ಅನುದಿನದ ಮನ್ನಾ
1
0
65
ನಿಮ್ಮ ಬಿಡುಗಡೆಯನ್ನು ಇನ್ನು ಮುಂದೆ ತಡೆಯಲು ಸಾಧ್ಯವಿಲ್ಲ.
Monday, 4th of August 2025
Categories :
ಬಿಡುಗಡೆ (Deliverance)
ಒಂದು ದಿನ ಯೇಸು, ತಮ್ಮ ಶಿಷ್ಯರಲ್ಲಿ ಇಬ್ಬರನ್ನು ಕರೆದು “ನಿಮ್ಮ ಎದುರಿಗಿರುವ ಹಳ್ಳಿಗೆ ಹೋಗಿರಿ, ನೀವು ಅದರೊಳಗೆ ಪ್ರವೇಶಿಸುತ್ತಿರುವಾಗ, ಅಲ್ಲಿ ಕಟ್ಟಿರುವ ಮತ್ತು ಯಾರೂ ಅದರ ಮೇಲೆ ಸವಾರಿ ಮಾಡದಿರುವ ಒಂದು ಕತ್ತೆಮರಿಯನ್ನು ಅಲ್ಲಿ ಕಾಣುವಿರಿ. ಅದನ್ನು ಬಿಚ್ಚಿ ಇಲ್ಲಿಗೆ ತೆಗೆದುಕೊಂಡು ಬನ್ನಿರಿ. ಯಾರಾದರೂ ನಿಮಗೆ, ‘ಏಕೆ ಅದನ್ನು ಬಿಚ್ಚುತ್ತೀರಿ?’ ಎಂದು ಕೇಳಿದರೆ, ನೀವು ಅವರಿಗೆ, ‘ಇದು ಕರ್ತದೇವರಿಗೆ ಬೇಕಾಗಿದೆ,’ ಎಂದು ಹೇಳಿರಿ,” ಎಂದರು.(ಲೂಕ 19:29-31)
ನಾನು ಇಲ್ಲಿ ಹೊರತರಲು ಬಯಸುವ ಮೊದಲ ವಿಷಯವೆಂದರೆ ಇದು ಜ್ಞಾನವಾಕ್ಯದ ಒಂದು ಶ್ರೇಷ್ಠ ಉದಾಹರಣೆಯಾಗಿದೆ. ಗಮನಿಸಿ, ಯೇಸು ಎಲ್ಲಿಗೆ ಹೋಗಬೇಕು, ಯಾವ ದಿಕ್ಕಿನಲ್ಲಿ ಹೋಗಬೇಕು, ಅಲ್ಲಿ ಏನಾಗುತ್ತದೆ, ಅದು ಯಾವ ಸ್ಥಿತಿಯಲ್ಲಿರುತ್ತದೆ ಇತ್ಯಾದಿಗಳ ಸ್ಪಷ್ಟ ಸೂಚನೆಗಳನ್ನು ಶಿಷ್ಯರಿಗೆ ನೀಡಿದನು. ಇದೆಲ್ಲವನ್ನೂ ಯೇಸು ನಿಜವಾಗಿಯೂ ಅಲ್ಲಿಗೆ ಹೋಗದೆ ಅಥವಾ ಯಾವುದೇ ಪೂರ್ವ ಜ್ಞಾನವಿಲ್ಲದೆ ಹೇಳಿದನು.
ನಮ್ಮ ಕರ್ತನ ಪ್ರವಾದನೆಯ ನಿಖರತೆಯನ್ನು ನೋಡಿ ನಾನು ಆಗಾಗ್ಗೆ ಆಶ್ಚರ್ಯಚಕಿತನಾಗುತ್ತೇನೆ. ಮುಂದಿನ ವಿಷಯವೆಂದರೆ ಕತ್ತೇಮರಿಯನ್ನು ಅಲ್ಲಿ “ಕಟ್ಟಿಹಾಕಲಾಗಿತ್ತು” ಎಂಬುದನ್ನು ನೀವು ನೋಡಬೇಕೆಂದು ನಾನು ಬಯಸುತ್ತೇನೆ. ಅದು ಎಷ್ಟು ಸಮಯದಿಂದ ಕಟ್ಟಲ್ಪಟ್ಟಿತ್ತು ಎಂದು ನಮಗೆ ತಿಳಿದಿಲ್ಲ. ಶಿಷ್ಯರ ನಿಯೋಜನೆಯು ಕತ್ತೇಮರಿಯನ್ನು ಬಿಡಿಸುವುದು, ಕತ್ತೇಮರಿಯನ್ನು ತರುವುದು.
ವಿಮೋಚನೆಯ ಪ್ರಕ್ರಿಯೆಯಲ್ಲಿ ಯಾರಾದರೂ ವಿರೋಧಿಸಿದರೆ ಅವರು "ಕರ್ತನಿಗೆ ಅದು ಬೇಕು." ಎನ್ನುವ ವಿಮೋಚನೆಯ ಉದ್ದೇಶವನ್ನು ಉಲ್ಲೇಖಿಸಬೇಕಾಗಿತ್ತು.
ಒಂದು ದಿನ ದುರಾತ್ಮನ ಬಂಧನದಿಂದ ಬಿಡುಗಡೆಯ ಅಗತ್ಯವಿರುವ ಒಬ್ಬ ಮಹಿಳೆಗಾಗಿ ಪ್ರಾರ್ಥಿಸುತ್ತಿದ್ದದ್ದು ನನಗೆ ಸ್ಪಷ್ಟವಾಗಿ ನೆನಪಿದೆ. ನಾನು ಯೇಸುವಿನ ಹೆಸರಿನಲ್ಲಿ ಆ ದೆವ್ವಕ್ಕೆ ಆಜ್ಞಾಪಿಸಿದಾಗ, ಒಂದು ಧ್ವನಿ ಮಾತನಾಡಿತು. ಒಬ್ಬ ಪುರುಷನು ಮಾತನಾಡುವಂತೆ ಧ್ವನಿಸಿ ಅವನು "ಅವಳು ನನ್ನವಳು. ನಾನು ಅವಳನ್ನು ಬಿಡುವುದಿಲ್ಲ" ಎಂದು ಹೇಳಿದನು.
ಆ ಕ್ಷಣದಲ್ಲಿ, ಈ ವಚನವು ನನ್ನ ಮನಸ್ಸಿನಲ್ಲಿ ಮಿಂಚಿತು. ಕತ್ತೆ ಮರಿಯ ಬಿಡುಗಡೆಯನ್ನು ಪ್ರಶ್ನಿಸುವ ಯಾರಿಗಾದರೂ ಶಿಷ್ಯರು "ಕರ್ತನಿಗೆ ಅದು ಬೇಕು" ಎಂದು ಹೇಳಬೇಕಿತ್ತು. "ಕರ್ತನಿಗೆ ಅವಳು ಬೇಕು, ಅವಳನ್ನು ಬಿಟ್ಟುಬಿಡು" ಎಂದು ನಾನು ಪ್ರತಿಯಾಗಿ ಹೇಳಿದೆ. ತಕ್ಷಣ, ಆ ದುಷ್ಟ ಶಕ್ತಿ ಅವಳನ್ನು ಬಿಟ್ಟುಹೋಯಿತು, ಮತ್ತು ಅವಳು ಬಿಡುಗಡೆಹೊಂದಿದಳು.
ಆ ಕತ್ತೆ ಮರಿಯಂತೆ, ನಿಮಗೂ ನಿಮ್ಮ ಜೀವನದ ಮೇಲೆ ದೈವಿಕ ನಿಯೋಜನೆ ಇದೆ, ಅದು ಕರ್ತನ ಸೇವೆ ಮಾಡುವುದು. ನೀವು ಈ ಭೂಮಿಯ ಮೇಲೆ ನಿಮ್ಮನ್ನು ಹೊರತುಪಡಿಸಿ ಯಾರೂ ಪೂರೈಸಲು ಸಾಧ್ಯವಾಗದ ದೈವಿಕ ನಿಯೋಜನೆಯೊಂದಿಗೆ ಬಂದಿದ್ದೀರಿ ಎಂಬ ಈ ಸತ್ಯವನ್ನು ನಿಮ್ಮ ಆತ್ಮದಲ್ಲಿ ಆಳವಾಗಿ ಗ್ರಹಿಸಲು ಸಾಧ್ಯವಾದರೆ, ನೀವು ವಿಮೋಚನೆಯನ್ನು ಪಡೆಯುವುದಲ್ಲದೆ ನಿಮ್ಮ ನಿಯೋಜನೆಯಲ್ಲಿ ನಡೆಯುತ್ತೀರಿ.
ನಿಮ್ಮ ಪ್ರಸ್ತುತ ಪರಿಸ್ಥಿತಿ ಅಥವಾ ನಿಮ್ಮ ಪ್ರಸ್ತುತ ಸ್ಥಳವನ್ನು ನೋಡಬೇಡಿ. ನಿಮ್ಮ ಜೀವನದಲ್ಲಿ ನಿಮಗೆ ದೈವಿಕ ನಿಯೋಜನೆ ಇದೆ ಎಂದು ತಿಳಿಯಿರಿ. ಆಗ ವಿಷಯಗಳು ಬದಲಾಗಲು ಪ್ರಾರಂಭಿಸುತ್ತವೆ.
ಕರ್ತನು ಯೆರೂಸಲೇಮಿಗೆ ಪ್ರವೇಶಿಸಲು ಬಿಡಿಸಿಕೊಂಡು ಬಂದು ಒಪ್ಪಿಸಲ್ಪಟ್ಟ ಈ ಕತ್ತೆಯನ್ನೇ ಬಳಸಿದನು. ದೇವರು ತನ್ನ ಮಹಿಮೆಯನ್ನು ಪ್ರಕಟಿಸಲು ಈಗ ನಿನ್ನನ್ನು ಬಳಸುತ್ತಾನೆ. (ಲೂಕ 19:37-38)
Bible Reading: Isaiah 42-44
ಅರಿಕೆಗಳು
ಕರ್ತನಿಗೆ ನನ್ನ ಅವಶ್ಯಕತೆ ಇದೆ. ನನ್ನ ಜೀವನದ ಮೇಲೆ ನನಗೆ ಒಂದು ದೈವಿಕ ನಿಯೋಜನೆ ಇದೆ. ಯೇಸುವಿನ ಹೆಸರಿನಲ್ಲಿ, ನನ್ನ ಜೀವನದ ಕುರಿತು ಇರುವ ದೇವರ ನಿಯೋಜನೆಯನ್ನು ನಾನು ಪೂರೈಸುತ್ತೇನೆ. ನಾನು ದೇವರ ಮಹಿಮೆಯನ್ನು ಪ್ರಚಾರ ಪಡಿಸುವೆನು.
Join our WhatsApp Channel

Most Read
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ● ಸಣ್ಣ ಸಣ್ಣ ರಾಜಿ ಮಾಡಿಕೊಳ್ಳುವಿಕೆಯು.
● ಜಯಶಾಲಿಗಳಿಗಿಂತ ಹೆಚ್ಚಿನವರು.
● ದೇವರು ದರ್ಶನಕೊಡುವ ಸಮಯವನ್ನು ಗುರುತಿಸಿಕೊಳ್ಳುವುದು
● ಸರ್ವಶಕ್ತನಾದ ದೇವರ ಅದ್ಬುತ ಸಮಾಗಮ.
● ದೇವರು ದೊಡ್ಡ ಬಾಗಿಲುಗಳನ್ನು ತೆರೆಯಲಿದ್ದಾನೆ
● ಭಯಪಡಬೇಡ.
ಅನಿಸಿಕೆಗಳು