‘ಆ ದಿನಗಳಲ್ಲಿ ಇಸ್ರಾಯೇಲ್ಯರಿಗೆ ಅರಸರಿರಲಿಲ್ಲ; ಎಲ್ಲರೂ ತಮಗೆ ಸರಿ ಅನಿಸಿದಂತೆ ಮಾಡುತ್ತಿದ್ದರು.’ (ನ್ಯಾಯಸ್ಥಾಪಕರು 21:25).
ಇದು ದೆಬೋರಳು ವಾಸಿಸುತ್ತಿದ್ದ ಸಮಯ. ನೀವು ಮತ್ತು ನಾನು ವಾಸಿಸುವ ಸಮಯದಂತೆ ಇದು ಧ್ವನಿಸುವುದಿಲ್ಲವೇ? ದೆಬೋರಳು ಇಸ್ರೇಲ್ ಇತಿಹಾಸದಲ್ಲಿ ಮೊದಲ ಮಹಿಳಾ ನ್ಯಾಯಾಧೀಶೆ ಎಂದು ನ್ಯಾಯಸ್ಥಾಪಕರು 4 ಮತ್ತು 5 ನಮಗೆ ಹೇಳುತ್ತದೆ. ಸ್ತ್ರೀಯರನ್ನು ಅತ್ಯಲ್ಪವಾಗಿ ಪರಿಗಣಿಸಲಾಗುತ್ತಿದ್ದ ಸಮಯದಲ್ಲಿ, ಅವಳು ತನ್ನ ದಿನಗಳಲ್ಲಿ ನಾಯಕತ್ವದ ಅತ್ಯುನ್ನತ ಮಟ್ಟಕ್ಕೆ ಏರಿದಳು.
ದೆಬೋರಳ ವರ್ತನೆ ಮತ್ತು ಕಾರ್ಯಗಳು ಎಚ್ಚರಿಕೆಯಿಂದ ಗಮನ ಹರಿಸಲು ಅರ್ಹವಾಗಿವೆ ಅಷ್ಟೇ ಅಲ್ಲದೆ, ಅವಳ ಜೀವನದಿಂದ ಕಲಿಯಬೇಕಾದ ಪ್ರಬಲ ಪಾಠಗಳಿವೆ.
#1: ದೆಬೋರಳು ಬುದ್ಧಿವಂತಳಾಗಿದ್ದಳು
"ಆ ಕಾಲದಲ್ಲಿ ಲಪ್ಪೀದೋತನ ಹೆಂಡತಿಯಾದ ದೆಬೋರಳೆಂಬ ಪ್ರವಾದಿನಿಯು ಇಸ್ರಾಯೇಲ್ಯರಲ್ಲಿ ನ್ಯಾಯತೀರಿಸುತ್ತಿದ್ದಳು. ಆಕೆಯು ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿ ರಾಮಕ್ಕೂ ಬೇತೇಲಿಗೂ ಮಧ್ಯದಲ್ಲಿರುವ ದೆಬೋರಳ ಖರ್ಜೂರವೃಕ್ಷವೆಂದು ಹೆಸರುಗೊಂಡ ಮರದ ಕೆಳಗೆ ಆಸೀನಳಾಗಿರುವಲ್ಲಿ ಇಸ್ರಾಯೇಲ್ಯರು ನ್ಯಾಯ ನಿರ್ಣಯಕ್ಕೋಸ್ಕರ ಆಕೆಯ ಬಳಿಗೆ ಬರುತ್ತಿದ್ದರು."(ನ್ಯಾಯಸ್ಥಾಪಕರು 4:4-5)
ಸತ್ಯವೇದ ಅವಳನ್ನು ಪ್ರವಾದಿನಿ ಎಂದು ಕರೆಯುತ್ತದೆ. ಪ್ರವಾದಿ ಎಂದರೆ ದೇವರ ಮುಖವಾಣಿ. ಒಬ್ಬ ವ್ಯಕ್ತಿಯು ದೇವರ ಸನ್ನಿಧಿಯಲ್ಲಿ ಗುಣಮಟ್ಟದ ಸಮಯವನ್ನು ಕಳೆಯುವಾಗ ಇದು ಸಂಭವಿಸುತ್ತದೆ. ಸ್ಪಷ್ಟವಾಗಿ, ಅವಳ ಜ್ಞಾನವು ದೇವರೊಂದಿಗಿನ ಅವಳ ಅನ್ಯೋನ್ಯತೆಯಿಂದ ಅವಳಿಗೆ ಒದಗಿ ಬಂದಿತು. ಇಲ್ಲಿ ದೇವರೊಂದಿಗಿನ ಅನ್ಯೋನ್ಯತೆಯು ಇಸ್ರೇಲ್ ಜನರಿಗೆ ವಿಶ್ವಾಸಾರ್ಹ ಪರಿಹಾರಗಳನ್ನು ತರಲು ಅವಳಿಗೆ ಜ್ಞಾನವನ್ನು ಒದಗಿಸಿತು.
ಒಬ್ಬರು ಒಮ್ಮೆ ಹೀಗೆ ಹೇಳಿದರು, "ನೀವು ಸಮಸ್ಯೆಯ ಭಾಗವಾಗವಾಗಿದ್ದೀರೋ ಅಥವಾ ಪರಿಹಾರದ ಭಾಗದಲ್ಲಿದ್ದೀರೋ" ಎಂದು. ಇಲ್ಲಿ ಸ್ಪಷ್ಟವಾಗಿ, ದೆಬೋರಳು ಜನರ ಜೀವನದಲ್ಲಿ ಪರಿಹಾರದ ಭಾಗವಾಗಿದ್ದಳು. ನೀವು ಸಹ ನಿಮ್ಮ ಕುಟುಂಬದಲ್ಲಿ, ನಿಮ್ಮ ಚರ್ಚ್‌ನಲ್ಲಿ, ನಿಮ್ಮ ಕೆಲಸದ ಸ್ಥಳದಲ್ಲಿ ಪರಿಹಾರದ ಭಾಗವಾಗಬಹುದು. ದೇವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಪ್ರಯತ್ನಿಸಿ, ಮತ್ತು ಇದು ಸಂಭವಿಸುವುದನ್ನು ಆಗ ನೀವು ನೋಡುತ್ತೀರಿ.
#2: ದೆಬೋರಳು ದೇವರಿಗೆ ಲಭ್ಯವಿದ್ದಳು
ಸತ್ಯವೇದ ಹೇಳುತ್ತದೆ, "ದೆಬೋರಳು ಎಫ್ರಾಯಿಮ್ ಪರ್ವತಗಳಲ್ಲಿ ರಾಮ ಮತ್ತು ಬೆತೆಲ್ ನಡುವೆ ದೆಬೋರ ತಾಳೆ ಮರದ ಕೆಳಗೆ ಕುಳಿತಿದ್ದಳು." ಒಂದು ದಿನ ಒಬ್ಬ ಚಿಕ್ಕ ಹುಡುಗಿ ನನ್ನನ್ನು ಕೇಳಿದಳು, "ಪಾಸ್ಟರ್ ಮೈಕೆಲ್, ದೇವರು ಅವಳನ್ನು ಬಲವಾಗಿ ಬಳಸುವುದರ ಹಿಂದಿನ ರಹಸ್ಯವೇನು?"ಎಂದು ನಾನು ಅವಳಿಗೆ ಸರಳ ಪದಗಳಲ್ಲಿ ಹೀಗೆ ಹೇಳಿದೆ; "ಇದು ಅವಳ ಸಾಮರ್ಥ್ಯದಿಂದಾದಲ್ಲ ಆದರೆ ಲಭ್ಯತೆಯಿಂದಾದದ್ದು"ಎಂದು.
ನೀವು ಅತ್ಯಂತ ಪ್ರತಿಭಾನ್ವಿತ ವ್ಯಕ್ತಿಯಾಗಿಲ್ಲದಿರಬಹುದು, ಆದರೂ ನಿಮ್ಮಲ್ಲಿರುವದನ್ನು ನೀವು ದೇವರಿಗೆ ಅರ್ಪಿಸಲು ಸಾಧ್ಯವಾದರೆ, ಆತನು ನಿಮ್ಮನ್ನು ಬಳಸಿಕೊಳ್ಳುತ್ತಾನೆ. ದೇವರ ರಾಜ್ಯದಲ್ಲಿ ಅನೇಕ ಪ್ರತಿಭಾನ್ವಿತ ಜನರಿದ್ದಾರೆ, ಆದರೆ ದುರದೃಷ್ಟವಶಾತ್, ಅವರು ಎಂದಿಗೂ ಲಭ್ಯ ಇರುವುದಿಲ್ಲ. ಪಟ್ಟಣದಲ್ಲಿ ಪ್ರಸಿದ್ಧ ಪ್ರವಾದಿ ಅಥವಾ ಧರ್ಮೋಪದೇಶಕ ಇದ್ದಾಗ ಮಾತ್ರ ಅವರು ಚರ್ಚ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರಂತೆ ನೀವು ಇರಬೇಡಿರಿ.
ಪ್ರಸಿದ್ಧ ಧರ್ಮೋಪದೇಶಕ ಅಥವಾ ಪ್ರವಾದಿ ಇಲ್ಲದಿದ್ದರೂ ಸೇವೆಗಳಿಗೆ ಹಾಜರಾಗಿ. ಕೃತಕ ದೀಪಗಳು ಮತ್ತು ಹೊಗೆ ಇಲ್ಲದಿದ್ದಾಗಲೂ ಸೇವೆಗಳಿಗೆ ಹಾಜರಾಗಿ ಮತ್ತು ನಿಮ್ಮ ಪ್ರತಿಭೆಯನ್ನು ಆತನಿಗೆ ಅರ್ಪಿಸಿ. ದೇವರು ನಿಮಗಾಗಿ ಯೋಜಿಸಿರುವಂತೆ ನಿಮ್ಮನ್ನು ರೂಪಿಸುತ್ತಾನೆ.
ನ್ನೊಂದು ವಿಷಯವೆಂದರೆ, ಸಣ್ಣಪುಟ್ಟ ಕೆಲಸಗಳನ್ನು ಸಹ ಮಾಡಲು ಕರ್ತನು ನಿಮಗೆ ಹೇಳಿದಾಗ ನೀವು ಆತನನ್ನು ಸೇವಿಸಲು ಸಾಕಷ್ಟು ವಿನಮ್ರರಾಗಿದ್ದೀರಿ ಎಂದು ಕಂಡುಕೊಂಡಾಗ, ದೊಡ್ಡ ಮತ್ತು ಹೆಚ್ಚು ಮುಖ್ಯವಾದ ಕೆಲಸಗಳನ್ನು ಮಾಡಲು ಆತನು ನಿಮ್ಮನ್ನು ನಂಬಬಹುದು! (ಲೂಕ 16:10 ಓದಿ)
Bible Reading: Isaiah 14-18
ಪ್ರಾರ್ಥನೆಗಳು
ತಂದೆಯೇ, ಯೇಸುನಾಮದಲ್ಲಿ ನನ್ನನ್ನು ನಿನ್ನ ಸಾಮೀಪ್ಯಕ್ಕೆ ಸೆಳೆ. ತಂದೆಯೇ, ನೀನು ನನಗೆ ಸಾಮರ್ಥ್ಯಗಳನ್ನು ತಲಾಂತುಗಳನ್ನು ಕೊಟ್ಟಿದ್ದಕ್ಕಾಗಿ ನಿನಗೆ ಸ್ತೋತ್ರ . ಈಗ, ನನಗೆ ಸಿದ್ಧ ಹೃದಯವನ್ನು ಅನುಗ್ರಹಿಸು ಆಗ ನಾನು ಯಾವಾಗಲೂ ನನ್ನ ಸಾಮರ್ಥ್ಯಗಳಿಂದ ನಿನಗೆ ಲಭ್ಯವಾಗಲು ಯೇಸುನಾಮದಲ್ಲಿ ಸಿದ್ದನಾಗುತ್ತೇನೆ ಆಮೆನ್.
Join our WhatsApp Channel

Most Read
● ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ● ಬೇರಿನೊಂದಿಗೆ ವ್ಯವಹರಿಸುವುದು
● ನಿಮ್ಮ ದಿನವೇ ನಿಮ್ಮನ್ನು ವ್ಯಾಖ್ಯಾನಿಸುತ್ತದೆ
● ದರ್ಶನ ಹಾಗೂ ಸಾಕಾರದ ನಡುವೆ...
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?- 2
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ನೀವು ಎಷ್ಟು ಜೋರಾಗಿ ಮಾತಾಡ ಬಲ್ಲಿರಿ?
ಅನಿಸಿಕೆಗಳು