english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ವಿವೇಕಿಯಾಗಿರಿ
ಅನುದಿನದ ಮನ್ನಾ

ವಿವೇಕಿಯಾಗಿರಿ

Wednesday, 25th of June 2025
1 0 124
Categories : God's Favor
“ಈಗ ನೀವು ನನಗೊಂದು ಪ್ರಮಾಣಮಾಡಬೇಕು. ನಾನು ನಿಮಗೆ ದಯೆ ತೋರಿಸಿದ್ದರಿಂದ ನೀವು ನನಗೂ ನನ್ನ ತಂದೆಯ ಮನೆಗೂ ದಯೆ ತೋರಿಸಬೇಕು. ನನಗೆ ನಿಶ್ಚಯವಾದ ಗುರುತನ್ನು ಕೊಡಬೇಕು. (ಯೆಹೋಶುವ 2:12) 

ನೀವು ದಿಗಂತದಲ್ಲಿ ವಿಪತ್ತು ಬರುತ್ತಿರುವುದನ್ನು ನೋಡಿದರೆ, ನಿಮ್ಮ ಕುಟುಂಬದ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ನೀವು ಏನು ಮಾಡುತ್ತೀರಿ? 

ರಾಹಾಬಳು ತನ್ನ ಕುಟುಂಬಕ್ಕಾಗಿ ತನ್ನ ಎಲ್ಲವನ್ನೂ ಪಣಕ್ಕಿಟ್ಟವಳು. ಇಸ್ರಾಯೇಲ್ಯರು ನದಿಯನ್ನು ದಾಟಿ ತನ್ನ ನಗರವನ್ನು ವಶಪಡಿಸಿಕೊಳ್ಳುವ ಮೊದಲು ಇದು ಕೇವಲ ಸ್ವಲ್ಪ ಸಮಯದಲ್ಲಿಯೇ ಜರುಗಲಿರುವ ಸಂಗತಿ ಎಂದು ಅವಳು ಅರಿತುಕೊಂಡಳು. ರಾಹಾಬಳು ತನ್ನ ಕುಟುಂಬವನ್ನು ಉಳಿಸಿಕೊಳ್ಳಲು ತೀವ್ರವಾಗಿ ಬಯಸಿದಳು. 

ಇಬ್ಬರು ಇಸ್ರಾಯೇಲ್ಯ ಗೂಢಚಾರರು ಅವಳ ಮನೆ ಬಾಗಿಲಿಗೆ ಬಂದಾಗ, ಅವರನ್ನು ಒಳಗೆ ಸೇರಿಸಿಕೊಳ್ಳುವ ಬದಲು,ಮೊದಲು ಅವಳು ಅವರನ್ನು ಹುಡುಕುತ್ತಿದ್ದ ಮನುಷ್ಯರಿಂದ ಅವರನ್ನು ಮರೆಮಾಡಿದಳು. ರಾಹಾಬಳಿಗೆ ಈಗ ಇಬ್ಬರು ಗೂಢಚಾರರ ದಯೆ ದೊರಕಿ ಅವಳು ತನ್ನ ಕುಟುಂಬದ ಮತ್ತು ತನ್ನ ಸುರಕ್ಷತೆಯನ್ನು ಹುಡುಕಲು ಆ ಸಮಯವನ್ನು ವ್ಯಯ ಮಾಡಿದಳು. ಯೆರಿಕೊಗೆ ಇನ್ನು ಭವಿಷ್ಯವಿಲ್ಲ ಎಂಬುದನ್ನು ರಾಹಾಬಳು ಕಂಡುಕೊಂಡದ್ದರಿಂದ ತನ್ನ ಕುಟುಂಬ ಕೂಡ ಅದರೊಂದಿಗೆ ನಾಶವಾಗುವುದನ್ನು ಅವಳು ಬಯಸಲಿಲ್ಲ. 

ಆದರಿಂದ ರಾಹಾಬಳು ಗೂಢಚಾರರ ಬಳಿ ತಾನು ತೋರಿಸಿದ ದಯೆಯನ್ನು ಪಣಕ್ಕಿಟ್ಟು ತನಗೂ ಮತ್ತು ತನ್ನ ಕುಟುಂಬಕ್ಕೂ ಜೀವದಯೆಯನ್ನು ಕೊಂಡುಕೊಂಡಳು. ಆಗ ಆಕೆ ಕೇವಲ ಭೌತಿಕ ಜೀವನವನ್ನು ಮಾತ್ರವಲ್ಲದೆ ಆತ್ಮೀಕ ಜೀವನವನ್ನು ಸಹ ಖರೀದಿಸಿದಳು. ಸಲ್ಮಾನನು ಎಂಬ ಇಸ್ರಾಯೇಲ್ಯನೊಂದಿಗೆ ವಿವಾಹ ಆಗುವ ಮೂಲಕ, ರಾಹಾಬಳು ದಾವೀದನ ಮತ್ತು ಅವನ ನಂತರ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಪೂರ್ವಜಳಾದಳು. ಈ ಹಿಂದೆ ವೇಶ್ಯೆಯಾದವಳಿಗೂ ಕೆಟ್ಟದ್ದಾಗಲಿಲ್ಲ!

ದೇವರ ದೈವಿಕ ದಯೆಯು ನಮಗೆ ನೀಡಲಾದ ಜೀವನವನ್ನೇ ಶಕ್ತಿಶಾಲಿಯಾಗಿ ಬದಲಾಯಿಸುವ  ಕೃಪಾವರವಾಗಿದೆ. ಇದು ನಾವು ಸಂಪಾದಿಸುವಂತದ್ದೋ ಅಥವಾ ಸಾಧಿಸಿದ್ದೋ ಅಲ್ಲ;ಬದಲಾಗಿ ಇದು ದೇವರು ಕೃಪೆಯಿಂದ ನಮ್ಮ ಮೇಲಿನ ತನ್ನ ನಿಷ್ಕಲ್ಮಶ ಪ್ರೀತಿಯ ನೀಡಿದ ಕಾರ್ಯವಾಗಿದೆ. 

ಆದಾಗ್ಯೂ, ಈ ದೈವಿಕ ವರದೊಂದಿಗೆ ಆಳವಾದ ಜವಾಬ್ದಾರಿ ಕೂಡ ಬರುತ್ತದೆ. ನಿಮಗೆ ಸಿಕ್ಕ ದಯೆಯನ್ನು ನಿಮ್ಮ ಮೇಲೆ ಮಾತ್ರ ವ್ಯಯ ಮಾಡಬೇಡಿ. ದಯವಿಟ್ಟು ಮರಣಕ್ಕೆ ಕಾರಣವಾಗುವ ವಿಷಯಗಳಿಗೆ ಅದನ್ನು ವ್ಯರ್ಥ ಮಾಡಬೇಡಿ. ಅದರಲ್ಲಿ ಅಪಾಯದಲ್ಲಿ ಹೆಚ್ಚು. "ಭೋಗಾಸಕ್ತನು ಕೊರತೆಪಡುವನು; ದ್ರಾಕ್ಷಾರಸವನ್ನೂ, ತೈಲವನ್ನೂ ಅಪೇಕ್ಷಿಸುವವನು ಎಂದಿಗೂ ಧನವಂತನಾಗನು."ಎಂದು ಜ್ಞಾನೋಕ್ತಿಗಳ ಪುಸ್ತಕವು ಕಠಿಣ ಎಚ್ಚರಿಕೆಯನ್ನು ನೀಡುತ್ತದೆ. (ಜ್ಞಾನೋಕ್ತಿ 21:17). 

ದಯೆಯನ್ನು ದುರುಪಯೋಗ ಪಡಿಸಿಕೊಳ್ಳುವುದು ಅವನತಿಗೆ ಮತ್ತು ಅಂತಿಮವಾಗಿ ಮರಣಕ್ಕೆ ಕಾರಣವಾಗುತ್ತದೆ. ದಯೆಯು ಜೀವವನ್ನು ತರುವುದು ಮತ್ತು ದೇವರ ಕರೆಯನ್ನು ಪೂರೈಸುವುದು. ಆದ್ದರಿಂದ, ವಿವೇಕದಿಂದ ಬಳಸಲಾದ ದೇವರ ದಯೆಯು  ದೇವರಿಗೆ ನಮ್ಮನ್ನು ಹತ್ತಿರವಾಗಿಸಲಿ, ನಮ್ಮನ್ನು ಹೆಚ್ಚು ಹೆಚ್ಚಾಗಿ ಕ್ರಿಸ್ತನ ಸಾರೂಪ್ಯಕ್ಕೆ ತರಲಿ ಮತ್ತು ನಮ್ಮ ಪರಲೋಕದ ಮನೆಗೆ ಹೋಗಲು ನಮ್ಮನ್ನು ಸಿದ್ಧಪಡಿಸಲಿ.

Bible Reading: Psalms 11-18
ಪ್ರಾರ್ಥನೆಗಳು
ತಂದೆಯಾದ ದೇವರೇ, ಯೇಸುವಿನ ಹೆಸರಿನಲ್ಲಿ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಆಗಮನದವರೆಗೆ ನನ್ನ ದೇಹ, ಪ್ರಾಣ ಮತ್ತು ಆತ್ಮವು ನಿಷ್ಕಳಂಕವಾಗಿ ಕಾಪಾಡಲ್ಪಡಲಿ.
 

Join our WhatsApp Channel


Most Read
● ದೈನಂದಿನ ಮನ್ನಾ
● ಒಂದು ಜನಾಂಗವನ್ನು ಉಳಿಸಿದ ಕಾಯುವಿಕೆ
● ಮನುಷ್ಯ ಸ್ವಭಾವ
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಜೀವಿಸುವವರಿಗಾಗಿ ಸತ್ತವನ ಪ್ರಾರ್ಥನೆ
● ಕರ್ತನನ್ನು ಮೆಚ್ಚಿಸಲಿರುವ ಖಚಿತವಾದ ಮಾರ್ಗ.
● ಜೀವನದ ದೊಡ್ಡ ಬಂಡೆಗಳನ್ನು ಗುರುತಿಸುವುದು ಮತ್ತು ಆದ್ಯತೆ ನೀಡುವುದು
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್