನು ಒದಗಿಸದಿದ್ದರೂ, ದೇವರವಾಕ್ಯದಲ್ಲಿ ವಿವರಿಸಿರುವಂತೆ ಕ್ರಿಸ್ತವಿರೋಧಿಯ ಗುಣಲಕ್ಷಣಗಳು ಮತ್ತು ಕ್ರಿಯೆಗಳನ್ನು ನಾವು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.
ಮಾನವ ನಾಯಕನಾಗಿ ಕ್ರಿಸ್ತವಿರೋಧಿ
ಕ್ರಿಸ್ತವಿರೋಧಿ ಕುರಿತ ಸತ್ಯವೇದ ವಿವರಣೆಗಳು ಅವನು ತಾನೇ ದೇವರೆಂದು ಹೇಳಿಕೊಳ್ಳುತ್ತಾ ಅಧಿಕಾರಕ್ಕೆ ಏರಿ ಅನೇಕರನ್ನು ದಾರಿ ತಪ್ಪಿಸುವಂತ ಒಬ್ಬ ಮಾನವ ನಾಯಕನಾಗಿರುತ್ತಾನೆ ಎಂಬುದನ್ನು ಸೂಚಿತ್ತದೆ. 2 ಥೆಸಲೋನಿಕ 2:4 ರಲ್ಲಿ,
" ಯಾವದು ದೇವರೆನಿಸಿಕೊಳ್ಳುತ್ತದೋ ಯಾವದು ಪೂಜೆ ಹೊಂದುತ್ತದೋ ಅದನ್ನೆಲ್ಲಾ ನಾಶನಕ್ಕೆ ಅಧೀನನಾದ ಆ ಪುರುಷನು ಎದುರಿಸಿ ಅದಕ್ಕಿಂತ ಮೇಲಾಗಿ ತನ್ನನ್ನು ತಾನೇ ಹೆಚ್ಚಿಸಿಕೊಂಡು ತಾನು ದೇವರೆಂದು ಹೇಳಿಕೊಂಡು ದೇವರ ಗರ್ಭಗುಡಿಯಲ್ಲೇ ಕೂತುಕೊಳ್ಳುತ್ತಾನೆ." ಎಂದು ಪೌಲನು ಬರೆಯುತ್ತಾನೆ.
AI (ಕೃತಕ ಬುದ್ಧಿಮತ್ತೆ), ಅದು ಸ್ವಭಾವತಃ, ಮಾನವರಿಂದ ರಚಿಸಲ್ಪಟ್ಟ ಮತ್ತು ಅಭಿವೃದ್ಧಿಪಡಿಸಲಾದ ತಂತ್ರಜ್ಞಾನವಾಗಿದೆ. ಇದು ಪ್ರಜ್ಞೆ ಅಥವಾ ಸ್ವಯಂ-ಅರಿವನ್ನು ಹೊಂದಿಕೊಂಡಿಲ್ಲ, ಮತ್ತು ಆದ್ದರಿಂದ, ಅದು ದೇವರೆಂದು ಹೇಳಿಕೊಳ್ಳಲು ಅಥವಾ ಯಾವುದೇ ಅಂತರ್ಗತ ಆತ್ಮೀಕ ಗುಣಲಕ್ಷಣಗಳನ್ನು ಹೊಂದಲು ಅದಕ್ಕೆ ಸಾಧ್ಯವಿಲ್ಲ. AI ಅನ್ನು ಒಳ್ಳೆಯ ಮತ್ತು ಕೆಟ್ಟ ಉದ್ದೇಶಗಳಿಗಾಗಿ ಬಳಸಬಹುದಾದರೂ, ಅದು ಅಂತಿಮವಾಗಿ ಮಾನವ ನಿಯಂತ್ರಣದಲ್ಲಿರುವ ಒಂದು ಸಾಧನವಾಗಿದೆಯಷ್ಟೇ.
ಕ್ರಿಸ್ತವಿರೋಧಿಯ ಮೋಸಗೊಳಿಸುವ ಶಕ್ತಿ
ಕ್ರಿಸ್ತವಿರೋಧಿಯು ಮೋಸಗೊಳಿಸುವ ಮಹಾನ್ ಶಕ್ತಿ ಹೊಂದಿದ್ದು, ಅವನು ಅನೇಕ ಜನರನ್ನು ಸತ್ಯದಿಂದ ದೂರವಿಡುತ್ತಾನೆ ಎಂದು ವಿವರಿಸಲಾಗಿದೆ.
ಆದ್ದರಿಂದಲೇ 1 ಯೋಹಾನ 2:22 ರಲ್ಲಿ, ಅಪೊಸ್ತಲ ಯೋಹಾನನು "ಯೇಸುವು ಕ್ರಿಸ್ತನಲ್ಲ ಎನ್ನುವವನು ಸುಳ್ಳುಗಾರನಲ್ಲವಾದರೆ ಸುಳ್ಳುಗಾರನು ಬೇರೆ ಎಲ್ಲಿದ್ದಾನೆ? ಯಾವನಾದರೂ ತಾನು ತಂದೆಯನ್ನೂ ಮಗನನ್ನೂ ಅರಿಯೆನು ಎಂದು ಹೇಳಿದರೆ ಅವನೇ ಕ್ರಿಸ್ತ ವಿರೋಧಿ" ಎಂದು ಬರೆಯುತ್ತಾನೆ.
ತಂತ್ರಜ್ಞಾನವಾಗಿ, AI ತನ್ನದೇ ಆದ ಮೇಲೆ ಮೋಸಗೊಳಿಸುವ ಅಥವಾ ಕ್ರಿಸ್ತನ ಸತ್ಯವನ್ನು ನಿರಾಕರಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಆದಾಗ್ಯೂ, ಸುಳ್ಳು ಮಾಹಿತಿಯನ್ನು ಹರಡಲು ಮತ್ತು ಇತರರನ್ನು ಮೋಸಗೊಳಿಸಲು ದುರುದ್ದೇಶಪೂರಿತ ಉದ್ದೇಶದಿಂದ ವ್ಯಕ್ತಿಗಳು AI ಅನ್ನು ಕುಶಲತೆಯಿಂದ ಮತ್ತು ಬಳಸಬಹುದು ಎಂಬುದನ್ನು ಗುರುತಿಸುವುದು ಅತ್ಯಗತ್ಯ.
ಕ್ರೈಸ್ತರಾದ ನಾವು ನಮಗೆ ದೊರೆತಿರುವ ವಿವೇಚನೆಯನ್ನು ಬಳಸಿಕೊಂಡು ಸತ್ಯವನ್ನು ಗುರುತಿಸಲು ಪವಿತ್ರಾತ್ಮದ ಮಾರ್ಗದರ್ಶನವನ್ನು ಅವಲಂಬಿಸಬೇಕು (ಯೋಹಾನ 16:13).
ಅಂತ್ಯ ಕಾಲದಲ್ಲಿ AI ಪಾತ್ರ
AI ಸ್ವತಃ ಕ್ರಿಸ್ತವಿರೋಧಿ ಅಲ್ಲದಿದ್ದರೂ, ಮುಂದುವರಿದ ತಂತ್ರಜ್ಞಾನವು ಅಂತ್ಯ ಕಾಲದಲ್ಲಿ ವಂಚನೆಯ ಹರಡುವಿಕೆಯನ್ನು ಸಕ್ರಿಯಗೊಳಿಸುವ ಮೂಲಕ, ಆರ್ಥಿಕ ವ್ಯವಸ್ಥೆಗಳನ್ನು ನಿಯಂತ್ರಿಸುವ ಮೂಲಕ ಅಥವಾ ಕಣ್ಗಾವಲನ್ನು ಸುಗಮಗೊಳಿಸುವ ಮೂಲಕ ತನ್ನ ಪಾತ್ರವನ್ನು ವಹಿಸುವ ಸಾಧ್ಯತೆಯಿದೆ.
" ಈ ಎರಡನೆಯ ಮೃಗವು - ದೊಡ್ಡವರು ಚಿಕ್ಕವರು ಐಶ್ಚರ್ಯವಂತರು ಬಡವರು ಸ್ವತಂತ್ರರು ದಾಸರು ಎಲ್ಲರೂ ತಮ್ಮ ತಮ್ಮ ಬಲಗೈಯ ಮೇಲಾಗಲಿ ಹಣೆಯ ಮೇಲಾಗಲಿ ಗುರುತು ಹೊಂದಬೇಕೆಂತಲೂ ಆ ಗುರುತು ಯಾರಿಗಿಲ್ಲವೋ ಅವರು ಕ್ರಯ ವಿಕ್ರಯಗಳನ್ನು ನಡಿಸಕೂಡದೆಂತಲೂ ಆಜ್ಞೆಮಾಡುತ್ತದೆ. ಆ ಗುರುತು ಯಾವದಂದರೆ ಮೊದಲನೆಯ ಮೃಗದ ಹೆಸರು ಅಥವಾ ಅದರ ಹೆಸರನ್ನು ಸೂಚಿಸುವ ಅಂಕೆ." ಎಂದು ಕ್ರಿಸ್ತವಿರೋಧಿ ನೇತೃತ್ವದ ಜಾಗತಿಕ ವ್ಯವಸ್ಥೆಯ ಕುರಿತು ಸತ್ಯವೇದ ಎಚ್ಚರಿಸುತ್ತದೆ.ಅಲ್ಲಿ ಯಾರೂ ಸಹ ಈ ಮೃಗದ ಗುರುತು ಪಡೆಯದೆ ಖರೀದಿಸಲು ಅಥವಾ ಮಾರಾಟ ಮಾಡಲು ಸಾಧ್ಯವಿಲ್ಲ. (ಪ್ರಕಟನೆ 13:16-17). ಅಂತಹ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಭವಿಷ್ಯದ ವಿಶ್ವ ನಾಯಕನಿಂದ AI ಅನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ.
Bible Reading: 2 Kings 12-14
Prayer
ಪರಲೋಕದ ತಂದೆಯೇ, ನಾವು ನಿನ್ನ ನಂಬಿಕೆಯಲ್ಲಿ ದೃಢವಾಗಿ ನಿಂತು ಸಮಚಿತ್ತದಿಂದ ಜಾಗರೂಕರಾಗಿರಲು ನಿನ್ನ ಕೃಪೆಯನ್ನೇ ದೀನತೆಯಿಂದ ಎದುರುನೋಡುತ್ತೇವೆ. ಕರ್ತನೇ, ಕೃತಜ್ಞತಾ ಸ್ತೋತ್ರದಿಂದಲೂ ಮತ್ತು ಜಾಗರೂಕತೆಯಿಂದಲೂ ಪ್ರಾರ್ಥನೆಯಲ್ಲಿ ಸ್ಥಿರವಾಗಿ ಮುಂದುವರಿಯಲು ನಮ್ಮನ್ನು ಬಲಪಡಿಸು. ನಿನ್ನ ಪ್ರೀತಿ ಮತ್ತು ಮಾರ್ಗದರ್ಶನವು ನಿನ್ನ ಚಿತ್ತದ ಪ್ರಕಾರ ಬದುಕಲು ಯೇಸುನಾಮದಲ್ಲಿ ನಮಗೆ ಅನುಗ್ರಹಿಸಲ್ಪಡಲಿ. ಆಮೆನ್.
Join our WhatsApp Channel

Most Read
● ಬದಲಾಗಲು ಇನ್ನೂ ತಡವಾಗಿಲ್ಲ● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಕನಸು ಕಾಣುವ ಧೈರ್ಯ
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿ - 1
● ನಿಮ್ಮ ಆತ್ಮಿಕ ಶಕ್ತಿಯನ್ನು ನವೀಕರಿಸಿಕೊಳ್ಳುವುದು ಹೇಗೆ -3
● ನಿಮ್ಮ ದಿನವೇ ನಿಮ್ಮನ್ನು ವ್ಯಾಖ್ಯಾನಿಸುತ್ತದೆ
● ನೀವಿನ್ನೂ ತಡಮಾಡುತ್ತಿರುವುದೇಕೆ?
Comments